ಮೇಡ್‌ ಇನ್‌ ಇಂಡಿಯಾ ಬೆಂಡೆಕಾಯಿ!

ಕೆಂಪಾದವೋ ಎಲ್ಲಾ ಕೆಂಪಾದವೋ

Team Udayavani, Nov 11, 2019, 5:15 AM IST

dd-43

ಈ ಬೆಂಡೆಕಾಯಿಯಲ್ಲಿ ಅಪಾರ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌(ಕೋಶಗಳ ಪುನರುತ್ಪಾದನಾ ಶಕ್ತಿ), ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಎಲ್ಲಾ ಪೋಷಕಾಂಶಗಳು ದೊರಕುತ್ತವೆಯಂತೆ. ಸಾಮಾನ್ಯವಾಗಿ ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಬೆಂಡೆಕಾಯಿಗಿಂತಲೂ ಹೆಚ್ಚಿನ ಬೆಲೆ ಈ ಕೆಂಪು ಬೆಂಡೆಗೆ ಸಿಗುತ್ತದೆ.

ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ವೆಜಿಟೆಬಲ್‌ ರಿಸರ್ಚ್‌ (ಭಾರತೀಯ ತರಕಾರಿ ಸಂಶೋಧನಾ ಕೇಂದ್ರ- IIVR) 23 ವರ್ಷಗಳ ಕಠಿಣ ಪರಿಶ್ರಮದ ನಂತರ ಅಂತಿಮವಾಗಿ ಹೊಸ ಜಾತಿಯ ಬೆಂಡೆಕಾಯಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಇಷ್ಟು ದಿನ ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಈ ಕೆಂಪು ಬೆಂಡೆಕಾಯಿಯನ್ನು, ಇನ್ನು ಮುಂದೆ ನಮ್ಮ ದೇಶದಲ್ಲೂ ಬೆಳೆಯಬಹುದು. ಹಾಗೆಯೇ ನಮ್ಮ ರೈತರು ಬೆಳೆಯತೊಡಗಿದರೆಂದರೆ ಈಗ ವಿದೇಶದಿಂದ ಮಾಡಿಕೊಳ್ಳುತ್ತಿರುವ ಆಮದನ್ನು ನಿಲ್ಲಿಸಬಹುದು.

ಸಂಶೋಧನೆ ಮತ್ತು ಅಭಿವೃದ್ಧಿ
ಕೆಂಪು ಬೆಂಡೆಕಾಯಿಯನ್ನು ಈವರೆಗೂ ವಿದೇಶದಲ್ಲಿ ಹಾಗೂ ನಮ್ಮ ದೇಶದ ಶ್ರೀಮಂತರ ಮನೆಗಳಲ್ಲಿ ಮಾತ್ರ ನೋಡಬಹುದಿತ್ತು. 1995-96ರಲ್ಲಿಯೇ ಈ ತರಕಾರಿ ತಳಿಯ ಅಭಿವೃದ್ಧಿಯ ಕೆಲಸ ಪ್ರಾರಂಭವಾಯಿತಾದರೂ ಈಗ ಯಶಸ್ಸು ಸಿಕ್ಕಿದೆ. ಭಾರತೀಯ ಕೃಷಿ ವಿಜ್ಞಾನಿಗಳು ಸುಮಾರು 23 ವರ್ಷಗಳ ಕಾಲ ಶ್ರಮಿಸಿ ಅಭಿವೃದ್ಧಿಪಡಿಸಿದ ಈ ಬೆಂಡೆಕಾಯಿ ತಳಿಗೆ “ಕಾಶಿ ಲಲಿಮಾ’ ಎಂದು ಹೆಸರಿಡಲಾಗಿದೆ. ಇವು ಡಿಸೆಂಬರ್‌ನಿಂದ ನಮ್ಮ ತರಕಾರಿ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿವೆ.

1995-96ರಲ್ಲಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಬಿಜೇಂದ್ರ ಅವರ ನೇತೃತ್ವದಲ್ಲಿ ಸಂಶೋಧನೆ ಪ್ರಾರಂಭಿಸಲಾಯಿತು. ಅವರ ಜೊತೆಗೇ ಡಾ. ಎಸ್‌.ಕೆ. ಸನ್ವಾಲ…, ಡಾ.ಜಿ.ಪಿ ಮಿಶ್ರಾ ಮತ್ತು ತಾಂತ್ರಿಕ ಸಹಾಯಕ ಸುಭಾಷ್‌ಚಂದ್ರ ಕೂಡ ಇದರಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ನೇರಳೆ- ಕೆಂಪು ಬಣ್ಣದಲ್ಲಿರುವ ಈ ಬೆಂಡೆ, 11-14 ಸೆಂ.ಮೀ ಉದ್ದ ಮತ್ತು 1.5-1.6 ಸೆಂ.ಮೀ ವ್ಯಾಸವನ್ನು ಹೊಂದಿರುತ್ತದೆ.

ಆರೋಗ್ಯಕ್ಕೂ ಒಳ್ಳೆಯದು
ವಿಜ್ಞಾನಿಗಳ ಪ್ರಕಾರ, ಈ ಬೆಂಡೆಕಾಯಿಯಲ್ಲಿ ಅಪಾರ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌(ಕೋಶಗಳ ಪುನರುತ್ಪಾದನಾ ಶಕ್ತಿ), ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಎಲ್ಲಾ ಪೋಷಕಾಂಶಗಳು ದೊರಕುತ್ತವೆಯಂತೆ. ಸಾಮಾನ್ಯವಾಗಿ ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಬೆಂಡೆಕಾಯಿಗಿಂತಲೂ ಹೆಚ್ಚಿನ ಬೆಲೆ ಈ ಕೆಂಪು ಬೆಂಡೆಗೆ ಸಿಗುತ್ತದೆ. ಒಂದು ಕೆ.ಜಿ. ಕಾಶಿ ಲಲಿಮಾ ಬೆಂಡೆಕಾಯಿಗೆ 500 ರೂಪಾಯಿಗಳವರೆಗೆ ಬೆಲೆ ಇದೆ. ಇಷ್ಟು ದಿನ ಈ ಕೆಂಪು ಬೆಂಡೆಕಾಯಿಯನ್ನು ಪಾಶ್ಚಿಮಾತ್ಯ ದೇಶಗಳಿಂದ ಆಮದು ಮಾಡಿಕೊಂಡಾಗ ಗ್ರಾಹಕರು ಇಷ್ಟೊಂದು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದರು. ಈ ತಳಿಯನ್ನು ಅಭಿವೃದ್ಧಿಪಡಿಸಿದ ನಂತರ, ಅದನ್ನು ಆಮದು ಮಾಡುವ ಅಗತ್ಯ ಬರುವುದಿಲ್ಲ. ಆಗ ಅದರ ಬೆಲೆಯೂ ತಗ್ಗಲಿದೆ.

ಇದರಲ್ಲೂ ಹಲವು ಪ್ರಭೇಧಗಳಿವೆ, ಎಲ್ಲದರ ಬೆಲೆಯೂ ಕೆ.ಜಿ.ಗೆ 500- 600ರೂ. ಇರುವುದಿಲ್ಲ. ಕೆ.ಜಿ.ಗೆ 100ರಿಂದ 600 ರೂಪಾಯಿಗಳ ಪ್ರಭೇದಗಳೂ ಇವೆ. ಈಗ ಭಾರತೀಯ ರೈತರು ಕೂಡ ಇವುಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ. ಇದರ ಬೀಜಗಳನ್ನು ಇದೇ ಡಿಸೆಂಬರ್‌ನಿಂದ ಸಂಸ್ಥೆಯೇ ಸಾಮಾನ್ಯ ರೈತರಿಗೆ ಒದಗಿಸಲಿದೆ. ಪೋಷಕಾಂಶಗಳಿಂದ ತುಂಬಿರುವ ಈ ಬೆಂಡೆಯ ಉತ್ಪಾದನೆಯು ಭಾರತೀಯ ರೈತರಿಗೆ ಆದಾಯ ತರುವ ಮತ್ತೂಂದು ಮೂಲವಾಗುವುದಲ್ಲದೆ, ಸಾಮಾನ್ಯ ಜನರಿಗೆ ಪೌಷ್ಠಿಕಾಂಶಭರಿತ ಹೊಸ ತರಕಾರಿಯ ಪರಿಚಯವೂ ಆಗಲಿದೆ.

-ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.