ಮಹಾಭಾರತದ ಮ್ಯಾನೇಜ್‌ಮೆಂಟ್‌ ಪಾಠಗಳು…


Team Udayavani, Jan 8, 2018, 4:12 PM IST

08-27.jpg

ಮಹಾಭಾರತ ಭೂಮಿಗಾಗಿ ಎರಡು ಬಣಗಳ ಮಧ್ಯೆ ನಡೆದ ಯುದ್ಧ ಎಂದಷ್ಟೇ ಭಾವಿಸಬೇಡಿ. ದ್ರೌಪದಿ, ಧರ್ಮರಾಯ, ಅರ್ಜುನ… ಹೀಗೆ ಅಲ್ಲಿ ಬರುವ ಪ್ರತಿ ಪಾತ್ರವೂ, ಫಿನಾನ್ಷಿಯಲ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಪಾಠ ಮಾಡುತ್ತದೆ…

1. ದ್ರೌಪದಿ 
ತನ್ನ ಹಿಂದಿನ ಜನ್ಮದಲ್ಲಿ ದ್ರೌಪದಿಯು ಶಿವನ ಬಳಿ ತನಗೆ ಧರ್ಮನಿಷ್ಠ, ಧೈರ್ಯಶಾಲಿ, ಛಲಗಾರ, ಬುದ್ಧಿವಂತ, ಸುಂದರಾಂಗ ಗಂಡ ಸಿಗಲೆಂದು ತಪಸ್ಸು ಮಾಡಿದ್ದಳು. ಆ ಎಲ್ಲ ಗುಣಗಳು ಒಬ್ಬನಲ್ಲಿ ಇರದ ಕಾರಣ ಆಕೆ ಪಂಚ ಪಾಂಡವರ ಹೆಂಡತಿಯಾದಳು. ಹಾಗೆಯೇ ಹೂಡಿಕೆಯ ವಿಚಾರಕ್ಕೆ ಬಂದಾಗ ನಿಮಗೆ ಬೇಕಾದ ಎಲ್ಲ ಸಂಗತಿಗಳೂ ಒಂದೇ ಇನ್ವೆಸ್ಟ್‌ಮೆಂಟ್‌ ಕ್ಲಾಸ್‌ನಲ್ಲಿ ಇರಲು ಸಾಧ್ಯವಿಲ್ಲ. ಹಣ ಹೂಡುವ ಮುನ್ನ ನಿಮ್ಮ ಆದ್ಯತೆ ಯಾವುದೆಂದು ಗುರುತಿಸಿ, ನಂತರ ಇನ್ವೆಸ್ಟ್‌ ಮಾಡಿ.

2. ಶಿಶುಪಾಲ
ಶಿಶುಪಾಲನ ಸಾವು ಶ್ರೀಕೃಷ್ಣನ ಕೈಯಲ್ಲೇ ಎಂಬುದು ಪೂರ್ವನಿರ್ಧರಿತ ವಿಚಾರ. ಆದರೆ, “ನಿನ್ನ ಮಗನ ನೂರು ತಪ್ಪುಗಳನ್ನು ಕ್ಷಮಿಸುತ್ತೇನೆ’ ಎಂದು ಶ್ರೀಕೃಷ್ಣ  ಶಿಶುಪಾಲನ ತಾಯಿಗೆ ಮಾತು ಕೊಟ್ಟು, ನೂರು ಬಾರಿ ಜೀವದಾನ ಮಾಡಿದ್ದ. ಅದೇ ರೀತಿ ಮ್ಯೂಚುವಲ್‌ ಫ‌ಂಡ್ಸ್‌ನಲ್ಲಿ ಇನ್ವೆಸ್ಟ್‌ ಮಾಡುವವರು ಶ್ರೀ ಕೃಷ್ಣನಂತೆ ತಾಳ್ಮೆ ವಹಿಸುವುದು ಅನಿವಾರ್ಯ. ಹೂಡಿಕೆ ಹಿಂಪಡೆಯುವ ಮುನ್ನ ಕನಿಷ್ಠ ನೂರು ಬಾರಿ ಯೋಚಿಸಿ. ಯಾಕಂದ್ರೆ, ನಿಮ್ಮ ಪೋರ್ಟ್‌ಫೋಲಿಯೊ ಲಿಸ್ಟ್‌ನಲ್ಲೂ ಶಿಶುಪಾಲನಿರಬಹುದು.

3. ಶಕುನಿ
ಶಕುನಿಯ ಕುತಂತ್ರದಿಂದ ಯುಧಿಷ್ಠಿರ ಜೂಜಿನಲ್ಲಿ ಸೋತು, ಸಕಲವನ್ನೂ ಕಳೆದುಕೊಂಡು ವನವಾಸಕ್ಕೆ ಹೋಗಬೇಕಾಯ್ತು. ಆ ಒಂದು ತಪ್ಪು ಮುಂದೆ ಕುರುಕ್ಷೇತ್ರ ಯುದ್ಧ ಭೂಮಿಯವರೆಗೂ ಬಂತು. ಹೂಡಿಕೆ ಜಗತ್ತಿನಲ್ಲಿಯೂ ನಿಮ್ಮ ದಿಕ್ಕು ತಪ್ಪಿಸುವ ಶಕುನಿಗಳಿದ್ದಾರೆ. ಅವರಿವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಸುಭದ್ರ ಹೂಡಿಕೆಯ ಮಾರ್ಗ ಯಾವುದು ಎಂದು ಅರಿತುಕೊಳ್ಳಿ.

3. ಅಭಿಮನ್ಯು
ಚಕ್ರವ್ಯೂಹದ ಬಗ್ಗೆ ಅಪೂರ್ಣ ಮಾಹಿತಿ ಹೊಂದಿದ್ದ ಅಭಿಮನ್ಯು, ಅದರಿಂದ ಹೊರಬರಲಾಗದೆ ಮೃತಪಟ್ಟ ಕಥೆ ಗೊತ್ತೇ ಇದೆ. ಒಳ ನುಗ್ಗುವ ಮುನ್ನ, ಸ್ವಲ್ಪ ಯೋಚಿಸಿದ್ದರೂ ಜೀವ ಉಳಿಯುತ್ತಿತ್ತು. ಹೂಡಿಕೆಯ ವಿಚಾರದಲ್ಲಿ ನೀವು ಇಂಥ ತಪ್ಪು ಮಾಡಬೇಡಿ. ಹಣಕಾಸಿನ ಚಕ್ರವ್ಯೂಹದೊಳಗೆ ನುಗ್ಗುವವರಿಗೆ ಮಾರುಕಟ್ಟೆ ಬಗ್ಗೆ ಗರಿಷ್ಠ ಜ್ಞಾನ ಬೇಕು. ಇನ್ವೆಸ್ಟ್‌ ಮಾಡಲಿಚ್ಛಿಸುವ ಕಂಪನಿ, ಪ್ರಾಡಕ್ಟ್, ಫ‌ಂಡ್‌ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಆ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೆ, ಶ್ರೀಕೃಷ್ಣನಂಥ ಫಿನಾಶಿÒಯಲ್‌ ಅಡ್ವೆ„ಸರ್‌ನ ಸಲಹೆ ಪಡೆಯಿರಿ.

4. ಏಕಲವ್ಯ
ಸ್ವಂತ ಪರಿಶ್ರಮ ಮತ್ತು ಛಲಕ್ಕೆ ಇನ್ನೊಂದು ಹೆಸರೇ ಏಕಲವ್ಯ. ದ್ರೋಣಾಚಾರ್ಯರ ಮೂರ್ತಿಯನ್ನೇ ಗುರು ಎಂದು ಪರಿಗಣಿಸಿ ಬಿಲ್ವಿದ್ಯೆ ಪ್ರವೀಣನಾದ. ಅದೇ ರೀತಿ, ಹಣಕಾಸು ವ್ಯವಹಾರದ ವಿಚಾರದಲ್ಲಿ ಎಲ್ಲರೂ ಏಕಲವ್ಯರೇ. ಇಂಟರ್ನೆಟ್‌ ಯುಗದಲ್ಲಿ ಸಿಗುವ ಸರಕುಗಳೇ ನಿಮ್ಮ ದ್ರೋಣಾಚಾರ್ಯರು.

5. ಪಾಂಡವ VS ಕೌರವ
ಪಾಂಡವರು ಐದು ಜನ, ಅದೇ ಕೌರವರು ನೂರು ಮಂದಿ. ಆದರೂ ಯುದ್ಧದಲ್ಲಿ ಪಾಂಡವರ ಕೈ ಮೇಲಾಯ್ತು. ಯಾಕೆಂದರೆ, ಕಡಿಮೆ ಜನರಿರುವ ತಂಡವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಸುಲಭ. ಹಾಗೆಯೇ ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೊದಲ್ಲಿಯೂ ಕಡಿಮೆ ಅಸೆಟ್‌ಗಳಿರಲಿ. 

6. ಅರ್ಜುನ
ದ್ರೋಣಾಚಾರ್ಯರು ತಮ್ಮ ಶಿಷ್ಯರ ಏಕಾಗ್ರತೆಯನ್ನು ಪರೀಕ್ಷಿಸಲು ಒಂದು ಸ್ಪರ್ಧೆ ಏರ್ಪಡಿಸಿದರು. ಮರದ ಮೇಲೆ ಕೃತಕ ಹಕ್ಕಿಯನ್ನು ಕೂರಿಸಿ, ಕಣ್ಣಿಗೆ ಬಾಣ ಬಿಡುವಂತೆ ಸೂಚಿಸಿದರು. ಅರ್ಜುನನ್ನು ಬಿಟ್ಟು ಉಳಿದ ಎಲ್ಲರೂ, ಇದರಲ್ಲಿ ಸೋತು ಹೋದರು. ಹೂಡಿಕೆ ಕ್ಷೇತ್ರದಲ್ಲಿ ನಿಮಗೆ ಅರ್ಜುನನಷ್ಟೇ ಏಕಾಗ್ರ ಚಿತ್ತ ಬೇಕು. ಮಾರುಕಟ್ಟೆಯಲ್ಲಿ ಏನೇ ಬಿರುಗಾಳಿ ಎದ್ದರೂ, ನಿಮ್ಮ ಗುರಿ ಏನು ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತಿರಬೇಕು. ಹೂಡಿಕೆಯ ವಿಷಯದಲ್ಲಿ ದೂರದೃಷ್ಟಿ, ಶಿಸ್ತು, ಸಂಯಮ ಮುಖ್ಯ.

ಟಾಪ್ ನ್ಯೂಸ್

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.