ಸ್ವಲ್ಪ ಅಸೆಸ್‌ ಮಾಡ್ಕೊಳ್ಳಿ! ಗಣಕೀಕೃತ ಆದಾಯ ತೆರಿಗೆ ಮೌಲ್ಯಮಾಪನ


Team Udayavani, Oct 14, 2019, 5:36 AM IST

Page

ಈಗಾಗಲೇ ಎಲ್ಲರೂ ಆದಾಯ ತೆರಿಗೆ ಫೈಲಿಂಗ್‌ ಮಾಡಿದ್ದಾಗಿದೆ. ಅದರ ಮೌಲ್ಯಮಾಪನ(ಅಸೆಸ್‌ಮೆಂಟ್‌) ನಡೀತಿದೆ. ಅಲ್ಲಿ ತೆರಿಗೆ ಪಾವತಿದಾರ ಏನಾದರೂ ತಪ್ಪು ಮಾಹಿತಿ ನೀಡಿದ್ದಲ್ಲಿ ಅಂಥವರಿಗೆ ನೋಟೀಸ್‌ ಹೋಗುತ್ತದೆ. ನಂತರ ವಿಚಾರಣೆ ನಡೆಯುತ್ತದೆ. ಇವಿಷ್ಟೂ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಯಂತ್ರಗಳೇ ನಿರ್ವಹಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಿದ ಬಳಿಕ ಅದರ ಮೌಲ್ಯಮಾಪನ ನಡೆಯುವುದೆಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ “ಇ- ಅಸೆಸ್‌ಮೆಂಟ್‌’ (ಇ- ಮೌಲ್ಯಮಾಪನ) ಎಂಬ ನೀತಿಯನ್ನು ಜಾರಿಗೊಳಿಸಿದೆ. ಇದರ ಹಿಂದೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪಾರದರ್ಶಕತ್ವ ತರುವ ಉದ್ದೇಶವಿದೆ.

ತೆರಿಗೆ ಪಾವತಿದಾರ ಹಾಗೂ ಅದಿಕಾರಿಗಳ ನಡುವೆ ಯಾವುದೇ ರೀತಿಯ ಸಂಪರ್ಕ ಏರ್ಪಡುವುದು ಈ ವ್ಯವಸ್ಥೆಯಿಂದ ತಪ್ಪುತ್ತದೆ. ಇ ಅಸೆಸ್‌ಮೆಂಟ್‌ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು ಪೂರ್ತಿಯಾಗಿ ಯೋಜನೆ ಜಾರಿಗೊಂಡಾಗ ಪ್ರತಿಯೊಂದು ಕೆಲಸಗಳು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದ ಸಹಾಯದಿಂದ, ಮನುಷ್ಯರ ನೆರವಿಲ್ಲದೆ ಆಟೋಮೇಟೆಡ್‌(ಸ್ವಯಂಚಾಲಿತ) ಆಗಿ ನಡೆಯಲಿವೆ. ಆದರೆ ಸದ್ಯ ಪರೀûಾ ಹಂತದಲ್ಲಿರುವುದರಿಂದ, ಈ ಯೋಜನೆಯಲ್ಲಿ ಸದ್ಯದ ಮಟ್ಟಿಗೆ ಕೆಲ ಸಂದರ್ಭಗಳಿಗೆ ವಿನಾಯಿತಿ ನೀಡಲಾಗಿದೆ. ಉದಾಹರಣೆಗೆ, ಮೌಲ್ಯಮಾಪನದ ವಿರುದ್ಧ ತೆರಿಗೆ ಪಾವತಿದಾರ ಪೆಟಿಷನ್‌(ದೂರು) ಸಲ್ಲಿಸುವ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ.

ಫೇಸ್‌ಲೆಸ್‌ ಮೌಲ್ಯಮಾಪನ ಎಂದೇಕೆ ಕರೆಯುತ್ತಾರೆ?
ಈ ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಯಲ್ಲಿ ತೆರಿಗೆ ಮೌಲ್ಯಮಾಪನ ನಡೆಯುವ ವೇಳೆ ತೆರಿಗೆ ಪಾವತಿದಾರ ಮತ್ತು ತೆರಿಗೆ ಇಲಾಖೆಯ ನಡುವೆ ಸಂಪರ್ಕ ಏರ್ಪಡುತ್ತಿತ್ತು. ಇದರಿಂದಾಗಿ ಲೋಪ ದೋಷಗಳು ಉಂಟಾಗುವ ಸಾಧ್ಯತೆಗಳು ತುಂಬಾ ಇದ್ದವು. ವೈಯಕ್ತಿಕ ಹಿತಾಸಕ್ತಿಯಿಂದ ತಮಗೆ ಬೇಕಾದ ಹಾಗೆ ದಾಖಲೆಗಳನ್ನು ತಿರುಚುವ, ಆ ಮೂಲಕ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಅವಕಾಶಗಳೂ ಇದ್ದವು. ಇದನ್ನು ಗಮನಿಸಿಯೇ ಕೇಂದ್ರ ಸರ್ಕಾರ, ಆದಾಯ ತೆರಿಗೆ ಇಲಾಖೆ ಮತ್ತು ತೆರಿಗೆ ಪಾವತಿದಾರರ ನಡುವೆ ಮುಖತಃ ಭೇಟಿಯನ್ನು ತಪ್ಪಿಸುವ ಸಲುವಾಗಿ ಇ- ಅಸೆಸ್‌ಮೆಂಟ್‌ ಸ್ಕೀಮನ್ನು ಜಾರಿಗೆ ತಂದಿದೆ. ಮುಖತಃ ಭೇಟಿಯನ್ನು ಈ ವ್ಯವಸ್ಥೆ ದೂರವಾಗಿಸುವುದರಿಂದ ಇದನ್ನು “ಫೇಸ್‌ಲೆಸ್‌ ಆಸೆಸ್‌ಮೆಂಟ್‌’ ಎಂದು ಕರೆಯಲಾಗಿದೆ. ಪ್ರಧಾನಿಯವರ ಭವಿಷ್ಯದ ಯೋಜನೆಗಳಿಗೆ ಇದರಿಂದ ಸಹಾಯವಾಗುವುದು ಎಂಬ ವಿಶ್ವಾಸವನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ವ್ಯಕ್ತಪಡಿಸಿದ್ದಾರೆ.

ಕೆಲಸ ವಹಿಸುತ್ತೆ ಕಂಪ್ಯೂಟರ್‌!
ಯೋಜನಾ ವ್ಯವಸ್ಥೆಯ ಸಂಪೂರ್ಣ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಪ್ರತ್ಯೇಕ ಕೇಂದ್ರ ಕಛೇರಿ, ನ್ಯಾಷನಲ್‌ ಇ- ಅಸೆಸ್‌ಮೆಂಟ್‌ ಸೆಂಟರ್‌(ಎನ್‌ಇಎಸಿ)ಅನ್ನು ಸ್ಥಾಪಿಸಲಾಗಿದೆ. ಈ ಕೇಂದ್ರ ಕಛೇರಿಯಲ್ಲಿ ಒಟ್ಟು 16 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಕಛೇರಿಯನ್ನು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು ಮುನ್ನಡೆಸಲಿದ್ದಾರೆ. ಈ ಕೇಂದ್ರ, ಸ್ವಾಯತ್ತ ಸಂಸ್ಥೆಯಾಗಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದ್ದು, ತೆರಿಗೆ ಮೌಲ್ಯಮಾಪನದ ನಂತರ ಎನ್‌ಇಎಸಿ ತೆರಿಗೆ ಪಾವತಿದಾರರಿಗೆ ನೋಟೀಸುಗಳನ್ನು ಕಳಿಸಲಿದೆ. ಅದರ ಜೊತೆಯಲ್ಲಿಯೇ ನೋಟೀಸು ಕಳಿಸಿದ್ದರ ಕಾರಣವನ್ನು ತಿಳಿಸಲಾಗುವುದು. ನೋಟೀಸು ಕಳಿಸಿದ 15 ದಿನಗಳಲ್ಲಿ ಆಯಾ ಕೇಸನ್ನು ಅಧಿಕಾರಿಗೆ ವಹಿಸಲಾಗುವುದು. ಅಧಿಕಾರಿಗಳಿಗೆ ಕೇಸು ವಹಿಸುವ ಕೆಲಸವನ್ನು ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ತಂತ್ರಜ್ಞಾನದ ಸಹಾಯದಿಂದ ಕಂಪ್ಯೂಟರ್‌ಗಳೇ ಮಾಡುವುದು. ಇದರಿಂದ ತಮಗೆ ಬೇಕಾದ ಅಧಿಕಾರಿಗಳಿಗೆ ಕೇಸನ್ನು ವರ್ಗಾಯಿಸುವಂತೆ ಮಾಡುವ ಸಾಧ್ಯತೆಯೇ ಇರುವುದಿಲ್ಲ. ನೋಟೀಸ್‌ ಸ್ವೀಕರಿಸಿದ ನಂತರ ತೆರಿಗೆ ಪಾವತಿದಾರ ಕೇಸಿನ ಹಿಯರಿಂಗ್‌ಗೆ ಹಾಜರಾಗಬೇಕಾಗುತ್ತದೆ. ಇ- ಅಸೆಸ್‌ಮೆಂಟ್‌ ಯೋಜನೆಯಲ್ಲಿ, ಕೇಸಿನ ಹಿಯರಿಂಗ್‌, ವಿಡಿಯೋ ಕಾಲ್‌ ಮೂಲಕ ನಡೆಯಲಿದೆ. ಈ ಸಂದರ್ಭದಲ್ಲೂ ನೋಟೀಸ್‌ ಸ್ವೀಕರಿಸಿದ ತೆರಿಗೆ ಪಾವತಿದಾರ ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಜನರಿಗೇನು ಲಾಭ?
ಜನಸಾಮಾನ್ಯರಿಗೆ ಇ- ಅಸೆಸ್‌ಮೆಂಟ್‌ನಿಂದ ಆಗುವ ಮುಖ್ಯ ಪ್ರಯೋಜನ ಎಂದರೆ ಸಮಯದ ಉಳಿತಾಯ. ತೆರಿಗೆ ಪಾವತಿದಾರ ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಿ, ಅಧಿಕಾರಿಗಳನ್ನು ಭೇಟಿ ಮಾಡಿ ಗಂಟೆಗಳ ಕಾಲ ದಿನಗಳ ಕಾಲ ಸಮಯ ವ್ಯಯ ಮಾಡುವುದನ್ನು ಈ ವ್ಯವಸ್ಥೆ ತಪ್ಪಿಸುತ್ತದೆ. ಅಲ್ಲದೆ, ಕಾರಣಾಂತರಗಳಿಂದ ನಿಗದಿತ ದಿನದಂದು ಆಧಿಕಾರಿಗಳನ್ನು ಭೇಟಿ ಮಾಡಲಾಗದೆ ಕೇಸು ಗಂಭೀರ ಸ್ವರೂಪ ಪಡೆದುಕೊಳ್ಳುವುದರಿಂದಲೂ ಬಚಾವಾಗಬಹುದು. ಸರಳವಾಗಿ ಹೇಳುವುದಾದರೆ; ಸತಾಯಿಸುವಿಕೆ, ಕಾಯಿಸುವಿಕೆಯಿಂದ ತೆರಿಗೆ ಪಾವತಿದಾರ ಮುಕ್ತಿ ಪಡೆಯಬಹುದಾಗಿದೆ. ನಿಷ್ಠಾವಂತ ತೆರಿಗೆ ಪಾವತಿದಾರರೂ ಅಧಿಕಾರಿಗಳ ಬೆದರಿಕೆಗಳಿಗೆ ಗುರಿಯಾದ ಅನೇಕ ನಿದರ್ಶನಗಳಿವೆ. ಅವರಿಗೆಲ್ಲಾ ಈಗ ನಿರಾಳವಾದಂತಾಗಿದೆ ಎನ್ನುವುದರಲ್ಲೂ ಸತ್ಯಾಂಶವಿದೆ.

ರೀತಿ ರಿವಾಜುಗಳು
– ತೆರಿಗೆ ಪಾವತಿದಾರ ತನ್ನ ಆದಾಯವನ್ನು ಪೂರ್ತಿಯಾಗಿ ಬಹಿರಂಗ ಪಡಿಸದೇ ಇದ್ದ ಪಕ್ಷದಲ್ಲಿ ಅಥವಾ ನಷ್ಟವನ್ನು ಇರುವುದಕ್ಕಿಂತ ಹೆಚ್ಚು ತೋರಿಸಿದ ಸಂದರ್ಭದಲ್ಲಿ ಸೆಕ್ಷನ್‌ 143(2)ರ ಅಡಿಯಲ್ಲಿ ನೋಟೀಸ್‌ ರವಾನೆಯಾಗುತ್ತದೆ.
– ನೋಟೀಸನ್ನು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ತೆರಿಗೆ ಪಾವತಿದಾರನಿಗೆ ತಲುಪಿಸಲಾಗುವುದು. ಇ-ಮೇಲ್‌, ಮೊಬೈಲ್‌ ನಂಬರ್‌ಗೂ ನೋಟೀಸು ರವಾನೆಯಾಗಲ್ಪಡುವುದು.
– ನೋಟೀಸು ತಲುಪಿದ 15 ದಿನಗಳ ಒಳಗೆ ತೆರಿಗೆ ಪಾವತಿದಾರ ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಆ ಪ್ರತಿಕ್ರಿಯೆಯನ್ನು ಇ- ಅಸೆಸ್‌ಮೆಂಟ್‌ ಕೇಂದ್ರ ಎನ್‌ಇಎಸಿ ಮಾನ್ಯ ಮಾಡಿದ ನಂತರವೇ ನೋಟೀಸ್‌ ತಲುಪಿದೆ ಎನ್ನುವುದು ಖಾತರಿಯಾಗುತ್ತದೆ.
– ಎಲ್ಲಾ ರೀತಿಯ ಸಂವಹನ, ಸಂಪರ್ಕ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕವೇ ಜರುಗುವುದು. ಇಲಾಖೆಯೊಳಗಿನ ಆಂತರಿಕ ಸಂಪರ್ಕವೂ ಇದೇ ರೀತಿ ನಡೆಯಲಿದೆ.
– ಈ ಯೋಜನೆ ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಎನ್‌ಇಎಸಿ ಯಾವುದೇ ಕೇಸನ್ನು ಗಣಕೀಕೃತ ವ್ಯವಸ್ಥೆಯ ಮೂಲಕ ಪ್ರಾದೇಶಿಕ ಕೇಂದ್ರಗಳಿಗೆ ವರ್ಗಾಯಿಸುವ ಅಧಿಕಾರ ಹೊಂದಿರುತ್ತದೆ.
-ಪ್ರಾದೇಶಿಕ ಕೇಂದ್ರಗಳಿಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅಥವಾ ಆಯಾ ಪ್ರಕರಣಕ್ಕೆ ಸಂಬಂಧಿಸಿದ ತೆರಿಗೆ ಪಾವತಿದಾರನಿಂದ ದಾಖಲೆಗಳೇನಾದರೂ ಬೇಕಿದ್ದಲ್ಲಿ ಅದು ಮೊದಲು ಎನ್‌ಇಎಸಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು.
– ಪ್ರಾದೇಶಿಕ ಕೇಂದ್ರಗಳು ತಮಗೆ ವಹಿಸಿದ ಮೌಲ್ಯಮಾಪನದ ವರದಿಯನ್ನು ಮುಖ್ಯ ಕಛೇರಿ ಎನ್‌ಇಎಸಿಗೆ ಕಳುಹಿಸಿ ಕೊಡಬೇಕು. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಕರಣದ ಗಂಭೀರತೆಯ ಅನ್ವಯ, ಮಾನದಂಡಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು.

ಇ- ಅಸೆಸ್‌ಮೆಂಟ್‌ ಯೋಜನೆ, ಒಂದು ಸ್ವಯಂಚಾಲಿತ ವ್ಯವಸ್ಥೆಯಾಗಿದೆ. ಇದು, ತೆರಿಗೆ ಪಾವತಿದಾರ ಮತ್ತು ಅಧಿಕಾರಿಗಳ ಮುಖಾಮುಖೀಯನ್ನು ತಪ್ಪಿಸುತ್ತದೆ. ಪ್ರಕರಣಗಳನ್ನು ಅಧಿಕಾರಿಗಳಿಗೆ ವಹಿಸುವ ಕೆಲಸವನ್ನೂ ಯಂತ್ರಗಳೇ ಮಾಡಲಿವೆ ಎನ್ನುವುದು ಅಚ್ಚರಿಯ ಸಂಗತಿ. ಇದರಿಂದಾಗಿ ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರುವುದಲ್ಲದೆ, ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿದಂತಾಗುವುದು.
– ಅಭಿಷೇಕ್‌ ಸೋನಿ, ಸಿಇಓ ಟ್ಯಾಕ್ಸ್‌ ಟು ವಿನ್‌, ಐಟಿಆರ್‌ ಫೈಲಿಂಗ್‌ ಜಾಲತಾಣ

-ಶಿವಾನಂದ ಪಂಡಿತ್‌, ಆರ್ಥಿಕ ತಜ್ಞ

ಟಾಪ್ ನ್ಯೂಸ್

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.