ಮಾಮು ಹೋಟೆಲ್‌ನ ಸ್ಪೆಷಲ್ ತುಪ್ಪದ ಇಡ್ಲಿ!
Team Udayavani, Sep 9, 2019, 5:00 AM IST
ಇಡ್ಲಿ ಸಾಮಾನ್ಯವಾಗಿ ಎಲ್ಲಾ ಹೋಟೆಲ್‌ಗಳಲ್ಲಿ ತಪ್ಪದೇ ಸಿಗುವ ತಿಂಡಿ. ಆದರೆ, ಕೆಲವೊಂದು ಹೋಟೆಲ್‌ಗಳು ಇಡ್ಲಿ ತಯಾರಿಯಲ್ಲೂ ಸ್ಪೆಶಾಲಿಟಿ ಹೊಂದಿರುತ್ತವೆ. ಅಂತಹದೇ ಹೋಟೆಲ್ ಹಾಸನ ನಗರದಲ್ಲಿದೆ. ಅದು “ಮಾಮು ಇಡ್ಲಿ ಹೋಟೆಲ್’ ಎಂದೇ ಜನಪ್ರಿಯವಾಗಿದೆ.
40 ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಬಸವಪಟ್ಟಣದಿಂದ ಹಾಸನಕ್ಕೆ ಬಂದ ವೆಂಕಟೇಶ್ ಶೆಟ್ಟಿ, ಈ ಹೋಟೆಲ್‌ನ ಸಂಸ್ಥಾಪಕರು. ಮೊದಲಿಗೆ ಸೋಡಾ ಮಾರಾಟ ಮಾಡುತ್ತಿದ್ದ ಇವರು, 25 ವರ್ಷಗಳ ಹಿಂದೆ ಚಿಕ್ಕದಾಗಿ ಹೋಟೆಲ್ ಆರಂಭಿಸಿದರು. ಪತ್ನಿ ಜೊತೆ ಸೇರಿ ಇಡ್ಲಿ, ದೋಸೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಡ್ಲಿ ಜೊತೆ ಕೊಡುತ್ತಿದ್ದ ತುಪ್ಪ ಜನರನ್ನು ಆಕರ್ಷಿಸಿತು. ಇವರ ಬಳಿಯೇ ಒಂದು ತಿಂಗಳು ಕೆಲಸಕ್ಕೆ ಇದ್ದ ಹಾಸನದ ದೊಡ್ಡಬಸವನಹಳ್ಳಿ ರಮೇಶ್, ಹೋಟೆಲ್ ಮಳಿಗೆಯನ್ನು ಬಾಡಿಗೆಗೆ ಪಡೆದು ಹೋಟೆಲನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ವಿಶೇಷವೇನು ಗೊತ್ತೆ? ಈ ಹೋಟೆಲ್‌ನಲ್ಲಿ ಇಡ್ಲಿ ಬಿಟ್ಟರೆ ದೋಸೆ ಸಿಗುತ್ತೆ. ಚಿತ್ರಾನ್ನ, ಪಲಾವ್, ಉಪ್ಪಿಟ್ಟು, ಕೇಸರಿಬಾತು…ಉಹುಂ, ಇದ್ಯಾವುದೂ ಸಿಗುವುದಿಲ್ಲ. ಆದರೂ ತುಪ್ಪದ ಇಡ್ಲಿ, ದೋಸೆಯ ರುಚಿಗೆ ಮರುಳಾಗಿರುವ ಗ್ರಾಹಕರು ಇಲ್ಲಿಗೆ ತಪ್ಪದೇ ಬರುತ್ತಾರೆ.
8 ಮಂದಿಗೆ ಉದ್ಯೋಗ:
ನಾಲ್ಕನೇ ತರಗತಿ ಓದಿರುವ ರಮೇಶ್, ಮೊದಲು ಗಾರೆಕೆಲಸ ಮಾಡುತ್ತಿದ್ದರು. ನಂತರ ವೆಂಕಟೇಶ್‌ಶೆಟ್ಟಿ ಅವರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ವೆಂಕಟೇಶ್ ಶೆಟ್ರಿಗೆ ವಯಸ್ಸಾಗಿದ್ದ ಕಾರಣ ಹೋಟೆಲ್ ನಡೆಸಲು ಆಗಲಿಲ್ಲ. ಅಂಥ ಸಮಯದಲ್ಲೇ ಹೋಟೆಲನ್ನು ಬಾಡಿಗೆಗೆ ಪಡೆದ ರಮೇಶ್, ಇದೀಗ 8 ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಹಾಸನಾಂಬ ದೇಗುಲ, ಚೆನ್ನಕೇಶವ ಕಲ್ಯಾಣ ಮಂಟಪದ ಬಳಿ ಇದೇ ಹೆಸರಲ್ಲಿ ಮತ್ತೂಂದು ಸಸ್ಯಾಹಾರಿ ಹೋಟೆಲ್ ಮಾಡಿ ಅಲ್ಲಿ ಇಡ್ಲಿ, ವಡೆ ದೋಸೆ ಜೊತೆಗೆ ಮುದ್ದೆ, ಚಪಾತಿ, ಪೂರಿ ಊಟ ಕೂಡ ಸಿಗುತ್ತಿದೆ, ರಿಂಗ್ ರೋಡ್‌ನಲ್ಲಿ ಮಾಂಸಾಹಾರಿ ಹೋಟೆಲ್ ಮಾಡಿದ್ದಾರೆ.
ಮಾಮು ಹೆಸರು ಬಂದಿದ್ದು ಹೇಗೆ?:
ವೆಂಕಟೇಶ್‌ಶೆಟ್ರಾ 25 ವರ್ಷಗಳಿಂದಲೂ ಹೋಟೆಲ್ ನಡೆಸುತ್ತಿದ್ದರೂ ನಾಮಫಲಕ ಹಾಕಿರಲಿಲ್ಲ. ಅವರಿಗೆ ವಯಸ್ಸಾಗಿದ್ದ ಕಾರಣ ಜನ ಪ್ರೀತಿಯಿಂದ ಮಾಮು ಅಂತ ಕರೆಯುತ್ತಿದ್ದರು. ಅದೇ ಜನರ ಮನಸ್ಸಲ್ಲಿ ಉಳಿಯಿತು. ಈಗ ಮಾಮು ಇಡ್ಲಿ ಹೋಟೆಲ್ ಎಂದೇ ಗುರುತಿಸಲಾಗುತ್ತಿದೆ.
ಹೋಟೆಲ್ ವಿಳಾಸ:
ಹಾಸನ ನಗರದ ಕಸ್ತೂರ ಬಾ ರಸ್ತೆ, ತೆಲುಗರ ಬೀದಿಗೆ ಹೋಗಿ “ಮಾಮು ಹೋಟೆಲ್’ ಕೇಳಿದ್ರೆ ತೋರಿಸುತ್ತಾರೆ.
ಹೋಟೆಲ್ ಸಮಯ:
ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ವಾರದ ರಜೆ ಇಲ್ಲ.
ತಿಂಡಿ ಮಾತ್ರ:
ಹೋಟೆಲ್‌ನಲ್ಲಿ ಸಿಗೋದು ಮೂರೇ ತಿಂಡಿ. ಆದ್ರೂ, ಕಡ್ಲೆ ಚಟ್ನಿ, ತುಪ್ಪ ಜೊತೆ ಇಡ್ಲಿ ತಿನ್ನೊಂದು ಒಂದು ಹೊಸ ಅನುಭವ. (ಇಡ್ಲಿ ನಾಲ್ಕು) ದರ 30 ರೂ. ಇಡ್ಲಿಯನ್ನು ಹೊರತುಪಡಿಸಿದರೆ, ಸೆಟ್ ದೋಸೆ, ಹೈದ್ರಾಬಾದ್ ದೋಸೆ ಸಿಗುತ್ತೆ. ದರ 30 ರೂ..
– ಎನ್.ನಂಜುಂಡೇಗೌಡ/ಭೋಗೇಶ ಆರ್.ಮೇಲುಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.