ದುಡ್ಡಿನ ದಾಂಪತ್ಯ, ದುಡಿವ ಗಂಡ ಹೆಂಡಿರ ಮಧ್ಯೆ ಇರಲಿ ಹಣಕಾಸು ಸಾಮರಸ್ಯ
Team Udayavani, Jan 23, 2017, 3:45 AM IST
ಮದುವೆ ನಂತರ ಇಬ್ಬರೂ ದುಡಿಯಬೇಕಾ? ದುಡಿದಿದ್ದರಲ್ಲಿ ಎಷ್ಟು ಎತ್ತಿಡಬೇಕು, ಎಷ್ಟು ವರ್ಷದ ನಂತರ ಮಕ್ಕಳಾಗಬೇಕು, ಅದರ ಖರ್ಚಿಗೆ ಈಗಲಿಂದಲೇ ಉಳಿತಾಯ ಹೇಗೆ? ಎಲ್ಲವೂ ಮದುವೆ ನಂತರದ ಲೆಕ್ಕಾಚಾರದಲ್ಲಿ ಇರಬೇಕು. ಸುಮ್ಮನೆ ಅಡ್ಡಾದಿಡ್ಡಿಯಾಗಿ ಬದುಕುವುದು ಇಂದಿನ ಸ್ಥಿತಿಗತಿಯಲ್ಲಿ ಯೋಗ್ಯವಲ್ಲ.
ಮದುವೆ ಎನ್ನುವುದು ಇಬ್ಬರ ನಡುವಿನ ಭಾವನಾತ್ಮಕ ಸಂಬಂಧ ಮಾತ್ರವಲ್ಲ, ಅದು ಆರ್ಥಿಕ ಸಂಬಂಧವೂ ಹೌದು. ಮದುವೆಯಾಗಿ ಒಂದು ವಾರದೊಳಗಂತೂ ಆರ್ಥಿಕ ಗುರಿ ನಿರ್ಧರಿಸುವುದು ಕಡ್ಡಾಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಕಾರ್ಯ ಅಸಾಧ್ಯವೇ ಸರಿ.
ಮದುವೆ ಆದವರಿಗೆ ಜವಾಬ್ದಾರಿ ಜಾಸ್ತಿ. ಹಣವನ್ನು ಉಳಿಸುವ ಅನಿವಾರ್ಯತೆ ಬ್ಯಾಚುಲರ್ಗಿಂತ ಹೆಚ್ಚು. ಮದುವೆಯ ಮೊದಲು ಕನಸು ಹಂಚಿಕೊಳ್ಳುವ ಜೊತೆಗೆ ಭವಿಷ್ಯದ ಆರ್ಥಿಕ ಗುರಿಯನ್ನು ಗುರುತಿಸುವುದು ಜಾಣ ದಂಪತಿಗಳ ಲಕ್ಷಣ ಎನ್ನುತ್ತಾರೆ. ಇದು ನಿಜ ಕೂಡ. ಮದುವೆಗೆ ಮೊದಲು ಎಲ್ಲವೂ ಕನಸು, ಕನಸು. ಅದನ್ನು ಕಾಣುವ ನೆಪದಲ್ಲಿ ಭವಿಷ್ಯದ ಆರ್ಥಿಕ ಚಿಂತನೆ ಮಾಡದೇ ಇದ್ದರೆ ಹೇಗೆ?
ಇಬ್ಬರು ದುಡಿದರೆ
ನಗರ ಪ್ರದೇಶದಲ್ಲಿದ್ದರೆ ಇಬ್ಬರೂ ದುಡಿಯಲೇ ಬೇಕು. ದುಡಿಮೆ ಒಂದು ಭಾಗವನ್ನು ಅಂದರೆ ಇಬ್ಬರು ದುಡಿದರೆ ಒಬ್ಬರ ಸಂಬಳವನ್ನು ಹೂಡಿಕೆಗೆ ಮೀಸಲಿಡುವುದು ಕ್ಷೇಮ. ಅದು ಇನ್ವೆಸ್ಟ್‌ಮೆಂಟ್, ಮ್ಯೂಚುವಲ್ ಫಂಡ್, ಷೇರು ಅಥವಾ ರಿಯಲ್ ಎಸ್ಟೇಟ್ ಆಗಿರಬಹುದು. ಡೌನ್‌ಪೇಮೆಂಟ್‌ಗೆ ಒಂದಿಷ್ಟು ಹಣ ರೆಡಿ ಮಾಡಿ, ನಗರದೊಳಗೋ ಅಥವಾ ಹೊರಭಾಗದಲ್ಲೋ ಸೈಟ್ ಖರೀದಿಸಿ ಇಟ್ಟರೆ ಅದು ಭಷ್ಯದ ಉತ್ತಮ ಸೇವಿಂಗ್ಸ್. ಹೀಗೆ ವಿವಿಧ ಬಗೆಯಲ್ಲಿ ದುಡಿಮೆ ಒಂದು ಭಾಗವನ್ನು ನಿಯೋಗಿಸಿದರೆ ಉತ್ಪತ್ತಿ ಡೆಡ್‌ಮನಿಯಾಗುವುದು ತಪ್ಪುತ್ತದೆ. ಒಂದು ಪಕ್ಷ ಇಬ್ಬರೂ ದುಡಿಮೆಯಲ್ಲಿ ಒಬ್ಬರ ಆದಾಯ ಅಷ್ಟನ್ನೂ ಹೂಡಿಕೆ ಮಾಡಲು ಆಗದೇ ಇದ್ದರೆ. ಅದರಲ್ಲಿ ಶೇ. 60ರಷ್ಟು ಹೂಡಿಕೆ ಮಾಡಿ.
ಇದರಲ್ಲಿ ಶೇ. 30ರಷ್ಟು ದೀರ್ಘಾವಧಿ, ಶೇ. 20ರಷ್ಟು ಅಲಾºವಧಿ, ಶೇ.10ರಷ್ಟು ಅತ್ಯಾಲ್ಪಾವಧಿ ಎಂದು ವಿಭಾಗಿಸಿ ಹೂಡಿಕೆ ಮಾಡಿ. ಈ ಗಣಿತ ಏಕೆಂದರೆ ಸಂಪಾದನೆ ಶೇ. 10ರಷ್ಟು ಮೊತ್ತ ಪ್ರತಿ ತಿಂಗಳು ಉಳಿಸಿದರೆ ತುರ್ತು ಸಂದರ್ಭದಲ್ಲಿ ನೆರವಾಗುತ್ತದೆ. ದೀರ್ಘಾವಧಿಯಲ್ಲಿ ಭವಿಷ್ಯದಲ್ಲಿ ಕಷ್ಟಕ್ಕಾಗುವ ನೆಂಟ. ಐದು ವರ್ಷಕ್ಕೆ ಒಮ್ಮೆ ಕೈಗೆ ಒಂದಷ್ಟು ದುಡ್ಡು ಬರುವ ಹಾಗೇ ಹೂಡಿಕೆ ಇರಲಿ. ಹೂಡಿಕೆಯಲ್ಲಿ ತುರ್ತುನಿಧಿಯನ್ನು ಸೇರಿಸಿಕೊಳ್ಳಿ. ತುರ್ತು ನಿಧಿ ಎಷ್ಟಿರಬೇಕು ಅನ್ನೋದು ನಿಮ್ಮ ಮನೆಯಲ್ಲಿರುವ ಸದಸ್ಯರ ವಯಸ್ಸಿನ ಆಧಾರದ ಮೇಲೆ ನಿಗದಿ ಮಾಡಿ.
ನಿಮ್ಮ ಆದಾಯದ ಶೇ. 5ರಷ್ಟು ತುರ್ತು ನಿಧಿ ಅಂದರೆ ಅನಾರೋಗ್ಯ, ಅನಿರೀಕ್ಷಿತ ಖರ್ಚುಗಳನ್ನು ನಿಭಾಯಿಸಲು ಎತ್ತಿಡಬೇಕು.
ವಾಹನ ಬೇಕೋ ಬೇಡವೋ
ವಾಹನ ಕೊಳ್ಳುವ ಮೊದಲು ಇದು ಬೇಕಾ, ಬೇಕಾದರೆ ಅಗತ್ಯ ಎಷ್ಟು ಅನ್ನೋದು ಖಚಿತ ಮಾಡಿಕೊಳ್ಳಿ. ತಿಂಗಳ ಆದಾಯದಲ್ಲಿ ಶೇ. 4-5ರಷ್ಟು ವಾಹನಕ್ಕೆ ಎತ್ತಿಡಬೇಕಾಗುತ್ತದೆ. ಬೇಕೇಬಾಕದರೆ ಕಾರು ಅಥವಾ ಬೈಕು ಇದರಲ್ಲಿ ನಿಮಗೆ ಅಗತ್ಯ ಯಾವುದಿದೆ ತೀರ್ಮಾನಿಸಿ. ಏಕೆಂದರೆ ಕಾರು ಕೊಂಡರೆ ಪ್ರತಿ ದಿನ 20ಕಿ.ಮೀ ಓಡಾಡಲು ತಿಂಗಳಿಗೆ ಪೆಟ್ರೋಲ್, ಸರ್ವೀಸು ಸೇರಿ 6-7ಸಾವಿರ ಖರ್ಚು ಬರುತ್ತದೆ. ವರ್ಷಕ್ಕೆ ಹೆಚ್ಚಾ ಕಡಿಮೆ 80ಸಾವಿರದಷ್ಟು ಆದಾಯ ಕಾರಿಗಾಗಿಯೇ ಎತ್ತಿಡಬೇಕು. ಬೈಕಾದರೆ ತಿಂಗಳಿಗೆ ವರ್ಷಕ್ಕೆ ಹೆಚ್ಚಾ ಕಡಿಮೆ ಪೆಟ್ರೋಲ್ ಸೇರಿ 30ಸಾವಿರ ಖರ್ಚು ಬರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಂತಸ್ತುಗಳನ್ನು ತೋರಿಸಲು, ಮೆರೆಯಲು ವಾಹನ ಕೊಂಡರೆ ಜೇಬಿಗೆ ಕತ್ತರಿ.
ಎಲ್ಲವನ್ನು ಲೆಕ್ಕ ಮಾಡಿ..
ಮದುವೆಯಾದ ಕೆಲದಿನಗಳಿಗೆ ಇಬ್ಬರ ಹೆಸರಲ್ಲೂ ಜಾಯಿಂಟ್ ಅಕೌಂಟ್ ತೆರೆದರೆ ಉತ್ತಮ. ಮುಂದೆ ಸಾಲ ಬೇಕು ಅಂದರೆ ಬಹಳ ಸುಲಭ. ವ್ಯವಹಾರ ಮಾಡಬೇಕಾದ ಸಂದರ್ಭದಲ್ಲೆಲ್ಲ ಇದು ಸಹಾಯಕ್ಕೆ ಬರುತ್ತದೆ. ಇದು ದಂಪತಿಯ ನಂಬಿಕೆಯ ಪ್ರಶ್ನೆಯೂ ಹೌದು. ಕೆಲವೊಮ್ಮೆ ಒಬ್ಬರಿಗೆ ಉಳಿತಾಯದ ಬಗೆಗೆ ಆಸಕ್ತಿ ಇದ್ದು, ಇನ್ನೊಬ್ಬರಿಗೆ ಖರ್ಚು ಮಾಡುವುದರಲ್ಲಿ ಖುಷಿ ಸಿಕ್ಕರೆ ಈ ಪ್ಲಾನ್ ಉಲ್ಟಾ ಆಗಬಹುದು.
ಮದುವೆ ಸರ್ಟಿಫಿಕೇಟ್ ಕೂಡಲೇ ಮಾಡಿಸಿ ಹೆಸರು ಬದಲಾವಣೆಯ ಅಫಿಡೆವಿಟ್‌ಸಲ್ಲಿಸಿದರೆ ಉಳಿತಾಯ, ಹೂಡಿಕೆಗೆ ಅನುಕೂಲ. ಮುಂದೆ ಎಲ್ಲ ವ್ಯವಹಾರಗಳೂ ಸರಾಗವಾಗಿ ಆಗಿ, ಗೊಂದಲಗಳಿಗೆ ಅವಕಾಶವಿರುವುದಿಲ್ಲ. ತಮ್ಮ ಹೆಸರಿನ ಜೊತೆ ಗಂಡನ ಹೆಸರು ಸೇರಿಸಿಕೊಳ್ಳುವ ಇಚ್ಛೆ ಇದ್ದವರು ಆ ಬದಲಾವಣೆಯನ್ನು ಈ ಸಂದರ್ಭದಲ್ಲೇ ಮಾಡಿಕೊಳ್ಳಬೇಕು. ಒಟ್ಟಿಗೆ ಅಕೌಂಟ್ ಇದ್ದು ಸಾಲಕ್ಕೆ ಇಬ್ಬರೂ ಅರ್ಜಿ ಸಲ್ಲಿಸಿದರೆ, ಹೆಚ್ಚೆಚ್ಚು ಸಾಲ ಸಿಗುತ್ತದೆ. ಜೊತೆಗೆ ಇಬ್ಬರಿಗೂ ತೆರಿಗೆ ವಿನಾಯತಿ ಸಿಗುತ್ತದೆ.
ಮುಖ್ಯವಾಗಿ ಮದುವೆ ನಂತರ ಮಾಡಬೇಕಾದ ಕೆಲಸ ಎಂದರೆ ನಿಮ್ಮ ಆಸ್ತಿಯ್ನು ಜಂಟಿಯಾಗಿ ಅನುಭವಿಸುವಂತೆ ನೋಡಿಕೊಳ್ಳಿ. ಇದರಿಂದ ಭವಿಷ್ಯದ ಹೂಡಿಕೆಗೆ ಅನುಕೂಲವಾಗುತ್ತದೆ. ಇದರಿಂದ ಲಾಭ ಏನೆಂದರೆ ಸಾಲ ಪಡೆಯಬೇಕಾದರೆ ಇಬ್ಬರ ಆದಾಯ, ಆಸ್ತಿಯ ಇರುವುದರಿಂದ ಪ್ಲಸ್ ಪಾಯಿಂಟ್ ಜಾಸ್ತಿ.
ಹೂಡಿಕೆ ಹೇಗೆ?
ಕೈಯಲ್ಲಿ ಹತ್ತು ಲಕ್ಷ ಇದೆ. ಹೂಡಿಕೆ ಮಾಡುವ ಮನೆಯಯ ಬೆಲೆ 20 ಲಕ್ಷ. ಬಾಡಿಗೆಗೆ ಕೊಟ್ಟರೆ 10ಸಾವಿರ ಸಿಗುತ್ತದೆ ಎಂದಾದರೆ, 10 ಲಕ್ಷ ಸಾಲ ಮಾಡಿ ಕೊಳ್ಳುವುದು ಲೇಸು. ಏಕೆಂದರೆ ಕೊಂಡು ಬಾಡಿಗೆಗೆ ಕೊಟ್ಟರೆ ಬಾಡಿಗೆ ಹಣ ಸಾಲಕ್ಕೆ ಹೋಗುತ್ತದೆ. ಇದು ನಿಜವಾದ ಹೂಡಿಕೆಯಾಗುತ್ತದೆ. ಬೇಡ ಎಂದಾಗ ಮನೆ ಮಾರಿದರೆ ಹಾಕಿದ ಹಣಕ್ಕೆ ಶೇ. 10-15ರಷ್ಟು ಜಾಸ್ತಿ ಬರಬಹುದು. ಇದೇ ಹತ್ತು ಲಕ್ಷವನ್ನು ಬ್ಯಾಂಕಲ್ಲಿ ಇಟ್ಟರೆಶೇ. 7-8ರಂತೆ ತಿಂಗಳಿಗೆ 800ರೂ. ಬರಬಹುದು. ಈ ಹೂಡಿಕೆಯ ಲೆಕ್ಕಾಚಾರದಲಿ ಜಾಣ್ಮೆ ಇದೆ. ಆದರೆ ಹತ್ತು ಲಕ್ಷದ ಜೊತೆಗೆ, ಮತ್ತೆ ಕೈಯಿಂದ 5 ಲಕ್ಷ ಸಾಲ ಮಾಡಿದರೂ ಮನೆಯ ಬಾಡಿಗೆ ಎರಡು ಸಾವಿರ ಬಂದರೆ ನೀವೇ ಕೈಯಿಂದ ಬಡ್ಡಿ ಕಟ್ಟಬೇಕಾಗುತ್ತದೆ ಎಚ್ಚರ.
ಮಕ್ಕಳು, ಖರ್ಚು
ಎಷ್ಟು ಮಕ್ಕಳು ಬೇಕು? ಅವರ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿ ಅಗತ್ಯ ಉಳಿತಾಯ ಮಾಡಲೇಬೇಕು. ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ನೆರವಿಗೆಂದು ನಾನಾ ಬಗೆಯ ಸ್ಕೀಂಗಳಿವೆ. ಮದುವೆಯಾದ ತಿಂಗಳಿಂದಲೇ ಮೂರು ಸಾವಿರದಂತೆ ಆರ್‌ಡಿ ಯಲ್ಲಿ ಉಳಿಸುತ್ತಾ ಬನ್ನಿ.
ಮೂರು ವರ್ಷದ ನಂತರ ಮಕ್ಕಳಾಗಿ, ಅದು ಶಾಲೆಗೆ ಸೇರು ಹೊತ್ತಿಗೆ ಹಚ್ಚಾ ಕಡಿಮೆ ಬಡ್ಡಿ ಸೇರಿಸಿ ಎರಡು ಲಕ್ಷ ಕೈಗೆ ಬರುತ್ತದೆ. ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ಅಡ್ಡಿ ಇಲ್ಲ. ಇಂತ ಸಣ್ಣ, ಸಣ್ಣ ಉಳಿತಾಯ ದೊಡ್ಡ ಕಷ್ಟದಲ್ಲಿ ಕೈ ಹಿಡಿಯುತ್ತದೆ. ಇವುಗಳಿಂದ ಟ್ಯಾಕ್ಸ್ ಕನ್ಸೆಶನ್ ಸಿಗುವ ಜತೆಗೆ ಸೇವಿಂಗ್ ಸಹ ಆಗುತ್ತದೆ. ಕೆಲವು ಸ್ಕೀಂಗಳಲ್ಲಿ ಮಗುವಿಗೆ ಎರಡು ವರ್ಷ ಇರುವಾಗ ಕಂತಿನ ಹಣ ನಿಗದಿತವಾಗಿ ಕಟ್ಟಲು ಆರಂಭಿಸಿ 18 ವರ್ಷ ಆಗುವವರೆಗೆ ಪಾವತಿಸುತ್ತ ಬಂದರೆ, ಅದಕ್ಕೆ ಬಡ್ಡಿ, ಬೋನಸ್ ಎಲ್ಲ ಸೇರಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಒಳ್ಳೆಯ ಆದಾಯವಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಹೊರೆಯಾಗುವುದಿಲ್ಲ. ಮದುವೆಯ ನಂತರದ ದೊಡ್ಡ ಖರ್ಚು ಮಕ್ಕಳದ್ದು. ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವ ತನಕ ಆದಾಯದ ಶೇ. 20ರಷ್ಟು ಇದಕ್ಕೆ ಮೀಸಲಾಗಿಡಬೇಕು.
ಹೂಡಿಕೆಯಲ್ಲಿ ಆರ್‌ಡಿ ಸೇಫ್
ಹೀಗೊಂದು ಲೆಕ್ಕ ಹಾಕೋಣ. ಬ್ಯಾಂಕಿನ ಆರ್‌ಡಿ ಖಾತೆ ಬಹಳ ಸೇಫ್. ಇದು 10ವರ್ಷಕ್ಕೆ ಮಾತ್ರ. ಪ್ರತಿ ತಿಂಗಳು ನೀವು 3 ಸಾವಿರ ಹಾಕಿದರೆ 10 ವರ್ಷಕ್ಕೆ ಶೇ.9.5ರ ಬಡ್ಡಿ ದರದಲ್ಲಿ 6ಲಕ್ಷ ಸಿಗುತ್ತದೆ. ಇದನ್ನು ಉಳಿದ ಐದು ವರ್ಷಕ್ಕೆ ಕ್ಯಾಶ್ ಸರ್ಟಿಫಿಕೆಟ್ ಕೊಂಡರೆ 15 ವರ್ಷದ ಹೊತ್ತಿಗೆ ಬಡ್ಡಿ ಎಲ್ಲ ಸೇರಿ ಸುಮಾರು 9ಲಕ್ಷದ 60ಸಾವಿರ ಹಣ ಸಿಗುತ್ತದಂತೆ. ಇದರಿಂದ ಮದುವೆಯ ಆರಂಭದ ದಿನಗಳಲ್ಲಿ ಇಂಥ ಪ್ಲಾನುಗಳನ್ನು ಮಾಡಿದರೆ ನಾಲ್ಕು, ಐದು ವರ್ಷದೊಳಗೆ ನೀವು ಆರ್ಥಿಕವಾಗಿ ಸಬಲರಾಗಬಹುದು. ಇದರ ಜೊತೆಗೆ ಚಿನ್ನದ ಮೇಲಿನ ಹೂಡಿಕೆಯನ್ನು ಮೂರನೇ ಹಂತವಾಗಿ ಇಟ್ಟು ಕೊಳ್ಳುವುದು ಲೇಸು. ಚಿನ್ನದ ಮೇಲೆ ಹೂಡುವವರು ತತ್‌ಕ್ಷಣದ ಲಾಭ ನಿರೀಕ್ಷೆ ಬೇಡ. ದೀರ್ಘಕಾಲಿನ ಹೂಡಿಕೆಯಲ್ಲಿ ಚಿನ್ನವೇ ಬೆಸ್ಟು.
ಮೊದಲು ನೀವು ಮಾಡಬೇಕಾದದ್ದು ಇಷ್ಟೇ.
ಉಳಿತಾಯಕ್ಕೆ ಸಾವಿರಾರು ದಾರಿಗಳಿವೆ. ಇದಕ್ಕೂ ಮೊದಲು ಉಳಿತಾಯ ಮಾಡಬೇಕು ಅನ್ನುವ ಯೋಚನೆ ಮನಸ್ಸಿಗೆ ಬರುವುದು ಅವಶ್ಯಕ. ಕ್ಷಣಕ್ಕೆ ಬಂದು ಹೋಗುವ ನೂರಾರು ಯೋಚನೆಗಳಲ್ಲಿ ಇದೂ ಒಂದಾಗದಂತೆ ನೋಡಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಉಳಿತಾಯ ಸಾಧ್ಯ. ಸೋ, ಇಂದಿನಿಂದ ಅಲ್ಲ, ಈ ಕ್ಷಣದಿಂದ ಉಳಿತಾಯದ ಬಗ್ಗೆ ಯೋಚಿಸಿ, ಚಿಂತಿಸಿ, ಮತ್ತು ಕಾರ್ಯಗತ ಮಾಡಿ. ಒಂದು ವರ್ಷದಲ್ಲಿ ಬದುಕಿನ ಬದಲಾವಣೆ ಖಂಡಿತ ತಿಳಿಯುತ್ತದೆ.
ಎಲ್ಲಾ ಆದಾಯಗಳ ಮೂಲವನ್ನು ಗುಡ್ಡೆ ಹಾಕಿ. ತಿಂಗಳಿಗೆ ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ. ಇಲ್ಲಿ ಒಂದು ವಿಷಯ ಗಮನದಲ್ಲಿಟ್ಟು ಕೊಳ್ಳಬೇಕು. ಬ್ರಹ್ಮಚರ್ಯದ ದಿನಗಳು ಉಳಿತಾಯಕ್ಕೆ ಅಮೃತ ಘಳಿಗೆ ಇದ್ದ ಹಾಗೇ. ಶೇ.80ರಷ್ಟು ಉಳಿತಾಯ ಮಾಡಿ, ಶೇ.20ರಷ್ಟು ಖರ್ಚು ಮಾಡಲುಬಹುದಾದ ಕಾಲ ಇದು. ಮದುವೆ ಆಗುವ ತನಕ ನೀವು ಎಷ್ಟು ಹಣ ಉಳಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮದುವೆ ನಂತರ ಬದುಕು ನೆಮ್ಮದಿ
ಇಂದ ಇರುತ್ತದೆ. ಈ ಕಾರಣಕ್ಕೆ ಕೆಲಸಕ್ಕೆ ಸೇರಿ 30 ವಯಸ್ಸಿಗೆ ಮದುವೆಯಾಗುವುದಾದರೆ 5-6 ವರ್ಷದ ತನಕ ನೀವು ಹಣ ಉಳಿಸಬಹುದು. ನಿಮ್ಮ ಸಂಬಳ 10ಸಾವಿರದಿಂದ ಆರಂಭವಾಗಿ 25ಸಾವಿರಕ್ಕೆ ನಿಂತಿದೆ ಎಂದಿಟ್ಟು ಕೊಳ್ಳಿ. ಸರಾಸರಿ 6 ಸಾವಿರದಿಂದ 15ಸಾವಿರದ ತನಕ ಉಳಿತಾಯ ಮಾಡಿದ್ದೇ ಆದರೆ ಹೆಚ್ಚಾ ಕಡಿಮೆ ಮದುವೆ ಹೊತ್ತಿಗೆ ನಿಮ್ಮ ಕೈಯಲ್ಲಿ ಮೂರು, ನಾಲ್ಕು ಲಕ್ಷ ರೂ.ಇರುತ್ತದೆ.
– ನಾದಸ್ವರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.