ಬಂತು ಮಾರುತಿ ಎತ್ತಿ ಆರತಿ
Team Udayavani, Feb 18, 2019, 12:30 AM IST
ಹಿಂದಿನ ವ್ಯಾಗನ್‌ಆರ್‌ಗಿಂತ ಈಗಿನದ್ದು ಹೆಚ್ಚು ಸ್ಟೈಲಿಶ್. ಅಗಲವಾದ ಹೆಡ್‌ಲ್ಯಾಂಪ್‌ಗ್ಳು ಆ್ಯರೋ ಶೇಪ್‌ನಲಿದ್ದು, ಫ್ರಂಟ್ ಗ್ರಿಲ್‌ಗಳು ಹೆಚ್ಚು ಆಕರ್ಷಕವಾಗಿವೆ. ಲಿಫ್ಟ್ ಮಾಡಬಹುದಾದ ರೀತಿಯ ಡೋರ್‌ಹ್ಯಾಂಡಲ್‌ಗಳು ಹೋಂಡಾ ಸಿಆರ್-ವಿ ವಾಹನವನ್ನು ನೆನಪಿಸುತ್ತವೆ. ಸಾಕಷ್ಟು ಬೂಟ್ ಸ್ಪೇಸ್, ಲೆಗ್‌ಸ್ಪೇಸ್‌ಗಳನ್ನು ಹೊಂದಿದೆ.
ಮಾರುತಿ ಸುಝುಕಿ ವ್ಯಾಗನ್‌ಆರ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರು. ಫ್ಯಾಮಿಲಿ ಕಾರ್ ಆಗಿ ವ್ಯಾಗನ್‌ಆರ್ ಅನ್ನು ಇಷ್ಟಪಡದವರೇ ಇಲ್ಲ ಎಂಬಂತಾಗಿದೆ. ಇದಕ್ಕೆ ಕಾರಣ, ಅದು ಮಾರಾಟವಾದ ಸಂಖ್ಯೆ. ಈವರೆಗೆ ವ್ಯಾಗನ್‌ಆರ್ ಸುಮಾರು 22 ಲಕ್ಷದಷ್ಟು ಮಾರಾಟವಾಗಿದೆ. ಇನ್ನೂ ಮಾರಾಟ ವ್ಯಾಪಕವಾಗುವ ನಿರೀಕ್ಷೆ ಇದೆ. ಕಾರಣ: ವ್ಯಾಗನ್‌ಆರ್ ಹೊಸ ಮಾಡೆಲ್.
ಮಾರುತಿ ತನ್ನ ಹೊಸ ತಲೆಮಾರಿನ ಕಾರುಗಳಾದ ಸ್ವಿಫ್ಟ್, ಬೊಲೆರೋ, ಇಗ್ನಿಸ್, ಸಿಯಾಜ್‌ಗಳನ್ನು ತನ್ನ ಹಾರ್ಟೆಕ್ಟ್ ಮಾದರಿಯಲ್ಲಿ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅದಕ್ಕೀಗ ವ್ಯಾಗನ್‌ಆರ್ ಅನ್ನು ಕೂಡ ಸೇರಿಸಿದೆ. ಹೊಸ ವ್ಯಾಗನ್‌ಆರ್, ಸರಕಾರದ ನೂತನ ನಿಯಮಾವಳಿಗೆ ಪೂರಕವಾಗಿದ್ದು, ಹೆಚ್ಚಿನ ಸುರಕ್ಷತಾ ವೈಶಿಷ್ಟéಗಳನ್ನು ಹೊಂದಿದೆ. ಇದರ ಬಾಡಿ, ಕ್ಯಾಬಿನ್, ಎಂಜಿನ್ ಕೂಡ ಸುಧಾರಿತ ಆವೃತ್ತಿಯದ್ದು. ಹಳೆಯ ಕಾರು 68 ಬಿಎಚ್‌ಪಿ, 3 ಸಿಲಿಂಡರ್‌ನ ಎಂಜಿನ್ ಹೊಂದಿದ್ದರೆ, ಹೊಸ ಕಾರು 1.2 ಲೀ.ನ 83 ಬಿಎಚ್‌ಪಿಯ ಎಂಜಿನ್ ಅನ್ನು ಹೊಂದಿದೆ. ಇದೇ ಎಂಜಿನ್ ಸ್ವಿಫ್ಟ್ನಲ್ಲಿ ಕೂಡ ಇದೆ.
ಲುಕ್ ಹೇಗಿದೆ?
ಹಿಂದಿನ ವ್ಯಾಗನ್‌ಆರ್ ಮಾದರಿಯ ಕಾರುಗಳಲ್ಲಿ ಅತ್ಯಧಿಕ ಸ್ಥಳಾವಕಾಶ ಹೊಂದಿರುವ ಕಾರು ಇದು. ಸಾಕಷ್ಟು ಬೂಟ್ ಸ್ಪೇಸ್, ಲೆಗ್‌ಸ್ಪೇಸ್‌ಗಳನ್ನು ಹೊಂದಿದೆ. ಹಿಂದಿನ ವ್ಯಾಗನ್‌ಆರ್‌ಗಿಂತ 56 ಎಂ.ಎಂ. ಉದ್ದವಿದ್ದು, 125 ಎಂ.ಎಂ. ಅಗಲ ಹೆಚ್ಚಿದೆ. 35 ಎಂ.ಎಂ.ನಷ್ಟು ಹೆಚ್ಚು ವೀಲ್‌ಬೇಸ್ ಕೂಡ ಹೊಂದಿದೆ. ಆದರೆ ಭಾರ ಮಾತ್ರ ಸುಮಾರು 65 ಕೆ.ಜಿ.ಯಷ್ಟು ಕಡಿಮೆ ಇದೆ. ವ್ಯಾಗನ್‌ಆರ್ ಆವೃತ್ತಿಗಳಲ್ಲೇ 1.2 ಲೀ.ನ ಝಡ್‌ಎಕ್ಸ್‌ಐ ಎಜೀಸ್ ಆವೃತ್ತಿ ಅತ್ಯಧಿಕ ಭಾರವಿದೆ.
ಹಿಂದಿನ ವ್ಯಾಗನ್‌ಆರ್‌ಗಿಂತ ಈಗಿನದ್ದು ಹೆಚ್ಚು ಸ್ಟೈಲಿಶ್. ಅಗಲವಾದ ಹೆಡ್‌ಲ್ಯಾಂಪ್‌ಗ್ಳು ಆ್ಯರೋ ಶೇಪ್‌ನಲಿದ್ದು, ಫ್ರಂಟ್ ಗ್ರಿಲ್‌ಗಳು ಹೆಚ್ಚು ಆಕರ್ಷಕವಾಗಿವೆ. ಲಿಫ್ಟ್ ಮಾಡಬಹುದಾದ ರೀತಿಯ ಡೋರ್‌ಹ್ಯಾಂಡಲ್‌ಗಳು ಹೋಂಡಾ ಸಿಆರ್-ವಿ ವಾಹನವನ್ನು ನೆನಪಿಸುತ್ತವೆ. ಮೇಲ್ಭಾಗದ ವರೆಗೆ ಬ್ರೇಕ್‌ಲೈಟ್‌ಗಳು ಹಿಂಭಾಗ ವೈಪರ್, ಡಿ ಫಾಗರ್, ದೊಡ್ಡದಾದ ಟಯರ್‌ಗಳು, ಉತ್ತಮ ಗ್ರೌಂಡ್‌ಕ್ಲಿಯರೆನ್ಸ್ ಇದರ ಪ್ಲಸ್‌ಪಾಯಿಂಟ್. ಆದರೆ ಇದರ ಯಾವುದೇ ಆವೃತ್ತಿಯಲ್ಲೂ ಅಲಾಯ್ ವೀಲ್ ಇಲ್ಲ.
ಒಳಾಂಗಣ ವಿನ್ಯಾಸ
ಒಂದು ಕುಟುಂಬದ ಅಗತ್ಯಕ್ಕೆ ತಕ್ಕಂತೆ ಈ ಕಾರನ್ನು ಹೆಚ್ಚು ಅನುಕೂಲಕರ ವಾಗುವಂತೆ ನಿರ್ಮಿಸಲಾಗಿದೆ. ಅಗಲವಾದ ಸೀಟುಗಳು ಕಾಲು ಚಾಚಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇದೆ. ಉತ್ತಮ ಕ್ಯಾಬಿನ್ ಇದೆ. ಡ್ರೈವರ್‌ಗೆ ಸುಗಮವಾಗಿ ಚಾಲನೆ ಮಾಡುವಂತೆ ಅನುಕೂಲ ಕಲ್ಪಿಸುವ ಡ್ಯಾಶ್‌ಬೋರ್ಡ್-ಡ್ರೈವಿಂಗ್ ಪೊಸಿಷನ್ ಇದೆ. ಹಿಂಭಾಗದಲ್ಲಿ ಮೂವರು ಆರಾಮಾಗಿ ಕುಳಿತುಕೊಳ್ಳಬಹುದು. ಹಿಂಭಾಗಕ್ಕೂ ಎ.ಸಿ, ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಇದೆ. ಮುಂಭಾಗ ಡ್ಯಾಶ್‌ಬೋರ್ಡ್‌ನಲ್ಲಿ ಇನ್ಸು$r$Åಮೆಂಟಲ್ ಕ್ಲಸ್ಟರ್, 7 ಇಂಚಿನ ಟಚ್‌ಸ್ಕ್ರೀನ್‌ನ ಇನ್ಫೋ ಎಂಟರ್‌ಟೈನ್‌ಮೆಂಟ್ ಸಿಸ್ಟಂ, ನಾಲ್ಕು ಉತ್ತಮ ಸ್ಪೀಕರ್‌ಗಳು ಇವೆ. ಬ್ಲೂಟೂತ್, ಟಾಕ್‌ಬ್ಯಾಕ್ ವ್ಯವಸ್ಥೆ, ಮೊಬೈಲ್‌ಗೆ ಸಂಪರ್ಕ ಕಲ್ಪಿಸುವ ಸ್ಮಾರ್ಟ್ ಪ್ಲೇ ಸ್ಟುಡಿಯೋ ವ್ಯವಸ್ಥೆ ಇದೆ. 341 ಲೀಟರ್‌ನ ಅತಿ ದೊಡ್ಡ ಢಿಕ್ಕಿ ಇದೆ. ಢಿಕ್ಕಿ ಓಪನ್ ಮಾಡಿ ಹೆಚ್ಚುವರಿ ಲಗೇಜ್ ಇದ್ದರೆ ಒಂದು ಸೀಟ್ ಮಾತ್ರ ಮಡಚುವ, ಬೇಕಾದರೆ ಎರಡೂ ಸೀಟುಗಳನ್ನು ಮಡಚುವ ಅನುಕೂಲ ಇದೆ. ಡ್ರೈವರ್ ಮತ್ತು ಪಕ್ಕದ ಪ್ರಯಾಣಿಕರ ಸೀಟನ್ನು ಹಿಂದಕ್ಕೂ ಮುಂದಕ್ಕೂ ಮಡಚುವ ಸೌಕರ್ಯವಿದೆ. ಆದರೆ ಸೀಟು ಎತ್ತರಿಸುವ ಅನುಕೂಲವಿಲ್ಲ.
ದೊಡ್ಡ ಎಂಜಿನ್
ಹಿಂದಿನ ಆವೃತ್ತಿಯ ಕಾರಿಗಿಂತ ಈಗಿನದ್ದರಲ್ಲಿ ದೊಡ್ಡ, ಹೆಚ್ಚು ಸಾಮರ್ಥ್ಯದ ಎಂಜಿನ್ ಇದೆ. ಜತೆಗೆ ಆಟೋ ಮ್ಯಾಟಿಕ್ ಗಿಯರ್ ಬಾಕ್ಸ್ ಅನುಕೂಲವೂ ಇದೆ. 5 ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗಿಯರ್ ಆವೃತ್ತಿಯಲ್ಲಿ ಇದು ಲಭ್ಯವಿದೆ. 113 ಎನ್‌ಎಂ ಟಾರ್ಕ್ ಮತ್ತು 83 ಎಚ್‌ಪಿ ಶಕ್ತಿ ಹೊಂದಿರುವುದರಿಂದ ಸಾಕಷ್ಟು ಪವರ್‌ಫುಲ್ ಆಗಿದೆ. ಹೈವೇಯಲ್ಲಿ ಉತ್ತಮ ಸವಾರಿಯ ಅನುಭವ ನೀಡುತ್ತದೆ. 0-100ರವರೆಗೆ ಕೇವಲ 13.28 ಸೆಕೆಂಡ್‌ಗಳಲ್ಲಿ ಕ್ರಮಿಸುತ್ತದೆ. 32 ಲೀಟರ್‌ನ ಇಂಧನ ಟ್ಯಾಂಕ್ ಮುಂಭಾಗ ಡಿಸ್ಕ್ ಹಿಂಭಾಗ ಡ್ರಮ್ ಬ್ರೇಕ್‌ಗಳು, 2 ಏರ್‌ಬ್ಯಾಗ್, ಎಬಿಎಸ್, ಇಬಿಡಿ ವ್ಯವಸ್ಥೆ 155/80 ಆರ್ 13 ಗಾತ್ರದ ರೇಡಿಯಲ್ ಟ್ಯೂಬ್‌ಲೆಸ್ ಟಯರ್‌ಗಳು ಇವೆ.
ಲಭ್ಯವಿರುವ ಆವೃತ್ತಿಗಳು
ವ್ಯಾಗನ್ ಆರ್ 1.0 ಹಳೆಯ ಎಂಜಿನ್ ಮತ್ತು 1.2 ಎಂಜಿನ್ ಎಂದು 2 ವಿಧಗಳಲ್ಲಿ ಒಟ್ಟು 6 ಆವೃತ್ತಿಗಳಲ್ಲಿ ಲಭ್ಯವಿವೆ. ಎಲ್‌ಎಕ್ಸ್‌ಐ, ಎಲ್‌ಎಕ್ಸ್‌ಐ-ಒ, ವಿಎಕ್ಸ್‌ಐ-ಒ, ಝಡ್‌ಎಕ್ಸ್‌ಐ ಮಾದರಿ ಇವೆ. 1.2. ಲೀಟರ್‌ನಲ್ಲೂ ಈ ಆವೃತ್ತಿಗಳಿವೆ. ಇವುಗಳಲ್ಲಿ ಎಬಿಎಸ್, ಇಬಿಡಿ ಎಲ್ಲ ಆವೃತ್ತಿಗಳಲ್ಲೂ ಲಭ್ಯವಿವೆ. 1.ಲೀ ಎಲ್‌ಎಕ್ಸ್‌ಐ 4.19 ಲಕ್ಷ ರೂ. ಎಕ್ಸ್‌ಷೋರೂಂ (ದೆಹಲಿ) ಆರಂಭಿಕ ದರವಿದೆ. ಹಾಗೆಯೇ 1.2 ಬೇಸ್‌ಮಾಡೆಲ್ ದರ 4.89 ಲಕ್ಷ ರೂ. (ದೆಹಲಿ) ದರವಿದೆ.
ಯಾವುದು ಬೆಸ್ಟ್?
ಪವರ್ ಬೇಕು ಎಂದಿದ್ದರೆ 1.2 ಲೀಟರ್ ಎಂಜಿನ್ ಬೆಸ್ಟ್. ಮೈಲೇಜ್, ಸಾಮಾನ್ಯ ಓಡಾಟ, ಸ್ವಲ್ಪ ಜೇಬಿಗೂ ಬೆಸ್ಟ್ ಎಂದಿರಬೇಕು ಎಂದಿದ್ದರೆ 1.0 ಲೀಟರ್‌ನ ಎಂಜಿನ್ ಆಯ್ಕೆ ಮಾಡಿಕೊಳ್ಳಬಹುದು.
ತಾಂತ್ರಿಕ ಮಾಹಿತಿ
ಉದ್ದ 3655 ಎಂ.ಎಂ.
ಅಗಲ 1620 ಎಂ.ಎಂ
ಎತ್ತರ 1675 ಎಂ.ಎಂ.
ವೀಲ್‌ಬೇಸ್ 2435
ಎಂಜಿನ್ ಆವೃತ್ತಿಗಳು 1 ಲೀ. ಮತ್ತು 1.2 ಲೀ.
ಶಕ್ತಿ 68 ಮತ್ತು 83 ಬಿಎಚ್‌ಪಿ
ಒಟ್ಟು ಭಾರ 1340 ಕೆ.ಜಿ.
– ಈಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.