ಮಸಾಲೆ ದೋಸೆಗೆ ಶಾಸ್ತ್ರಿಯ ಸ್ಥಾನಮಾನ
Team Udayavani, Dec 4, 2017, 2:21 PM IST
ಚಿಂತಾಮಣಿ ಅಂದಾಕ್ಷಣ ಎಲ್ಲರಿಗೂ ಥಟ್ ಅಂತ ಕಡ್ಲೆ ಬೀಜ ನೆನಪಾಗುತ್ತದೆ. ಅದನ್ನು ತಿನ್ನದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಕಡಲೇ ಬೀಜ ದೇಶ ವಿದೇಶಗಳ ಆಚೆಗೂ ಸದ್ದು ಮಾಡಿದೆ. ಆದೇ ರೀತಿ ಚಿಂತಾಮಣಿ ನಗರದ ಶಾಸ್ತ್ರೀ ಹೋಟೆಲ್ ಅಂದರೆ ಸಾಕು; ಘಮಘಮಿಸುವ ತುಪ್ಪದ ಮಸಾಲೆ ದೋಸೆ ಎಲ್ಲರ ಬಾಯಲ್ಲೂ ನೀರು ತರಿಸಿಬಿಡುತ್ತದೆ.
ಬರೋಬ್ಬರಿ 50 ವರ್ಷಗಳ ಇತಿಹಾಸ ಹೊಂದಿರುವ ಚಿಂತಾಮಣಿ ಗಾಯಿತ್ರಿ ಹೋಟೆಲ್ ಜನ ಮಾನಸದೊಳಗೆ ಇಂದಿಗೂ ಶಾಸ್ತ್ರಿ ಹೋಟೆಲ್ ಎಂದೇ ಖ್ಯಾತಿ. 1969ರಲ್ಲಿ ರಾಮಾಶಾಸ್ತ್ರಿ ಎಂಬುವರು ಚಿಂತಾಮಣಿ ನಗರದ ಮಧ್ಯೆಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಸಮೀಪ ಸ್ಥಾಪಿಸಿದ ಹೋಟೆಲ್ ಇದು. ಈಗ ಅವರ ಮಕ್ಕಳಾದ ನರಸಿಂಹಮೂರ್ತಿ, ಮುರಳೀಧರ್ ನಡೆಸಿಕೊಂಡು ಬರುತ್ತಿದ್ದಾರೆ.
ಮೊದಲ ಏರ್ ಕೂಲರ್ ಹೋಟೆಲ್..
ರಾಮಶಾಸ್ತ್ರಿಯವರು ಹೋಟೆಲ್ ಆರಂಭದ ದಿನಗಳಲ್ಲಿಯೇ ಗ್ರಾಹಕರಿಗಾಗಿ ಏರ್ ಕೂಲರ್‌ರನ್ನು ಹೋಟೆಲ್‌ಗೆ ಅಳವಡಿಸಿ ಗಮನ ಸೆಳೆದಿದ್ದರು. ಜೊತೆಗೆ ಗ್ರಾಹಕರು ಊಟ, ತಿಂಡಿ ಮಾಡಿಕೊಂಡು ಹೋಗಲು ಅನುಕೂಲವಾಗುವಂತೆ ಕೂರಲು ಉತ್ತಮ ಟೇಬಲ್ ಹಾಗೂ ಕುರ್ಚಿಗಳ ವ್ಯವಸ್ಥೆ ಮಾಡಿದ್ದು ಸುತ್ತಮುತ್ತಲ ಊರುಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರತಿ ಭಾನುವಾರ ಸಂತೆಗೆ ಬರುವ ಜನ, ಗಾಯಿತ್ರಿ ಹೋಟೆಲ್ ಗೆ ತಪ್ಪದೇ ದಾಂಗುಡಿ ಇಡುತ್ತಾರೆ. ಇನ್ನೂ ಪ್ರವಾಸೋದ್ಯಮದ ಜೊತೆಗೆ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಚಿಂತಾಮಣಿ ತಾಲೂಕಿನ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಕೂಡ ಮಸಾಲೆದೋಸೆ ಚಪ್ಪರಿಸಿ ಹೋಗುತ್ತಾರೆ.
ಶಾಸ್ತ್ರೀ ಹೋಟೆಲ್‌ನಲ್ಲಿ ತಯಾರಿಸುವ ಇಡ್ಲಿ ವಡೆ, ಚಿತ್ರಾನ್ನ, ಪೊಂಗಲ್, ಸೆಟ್ ದೋಸೆ ಮಸಾಲೆ ದೋಸೆಯಷ್ಟೇ ಫೇಮಸ್ಸು. ದೂರದ ಬೆಂಗಳೂರು, ನೆರೆಯ ಆಂಧ್ರಪ್ರದೇಶದ ಹಿಂದೂಪುರ, ಆನಂತಪುರ, ಕದಿರಿ, ಚಿತ್ತೂರು ಮದನಪಲ್ಲಿಗಳಿಂದ ಬರುವ
ವ್ಯಾಪಾರಸ್ಥರು ಶಾಸ್ತ್ರೀ ಹೋಟೆಲ್‌ಗೆ ಬಂದು ಬಿಸಿಬಿಸಿ ಮಸಾಲೆ ದೋಸೆ ಸವಿದೇ ಹೋಗುತ್ತಾರೆ. ಭಾನುವಾರವಂತೂ ಹೋಟೆಲ್‌ನಲ್ಲಿ ಜನವೋ ಜನ.
ಗುಣಮಟ್ಟದಲ್ಲಿ ರಾಜಿ ಇಲ್ಲ
ನಾವು ಹೋಟೆಲ್ ಆರಂಭಗೊಂಡಾಗನಿಂದಲೂ ಬ್ರಾಂಡೆಡ್ ವಸ್ತುಗಳನ್ನೇ ಬಳಸುತ್ತಿದ್ದೇನೆ. ಇದೇ ಗುಣಮಟ್ಟದ ಗುಟ್ಟು. ಇಂದು ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗುತ್ತಲೇ ಇದ್ದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಹಾಗಾಗಿಯೇ ನಾವು 50
ವರ್ಷಗಳಿಂದ ಹೋಟೆಲ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ ಎನ್ನುತ್ತಾರೆ ಹೋಟೆಲ್‌ನ ಮಾಲೀಕ ಮುರಳೀಧರ್.
ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.