ಅಕ್ಷಯ ಮೋಟಾರ್ ನಲ್ಲಿದೆ ಮರ್ಸಿಡಿಸ್‌ ಬೆನ್ಜ್


Team Udayavani, Sep 25, 2017, 1:24 PM IST

25-ZZ-5.jpg

ಇಂದು ವಾಹನ ಉತ್ಪಾದನಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ವಾಹನಗಳು ಮರೆಯಾಗಿ ಎಲೆಕ್ಟ್ರಿಕ್‌ ವಾಹನಗಳು, ಸೋಲಾರ್‌ ಎನರ್ಜಿ ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ. ಇಷ್ಟೇ ಏಕೆ,  ಹೈಬ್ರಿಡ್‌ ವಾಹನಗಳೂ ಬೀದಿಗಿಳಿಯುವ ಸಂಭವವುಂಟು. ಅನ್ನಬಹುದೇ? ಮುಂದಿನ ದಿನಗಳಲ್ಲಿ ದೇಶದ ರಸ್ತೆಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳೇ ಸಂಚರಿಸಬೇಕು ಎನ್ನುವುದು ಕೂಡ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಮಿಷನ್‌-2030 ಯೋಜನೆ. ‘ಇ-ವಾಹನ’ಗಳಿಗೆ ಪ್ರಾಧಾನ್ಯತೆ ನೀಡುವುದೇ ಸರ್ಕಾರದ ಉದ್ದೇಶ ಎಂದು ಮರ್ಸಿಡಿಸ್‌ ಬೆನ್ಜ್ ಡೀಲರ್‌,  ಅಕ್ಷಯ್‌ ಮೋಟಾರ್ನ ಸಿಇಒ ಗಜಾನನ ಹೆಗ್ಡೆಕಟ್ಟೆ  ವಿವರಿಸುತ್ತಾರೆ.

   ಲಕ್ಷುರಿ ಕಾರುಗಳ ಮಾರಾಟದ ನೈಪುಣ್ಯತೆ ಅರಿತಿರುವ ಅವರು,  ಈ ಕ್ಷೇತ್ರಕ್ಕೆ ಬರುವ ಮುನ್ನ ಏಷಿಯನ್‌ ಪೇಂಟ್ಸ್‌ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.  ಆ ಕ್ಷೇತ್ರದ ಒಳಸುಳಿಯನ್ನು ಚೆನ್ನಾಗಿ ಬಲ್ಲವರು. ಆ ಬಗ್ಗೆ ವಿವರಿಸುತ್ತಾ…ಪೇಂಟ್ಸ್‌ ಕ್ಷೇತ್ರ ಜನರ ಅಗತ್ಯಗಳನ್ನು ಪೂರೈಸುವ ಕ್ಷೇತ್ರ. ಕಾರು ಮಾರುಕಟ್ಟೆ ಅದಲ್ಲ. ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಲು ಬೇಕಾಗುವ ಸಾರಿಗೆ ವಿಧಾನವಷ್ಟೇ. ಆದರೆ, ಇಲ್ಲಿ ಜೀವನಶೈಲಿ ಹಾಗೂ ಆದಾಯಕ್ಕೆ ತಕ್ಕಂತೆ ಕಾರುಗಳ ಬಳಕೆಯಿರುತ್ತದೆ. ಅದರಲ್ಲೂ ಐಷಾರಾಮಿ ಕಾರುಗಳಲ್ಲಿ ಘನತೆ, ಗೌರವ ಪ್ರಶ್ನೆಯೂ ಅಡಗಿದೆ. ಹೊಸ ಕಾರು ಖರೀದಿ ಎನ್ನುವುದು ಬಹಳಷ್ಟು ಜನರ ಮೂಡ್‌ ಪಾಯಿಂಟ್‌ ಇದ್ದಂತೆ. ನಾವು ಅವರಲ್ಲಿ ಖರೀದಿಸುವ ಮೂಡ್‌ ಅನ್ನು ಕ್ರಿಯೇಟ್‌ ಮಾಡಬೇಕಾದ್ದೆ ನಮ್ಮ ಕೆಲಸ. ಅಲ್ಲದೆ, ಇದು ಪ್ರತಿಯೊಬ್ಬ ಮಾರಾಟಗಾರನಿಗೂ ಇರಬೇಕಾದ ಲಕ್ಷಣ ಎನ್ನುತ್ತಾರೆ.

 ಮಾತು ಮುಂದುವರಿಸಿದ ಅವರು, ಅಕ್ಷಯ್‌ ಮೋಟಾರ್ನ ಗುರಿ ಹಾಗೂ ಮಾರುಕಟ್ಟೆಯಲ್ಲಿ ಮರ್ಸಿಡಿಸ್‌ ಬೆನ್‌j ಕಾರುಗಳ ಬೇಡಿಕೆ ಮುಂತಾದ ಸಂಗತಿಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದು ಹೀಗೆ… -ಜನತೆ ಏಕೆ ಐಷಾರಾಮಿ ಕಾರು ಕೊಳ್ಳಲು ಬಯಸುತ್ತಾರೆ? ಲಕ್ಷುರಿ ಕಾರುಗಳನ್ನು ಕೊಳ್ಳುವ ಗ್ರಾಹಕರು ಮೊದಲ ಬಾರಿ ಕಾರು ಕೊಳ್ಳುವವರಲ್ಲ. ಅವರು ಮೂಲತಃ ಅವರು ಕಾರು ಪ್ರಿಯರು. ಮಾರುಕಟ್ಟೆಯಲ್ಲಿ ಆಧುನಿಕ ಕಾರುಗಳು ಬಿಡುಗಡೆಯಾದ ತಕ್ಷಣ ಅದನ್ನೊಮ್ಮೆ ಡ್ರೈವ್‌ ಮಾಡಬೇಕು, ಸಾಧ್ಯವಾದರೆ ಕೊಳ್ಳಬೇಕೆಂಬ ಮನೋಭಾವ ಹಾಗೂ ಮೋಹವುಳ್ಳವರು. ಇನ್ನು ಆದಾಯ ತೆರಿಗೆ ಕಟ್ಟಬೇಕಾದ ಸಂದರ್ಭ ಬಂದಲ್ಲಿ ಮೊದಲು ಐಷಾರಾಮಿ ಕಾರು ಕೊಳ್ಳುವ ಪ್ಲಾನ್‌ ಮಾಡುವ ಜನರಿವರು. 

    -ಹಾಗಾದರೆ, ನೋಟು ಅಮಾನೀಕರಣ, ಜಿಎಸ್‌ಟಿ ಲಕ್ಷುರಿ ಕಾರ್‌ ಮಾರುಕಟ್ಟೆ  ಮೇಲೆ ಆಗಿಲ್ಲವೇ? 
ನೋಟು ಅಮಾನೀಕರಣದ ನಂತರ ಕೊಂಚ ಒತ್ತಡವಿತ್ತು. ಮನಿ ಮಾರ್ಕೆಟ್‌ ಟೈಟ್‌ ಆಗಿತ್ತು. ಆಗಲೂ ಕೂಡ ಕಾರು ಕೊಳ್ಳುವ ಗ್ರಾಹಕರಿಂದ ಆಧಾರ್‌ ಕಾರ್ಡ್‌ ಅಲ್ಲದಿದ್ದರೂ ಪ್ಯಾನ್‌ ಕಾರ್ಡ್‌ ಅನ್ನು ತೆಗೆದುಕೊಂಡೇ ಕಾರು ಮಾರುತ್ತಿದ್ದೆವು. ಜಿಎಸ್‌ಟಿ ಬಂದ ಮೇಲೆ ಕಾರುಗಳ ಬೆಲೆ ಸ್ವಲ್ಪ ಜಾಸ್ತಿಯಾಗಿತ್ತು. ಈಗ ಸೆಸ್‌ನಿಂದ ಕೊಂಚ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಅಷ್ಟೇ. ಆದರೆ, ಲಕ್ಷುರಿ ಕಾರು ಕೊಳ್ಳುವÛವರಿಗೆ ಇದೇನೂ ಭಾರೀ ವ್ಯತ್ಯಾಸವೂ ಅಲ್ಲ, ಹೊಡೆತವೂ ಅಲ್ಲ. ಇನ್ನೂ ಅಕ್ಷಯ ಮೋಟಾರ್ನ ಕಾರು ಸೇಲ್ಸ್‌ನಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಜಿಎಸ್‌ಟಿಗೂ ಮೊದಲೇ ನಮ್ಮಲ್ಲಿ ಕಾರುಗಳ ಬೆಲೆ ಕಡಿಮೆ ಮಾಡಲಾಗಿತ್ತು. 

-ಈ ಪರಿವರ್ತನೆ ಯುಗದಲ್ಲಿ ಲಕ್ಷುರಿ ಕಾರುಗಳ ಬೇಡಿಕೆ ಕುಗ್ಗಿಲ್ಲವೇ?
ಇಂದು ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಹಾಗೂ ಇದೊಂದು ಪರಿವರ್ತನೆಯ ಯುಗ ನಿಜ. ಆದರೂ ಬಹಳಷ್ಟು ಎಸ್‌ಎಂಇ ಗ್ರಾಹಕರು, ಕಾರ್ಪೋರೇಟ್‌ ವಲಯದ ಗ್ರಾಹಕರು ಐಷಾರಾಮಿ ಕಾರುಗಳನ್ನು ಕೊಳ್ಳಲು ಉತ್ಸುಕರಾಗಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ದೊಡ್ಡ ದೊಡ್ಡ ಸಂಸ್ಥೆಗಳು ಲಕ್ಷುರಿ ಕಾರ್‌ಗಳನ್ನು ಖರೀದಿಸುವುದು ಸಹಜವಾಗಿದೆ. ಅದಕ್ಕೆ ತಕ್ಕಂತೆ ಡೀಲರುಗಳು ಸಹ ಹಣಕಾಸು ಸೌಲಭ್ಯಗಳನ್ನು ಒದಗಿಸುವುದರಿಂದ ಎಲ್ಲವೂ ಸುಲಭವಾಗಿದೆ. ಇದರೊಟ್ಟಿಗೆ ಇನ್‌ಕಂಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿರುವುದರಿಂದ ತೆರಿಗೆ ಉಳಿಸಲು ಕಾರು ಕೊಳ್ಳಲು ಮುಂದೆ ಬರುತ್ತಿದ್ದಾರೆ. ಈಗ ನೋಟು ಅಪನಗದೀಕರಣ, ಜಿಎಸ್‌ಟಿ ಎಲ್ಲವೂ ಸರಿಯಾಗಿದ್ದರಿಂದ ಇದು ಕಾರು ಖರೀದಿಸಲು ಸೂಕ್ತ ಕಾಲ. 

-ಕರ್ನಾಟಕ ಹಾಗೂ ಭಾರತದಲ್ಲಿ ಮರ್ಸಿಡಿಸ್‌ ಬೆನ್ಜ್ ಮಾರುಕಟ್ಟೆ ಯಾವ ರೀತಿ ಇದೆ?
ಭಾರತದಲ್ಲಿ ಪ್ರಯಾಣಿಕರ ವಾಹನ ಕ್ಷೇತ್ರದಲ್ಲಿ ಹಲವು ಸೆಗೆಟ್‌ಗಳನ್ನು ಸೃಷ್ಟಿಸಿದ ಶ್ರೇಯ ಜರ್ಮನಿಯ ಮರ್ಸಿಡಿಸ್‌ ಬೆನ್‌j ಸಂಸ್ಥೆಗೆ ಸಲ್ಲುತ್ತದೆ. ಹಾಗೆಯೇ ನಮ್ಮ ಉತ್ಪಾದಕರ ಸಹಾಯವೂ ಚೆನ್ನಾಗಿದೆ. ಡೀಲರುಗಳ, ಮಾರಾಟಗಾರರ ಅಭಿರುಚಿ ಹಾಗೂ ಗ್ರಾಹಕರ ಅಗತ್ಯಗಳನ್ನು ಮೇರೆಗೆ ಕಾರುಗಳನ್ನು ನಿರ್ಮಿಸುತ್ತಿದೆ. ಎಲ್ಲ ಸಮಯದಲ್ಲೂ ಮರ್ಸಿಡಿಸ್‌ ಬೆನ್ಜ್ ತನ್ನ ಬ್ರಾಂಡ್ ಅನ್ನು ಕಾಯ್ದುಕೊಂಡಿದೆ. ಭಾರತದಲ್ಲಿ ನಂ.1 ಬ್ರಾಂಡ್ ಸ್ಥಾನವನ್ನುಳಿಸಿಕೊಂಡಿದೆ. ಮರ್ಸಿಡಿಸ್‌ ಬೆನ್ಜ್ ಘನತೆ, ಗೌರವ ತರುವ ಕಾರುಗಳು ಸಾಲಿನಲ್ಲಷ್ಟೇ ಅಲ್ಲ ತಂತ್ರಜ್ಞಾನಕ್ಕೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಸಂಪೂರ್ಣ ಜರ್ಮನಿ ತಂತ್ರಜ್ಞಾನದ ಕಾರುಗಳಿವು. ವಿಶ್ವ ಆಟೋಮೊಬೈಲ್‌ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಮರ್ಸಿಡಿಸ್‌ ಬೆನ್ಜ್ ಕಾರು ತನ್ನಲ್ಲಿದೆ ಎನ್ನುವುದೇ ಪ್ರತಿಷ್ಠೆಯ ಸೂಚಕ. ಭಾರತಾದ್ಯಂತ ಮರ್ಸಿಡಿಸ್‌ಗೆ ಉತ್ತಮ ಪ್ರತಿಕ್ರಿಯೆ ಇದೆ. ಕರ್ನಾಟಕದಲ್ಲಿ ಎಸ್‌ಯುವಿ ಸೆಗೆಟ್‌ ಭಾರಿ ಬೇಡಿಕೆಯಿದೆ.

-ಮೈಸೂರಲ್ಲಿ ಅಕ್ಷಯ ಮೋಟಾರ್ ಶೋರೂಮ್‌ ತೆರೆದಿರುವ ಬಗ್ಗೆ ತಿಳಿಸಿ.
ಅಕ್ಷಯ ಮೋಟಾರ್ ಪ್ರಥಮ ಬೊಟಿಕ್‌ ಶೋರೂಮ್‌ ಬೆಂಗಳೂರಿನ ಕೋರಮಂಗಲದಲ್ಲಿ, ಎರಡನೆ ಮಳಿಗೆ ಮೈಸೂರು ರಸ್ತೆಯಲ್ಲಿ ಹಾಗೂ ಮೂರನೆ ಶೋರೂಮ್‌ ಮೈಸೂರಲ್ಲಿ. ಮೈಸೂರಿನ ಅಕ್ಷಯ ಮೋಟಾರ್ ಸೇಲ್ಸ್‌ ಮತ್ತು ಸರ್ವೀಸ್‌ ಸೆಂಟರನ್ನು ಆಗಸ್ಟ್‌ನಲ್ಲಿ ತೆರೆಯಲಾಯಿತು. ಇದು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಮಡಿಕೇರಿ ಜಿಲ್ಲೆಗಳ ಲಕ್ಷುರಿ ಕಾರು ಪ್ರಿಯರ ಅಗತ್ಯಗಳನ್ನು ಪೂರೈಸುತ್ತಿದೆ. ಈ ಭಾಗದ ಜನತೆ ಮರ್ಸಿಡಿಸ್‌ ಬೆನ್ಜ್ ಖರೀದಿಯಲ್ಲಿ ಆಸಕ್ತಿ ತೋರಿದ್ದಾರೆ. ಡಿಜಿಟಲ್‌ ಸರ್ವೀಸ್‌ ಮತ್ತು ಮರ್ಸಿಡಿಸ್‌ ಅಂಗೀಕರಿಸಿದ ಬಿಡಿಭಾಗಗಳು ಎಲ್ಲವೂ ಇಲ್ಲಿ ಲಭ್ಯ. ಮುಂದಿನ ಶೋರೂಮ್‌ ಹಣಕಾಸು ವರ್ಷದ ಅಂತ್ಯದೊಳಗೆ ಹುಬ್ಬಳ್ಳಿಯಲ್ಲಿ ಬರಲಿದೆ.

ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.