ಮಿಸ್ಟೇಕ್‌ ಮನೆ

ಕನಸಿನ ಮನೆಗೆ ಕುಂದು ಬರಬಾರದು...

Team Udayavani, Mar 25, 2019, 6:00 AM IST

mistake-house

ಮನೆ ಮಾಲೀಕರ ಆಶಯಕ್ಕೆ ತಕ್ಕಂತೆ ಪ್ಲಾನ್‌ ಮಾಡಿದ ಮೇಲೆ, ಆರ್ಕಿಟೆಕ್ಟ್ ಎಂಜಿನಿಯರ್‌ಗಳು ಕಾಂಟ್ರಾಕ್ಟರ್‌ ಇಲ್ಲವೇ ಮೇಸ್ತ್ರಿಗಳಿಗೆ ಅದನ್ನು ವಿವರಿಸಿ, ಕಾರ್ಯರೂಪಕ್ಕೆ ತರಲು ಹೇಳುತ್ತಾರೆ. ಮೇಸ್ತ್ರಿಗಳು ಇದನ್ನು ನುರಿತ ಗಾರೆಯವರಿಗೆ ಹೇಳಿ ಮಾಡಿಸುತ್ತಾರೆ. ಅನುಭವವೀ ಗಾರೆ ಕೆಲಸದರಿಗೆ ಸಾಕಷ್ಟು ಕೆಲಸ ಗೊತ್ತಿರುತ್ತದೆ. ಆದರೆ ಸಿಮೆಂಟ್‌ ಮರಳು ಮಿಶ್ರಣದಂಥ ಕೆಲಸವನ್ನು ಅದರ ಬಗ್ಗೆ ತಿಳಿಯದವರಿಂದ ಮಾಡಿಸುವುದು ಯಾವ ರೀತಿಯಿಂದಲೂ ಒಪ್ಪುವಂಥ ಸಂಗತಿಯಲ್ಲ.

ಮನೆ ಕಟ್ಟುವುದು ಮಧ್ಯಮ ವರ್ಗದ ದೊಡ್ಡ ಕನಸು. ಜೀವನ ಪೂರ್ತಿ ಸ್ವಂತ ಮನೆಯ ಕನಸು ಕಂಡು ಒಂದು ದಿನ ನನಸು ಮಾಡಿಕೊಳ್ಳುತ್ತಾರೆ. ಇದೂ ಒಂಥರಾ ಸಿನಿಮಾ ಇದ್ದಾಗೆ. ನಿರ್ದೇಶಕನ ಕನಸಿನಂತೆ ನಟ,ನಟಿಯರು, ತಂತ್ರಜ್ಞರು ಎಲ್ಲರೂ ದುಡಿಯುವಂತೆ, ನಮ್ಮ ಮನೆ ಕಟ್ಟಲು ಬೇರೆಯವರೂ ಕೆಲಸ ಮಾಡಬೇಕಾಗುತ್ತದೆ.

ನೀವು ಅದೆಷ್ಟೇ ಎಚ್ಚರ ವಹಿಸಿದರೂ, ಮನೆ ಕಟ್ಟುವಾಗ ತಪ್ಪುಗಳು ಆಗಿಬಿಡುತ್ತವೆ. ಕಷ್ಟಪಟ್ಟು ದುಡಿದ ಹಣವನ್ನು ಮನೆ ಮಾಲೀಕರೇ ಖರ್ಚು ಮಾಡಿದರೂ ಕೆಲಸಗಾರರಿಗೆ ಈ ಸೀರಿಯಸ್‌ನೆಸ್‌ ಇರಬೇಕಲ್ಲ? ಕೈಯಾರೆ ಕೆಲಸ ಮಾಡುವವರು ಕುಶಲ ಹಾಗೂ ಅಷ್ಟೇನೂ ಕೌಶಲ್ಯ ಹೊಂದಿರದ ಸಹಾಯಕರು.

ಮನೆಯವರಿಗೆ ಹೇಗೆ ಬೇಕೋ ಹಾಗೆ ಮನೆ ಪ್ಲಾನ್‌ ಮಾಡಿದ ಮೇಲೆ, ಆರ್ಕಿಟೆಕ್ಟ್ ಎಂಜಿನಿಯರ್‌ಗಳು ಕಾಂಟ್ರಾಕ್ಟರ್‌ ಇಲ್ಲವೇ ಮೇಸ್ತ್ರಿಗಳಿಗೆ ಅದನ್ನು ವಿವರಿಸಿ, ಕಾರ್ಯರೂಪಕ್ಕೆ ತರಲು ಹೇಳುತ್ತಾರೆ. ಮೇಸ್ತ್ರಿಗಳು ಇದನ್ನು ನುರಿತ ಗಾರೆಯವರಿಗೆ ಹೇಳಿ ಮಾಡಿಸುತ್ತಾರೆ. ಅನುಭವಿ ಗಾರೆಯವರಿಗೆ ಸಾಕಷ್ಟು ಕೆಲಸಗೊತ್ತಿರುತ್ತದೆ. ಆದರೆ ಸಿಮೆಂಟ್‌ ಮರಳು ಮಿಶ್ರಣದಂಥ ಕೆಲಸವನ್ನು ಅದರ ಬಗ್ಗೆ ತಿಳಿಯದವರಿಂದ ಮಾಡಿಸುವುದೇ ಹೆಚ್ಚು. ಇಂಥವರು ಹಳ್ಳಿಯಿಂದ ಹೊಸದಾಗಿ ಉದ್ಯೋಗಕ್ಕೆ ಬಂದಿರುತ್ತಾರೆ. ಕಟ್ಟಡ ನಿರ್ಮಾಣದ ಬಗ್ಗೆ ಏನೂ ತಿಳಿದಿರದ ಅಮಾಯಕರಾಗಿರುತ್ತಾರೆ. ಇಂಥವರಿಗೆ ಅತಿ ಮುಖ್ಯವಾದ ಸಿಮೆಂಟ್‌-ಮರಳಿನ ಅನುಪಾತ ಅಂದರೆ ಎಷ್ಟು? ಮರಳು ಸಿಮೆಂಟಿಗೆ ಎಷ್ಟು ಜೆಲ್ಲಿ ಕಲ್ಲುಗಳನ್ನು ಬಳಸಿದರೆ ಕಾಂಕ್ರಿಟ್‌ ಆಗುತ್ತದೆ ಎಂಬುದು ಸುಲಭದಲ್ಲಿ ತಿಳಿಯುವುದಿಲ್ಲ. ಗಾರೆಯವರು ಪ್ರಾಮಾಣಿಕವಾಗಿ ಸರಿಯಾದ ಲೆಕ್ಕಾಚಾರದಲ್ಲಿ ಹೇಳಿದರೂ, ಹೊಸದಾಗಿ ಗಾರೆಕೆಲಸಕ್ಕೆ ಬಂದಿರುವ ಸಹಾಯಕರಿಗೆ ಸಿಮೆಂಟಿನ ಬಲಾಬಲದ ಗಂಧಗಾಳಿಯೇ ಇರದ ಕಾರಣ, ಮಿಶ್ರಣವನ್ನು ಸರಿಯಾಗಿ ಹಾಕದೇ ಹೋಗಬಹುದು. ಸಾಮಾನ್ಯವಾಗಿ ಗಾರೆಯವರಿಗೆ ಮಿಶ್ರಣ ನೋಡಿದೊಡನೆ ಎಷ್ಟು ಸಿಮೆಂಟ್‌ ಹಾಕಿರಬಹುದು? ಎಂಬ ಅಂದಾಜು ಬರುತ್ತದೆ. ಆದರೆ ಇದು ಅಂದಾಜು ಮಾತ್ರ ಆಗಿದ್ದು, ಸರಿಯಾಗಿ ಲೆಕ್ಕ ಸಿಗುವುದಿಲ್ಲ. ಮನೆಯ ಸೂರು ಇಲ್ಲವೇ ಇತರೆ ಮುಖ್ಯ ಘಟ್ಟಗಳಲ್ಲಿ ಇಂಜಿನಿಯರ್‌ ಸೇರಿದಂತೆ ಎಲ್ಲರೂ ಇರುತ್ತಾರೆ. ಆದರೆ ಅಷೇr ಮುಖ್ಯ ಕಾರ್ಯ ಆದ ಕಾಲಂ ಕಾಂಕ್ರಿಟ್‌ ಮಿಶ್ರಣ ಮಾಡುವ ಜವಾಬ್ದಾರಿಯನ್ನು ಕೆಲಸಗಾರರ ಮೇಲೆಯೇ ಹಾಕಲಾಗುತ್ತದೆ. ಅವರೇನಾದರೂ ಅಪ್ಪಿತಪ್ಪಿ ಲೆಕ್ಕಾಚಾರ ತಪ್ಪಾಗಿ ಮಾಡಿದರೆ, ಮನೆಯ ಎಲ್ಲ ಭಾರವನ್ನು ಹೊರುವ ಕಂಬಗಳೇ ದುರ್ಬಲ ಆಗಬಹುದು. ಈ ಸತ್ಯ ಎಷ್ಟೋ ಮಂದಿಗೆ ತಿಳಿದಿಲ್ಲ.

ಹಾಗಾಗಿ, ನಾವು ಎಲ್ಲೆಲ್ಲಿ ತಪ್ಪು ಆಗಬಹುದು ಎಂಬುದರ ಬಗ್ಗೆ ನಿಗಾವಹಿಸಿ ಎಚ್ಚರದಿಂದಿರುವುದು ಅನಿವಾರ್ಯ.

ತಪ್ಪುಗಳನ್ನು ತಡೆಯಿರಿ
ಮನೆ ಕಟ್ಟುವಾಗ ಸೂರು, ಕಾಂಕ್ರಿಟ್‌ ಮಾತ್ರ ಮುಖ್ಯ ಎನ್ನುವ ನಂಬಿಕೆ ಇದೆ. ಇದಕ್ಕೆ ಅತಿ ಎನ್ನುವಷ್ಟು ಕಾಳಜಿ ವಹಿಸಿ, ಸಾಮಾನ್ಯವಾಗಿ ದೇವರನ್ನು ನೆನೆದು, ಒಂದು ಸಣ್ಣ ಪೂಜೆಯನ್ನೂ ನೆರವೇರಿಸಿ, ನಂತರವೇ ಕಾಂಕ್ರಿಟ್‌ ಹಾಕಲಾಗುತ್ತದೆ. ಆದರೆ ಅಷ್ಟೇ ಮುಖ್ಯವಾದ ಕಾಲಂ ಕಾಂಕ್ರಿಟ್‌ ಅನ್ನು ಅನೇಕರು ಅಷ್ಟೇ ಕಾಳಜಿಯಿಂದ ಹಾಕುವುದಿಲ್ಲ. ಸೂರಿನ ಕಾಂಕ್ರಿಟ್‌ಗಿಂತ ಹೆಚ್ಚು ಭಾರ ಹೊರುವ ಕಂಬಗಳಿಗೆ ನಾವು ಸಾಮಾನ್ಯವಾಗೇ ಹೆಚ್ಚುವರಿ ಸಿಮೆಂಟ್‌ ಹೊಂದಿರುವ ಮಿಶ್ರಣವನ್ನು ಹಾಕುತ್ತೇವೆ. ಆರ್‌ ಸಿ ಸಿ ರೂಫಿಗೆ 1:2:4 ಅಂದರೆ ಒಂದು ಪಾಲು ಸಿಮೆಂಟಿಗೆ ಎರಡು ಪಾಲು ಮರಳು ಹಾಗೂ ನಾಲ್ಕು ಪಾಲು ಜೆಲ್ಲಿ ಕಲ್ಲುಗಳನ್ನು ಹಾಕಿದರೆ, ಕಾಲಂಗಳಿಗೆ 1 : 1.5 : 3 ಅಂದರೆ ಒಂದು ಪಾಲು ಸಿಮೆಂಟಿಗೆ ಒಂದೂವರೆ ಪಾಲು ಮಾತ್ರ ಮರಳು ಮಿಶ್ರಣಮಾಡಿ ಅದಕ್ಕೆ ಕೇವಲ ಮೂರು ಪಾಲು ಜೆಲ್ಲಿಕಲ್ಲುಗಳನ್ನು ಬೆರೆಸುತ್ತೇವೆ. ಅದರಲ್ಲೂ ನಮ್ಮ ಮನೆ ಎರಡು ಮೂರು ಮಹಡಿಗಳಿದ್ದರೆ ಮತ್ತೂ ಹೆಚ್ಚುವರಿಯಾಗಿ ಸಿಮೆಂಟ್‌ ಬಳಕೆ ಆಗುತ್ತದೆ. ಇಲ್ಲವೇ ಹೆಚ್ಚು ಭಾರ ಹೊರುವ ಸಾಮರ್ಥ್ಯ ಇರುವ ವಿಶೇಷ ಸಿಮೆಂಟ್‌ ಅನ್ನು ಬಳಸಲಾಗುತ್ತದೆ.

ನುರಿತ ಗಾರೆಯವರಿಗೆ ಹೀಗೆ ಬದಲಾಗುವ ಅನುಪಾತ – ಮಿಶ್ರಣದಲ್ಲಿ ಸಿಮೆಂಟ್‌ ಎಷ್ಟು ಇರಬೇಕು ಹಾಗೂ ಮರಳು ಜೆಲ್ಲಿಕಲ್ಲು ಎಷ್ಟಿರಬೇಕು ಎಂಬುದರ ಲೆಕ್ಕ ಹಾಕುವುದು ಕಷ್ಟ ಆಗದಿದ್ದರೂ, ಅವರು ಅವಲಂಬಿಸಿರುವ ಕೂಲಿಯವರಿಗೆ ಮಿಶ್ರಣ ಸರಿಯಾಗಿ ಗೊತ್ತಾಗದೆ ತಪ್ಪುಗಳಾಗಬಹುದು. ಜೊತೆಗೆ, ಸೂರಿಗೆ ಸ್ವಲ್ಪ ಕಡಿಮೆ ಸಿಮೆಂಟ್‌ ಬಣ್ಣ ಇರುವ ತೆಳು ಬೂದು ವರ್ಣದ ಸಿಮೆಂಟ್‌ ಬಳಸಿ, ಕಾಲಂ ಗಳಿಗೆ ಗಾಢ ವರ್ಣದ ಸಿಮೆಂಟ್‌ ಬಳಸಿದರೆ, ನುರಿತ ಗಾರೆಯವರಿಗೂ ಮಿಶ್ರಣದಲ್ಲಿ ಎಷ್ಟು ಸಿಮೆಂಟ್‌ ಇದೆ ಎಂದು ಹೇಳಲು ಆಗುವುದಿಲ್ಲ. ಹೀಗಾಗುವುದನ್ನು ತಪ್ಪಿಸಲು ನಾವು ಕಡ್ಡಾಯವಾಗಿ ಒಂದು ಕಡೆ ಮಿಶ್ರಣದ ಬಗ್ಗೆ ಬರೆದಿಡುವುದು ಉತ್ತಮ. ಇದಕ್ಕೆಂದೇ ಸೈಟಿನಲ್ಲಿ ಒಂದು ನೋಟ್‌ ಬುಕ್‌ ಇಟ್ಟು, ದಿನನಿತ್ಯ ಮಾಡಿದ ವಿವಿಧ ಕೆಲಸಗಳಲ್ಲಿ ಬಳಸಲಾದ ವಿವಿಧ ಬಗೆಯ ಸಿಮೆಂಟ್‌ ಮಿಶ್ರಣವನ್ನು ದಾಖಲಿಸಬೇಕು. ಪ್ರತಿದಿನವೂ ಎಂಜಿನಿಯರ್‌ ಇಲ್ಲವೇ ಮನೆಯ ಮಾಲೀಕರು ನಿವೇಶನದಲ್ಲೇ ಉಳಿಯಲು ಆಗದ ಕಾರಣ, ಅವರಿಲ್ಲದ ವೇಳೆಯಲ್ಲಿ ಆದ ಕೆಲಸದ ಗುಣಮಟ್ಟವನ್ನು ಪರೀಕ್ಷಿಸಲು ಈ ಪುಸ್ತಕ ಅನುಕೂಲಕರ.

ಮನೆ ಕಟ್ಟುವಾಗ ಈ ಮಾದರಿಯಾಗಿ ಇಡೀ ದಿನದ ಲೆಕ್ಕ ಇಡುವುದರಿಂದ ಸಣ್ಣ ಪುಟ್ಟ ಕಳ್ಳತನಗಳು ಆಗುವುದು, ಮರಳು ಸಿಮೆಂಟ್‌ ಪೋಲಾಗುವುದು ಮುಂತಾದುವುಗಳನ್ನು ತಡೆಯಬಹುದು. ಎಂಟು, ಹತ್ತು ಸಾವಿರ ಸಂಬಳ ಬೇಡುವ ಈ ಹುದ್ದೆ, ಬಹಳ ಈ ಜವಾಬಾœರಿಯುತ, ದುಬಾರಿ ಎಂದೆನಿಸಿದರೂ, ನಮ್ಮ ದೇಶದ ಪರಿಸ್ಥಿತಿಯಲ್ಲಿ ಅದಕ್ಕಿಂತ ಎರಡು ಪಾಲು ನಾವು ಲಾಭ ಪಡೆಯಬಹುದು ಎಂಬುದು ಗೊತ್ತಿರಲಿ. ಕೆಲಸದ ಗುಣಮಟ್ಟ ನಿಯಂತ್ರಣದಲ್ಲಿದೆ ಎಂಬ ನಂಬಿಕೆಯಲ್ಲಿ ಮನಸ್ಸೂ ನಿರಾಳವಾಗಿರುತ್ತದೆ. ಮುಂದೆಂದಾದರೂ ಸಣ್ಣಪುಟ್ಟ ಬಿರುಕುಗಳು, ನೀರು ಸೋರುವುದು ಇತ್ಯಾದಿ ಆದರೂ, ನಮಗೆ ರೈಟರ್‌ಗಳು ಇಟ್ಟ ಲೆಕ್ಕಾಚಾರ ನೊಡಿದರೆ, ಸರಿಯಾಗಿ ಸಿಮೆಂಟ್‌ ಮಿಶ್ರಣ ಹಾಕಿರುವುದು ಖಾತರಿ ಆಗಿ ನಾವು ಈ ನ್ಯೂನತೆಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳದೆ, ಸುಲಭ ಪರಿಹಾರಗಳನ್ನು ಪಡೆದುಕೊಳ್ಳಲು ಸಹಾಯಕಾರಿ.

ಇಂದಿನ ವೇಗದ ದಿನಗಳಲ್ಲಿ, ನಿನ್ನೆ ಮೊನ್ನೆ ಏನು ಆಯಿತು ಎಂಬುದೇ ನಮಗೆ ಸರಿಯಾಗಿ ನೆನಪಿರುವುದಿಲ್ಲ. ಹಾಗಾಗಿ, ನಮ್ಮ ಮನೆ ಕಟ್ಟಬೇಕಾದರೆ, ಪಾಯದಿಂದ ಹಿಡಿದು ಸೂರಿನವರೆಗೂ, ಮುಖ್ಯವಾಗಿ ಫಿನಿಶಿಂಗ್‌ ವೇಳೆಯಲ್ಲಿ ವಿವಿಧ ಮಿಶ್ರಣಗಳನ್ನು ದಾಖಲಿಸಿಟ್ಟರೆ, ತೊಂದರೆ ಆಗುವುದು ತಪ್ಪುತ್ತದೆ. ಲೆಕ್ಕ ಬರೆದಿಡುತ್ತಾರೆ ಎಂಬುದು ಗೊತ್ತಾದರೆ, ಸಾಮಾನ್ಯವಾಗಿ ಕಾಟಾಚಾರಕ್ಕೆ ಕೆಲಸ ಮಾಡುವವರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾರೆ.

ಬ್ರಿಟಿಷ್‌ ಆಳ್ವಿಕೆ ಕೊಡುಗೆ “ರೈಟರ್‌’
ಸಾಮಾನ್ಯ ಇಂಗ್ಲೀಷ್‌ನಲ್ಲಿ ಬರಹಗಾರರಿಗೆ – ಸಾಹಿತಿಗಳಿಗೆ ರೈಟರ್‌ ಎನ್ನುತ್ತಾರೆ. ಕಟ್ಟಡ ಹಾಗೂ ಇತರೆ ಕಾಮಗಾರಿಗಳ ಮಟ್ಟಿಗೆ “ರೈಟರ್‌’ ಎಂದರೆ ನಿವೇಶನದಲ್ಲಿ ಇಡೀ ದಿನದಲ್ಲಿ ಆಗುವ ಕಾರ್ಯದ ಲೆಕ್ಕ ಬರೆದಿಡುವವನು ಎಂದೇ ಅರ್ಥ ಬರುತ್ತದೆ. ಈ ರೈಟರ್‌ಗೆ ಹೆಚ್ಚಿನ ತಾಂತ್ರಿಕ ತರಬೇತಿ ಇರಬೇಕು ಎಂದೇನೂ ಇಲ್ಲ. ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್‌ ಮಾಡಿರುವ ಯುವಕರು ಈ ಕಾರ್ಯಕ್ಕೆ ನಿಯೋಜಿಸಬಹುದು. ಈ ಹಿಂದೆ ಬ್ರಿಟೀಷರ ಕಾಲದಲ್ಲಿ ಕಟ್ಟಿದ ಕಟ್ಟಡಗಳು, ಸೇತುವೆಗಳು ಇಂದಿಗೂ ಎಷ್ಟು ಗಟ್ಟಿಮುಟ್ಟಾಗಿವೆ ಎಂಬುದು ನಮಗೆಲ್ಲ ತಿಳಿದೇ ಇದೆ. ಆಗಿನ ಕಾಲದ ಇಂಗ್ಲೀಷ್‌ ಎಂಜಿನಿಯರ್‌ಗಳಿಗೆ ದೇಶಿ ಭಾಷೆ ಅಷ್ಟಾಗಿ ಬರುತ್ತಿಲ್ಲದಿದ್ದರೂ, ದೇಸಿ ಕುಶಲ ಕರ್ಮಿಗಳನ್ನು ಬಳಸಿ, ಅದ್ಭುತ ಕಾಮಗಾರಿಗಳನ್ನು ಮಾಡಲು ಆಗಿದ್ದೇ ಈ “ರೈಟರ್‌’ಗಳ ಸಹಾಯದಿಂದ. ಆರ್ಕಿಟೆಕ್ಟ್ ಎಂಜಿನಿಯರ್‌ಗಳು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಹೋಗುವುದೇ ಇವರ ಮುಖ್ಯ ಕರ್ತವ್ಯ ಆಗಿರುತ್ತಿತ್ತು. ಆ ಮೂಲಕ ಎಲ್ಲಕ್ಕೂ ಲೆಕ್ಕ ಸುಲಭದಲ್ಲಿ ಸಿಗುವಂತಾಗಿ, ಕಟ್ಟಡಗಳಲ್ಲಿನ ಗುಣಮಟ್ಟ ಉತ್ತಮವಾಗಿರುತ್ತಿತ್ತು.

ಹೆಚ್ಚಿನ ಮಾಹಿತಿಗೆ -98441 32826
– ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.