ಮೊಬೈಲ್‌ ಮಾರಾಟ ಆಪಲ್‌ ಹಿಂದೆ ಹುವಾವೇ ಮುಂದೆ !


Team Udayavani, Aug 13, 2018, 6:00 AM IST

mwc-india.jpg

ಜಗತ್ತಿನ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಚೀನಾದ ಕಂಪೆನಿಗಳು ಅಧಿಪತ್ಯ ಸ್ಥಾಪಿಸಲು ಧಾಂಗುಡಿ ಇಡುತ್ತಿವೆ. ಅತಿ ಹೆಚ್ಚು ಮೊಬೈಲ್‌ ಗಳನ್ನು ಮಾರಾಟ ಮಾಡುವಲ್ಲಿ ಮೊದಲೆರಡು ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ ಮೂಲಕದ ಸ್ಯಾಮ್‌ಸಂಗ್‌ ಹಾಗೂ ಎರಡನೇ  ಸ್ಥಾನದಲ್ಲಿದ್ದ ಅಮೆರಿಕದ ಆಪಲ್‌ಗ‌ಳ ಸ್ಥಾನಗಳು ಮೊದಲ ಬಾರಿಗೆ ಅಲುಗಾಡುತ್ತಿವೆ. ಕಳೆದ 15 ವರ್ಷಗಳಿಂದಲೂ ಎರಡನೇ ಸ್ಥಾನಕ್ಕಿಂತ ಕೆಳಕ್ಕಿಳಿಯದ ಆಪಲ್‌ ಇದೇ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಚೀನಾದ ಮೊಬೈಲ್‌ ಹ್ಯಾಂಡ್‌ಸೆಟ್‌ ಕಂಪೆನಿ ಹುವೈ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇನ್ನೆರಡು ವರ್ಷದೊಳಗೆ ಸ್ಯಾಮ್‌ ಸಂಗ್‌ ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಆತ್ಮವಿಶ್ವಾಸದಿಂದ ಬೀಗುತ್ತಿದೆ.   

ನಿದ್ದೆಗೆಡಿಸಿದ ತ್ತೈಮಾಸಿಕ ವರದಿ
ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಪೊರೆಟ್‌ ಕಂಪೆನಿಗಳ ಲಾಭ-ನಷ್ಟ ಮಾರಾಟ ಕುರಿತ ವರದಿ ಹೊರಬರುತ್ತದೆ. ಅದರಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ ಎಷ್ಟು ವಹಿವಾಟು ನಡೆದಿತ್ತು. ಈ ವರ್ಷ ಎಷ್ಟು ವಹಿವಾಟು ನಡೆದಿದೆ ಎಂಬುದರ ಆಧಾರದ ಮೇಲೆ ಕಂಪೆನಿಯ ಬೆಳವಣಿಗೆಯನ್ನು ಅಳೆಯಲಾಗುತ್ತದೆ. ಅದೇ ರೀತಿ ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೊರೇಷನ್‌ (ಐಡಿಸಿ) ಮೊಬೈಲ್‌ ಕಂಪೆನಿಗಳ ವಹಿವಾಟನ್ನು ಸಂಗ್ರಹಿಸಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಪ್ರತಿ ವರ್ಷ ಹೆಚ್ಚು ಕಡಿಮೆ ಅದದೇ ಕಂಪೆನಿಗಳು ಯಥಾ ಸ್ಥಾನದಲ್ಲಿದ್ದ ವರದಿ ಬರುತ್ತಿದ್ದು, 2018ರ ಎರಡನೇ ತ್ತೈಮಾಸಿಕ ವಹಿವಾಟಿನ ಅಂಕಿ ಅಂಶ ಆಪಲ್‌ ಹಾಗೂ ಸ್ಯಾಮ್‌ ಸಂಗ್‌ನ ನಿದ್ದೆಗೆಡಿಸದೇ ಬಿಟ್ಟಿಲ್ಲ.

2018ರ ಎರಡನೇ ತ್ತೈಮಾಸಿಕದಲ್ಲಿ (ಏಪ್ರಿಲ್‌, ಮೇ, ಜೂನ್‌)  ಸ್ಯಾಮ್‌ ಸಂಗ್‌ 71.5 ಮಿಲಿಯನ್‌ (ದಶಲಕ್ಷ) ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡಿದೆ. ಅದರ ಮಾರುಕಟ್ಟೆ ಪಾಲು ಶೇ. 20.9 ರಷ್ಟಿದೆ.  ವರ್ಷದಿಂದ ವರ್ಷಕ್ಕೆ ಸ್ಯಾಮ್‌ ಸಂಗ್‌ ಮಾರುಕಟ್ಟೆ ಪಾಲು ಕಡಿಮೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು. ಕಳೆದ ವರ್ಷ (2017) ಇದೇ ಅವಧಿಯಲ್ಲಿ ಸ್ಯಾಮ್‌ಸಂಗ್‌ 79.8 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿತ್ತು! ಮಾರುಕಟ್ಟೆ ಪಾಲು ಶೇ. 22.9ರಷ್ಟಿತ್ತು. ವರ್ಷದಿಂದ ವರ್ಷಕ್ಕೆ ಅದು ಶೇ. 10.4ರಷ್ಟು ಇಳಿಮುಖ ಕಾಣುತ್ತಿದೆ. ಆದರೂ ಸ್ಯಾಮ್‌ಸಂಗ್‌ ಮೊದಲ ಸ್ಥಾನ ಉಳಿಸಿಕೊಂಡಿದೆ. 

ಎರಡನೇ ಸ್ಥಾನಕ್ಕೆ ಹುವೈ ಜಿಗಿದಿದ್ದು, 54.2 ದಶಲಕ್ಷ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಮಾರಿದೆ.  ಇದರ ಮಾರುಕಟ್ಟೆ ಪಾಲು ಶೇ. 15.8 ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 38.5 ಮಿಲಿಯನ್‌ ಫೋನ್‌ಗಳನ್ನು ಮಾರಿ, ಶೇ. 11 ಮಾರುಕಟ್ಟೆ ಪಾಲು ಹೊಂದಿತ್ತು. 

ಎರಡನೇ ಸ್ಥಾನದಲ್ಲಿದ್ದ ಆಪಲ್‌ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಮೂರು ತಿಂಗಳಲ್ಲಿ ಆಪಲ್‌ 41.3 ಮಿಲಿಯನ್‌ ಹ್ಯಾಂಡ್‌ಸೆಟ್‌ಗಳು ಮಾರಾಟವಾಗಿವೆ. ಆಪಲ್‌ ಮಾರುಕಟ್ಟೆ ಪಾಲು ಶೇ. 12.1 ಆಗಿದೆ. ಕಳೆದ ವರ್ಷದ ಇದೇ ತ್ತೈಮಾಸಿಕದಲ್ಲಿ ಆಪಲ್‌ 41 ಮಿಲಿಯನ್‌ ಫೋನ್‌ಗಳನ್ನು ಮಾರಾಟ ಮಾಡಿತ್ತು. 

ಶ್ರೀಮಂತರೆಂದರೆ ಅವರ ಬಳಿ ಆಪಲ್‌ ಐಫೋನ್‌ ಮಾತ್ರ ಇರಬೇಕು, ಇನ್ನೊಂದು ಬ್ರಾಂಡ್‌ನ‌ ಫೋನ್‌ ಇಟ್ಟುಕೊಂಡರೆ ಅದು ಘನತೆಗೆ ಕುಂದು  ಎನ್ನುವ ಒಣ ಪ್ರಸ್ಟೀಜ್‌ ಅನ್ನು  ಆಪಲ್‌ ಮೂಡಿಸಿತ್ತು. ಆದರೆ ಅದಕ್ಕೆ ನೀಡುವ ಬೆಲೆಗೆ ಹೋಲಿಸಿದರೆ ಆಪಲ್‌ನಲ್ಲಿ ದೊರಕುವ ಸೌಲಭ್ಯಗಳು ಕಡಿಮೆ. ಆಂಡ್ರಾಯ್ಡ ಫೋನ್‌ಗಳಲ್ಲಿರುಷ್ಟು ಫೀಚರ್‌ಗಳು ಸವಲತ್ತುಗಳು ಆಪಲ್‌ನಲ್ಲಿಲ್ಲ. ಆಪಲ್‌ ಫೋನ್‌ ಹೊಂದಿರುವವರು, ಆಪ್‌ಗ್ಳಿಗೆ, ಹಾಡುಗಳಿಗೆ ಹಣ ತೆರಲೇಬೇಕು. ಜನ, ಆಪಲ್‌ಗೆ ಬೆನ್ನು ಮಾಡಿ ನಿಲ್ಲಲು ಇದೂ ಒಂದು ಕಾರಣ. 

ಹುವಾವೇ ನಾಗಾಲೋಟಕ್ಕೆ ಕಾರಣ?
ಯಾವುದೇ ವಸ್ತುವಾಗಲೀ ಅದರ ತಯಾರಿಕಾ ವೆಚ್ಚ ಮತ್ತು ಅಲ್ಪ ಲಾಭ, ಗ್ರಾಹಕರ ಹಿತವನ್ನು ಮುಖ್ಯವಾಗಿರಿಸಿಕೊಂಡು ದರ ಇಡಬೇಕು. ಆದರೆ ಆಪಲ್‌ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳ ತಯಾರಿಕಾ ವೆಚ್ಚಕ್ಕೂ ಅಂತಿಮ ದರಕ್ಕೂ ಬಹಳ ವ್ಯತ್ಯಾಸವಿದೆ. ತನಿಖಾ ಕಂಪೆನಿಯೊಂದು 60 ಸಾವಿರ ಬೆಲೆಯ ಆಪಲ್‌ ಫೋನ್‌ನ ತಯಾರಿಕಾ ವೆಚ್ಚ 20 ಸಾವಿರಕ್ಕೂ ಕಡಿಮೆ ಎಂಬ ಗುಟ್ಟನ್ನು ಬಯಲು ಮಾಡಿತ್ತು!

ಚೀನಾದ ಹುವೈ, ಒನ್‌ಪ್ಲಸ್‌, ಶಿಯೋಮಿ  ಕಂಪೆನಿಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಫೀಚರ್‌ ಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ನೀಡತೊಡಗಿದವು. 70 ಸಾವಿರದ ಆಪಲ್‌, ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ಸವಲತ್ತಗಳನ್ನು 30-35 ಸಾವಿರಕ್ಕೇ ತಮ್ಮ ಫ್ಲಾಗ್‌ಶಿಪ್‌ ಫೋನ್‌ಗಳಲ್ಲಿ ನೀಡತೊಡಗಿದವು. ಇನ್ನು  ಮಿಡಲ್‌ ರೇಂಜ್‌ ಮೊಬೈಲ್‌ ಮಾರುಕಟ್ಟೆಯಲ್ಲಂತೂ ಶಿಯೋಮಿ ಮತ್ತು ಹುವೈ ಆನರ್‌ ಬ್ರಾಂಡ್‌ಗಳು ಸಂಚಲನ ಉಂಟುಮಾಡಿದವು. ಸ್ಯಾಮ್‌ಸಂಗ್‌ 25 ಸಾವಿರಕ್ಕೆ ನೀಡುವ ಮೊಬೈಲ್‌ ಗಳನ್ನು ಇವು 10-12 ಸಾವಿರಕ್ಕೇ ನೀಡತೊಡಗಿವೆ. ಹಾಗೆಂದು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಸ್ಯಾಮ್‌ಸಂಗ್‌ ಕಂಪನಿ 25 ಸಾವಿರದ ಮೊಬೈಲ್‌ಗ‌ಳಲ್ಲಿ ಹಾಕುವ ಸ್ನಾಪ್‌ಡ್ರಾಗನ್‌ 450 ಪ್ರೊಸೆಸರ್‌ ಅನ್ನು ಈ ಕಂಪೆನಿಗಳು 10 ಸಾವಿರದ ಫೋನ್‌ಗಳಿಗೆ ಹಾಕುತ್ತಿವೆ. ಅಲ್ಲದೇ ನಂ. 1 ಸ್ಥಾನದಲ್ಲಿರುವ ಸ್ಯಾಮ್‌ ಸಂಗ್‌, ಚೀನಾ ಕಂಪೆನಿಗಳು ಸಂಶೋಧಿಸಿದ ಫೀಚರ್‌ಗಳನ್ನು ಒಂದೆರಡು ವರ್ಷ ಕಳೆದ ನಂತರ ತಾನು ಅಳವಡಿಸಿಕೊಳ್ಳುತ್ತಿದೆ! 

ಜಾಹೀರಾತು ಹೆಚ್ಚಿಲ್ಲದೇ ತಮ್ಮ ವಸ್ತುಗಳಲ್ಲಿ ಅತ್ಯುತ್ತಮ  ಗುಣಮಟ್ಟ ಇಟ್ಟು, ಆ ಕಾರಣದಿಂದಲೇ ಬಾಯಿಂದ ಬಾಯಿಗೆ ಹರಡಿಯೇ ಚೀನಾದ ಈ ಮೂರು ಕಂಪೆನಿಗಳು ಜನಪ್ರಿಯವಾಗಿವೆ.  ವರ್ಷವೊಂದಕ್ಕೆ ಒಂದೇ ಫೋನ್‌ ಬಿಡುಗಡೆ ಮಾಡುವ ಒನ್‌ಪ್ಲಸ್‌ ಹಾಗೂ ವರ್ಷಕ್ಕೆ ಹಲವಾರು ಮಾಡೆಲ್‌ಗ‌ಳ ಫೋನ್‌ಗಳನ್ನು ಬಿಡುವ  ಹುವೈ ಪ್ರೀಮಿಯಂ ಫೋನ್‌ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡುತ್ತಿವೆ. ಮೊಬೈಲ್‌ಗ‌ಳ ಬಗ್ಗೆ ಆಳವಾಗಿ ಬಲ್ಲವರು, ಟೆಕಿಗಳು, ಪ್ರಸ್ಟೀಜ್‌ ಬೇಡ, ಉತ್ತಮ ಮೊಬೈಲ್‌ ಬೇಕು ಎನ್ನುವವರು  ಒನ್‌ಪ್ಲಸ್‌ ಅಥವಾ ಹುವೈ ಆನರ್‌, ಶಿಯೋಮಿ ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ. 

ಚೀನಾದ ಈ ಕಂಪೆನಿಗಳು ಯೂರೋಪಿಯನ್‌,  ಲ್ಯಾಟಿನ್‌ ಅಮೆರಿಕಾ, ರಷ್ಯಾ ಮುಂತಾದ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿವೆ. ಅಮೆರಿಕಾ ಮಾತ್ರ ತನ್ನ ತವರಿನ ಆಪಲ್‌ ಅನ್ನು ಉಳಿಸುವ ಕಾರಣಕ್ಕಾಗಿ ತನ್ನ ದೇಶದಲ್ಲಿ ಚೀನಾದ ಮೊಬೈಲ್‌ ಕಂಪೆನಿಗಳ ಮಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ಯು.ಎಸ್‌. ಹೊರತುಪಡಿಸಿಯೂ ಈ ಕಂಪೆನಿಗಳು ಆಪಲ್‌ ಹಿಂದಿಕ್ಕಿ ಮುನ್ನಡೆಯುತ್ತಿರುವುದು ಕಡಿಮೆ ಸಾಧನೆಯೇನೂ ಅಲ್ಲ. ಏಷ್ಯಾದ ಈ ಕಂಪೆನಿಗಳು ತಂತ್ರಜ್ಞಾನದಲ್ಲಿ ದೊಡ್ಡಣ್ಣ ಎಂಬ ಹಮ್ಮಿನಿಂದ ಬೀಗುತ್ತಿರುವ ಯು.ಎಸ್‌. ಕಂಪೆನಿಯನ್ನು ಬಗ್ಗು ಬಡಿಯಲು ಸಜ್ಜಾಗಿರುವುದು ಗುಣಮಟ್ಟದ ಕಾರಣದಿಂದಲೇ. ಅಂತಿಮವಾಗಿ ಗುಣಮಟ್ಟ ಹಾಗೂ ನ್ಯಾಯವಾದ ಬೆಲೆ ಮಾತ್ರ ಗ್ರಾಹಕರನ್ನು ಸೆಳೆಯಲು ಸಾಧ್ಯ, ಜಾಹೀರಾತಲ್ಲ ಎಂಬುದನ್ನು ಈ ಕಂಪೆನಿಗಳು ಸಾಧಿಸಿ ತೋರಿಸುತ್ತಿವೆ. ಗ್ರಾಹಕ ಸ್ನೇಹಿಯಾದ ಇಂಥ ಬೆಳವಣಿಗೆಗಳು ನಡೆಯುವುದು ಯಾವತ್ತಿಗೂ ಒಳ್ಳೆಯದೇ. 

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.