ಭರ್ಜರಿ ಜರ್ಬೆರ
Team Udayavani, Nov 26, 2018, 6:00 AM IST
ಹೂವನ್ನೇ ನಂಬಿದವರು ಆಷಾಢದಲ್ಲಿ ಲಾಸ್ ಆಗುವುದನ್ನು ಸಹಿಸಿಕೊಳ್ಳಬೇಕು. ರಂಜಿತ್ ಇದಕ್ಕೆ ಒಳ್ಳೆ ಪ್ಲಾನ್ ಮಾಡಿದ್ದಾರೆ.ಅರಳುವ ಮೊದಲೇ ಮೊಗ್ಗನ್ನೆ ಚಿವುಟಿದರೇ, ಆ ನಷ್ಟವನ್ನು ತಪ್ಪಿಸಿಕೊಳ್ಳಬಹುದು..
ನಂಜನಗೂಡಿನ ಸುತ್ತಮುತ್ತಲ ಕೃಷಿಕರ ಗಮನ ಈಗ ರಂಜಿತ್ ಮೇಲೆ. ಕಾರಣ, ಅವರು ಮಾಡುತ್ತಿರುವ ಜರ್ಬೆರ ಕೃಷಿ. ಈ ರಂಜಿತ್ ಮೂಲತಃ ನಂಜನಗೂಡಿನ ಅಳಗಂಚಿ ಗ್ರಾಮದವರು. ಸಧ್ಯ ಮೈಸೂರಲ್ಲಿ ವಾಸಿಸುತ್ತಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಪರಿಸರ ವಿಜಾnನದ (ಎಮ್ ಎಸ್ ಸಿ )ಪದವಿಪಡೆದಿರುವ ಇವರು ಕೈಗಾರಿಕಾ ಮಂಡಳಿಯ ಸಲಹೆಗಾರರೂ ಆಗಿದ್ದಾರೆ. ಓದು ಮುಗಿಸಿದ ನಂತರ ತಮ್ಮ ಪಿತ್ರಾರ್ಜಿತ ಆಸ್ತಿ ಇರುವ ಅಳಗಂಚಿಯ ಮಳೆ ಆಶ್ರಿತ 3.5 ಎಕರೆ ಪ್ರದೇಶದಲ್ಲಿ ಆಧುನಿಕ ಕೃಷಿ ಚಟುವಟಿಕೆ ಪ್ರಾರಂಭಿಸಿದರು.
ತಮ್ಮ ಜಮೀನನ್ನು ಮೂರು ಭಾಗವಾಗಿ ವಿಂಗಡಿಸಿಕೊಂಡು, 1 ಎಕರೆಗೆ ಗುಲಾಬಿ ಹಾಗೂ ಇನ್ನೊಂದು ಎಕರೆಯಲ್ಲಿ ಸೀಬೆ ಬೆಳದರು. ಮತ್ತೂಂದರಲ್ಲಿ ಜರ್ಬೆರ ಬೆಳೆಯುತ್ತಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ತೋಟಗಾರಿಕಾ ಅಧಿಕಾರಿಗಳ ಮಾರ್ಗದರ್ಶನದ ಪ್ರಕಾರ ಹಸಿರುಮನೆ ನಿರ್ಮಿಸಿದರು. ನಂತರ, 500 ಟ್ರಾಕ್ಟರ್ ಮಣ್ಣನ್ನು ತರಿಸಿ ಜಾಗ ಸಮತಟ್ಟು ಮಾಡಿಕೊಂಡರು. ನಂತರ 40 ಟ್ರಾಕ್ಟರ್ ಕೊಟ್ಟಿಗೆ ಗೊಬ್ಬರ, ನಾಲ್ಕು ಟನ್ ಬೇವಿನ ಹಿಂಡಿ ಹಾಗೂ 1 ಟನ್ ಹೊಂಗೆ ಹಿಂಡಿ ಖರೀದಿಸಿ 3 ಟನ್ ರಾಸಾಯನಿಕ ಗೊಬ್ಬರವನ್ನು ಹದವಾಗಿ ಮಿಕ್ಸ್ ಮಾಡಿ ಭೂಮಿಯನ್ನು ಸಿದ್ಧಗೊಳಿಸಿದರು.
ನಂತರ ಪೂನಾದಿಂದ ಜರ್ಬೆರ ತರಿಸಿ ನೆಟ್ಟರು. ದಿನಕ್ಕೆ 20 ನಿಮಿಷಗಳ ಕಾಲ ಮಾತ್ರ ಗಿಡಗಳಿಗೆ ನೀರುಣಿಸಿದರು. ಅದೂ ಹನಿ ನೀರಾವರಿ ಮೂಲಕ. ಈ ಕೃಷಿ ಕೆಲಸಕ್ಕೆ ಮೂರು ತಿಂಗಳಿಗೆ ಇವರಿಗೆ ತಗುಲಿದ ಒಟ್ಟು ಕೂಲಿ ಖರ್ಚು 3.5 ಲಕ್ಷ. ಮತ್ತೆ ಗೊಬ್ಬರ ಔಷಧಿ ಹಾಗೂ ಇತರೇ ಕೆಲಸಗಳಿಗಾಗಿ 2 ಲಕ್ಷ. ಒಟ್ಟು 5 .5 ಲಕ್ಷ ಖರ್ಚಾಯಿತು ಎನ್ನುತ್ತಾರೆ ರಂಜಿತ್. 60 ದಿನದಲ್ಲಿ ಬಣ್ಣ ಬಣ್ಣದ ಅಲಂಕಾರಿಕ ಮೊಗ್ಗು ಅರಳಲಾರಂಬಿಸಿತು. ಆದರೆ ಗಿಡಗಳ ದೀರ್ಘ ಬಾಳಿಕೆ ದೃಷ್ಟಿಯಿಂದ ಅದನ್ನು ಮೊಳಕೆಯಲ್ಲೇ ಚಿವುಟಿಬೇಕಾಯಿತಂತೆ. 90 ನೇ ದಿನಕ್ಕೆ ಕೆಂಪು, ಹಸಿರು, ಬಿಳಿ ಬಣ್ಣದ ಗುಲಾಬಿ ಹಾಗೂ ಹಳದಿ ಬಣ್ಣಗಳಿಂದ ಕೂಡಿದ ಹೂಗಳು ಮಾರಾಟಕ್ಕೆ ಸಿದ್ಧವಾದವು.
ಮಾರಾಟ ಹೀಗೆ
ಅರಳಿದ ಹೂವನ್ನು ಕಿತ್ತು ಪ್ರತ್ಯೇಕವಾಗಿಸಿ, ಪ್ರತಿ ಹೂವಿನ ಕಡ್ಡಿಗೆ ಪ್ಲಾಸ್ಟಿಕ್ ಕವಚ ಹಾಕಿದರು. ಬಳಕೆಯಾಗದ ಹಳೆ ನ್ಯೂಸ್ ಪೇಪರ್ ಸುತ್ತಿ 10 ಹೂಗಳಂತೆ ಒಂದು ಗೊಂಚಲು ಮಾಡಿದರು. ಅದನ್ನು ಬೆಂಗಳೂರಿನ ಹೂ ಮಾರಾಟಕೇಂದ್ರಕ್ಕೆ ಒಯ್ಯಲಾಯಿತು. ಅಲ್ಲಿ ಪ್ರತಿ ಹೂವಿಗೂ ತಲಾ 7ರಿಂದ 8 ರೂ. ದೊರೆಯಿತು. ಹೀಗಾಗಿ, ಈ ಹೂವಿನ ಬೆಳೆಯೇ ಪ್ರತೀವಾರ ನಾಲ್ಕಾರು ಲಕ್ಷ ರೂ. ಆದಾಯ ತಂದು ಕೊಡುತ್ತಿದೆ. 5 ಲಕ್ಷ ಖರ್ಚು ಕಳೆದರೂ ತಿಂಗಳಿಗೆ ಹೆಚ್ಚುಕಮ್ಮಿ 8-10 ಲಕ್ಷ ಆದಾಯ ದೊರೆಯುತಿದೆ. ಜರ್ಬೆರಾ ಇನ್ನೂ 5 ವರ್ಷಗಳ ಕಾಲ ಹೂ ಬಿಡುವುದರಿಂದ ಚಿಂತೆ ಇಲ್ಲ.
ಹೂವನ್ನೇ ನಂಬಿದವರು ಆಷಾಢವನ್ನು ಸಹಿಸಿಕೊಳ್ಳಬೇಕು. ರಂಜಿತ್ ಇದಕ್ಕೆ ಒಳ್ಳೆ ಪ್ಲಾನ್ ಮಾಡಿದ್ದಾರೆ. ಅರಳುವ ಮೊದಲೇ ಮೊಗ್ಗನ್ನೆ ಚಿವುಟಿ ಆ ನಷ್ಟವನ್ನು ತಪ್ಪಿಸಿಕೊಳ್ಳುಬಹುದು. ಜೊತೆಗೆ ಹೀಗೆ ಮೊಗ್ಗು ಚಿವುಟುವುದರಿಂದ ಗಿಡಗಳ ಆರೈಕೆಗೂ ಅನುಕೂಲವಾಗುತ್ತದೆ ಎನ್ನುತ್ತಾರೆ.
– ಶ್ರೀಧರ್ ಆರ್ ಭಟ್ ನಂಜನಗೂಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.