ಭೂಮಿಗೆ ಯಾವಾಗಲೂ ಚಿನ್ನದ ಬೆಲೆ ಇರುತ್ತೆ!
Team Udayavani, Dec 14, 2020, 8:18 PM IST
ಸ್ವಲ್ಪ ಹಣವಿದೆ. ಅದನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು?- ಹೀಗೊಂದು ಪ್ರಶ್ನೆಯನ್ನು ಹಲವರು ಕೇಳುವುದುಂಟು. ನಮ್ಮಲ್ಲಿ ಇರುವ ಹಣವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಇರುವ ದಾರಿ ಯಾವುದು ಎಂಬುದನ್ನು ಪರೋಕ್ಷವಾಗಿ ಕೇಳುವ ರೀತಿ ಇದು.
ರಾಷ್ಟ್ರೀಕೃತ ಬ್ಯಾಂಕ್- ಪೋಸ್ಟ್ ಆಫೀಸ್‌ಗಳಲ್ಲಿನ ಉಳಿತಾಯ ಖಾತೆ ಅಥವಾ ಫಿಕ್ಸೆಡ್ ಡಿಪಾಸಿಟ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ದುಪ್ಪಟ್ಟಾಗುವುದಿಲ್ಲ, ಆದರೆ, ಭದ್ರವಾಗಿ ಇರುತ್ತದೆ. ಪ್ರತಿ ವರ್ಷವೂ ಇಂತಿಷ್ಟು ಎಂದು ಬಡ್ಡಿ ಹಣವೂ ಸಿಗುತ್ತದೆ. ಒಂದು ಕಡೆಯಲ್ಲಿ ಇಡುಗಂಟೂ ಉಳಿಯಬೇಕು, ಇನ್ನೊಂದು ಕಡೆಯಲ್ಲಿ ಲಾಭವೂ ಸಿಗಬೇಕು ಅನ್ನುವವರು, ಹಣ ಹೂಡಿಕೆಗೆ ಆರಿಸಿಕೊಳ್ಳಬೇಕಿರುವ ಸರಳ ಮತ್ತು ಸುಲಭ ಮಾರ್ಗ ಇದು.
ಕೆಲವರಿರುತ್ತಾರೆ. ಅವರಿಗೆ, ಹೇಗಾದರೂ ಮಾಡಿ ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವ ಆಸೆ. ಅಂಥವರು ಬಡ್ಡಿಗೆ ಸಾಲ ಕೊಡುವ ಬಗ್ಗೆ ಯೋಚಿಸುತ್ತಾರೆ. ಇದು ಯಾವ ರೀತಿಯಿಂದ ಯೋಚಿಸಿದರೂ ಒಳ್ಳೆಯ ಮಾರ್ಗ ಅಲ್ಲ. ಏಕೆಂದರೆ, ಬಡ್ಡಿಗೆ ಹಣ ಕೊಡುವವರು ಅತೀ ಹೆಚ್ಚಿನ ಬಡ್ಡಿಗೆ ಹಣ ನೀಡಿರುತ್ತಾರೆ.
ಅನಿವಾರ್ಯವಾಗಿ ಸಾಲ ಪಡೆದವರು ಅಕಸ್ಮಾತ್ ಸಾಲ ವಾಪಸ್ ಮಾಡದೇ ಹೋದರೆ, ಅಸಲು ಮತ್ತು ಬಡ್ಡಿ ಎರಡಕ್ಕೂ ಪಂಗನಾಮ ಬೀಳುತ್ತದೆ.ಕೆಲವೊಮ್ಮೆ ಸಾಲ ಕೊಟ್ಟವನು ಮತ್ತು ಪಡೆದವನ ಮಧ್ಯೆ ಜಗಳ ಆಗಿ, ಅದರಿಂದ ಸಾಕಷ್ಟು ಫಜೀತಿಯಾಗುತ್ತದೆ. ಅಥವಾ ಸಾಲ ವಾಪಸ್ ಮಾಡಿದವನು “”ನೆಗೆಟಿವ್” ಮಾತುಗಳನ್ನು ಹೇಳಿಕೊಂಡು ಬಂದರೆ, ಅದರಿಂದ ಸಾಲಕೊಟ್ಟವನ ಇಮೇಜ್ ಹಾಳಾಗುತ್ತದೆ. ಹಾಗಾಗಿ, ಬಡ್ಡಿಗೆ ಹಣ ಕೊಟ್ಟವ ನೆಮ್ಮದಿಯಿಂದ ಇರಲು ಆಗುವುದಿಲ್ಲ.
ಐದಾರು ವರ್ಷಗಳಕಾಲ ದಿನನಿತ್ಯದ ಖರ್ಚು ನಿಭಾಯಿಸುವಂಥ ಉದ್ಯೋಗವಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 20 ಲಕ್ಷ ಅಥವಾಅದಕ್ಕಿಂತ ಹೆಚ್ಚಿನ ಹಣ ಇದೆ ಅಂದುಕೊಳ್ಳಿ;ಅಂತಹ ಸಂದರ್ಭದಲ್ಲಿ ಈ ಹಣದಲ್ಲಿ ಸೈಟ್ ಖರೀದಿ ಮಾಡುವುದು ಹಣ ಹೂಡಿಕೆಯಿಂದ ಲಾಭ ಮಾಡಲು ಇರುವ ಅತ್ಯುತ್ತಮ ವಿಧಾನ.
ಏಕೆಂದರೆ, ಹೋಟೆಲ್, ಫ್ಯಾಕ್ಟರಿ,ಕೃಷಿಯಂಥ ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿಕೆಯಿಂದ ಲಾಸ್ ಆಗಬಹುದು. ಆದರೆ, ಭೂಮಿ ಖರೀದಿಯಿಂದ ಮಾತ್ರ ಯಾವಕಾರಣಕ್ಕೂ ಲಾಸ್ ಆಗಲು ಸಾಧ್ಯವೇ ಇಲ್ಲ. (ಭೂಮಿ ಖರೀದಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಬಹಳ ಮುಖ್ಯ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ?) ಹೌದು; ನಮ್ಮನ್ನು ಹೊತ್ತಿರುವ ಈ ನೆಲಕ್ಕೆ ಯಾವತ್ತೂ ಚಿನ್ನದ ಬೆಲೆ ಇದ್ದೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.