ಉಳಸ್ರಪ್ಪೋ ಉಳಸ್ರಿ ಮಕ್ಕಳಿಗೋಸ್ಕರ


Team Udayavani, Jun 25, 2018, 1:07 PM IST

lead-2.jpg

ಉಳಿತಾಯ ಅಂದರೆ ಸಾಕು ಅದು ನಮಗಲ್ಲ, ಮಕ್ಕಳಿಗೆ ಅನ್ನೋ ನಂಬಿಕೆ ಚಾಲ್ತಿಯಲ್ಲಿದೆ. ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿದರೆ ಭವಿಷ್ಯದಲ್ಲಿ ಕಿರಿಕಿರಿ ಇರುವುದಿಲ್ಲ. ಮದುವೆಯಾದ ತಿಂಗಳಿಂದಲೇ ಮೂರು ಸಾವಿರದಂತೆ ಆರ್‌.ಡಿಯಲ್ಲಿ ಉಳಿಸುತ್ತಾ ಬನ್ನಿ.  ಮೂರು ವರ್ಷದ ನಂತರ ಮಕ್ಕಳಾಗಿ, ಅದು ಶಾಲೆಗೆ ಸೇರುವ ಹೊತ್ತಿಗೆ ಹೆಚ್ಚಾ ಕಡಿಮೆ ಬಡ್ಡಿ ಸೇರಿಸಿ ಎರಡು ಲಕ್ಷ ಕೈಗೆ ಬರುತ್ತದೆ.

ನೀವು ಉಳಿತಾಯ ಮಾಡಲೇಬೇಕು!
ಇಷ್ಟೊಂದು ಖಚಿತವಾಗಿ ಹೇಳ್ಳೋಕೆ ಕಾರಣ ಏನೆಂದರೆ, ಈ ಉಳಿತಾಯ ನಿಮಗಲ್ಲದೇ ಇದ್ದರೂ ಮಕ್ಕಳಿಗಾದರೂ ಮಾಡಲೇಬೇಕು. ಏಕೆ ಎನ್ನಿ,  ಪ್ರತಿ ವರ್ಷ ವಿದ್ಯಾಭ್ಯಾಸ ಖರ್ಚು ಶೇ. 5 ರಿಂದ 10ರಷ್ಟು ಏರುತ್ತಿದೆ. ಮನೆಯಲ್ಲಿ ಎರಡು ಮಕ್ಕಳಿದ್ದರೆ ( ನಾಲ್ಕು ವರ್ಷದ ಮಕ್ಕಳು) ವರ್ಷಕ್ಕೆ ಒಂದು ಲಕ್ಷ ಎತ್ತಿಡುವ ಅನಿವಾರ್ಯವಿರುವುದರಿಂದ
 ಉಳಿತಾಯದ ಹಾದಿ ತುಳಿಯಲೇ ಬೇಕು.

ಲೆಕ್ಕ ಮಾಡಿ
ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿ ಅಗತ್ಯಕ್ಕೆ ತಕ್ಕಂತೆ ಉಳಿತಾಯ ಮಾಡಲೇಬೇಕು.  ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ನೆರವಿಗೆಂದು ನಾನಾ ಬಗೆಯ ಸ್ಕೀಂಗಳಿವೆ.  ಮದುವೆಯಾದ ತಿಂಗಳಿಂದಲೇ ಮೂರು ಸಾವಿರದಂತೆ ಆರ್‌.ಡಿಯಲ್ಲಿ ಉಳಿಸುತ್ತಾ ಬನ್ನಿ.  ಮೂರು ವರ್ಷದ ನಂತರ ಮಕ್ಕಳಾಗಿ, ಅದು ಶಾಲೆಗೆ ಸೇರುವ ಹೊತ್ತಿಗೆ ಹೆಚ್ಚಾ ಕಡಿಮೆ ಬಡ್ಡಿ ಸೇರಿಸಿ ಎರಡು ಲಕ್ಷ ಕೈಗೆ ಬರುತ್ತದೆ. ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ಅಡ್ಡಿ ಇಲ್ಲ.  ಇಂತ ಸಣ್ಣ, ಸಣ್ಣ ಉಳಿತಾಯ ದೊಡ್ಡ ಕಷ್ಟದಲ್ಲಿ ಕೈ ಹಿಡಿಯುತ್ತದೆ.  

ಇವುಗಳಿಂದ ಟ್ಯಾಕ್ಸ್‌ ಕನ್ಸೆಶನ್‌ ಸಿಗುವ ಜತೆಗೆ ಸೇವಿಂಗ್‌ ಸಹ ಆಗುತ್ತದೆ.   ಕೆಲವು ಸ್ಕೀಂಗಳಲ್ಲಿ ಮಗುವಿಗೆ ಎರಡು ವರ್ಷ ಇರುವಾಗ ಕಂತಿನ ಹಣ ನಿಗದಿತವಾಗಿ ಕಟ್ಟಲು ಆರಂಭಿಸಿ 18 ವರ್ಷ ಆಗುವವರೆಗೆ ಪಾವತಿಸುತ್ತ ಬಂದರೆ, ಅದಕ್ಕೆ ಬಡ್ಡಿ, ಬೋನಸ್‌ ಎಲ್ಲ ಸೇರಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಒಳ್ಳೆಯ ಆದಾಯವಾಗುತ್ತದೆ.  ಇದರಿಂದ ಮಕ್ಕಳ ವಿದ್ಯಾಭ್ಯಾಸ ಹೊರೆಯಾಗುವುದಿಲ್ಲ.   ಮದುವೆಯ ನಂತರದ ದೊಡ್ಡ ಖರ್ಚು ಮಕ್ಕಳದ್ದು. ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವ ತನಕ ಆದಾಯದ ಶೇ. 20ರಷ್ಟು ಇದಕ್ಕೆ ಮೀಸಲಾಗಿಡಬೇಕು.

ನೂರುದಾರಿ
 ಉಳಿತಾಯಕ್ಕೆ ನೂರಾರು ದಾರಿಗಳಿವೆ. ಆದರೆ ಉಳಿತಾಯ ಮಾಡಬೇಕು ಅನ್ನುವ ಯೋಚನೆ ಮನಸ್ಸಿಗೆ ಬರಬೇಕು ಅಷ್ಟೇ. ಇವತ್ತು ಉಳಿತಾಯ ಮಾಡಿದರೆ ಇವತ್ತೇ ಬದಲಾವಣೆ ಅಸಾಧ್ಯ. ನಮ್ಮ ಅವಶ್ಯಕತೆ ಅನುಗುಣವಾಗಿಯೇ ಉಳಿತಾಯದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ- ಮುಂದಿನ ವರ್ಷ ಮಗಳು ಮದುವೆಯೋ, ಫೀ ಕಟ್ಟಬೇಕು ಅಂತಿಟ್ಟಿಕೊಳ್ಳಿ. ಇದು ತಕ್ಷಣಕ್ಕೆ ಆಗದ ಕಾರ್ಯ. ಹಾಗಾಗಿ, ವರ್ಷಗಳ ಮೊದಲು ಪೂರ್ವ ಸಿದ್ಧತೆ ಮಾಡಿಕೊಂಡರೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ.

ಹಾಗಾಗಿ, ಮೊದಲು ನಿಮ್ಮ ಎಲ್ಲಾ ಆದಾಯಗಳ ಮೂಲವನ್ನು ಗುಡ್ಡೆ ಹಾಕಿ. ತಿಂಗಳಿಗೆ  ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ.  ನೀವು ಮದುವೆ ಆಗದೇ ಇದ್ದರೆ ಹೆಚ್ಚು ಉಳಿತಾಯ ಮಾಡಬಹುದು.  ಶೇ.80ರಷ್ಟು ಉಳಿತಾಯ ಮಾಡಿ, ಶೇ.20ರಷ್ಟು ಖರ್ಚು ಮಾಡಲುಬಹುದಾದ ಕಾಲ ಇದು. ಮದುವೆ ಆಗುವ ತನಕ ನೀವು ಎಷ್ಟು ಹಣ ಉಳಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮದುವೆ ನಂತರ ಬದುಕು ಆರ್ಥಿಕವಾಗಿ ನೆಮ್ಮದಿಯಾಗಿರುತ್ತದೆ. ಈ ಕಾರಣಕ್ಕೆ ಕೆಲಸಕ್ಕೆ ಸೇರಿ 30ನೇ ವಯಸ್ಸಿಗೆ ಮದುವೆಯಾಗುವುದಾದರೆ  5-6 ವರ್ಷದ ತನಕ ನೀವು ಹಣ ಉಳಿಸಬಹುದು.  ನಿಮ್ಮ ಸಂಬಳ 10ಸಾವಿರದಿಂದ ಆರಂಭವಾಗಿ 25ಸಾವಿರಕ್ಕೆ ನಿಂತಿದೆ ಎಂದಿಟ್ಟು ಕೊಳ್ಳಿ. ಸರಾಸರಿ 6 ಸಾವಿರದಿಂದ 15ಸಾವಿರದ ತನಕ ಉಳಿತಾಯ ಮಾಡಿದ್ದೇ ಆದರೆ  ಹೆಚ್ಚಾ ಕಡಿಮೆ ಮದುವೆ ಹೊತ್ತಿಗೆ ನಿಮ್ಮ ಕೈಯಲ್ಲಿ ಮೂರು, ನಾಲ್ಕು ಲಕ್ಷ ಇರುತ್ತದೆ.

ಯಾವುದು ಸೇಫ್?
ಹೀಗೊಂದು ಲೆಕ್ಕ ಹಾಕೋಣ.  ಬ್ಯಾಂಕಿನ ಆರ್‌ಡಿ ಖಾತೆ ಬಹಳ ಸೇಫ್. ಇದು 10ವರ್ಷಕ್ಕೆ ಮಾತ್ರ. ಪ್ರತಿ ತಿಂಗಳು ನೀವು 3 ಸಾವಿರ ಹಾಕಿದರೆ 10 ವರ್ಷಕ್ಕೆ ಶೇ.9.5ರ ಬಡ್ಡಿ ದರದಲ್ಲಿ 6ಲಕ್ಷ ಸಿಗುತ್ತದೆ. ಇದನ್ನು ಉಳಿದ ಐದು ವರ್ಷಕ್ಕೆ ಕ್ಯಾಶ್‌ ಸರ್ಟಿಫಿಕೆಟ್‌ ಕೊಂಡರೆ 15 ವರ್ಷದ ಹೊತ್ತಿಗೆ ಬಡ್ಡಿ ಎಲ್ಲ ಸೇರಿ  ಸುಮಾರು 9ಲಕ್ಷದ 60ಸಾವಿರ ಹಣ ಸಿಗುತ್ತದಂತೆ. ಇದರಿಂದ ಮದುವೆಯ ಆರಂಭದ ದಿನಗಳಲ್ಲಿ ಇಂಥ ಪ್ಲಾನುಗಳನ್ನು ಮಾಡಿದರೆ ನಾಲ್ಕು, ಐದು ವರ್ಷದೊಳಗೆ ನೀವು ಆರ್ಥಿಕವಾಗಿ ಸಬಲರಾಗಬಹುದು. ಇದರ ಜೊತೆಗೆ ಚಿನ್ನದ ಮೇಲಿನ ಹೂಡಿಕೆಯನ್ನು ಒಳ್ಳೆಯದೆ.

ಆದರೆ ಆದರೆ ಇದು ದೀರ್ಘ‌ವಧಿಯ ಹೂಡಿಕೆಯಾಗಿರಲಿ. ಇತ್ತೀಚಿಗೆ ಅಲ್ಪಾವಧಿಯ ಹೂಡಿಕೆಯಾಗ ಚಿನ್ನ  ಅಷ್ಟೊಂದು ಯಶಸ್ವಿಯಾಗಿಲ್ಲ.   ತತ್‌ಕ್ಷಣದ ಲಾಭ ನಿರೀಕ್ಷೆ ಇದರಿಂದ ಅಸಾಧ್ಯ.

– ಉಳಿಸೊಪ್ಪಿನ ಮಠ

ಟಾಪ್ ನ್ಯೂಸ್

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

14

UV Fusion: ವಯೋಮಾನದ ಕಾಲಘಟ್ಟಕ್ಕೆ ಬದುಕಿನನುಭವದ ಸಾರ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

12

UV Fusion: ಇಂಗ್ಲೆಂಡ್‌ ಟು ಕೋಲ್ಕತಾ ಬಸ್‌ ಒಂದು ನೆನಪು

11

UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.