ಮುಳಿಯ ಮೈ ಡಾರ್ಲಿಂಗ್‌, ಅಪ್ಪಟ ಸಸ್ಯ ಪ್ರೀತಿಯ ವೆಂಕಟಕೃಷ್ಣ ಶರ್ಮ 


Team Udayavani, Jan 16, 2017, 3:45 AM IST

muliya.jpg

ಒಂದೆ ಕ್ರೆಯಲ್ಲಿ ನೂರು ಹಲಸಿನ ಗಿಡಗಳನ್ನು ನೆಟ್ಟಿದ್ದೇನೆ. ಇಲ್ಲಿ ಎರಡೂವರೆ ಎಕ್ರೆಯಲ್ಲಿ 250 ಹಲಸಿನ ಗಿಡಗಳು ಬೆಳೆಯುತ್ತಿವೆ. ಒಟ್ಟು ಎಂಭತ್ತು ತಳಿಯ ಹಲಸಿನ ಗಿಡಗಳಿವೆ. ಐದು, ನಾಲ್ಕು ಮತ್ತು ಮೂರು ವರ್ಷದ ಹಲಸಿನ ಗಿಡಗಳು ಇಲ್ಲಿವೆ. ಈ ಕಲ್ಲುಮಣ್ಣಿನ ಗುಡªದಲ್ಲಿ ಹೊಂಡ ಮಾಡಿ ಈ ಸಸಿಗಳನ್ನು ನೆಟ್ಟು ಬಿಟ್ಟಿದ್ದೇನೆ. ಇವುಗಳಿಗೆ ನಾನು ಗೊಬ್ಬರ ಹಾಕಿದ್ದೂ ಇಲ್ಲ. ನೀರು ಬಿಟ್ಟದ್ದೂ ಇಲ್ಲ. ಅವುಗಳ ಪಾಡಿಗೆ ಅವು ಸೊಂಪಾಗಿ ಬೆಳೆಯುತ್ತಿವೆ ನೋಡಿ. ಐದು ವರ್ಷ ಮುಂಚೆ ನೆಟ್ಟ ಸಸಿಗಳು ಎರಡಾಳೆತ್ತರ ಬೆಳೆದು, ಇದೇ ಮೊದಲ ಸಲ ಈ ವರ್ಷ ಕಾಯಿ ಬಿಟ್ಟಿವೆ’ ಮುಳಿಯ ವೆಂಕಟಕೃಷ್ಣ ಶರ್ಮರು ಅಂದು ನಮ್ಮನ್ನು ಗುಡ್ಡದ ಏರಿನಲ್ಲಿ ಕರೆದೊಯ್ಯುತ್ತಾ ಹಲಸಿನ ಕತೆ ಹೇಳುತ್ತಲೇ ಇದ್ದರು.

ಎÇÉೆಲ್ಲಿಂದಲೋ ಅಪರೂಪದ ಹಲಸಿನ ತಳಿಗಳನ್ನು ತಂದು ತಮ್ಮ ಜಮೀನಿನಲ್ಲಿ ಬೆಳೆಸುತ್ತಿ¨ªಾರೆ ವೆಂಕಟಕೃಷ್ಣ ಶರ್ಮ. ಅವರು ಈ ಕೆಲಸ ಕೈಗೆತ್ತಿಕೊಳ್ಳಲು ಏನು ಕಾರಣ ಎಂದೊಬ್ಬರು ಕೇಳಿದಾಗ ಶರ್ಮರ ಸರಳ ಉತ್ತರ, ಎಲ್ಲ ಜಾತಿಯ ಹಲಸಿನ ಮರಗಳು ನನ್ನ ಜಮೀನಿನಲ್ಲಿ ಇರಬೇಕು ಎಂಬ ಆಶೆ. ಬಹು ಉಪಯೋಗಿ ಆಗಿದ್ದರೂ ಅಲಕ್ಷಿತವಾಗಿರುವ  ಹಲಸನ್ನು ದಕ್ಷಿಣ ಕನ್ನಡ ಜಿÇÉೆಯಲ್ಲಿ ಮುಂಚೂಣಿಗೆ ತರಲಿಕ್ಕಾಗಿ ಹಲಸು ಸ್ನೇಹಿ ಕೂಟ ಸ್ಥಾಪಿಸಿದವರು ವೆಂಕಟಕೃಷ್ಣ ಶರ್ಮರು. ಹಲಸನ್ನು ಜನಪ್ರಿಯಗೊಳಿಸಲಿಕ್ಕಾಗಿ ಈ ಕೂಟದ ವತಿಯಿಂದ ಹಲವು ಹಲಸು ಮೇಳ ಸಂಘಟಿಸಿದವರು. ರುಚಿ ನೋಡಿ ತಳಿ ಆಯ್ಕೆ ಕಾರ್ಯಕ್ರಮದ ಮೂಲಕ 15 ಉತ್ತಮ ಸ್ಥಳೀಯ ಹಲಸು ತಳಿಗಳನ್ನು ಆಯ್ಕೆ ಮಾಡಲು ಕಾರಣಕರ್ತರು. ಇವುಗಳ ಕಸಿಕಟ್ಟಿ ಆಸಕ್ತರಿಗೆಲ್ಲ ಹಂಚಿದ ಹಲಸು ಸ್ನೇಹಿ ಶರ್ಮರು. 

ಅÇÉೊಂದು ಹಲಸಿನ ಮರದ ಬುಡಕ್ಕೆ ಹಳೆಸೀರೆ ಸುತ್ತಲಾಗಿತ್ತು. ಅದ್ಯಾಕೆಂದು ಕೇಳಿದಾಗ, ಅವರು ಇಳಿದು ಹೋಗಿ, ಆ ಮರದ ಬುಡದಲ್ಲಿದ್ದ ಹಲಸಿನ ಕಾಯಿಗಳನ್ನು ತೋರಿಸುತ್ತಾ ಹೇಳಿದರು. ಇದು ಅನಂತಾಡಿ ತಳಿ. ಇದೇ ಮೊದಲ ಫ‌ಸಲು. ಇವನ್ನು ಕಾಡುಹಂದಿಗಳಿಂದ ಉಳಿಸಲಿಕ್ಕಾಗಿ ಹಳೆಸೀರೆ ಸುತ್ತಿದ್ದು. ಹಾಗೇ ಬಿಟ್ಟರೆ ಕಾಡುಹಂದಿ ತಿಂದು ಹಾಕ್ತದೆ. ಇಲ್ಲಿ ಹಂದಿ ಕಾಟ ಜೋರು. ತಲೆಗೊಂದು ಮುಂಡಾಸು ಸುತ್ತಿಕೊಂಡು, ಕಂದು ಬಣ್ಣದ ಷರಟು ಹಾಗೂ  ಪಂಚೆ ತೊಟ್ಟಿದ್ದ ಶರ್ಮರು ಓಡಾಡುತ್ತಾ ಹೇಳುತ್ತಿದ್ದ ಕತೆಗಳಿಗೆ ಕಿವಿಯಾಗುತ್ತಿ¨ªೆವು ನಾವು.  

ಅದು, ಸಮೃದ್ಧಿ ಗಿಡಗೆಳೆತನ ಸಂಘದ ಮುವತ್ತು ಸದಸ್ಯರು 30 ಡಿಸೆಂಬರ್‌ 2016ರಂದು ವೆಂಕಟಕೃಷ್ಣ ಶರ್ಮರ ತೋಟಕ್ಕೆ ಭೇಟಿಯಿತ್ತ ಸಂದರ್ಭ. ಮಂಗಳೂರಿನಿಂದ ವಿಟ್ಲಕ್ಕೆ ಹೋಗಿ, ಅಲ್ಲಿಂದ ಪೆರುವಾಯಿ ಕಡೆಗೆ ಸಾಗಿ, ಕುದ್ದುಪದವು ಶಾಲೆಯ ಪಕ್ಕ ಬಲಕ್ಕೆ ತಿರುಗಿ, ಶರ್ಮರ ತೋಟ ತಲಪಬಹುದು. 

ಅವರ ತೋಟದಲ್ಲಿ ವಿವಿಧ ತಳಿಗಳ ಹಲಸಿನ ಗಿಡಗಳು ಮಾತ್ರವಲ್ಲ, ಬಗೆಬಗೆಯ ಹಣ್ಣಿನ ಗಿಡಗಳೂ, ಹೂವಿನ ಗಿಡಗಳೂ, ಸಾಂಬಾರ ಗಿಡಗಳೂ ಇವೆ. ಮನೆಯ ಹತ್ತಿರ ಅಡಿಕೆ ತೋಟದಲ್ಲಿ ಮೂರಾಳೆತ್ತರದ ಹಲವು ಜಾಯಿಕಾಯಿ ಗಿಡಗಳಲ್ಲಿ ಜೋತಾಡುವ ಜಾಯಿ ಕಾಯಿಗಳು. ಜೊತೆಗೆ ನೇರಳೆ, ಜಂಬುನೇರಳೆ, ನಕ್ಷತ್ರಸೇಬು, ಧಾರೆ ಹುಳಿ ಇತ್ಯಾದಿ ಗಿಡಗಳು. ಮನೆಯ ಪಕ್ಕದಲ್ಲಿರುವ 40 ಅಡಿ ಎತ್ತರದ ರುದ್ರಾಕ್ಷಿ$ ಮರದ ವಯಸ್ಸು 15 ವರುಷ.

ಮನೆ ಎದುರಿನ ಅಂಗಳದಲ್ಲಿ ವಿವಿಧ ತರಕಾರಿ ಗಿಡಗಳ ಸಾಲುಸಾಲು. ಬದನೆ, ಬೀನ್ಸ್‌, ಹರಿವೆ, ಮರಬೆಂಡೆ, ತೊಂಡೆ, ಬಹುವಾರ್ಷಿಕ ಬೆಂಡೆ, ಟೊಮೆಟೊ ಇತ್ಯಾದಿ. ನಡುನಡುವೆ ಗುಲಾಬಿ, ಬುಗುಡು, ದಾಸವಾಳ ಇತ್ಯಾದಿ ಹೂಗಿಡಗಳು. 
ನೀವು ಬೆಳೆಸಿರುವ ಗಿಡಗಳು ನನಗೂ ಬೇಕಾಗಿತ್ತು. ಸಸಿಗಳು ಎಲ್ಲಿ ಸಿಗುತ್ತವೆ? ಎಂದು ನಮ್ಮಲ್ಲಿ ಹಲವರು ಕೇಳಿದಾಗ, ಅವರಿಗೆಲ್ಲ ಒಂದು ಅಚ್ಚರಿ ಕಾದಿತ್ತು. ವೆಂಕಟಕೃಷ್ಣ ಶರ್ಮರು ನಮ್ಮನ್ನು ಅವರ ನರ್ಸರಿಗೆ ಕರೆದೊಯ್ದು, ನೋಡಿ, ಇಲ್ಲುಂಟು ಸಸಿಗಳು. ನಿಮಗೆ ಬೇಕಾದ್ದನ್ನು ತಗೊಳ್ಳಿ. ಚೆನ್ನಾಗಿ ನೀರು ಹಾಕಿ ಬೆಳೆಸಿ. ಅನಂತರ ನೀವೂ ಬೇರೆಯವರಿಗೆ ಹೀಗೆ ಸಸಿ ಕೊಡಿ ಎಂದು ಬಿಟ್ಟರು. ಅದು ಶರ್ಮರ ಅಪ್ಪಟ ಸಸ್ಯಪ್ರೀತಿ.

ನೀರುಗುಜ್ಜೆ ಮತ್ತು ಸೀಬೆ ಸಸಿಗಳನ್ನು ನಮ್ಮಲ್ಲಿ ಹಲವರು ಅಲ್ಲಿಂದ ಎತ್ತಿಕೊಂಡರು. ಇನ್ನು ಕೆಲವರು ಹರಿವೆ ಬೀಜ ತಗೊಂಡರು. ಮತ್ತೆ ಕೆಲವರಿಗೆ ಹಿಪ್ಪಲಿ ಮತ್ತು ತೊಂಡೆಬಳ್ಳಿಯ ತುಂಡುಗಳನ್ನು ಕತ್ತರಿಸಿ ಕೊಟ್ಟರು ಶರ್ಮರು. ಅವರು ಜೋಪಾನದಿಂದ ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಬೆಳೆಸಿದ್ದ ಸಸಿಗಳನ್ನು ಕೆಲವರು ಆಸೆಯಿಂದ ಎತ್ತಿಕೊಂಡರಾದರೂ, ಕೊನೆಗೆ ಅವನ್ನು ಅÇÉೇ ಬಿಟ್ಟು ಬಂದರು  ಆ ಸಸಿಗಳನ್ನು ಉಳಿಸಿಕೊಳ್ಳಲು ತಮ್ಮಿಂದಾಗದು ಎಂಬ ಕಾರಣಕ್ಕಾಗಿ. ಹಾಗೇನಾದರೂ ಆದರೆ, ಶರ್ಮರ ವಿಶ್ವಾಸಕ್ಕೆ ಧಕ್ಕೆಯಾದೀತೆಂಬ ಆತಂಕ ಅವರಿಗೆ.

ಹಣ್ಣುಗಳ ತೋಟ ಹಲವರು ಮಾಡಿರಬಹುದು. ಆದರೆ, ಹಲಸಿನಂತಹ ನಿರ್ಲಕ್ಷಿತ ಹಣ್ಣಿನ ತಳಿಗಳ ಸಂರಕ್ಷಣೆಗಾಗಿ ಶರ್ಮರಂತೆ ಪಣ ತೊಟ್ಟವರು ವಿರಳ. ಹಾಗೆಯೇ, ಅಡಿಕೆ ತೋಟ ಮಾಡಿದವರು ಹಲವರಿ¨ªಾರೆ. ಆದರೆ, ತಮ್ಮ ತೋಟ ನೋಡಲು ಬಂದವರಿಗೆಲ್ಲ ನೀವೂ ನೆಟ್ಟು ಬೆಳೆಸಿ ಎಂದು ಸಸಿ ಕೊಡುವ ದೊಡ್ಡ ಮನಸ್ಸಿನವರು ಅಪರೂಪ.
ವೆಂಕಟಕೃಷ್ಣ ಶರ್ಮರ ಕೊಡುವ ಗುಣ ತಿಳಿದವರಿಗೆ ಇದೆಲ್ಲ ಹೊಸತಲ್ಲ. ವೇತನವನ್ನೇ ಪಡೆಯದೆ ಅವರು ಮುಳಿಯ ಶಾಲೆಯಲ್ಲಿ ಪಾಠ ಮಾಡಿದ್ದನ್ನು ಸಮೃದ್ಧಿಯ ಗಿಡಗೆಳೆತನ ಸಂಘದ ಅಧ್ಯಕ್ಷ$ ಕಮ್ಮಾಜೆ ಶಂಕರನಾರಾಯಣ ಭಟ್‌ ನೆನಪು ಮಾಡಿಕೊಂಡರು. ಆ ಶಾಲೆ ಉಳಿಸಿಕೊಳ್ಳಬೇಕೆಂದು, ಅಲ್ಲಿ ಪಾಠ ಮಾಡಿದ್ದು ಮಾತ್ರವಲ್ಲ, ಶಾಲಾ ಮಕ್ಕಳಿಗೆ ಅಡುಗೆ ಮಾಡಿ ಬಡಿಸಿದ್ದರು ಮತ್ತು ಶಾಲೆಯಲ್ಲಿ ತೋಟವನ್ನೂ ಬೆಳೆಸಿದ್ದರು ಶರ್ಮರು. ಅವರ ಎಲ್ಲ ಕೆಲಸಗಳಿಗೆ ಪತ್ನಿ ವಾಣಿಯವರ ಬೆಂಬಲ. ಇಂಜಿನಿಯರ್‌ ಮಗ ರಾಧಾಕೃಷ್ಣ ಜೊತೆಗಿರುವುದು ಶರ್ಮರಿಗೆ ಕೈಬಲ.

ತನ್ನೂರಿನಲ್ಲಿ ನೆಲೆ ಕಂಡುಕೊಳ್ಳುವ ಕೃಷಿಕನೊಬ್ಬ ಹೇಗೆ ಅಲ್ಲಿನ ಸಮುದಾಯಕ್ಕೆ ಸೇವೆ ಸಲ್ಲಿಸಬಲ್ಲ ಎಂದು ತಿಳಿಯಬೇಕಾದರೆ ಶರ್ಮರೊಂದಿಗೆ ಓಡಾಡಬೇಕು. ಅವರ ಅಪ್ಪಟ ಸಸ್ಯಪ್ರೀತಿ ನಮ್ಮಲ್ಲೂ ಚಿಗುರಬೇಕಾದರೆ. ಅವರಿಂದ ಪಡೆದ ಸಸಿಗಳನ್ನು ಪ್ರೀತಿಯಿಂದ ಬೆಳೆಸಬೇಕು. ಆದರೆ, ಅವರ ದೊಡ್ಡ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಮ್ಮೆಲ್ಲ ಸಣ್ಣತನಗಳನ್ನು ಮೀರಿ ಬದುಕಬೇಕು.

(ಸಂಪರ್ಕ 9480200832 ರಾತ್ರಿ 7-8 ಗಂಟೆ)

– ಅಡೂxರು ಕೃಷ್ಣ ರಾವ…

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.