ಮ್ಯೂಚುವಲ್ ಫಂಡ್ ಎಂಬ ಹೊಸ ಜಪ
Team Udayavani, May 21, 2018, 12:53 PM IST
ತುಂಬ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹಾಕಿದವರು ಸಹಜವಾಗಿಯೇ ಅಧಿಕ ಲಾಭ ಕಂಡಿರುತ್ತಾರೆ. ಈಗ ಹಣ ಹಾಕುವವರೂ ಕಡಿಮೆ ಆಗುತ್ತಿದ್ದಾರೆ. ಒಂದು ವೇಳೆ ಹಣ ಹಾಕಿದರೂ ಅದು ವಾಸಿಸುವ ಅಗತ್ಯವನ್ನೇ ಹೆಚ್ಚಾಗಿ ಹೊಂದಿದೆ. ಹೂಡಿಕೆಗಾಗಿ ಈಗ ರಿಯಲ್ ಎಸ್ಟೇಟ್ ವಲಯವನ್ನು ರೆಕಮಂಡ್ ಮಾಡುವವರು ಕಡಿಮೆ ಆಗಿದ್ದಾರೆ. ಅಷ್ಟೆ ಅಲ್ಲ, ಇದು ಈಗ ಸಾಮಾನ್ಯರಿಗೆ ನಿಲುಕುವ ಹೂಡಿಕೆಯಾಗಿ ಉಳಿಯುತ್ತಿಲ್ಲ.
ಹೂಡಿಕೆಯಲ್ಲೂ ಅಷ್ಟೇ, ಒಂದು ಟ್ರೆಂಡ್ ಇರುತ್ತದೆ. ಕೆಲವು ಕಾಲಕ್ಕೆ ಕೆಲವು ಹೂಡಿಕೆಯ ಬಗೆಗೆ ಪದೇ ಪದೆ ಕೇಳುತ್ತಿರುತ್ತೇವೆ. ಕೆಲವು ವರ್ಷಗಳ ಹಿಂದೆ ಎಲ್ಲರೂ ಚಿನ್ನದ ಮೇಲೆ ಹೂಡಿಕೆ ಮಾಡಿ ಎನ್ನುತ್ತಿದ್ದರು. ಇನ್ನೂ ಕೆಲವು ವರ್ಷಗಳ ಹಿಂದೆ ಪ್ರಾಥಮಿಕ ಪೇಟೆ ಪ್ರವೇಶಿಸುವ ಷೇರುಗಳಲ್ಲಿ ಹೂಡಿಕೆ ಮಾಡಿ ಎನ್ನುತ್ತಿದ್ದರು. ಅದಕ್ಕೂ ಹಿಂದೆ ಅಂದರೆ ಸುಮಾರು 15 ವರ್ಷಗಳ ಹಿಂದೆ ರಿಯಲ್‌ಎಸ್ಟೇಟ್ ಹೂಡಿಕೆಯ ಬಗೆಗೆ ಬಹಳ ಮಾತುಗಳು ಕೇಳಿ ಬರುತ್ತಿದ್ದವು. ಯಾವುದೇ ಹೂಡಿಕೆ ಇವತ್ತಿಗಾಗಿ ಅಲ್ಲ.
ಮುಂದಿನ ದಿನಗಳಲ್ಲಿ ನಾವು ಮಾಡಿರುವ ಹೂಡಿಕೆ ಅಧಿಕ ಲಾಭ ತಂದುಕೊಡಬಹುದೆಂಬ ಲೆಕ್ಕಾಚಾರದ ಮೇಲೆಯೇ ಎಲ್ಲರೂ ಹೂಡಿಕೆ ಮಾಡುವುದು. ಈ ಹೇಳಿಕೆಯನ್ನೂ ಉದಾಹರಣೆಯ ಮೂಲಕ ವಿವರಿಸುವುದಾದರೆ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆಗೆ ಯಾವಾಗ ಪರ್ವ ಕಾಲವಾಗಿತ್ತು ಅಂದರೆ ನಗರಗಳು ವೇಗವಾಗಿ, ಜನಸಂಖ್ಯೆಯ ದೃಷ್ಟಿಯಿಂದ, ಅಭಿವೃದ್ಧಿಯ ದೃಷ್ಟಿಯಿಂದ ಬೆಳೆಯುವಾಗ.
ನಗರಗಳ ಸಂಪರ್ಕ ವ್ಯವಸ್ಥೆ ಸುಧಾರಿಸಿದಾಗ, ನಗರಗಳಲ್ಲಿ ಉದ್ಯೋಗದ ಅವಕಾಶ ಹೆಚ್ಚಿದಾಗ, ಅದೂ ಗ್ರಾಮೀಣ ಭಾಗಗಳಿಂದ, ಬೇರೆ ಬೇರೆ ರಾಜ್ಯಗಳಿಂದ ನಗರಗಳಿಗೆ ಬರುವವರ ಸಂಖ್ಯೆ ಹೆಚ್ಚಾದಾಗ, ನಗರಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ಸಿಗತೊಡಗಿದಾಗ, ನಗರಗಳಲ್ಲಿ ವಸತಿಗೆ ಬೇಡಿಕೆ ಬರುತ್ತದೆ. ಆ ರೀತಿಯ ಬೇಡಿಕೆ ಬಂದಾಗ ನಾವು ಹೂಡಿಕೆ ಮಾಡಿದ ನಿವೇಶನ ಅಥವಾ ಮನೆಗೆ ಉತ್ತಮ ಬೆಲೆ ಸಹಜವಾಗಿಯೇ ಸಿಗುತ್ತದೆ.
ನಮಗೆ ಹೂಡಿಕೆ ಎನ್ನುವ ಪರಿಕಲ್ಪನೆಯೇ ಹೊಸದಾಗಿತ್ತು. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ನಾವು ಯೋಚಿಸುತ್ತೇವೆ. ನಮಗೆ ಉಳಿದುಕೊಳ್ಳಲು, ನಾವು ವಾಸಮಾಡಲು ನಮ್ಮ ವೈಯಕ್ತಿಕ ಅಗತ್ಯಕ್ಕೆ ಬೇಕು ಎಂದು. ಹೀಗೆ ವೈಯಕ್ತಿಕ ಅಗತ್ಯ ಪೂರೈಸುವುದರಲ್ಲಿಯೇ, ನಮ್ಮ ದುಡಿಮೆಯ ಅರ್ಧಭಾಗ ಕಳೆದುಹೋಗಿರುತ್ತದೆ. ಮುಂದಿನದು ನಿವೃತ್ತಿಯ ಯೋಚನೆ. ಇದು ನಮ್ಮೆಲ್ಲರ ಕಥೆಯೂ ಹೌದು.
ನಮಗೆ ಹೂಡಿಕೆ ಎನ್ನುವ ಪರಿಕಲ್ಪನೆಯೇ ಹೊಸದು. ಚಿಕ್ಕ ವಯಸ್ಸಿನಲ್ಲಿ ಮಾಡುವ, ದೀರ್ಘ ಕಾಲದ ಹೂಡಿಕೆ, ಯಾವಾಗಲೂ ಅಧಿಕ ಲಾಭವನ್ನು ತಂದುಕೊಡುತ್ತದೆ. ಇದು ಒಂದು ರೀತಿಯಲ್ಲಿ ಗಿಡ ನೆಟ್ಟ ಹಾಗೆ. ಒಂದು ಗಿಡ, ಎಲ್ಲ ಅಡೆತಡೆಗಳನ್ನು ದಾಟಿ, ಮರವಾಗಿ ಬೆಳೆದು ಹೂ ಹಣ್ಣು ಕೊಡಲು ಸಮಯ ಬೇಕು. ಈಗ, ರಿಯಲ್‌ಎಸ್ಟೇಟ್ ವಲಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ತುಂಬ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹಾಕಿದವರು ಸಹಜವಾಗಿಯೇ ಅಧಿಕ ಲಾಭ ಕಂಡಿರುತ್ತಾರೆ.
ಈಗ ಹಣ ಹಾಕುವವರೂ ಕಡಿಮೆ ಆಗುತ್ತಿದ್ದಾರೆ. ಒಂದು ವೇಳೆ ಹಣ ಹಾಕಿದರೂ ಅದು ವಾಸಿಸುವ ಅಗತ್ಯವನ್ನೇ ಹೆಚ್ಚಾಗಿ ಹೊಂದಿದೆ. ಹೂಡಿಕೆಗಾಗಿ ಈಗ ರಿಯಲ್ ಎಸ್ಟೇಟ್ ವಲಯವನ್ನು ರೆಕಮಂಡ್ ಮಾಡುವವರು ಕಡಿಮೆ ಆಗಿದ್ದಾರೆ. ಅಷ್ಟೆ ಅಲ್ಲ, ಇದು ಈಗ ಸಾಮಾನ್ಯರಿಗೆ ನಿಲುಕುವ ಹೂಡಿಕೆಯಾಗಿ ಉಳಿಯುತ್ತಿಲ್ಲ. ಈಗ ಹೂಡಿಕೆ ಎನ್ನುವುದನ್ನು ಬೇರೆ ರೀತಿಯಿಂದ ನೋಡುವ ಹೊಸ ಹೂಡಿಕೆಯ ವರ್ಗವೇ ಸಿದ್ಧವಾಗಿದೆ. ಹಾಗೆ ಹೂಡಿಕೆ ಮಾಡುವವರನ್ನು ಮ್ಯೂಚುವಲ್ ಫಂಡ್ ತೆರದ ಬಾಗಿಲಿನಿಂದ ಸ್ವಾಗತಿಸುತ್ತಿದೆ.
ಷೇರು ಪೇಟೆಯಲ್ಲಿ ಹಣ ಹೂಡಿ ಅಭ್ಯಾಸ ಇಲ್ಲ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣ ಹೂಡುವುದು ರಿಸ್ಕ್ ಎಂದು ಭಾವಿಸುವವರಿಗೆ, ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ ಆಗಿದೆ. ಬ್ಯಾಂಕಿನಲ್ಲಿ ಹಣ ಇಟ್ಟಷ್ಟೇ ಸರಳವಾಗಿ, ಸಹಜವಾಗಿ, ಹಣ ಹೂಡುವ ಅವಕಾಶ ಇಲ್ಲಿದೆ. ಹೂಡಿಕೆದಾರರ ಅಗತ್ಯಕ್ಕೆ ಅನುಗುಣವಾಗಿ, ಹಲವಾರು ಯೋಜನೆಗಳನ್ನೂ ಮ್ಯೂಚುವಲ್ ಫಂಡ್‌ನಲ್ಲಿ ನಾವು ಕಾಣಬಹುದು.
ಬಹುತೇಕ ಎಲ್ಲ ಬ್ಯಾಂಕ್‌ಗಳೂ ಮ್ಯೂಚುವಲ್ ಫಂಡ್ ಸೇವೆಯನ್ನು ಒದಗಿಸುತ್ತಿವೆ. ಈಗ ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪಗೊಂಡಿದೆ. ಹೂಡಿಕೆಯ ಮಾತು ಬಂದಾ, ಎಲ್ಲರೂ ಮ್ಯೂಚುವಲ್ ಫಂಡ್ ಕುರಿತೇ ಹೇಳುತ್ತಿದ್ದಾರೆ. ಜನ ಹೇಳುತ್ತಿರುವುದೆಲ್ಲಾ ನಿಜವಾ? ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಕೈ ತುಂಬಾ ಲಾಭ ಸಿಗುವುದು ಗ್ಯಾಂರಂಟಿಯಾ? ಇಂಥವೇ ಪ್ರಶ್ನೆಗಳಿಗೆ ಮುಂದಿನವಾರಗಳಲ್ಲಿ ವಿವರವಾಗಿ ತಿಳಿಯೋಣ.
* ಸುಧಾಶರ್ಮ ಚವತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.