ಹೆಸರು ತಿದ್ದುಪಡಿ


Team Udayavani, Aug 19, 2019, 5:00 AM IST

law-point3

ಹಳೆಯ ಹೆಸರು ಚೆನ್ನಾಗಿಲ್ಲ ಎಂದು ನಿರ್ಧರಿಸಿ, ಅದನ್ನು ಬದಲಿಸಲು ಗಟ್ಟಿ ಮನಸ್ಸು ಮಾಡಿ, ಕಡೆಗೊಮ್ಮೆ ಹೊಸ ಹೆಸರನ್ನು ಇಟ್ಟುಕೊಂಡ ಮೇಲೆ, ಈ ಕೆಳಕಂಡ ದಾಖಲೆಗಳಲ್ಲಿ ಹಳೆಯ ಹೆಸರಿಗೆ ಬದಲಾಗಿ ಹೊಸ ಹೆಸರಿನ ತಿದ್ದುಪಡಿಯನ್ನು ಕೂಡಲೇ ಮಾಡಿಸಬೇಕು.
1. ರಹದಾರಿ ಪತ್ರ (ಪಾಸ್‌ಪೋರ್ಟ್‌)
2. ಬ್ಯಾಂಕ್‌ ಖಾತೆಗಳು (ಸಾಲದ ಖಾತೆಯೂ ಸೇರಿದಂತೆ)
3. ಪಡಿತರ ಚೀಟಿ (ರೇಷನ್‌ ಕಾರ್ಡ್‌)
4. ವಾಹನ ಚಾಲನೆ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್‌) ಮತ್ತು ನೋಂದಣಿ ಪ್ರಮಾಣ ಪತ್ರ (ಆರ್‌.ಸಿ ಪುಸ್ತಕ)
5. ಮತದಾರರ ಪಟ್ಟಿ
6. ವಿಮಾ ಪಾಲಿಸಿಗಳು, ಭವಿಷ್ಯ ನಿಧಿ ಖಾತೆ ಹಾಗೂ ಸೇವಾ ದಾಖಲೆ (ಸರ್ವೀಸ್‌ ರಿಜಿಸ್ಟರ್‌)
7. ಷೇರುಗಳು, ಡಿಬೆಂಚರುಗಳು, ಯುನಿಟ್‌ಗಳು ಇತ್ಯಾದಿ
8. ಇತರ ಮುಖ್ಯವಾದ ದಾಖಲೆಗಳು

ಹೆಸರು ಬದಲಾಯಿಸುವುದಕ್ಕೆ ಮುಂಚೆಯೇ ನಿಮ್ಮಲ್ಲಿರುವ ಡಿಗ್ರಿ ಸರ್ಟಿಫಿಕೇಟುಗಳು, ಅಂಕಪಟ್ಟಿಗಳು, ಯೋಗ್ಯತಾ ಪತ್ರಗಳು, ಸನ್ನಡತೆಯ ಪ್ರಮಾಣ ಪತ್ರಗಳು, ಹಕ್ಕು ಪತ್ರಗಳು ಇತ್ಯಾದಿಗಳಲ್ಲಿ ಹೆಸರು ತಿದ್ದುಪಡಿ ಮಾಡಿಸಬೇಕಾದ ಅವಶ್ಯಕತೆ ಇಲ್ಲ. ಯಾರಾದರೂ ಈ ಮೇಲ್ಕಂಡ ದಾಖಲೆಗಳ ಬಗ್ಗೆ ಸಮಜಾಯಿಷಿ ಕೇಳಿದರೆ, ಆ ದಾಖಲೆ ಪತ್ರಗಳೊಂದಿಗೆ, ನೀವು ಹೆಸರು ಬದಲಾಯಿಸಿಕೊಂಡ ಪ್ರಮಾಣಿತ ಘೋಷಣೆಯ ಅಧಿಕೃತ ಪ್ರತಿಯೊಂದನ್ನು, ಲಗತ್ತಿಸಿದರೆ ಸಾಕು. ಇನ್ನುಮುಂದೆ ಪಡೆದುಕೊಳ್ಳುವ ಎಲ್ಲಾ ದಾಖಲೆಗಳನ್ನು ಮಾತ್ರ ನೀವು ಹೊಸ ಹೆಸರಿನಲ್ಲಿ ಪಡೆದುಕೊಳ್ಳಿ. ನಿಮ್ಮ ಹೊಸ ಹೆಸರಿನಲ್ಲಿ ಸಹಿ ಹಾಕುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡ ನಂತರವೇ ಹೆಸರು ಬದಲಾಯಿಸಿಕೊಳ್ಳಿ! ಇಲ್ಲದಿದ್ದರೆ, ನಿಮ್ಮ ಸಹಿಗಳಲ್ಲಿ ವ್ಯತ್ಯಾಸ ಕಂಡುಬಂದು, ನೀವು ತೊಂದರೆಗೆ ಒಳಗಾಗಬಹುದು. ಬ್ಯಾಂಕ್‌ ಖಾತೆಗಳ ಮಟ್ಟಿಗೆ ಹೇಳುವುದಾದರೆ, ಹಳೆಯ ಹೆಸರಿನ ಖಾತೆಗಳನ್ನು ಮುಚ್ಚಿ, ಹೊಸ ಹೆಸರಿನಲ್ಲಿ ಖಾತೆಗಳನ್ನು ತೆರೆದರೆ ಕಿರಿಕಿರಿ ಇರುವುದಿಲ್ಲ.

ಹೆಸರನ್ನು ಬದಲಾಯಿಸುವ ಕ್ರಮ ಹೇಗೆ?
ಸರ್ಕಾರಿ ನೌಕರ, ವೃತ್ತಿನಿರತ ವಕೀಲ, ಪ್ರೌಢಶಾಲೆಯ ವಿದ್ಯಾರ್ಥಿ ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಸಾಮಾನ್ಯ ಪೌರನೊಬ್ಬ ಹೆಸರು ಬದಲಾಯಿಸಲು ಯಾವ ಕಾನೂನೂ ಇಲ್ಲ. ಯಾವ ನಿಯಮಗಳೂ ಇಲ್ಲ. ವಿವಿಧ ವರ್ಗಗಳಿಗೆ ಅನ್ವಯವಾಗುವ ಕ್ರಮಗಳು ಹೀಗಿವೆ:
1. ಸಾಮಾನ್ಯ ಪೌರ
ನೀವು ಮಾಡಬೇಕಾದುದು ಇಷ್ಟು. ಇಪ್ಪತ್ತು ರು. ಛಾಪಾ ಕಾಗದವನ್ನು ನಿಮ್ಮ ಹಳೆಯ ಹೆಸರಿನಲ್ಲಿ ತೆಗೆದುಕೊಂಡು ಅದರಲ್ಲಿ ಪ್ರಮಾಣಿತ ಘೋಷಣೆಯನ್ನು ಬರೆದು, ಹಳೆಯ ಮತ್ತು ಹೊಸ ಹೆಸರಿನಲ್ಲಿ ಸಹಿಗಳನ್ನು ಮಾಡಿ, ವಕೀಲರೊಬ್ಬರಿಂದ ಗುರುತಿನ ಸಹಿ ಹಾಕಿಸಿ, ನೋಟರಿಯ ಮುಂದೆ ಪ್ರಮಾಣ ಮಾಡಬೇಕು (ನಿಮ್ಮ ಊರಿನಲ್ಲಿ ನೋಟರಿ ಇಲ್ಲದಿದ್ದರೆ ಮ್ಯಾಜಿಸ್ಟ್ರೇಟರ ಮುಂದೆ ಪ್ರಮಾಣ ಮಾಡಬೇಕು). ಅವರು ಆ ಪತ್ರಕ್ಕೆ ನೊಟೇರಿಯಲ್‌ ಸ್ಟಾಂಪ್‌, ಅವರ ಮೊಹರು ಹಾಗೂ ಸಹಿಯನ್ನು ಹಾಕುತ್ತಾರೆ. ಆ ಪತ್ರದ ಹತ್ತು ಹದಿನೈದು ಜೆರಾಕ್ಸ್‌ ಪ್ರತಿಗಳನ್ನು ಮಾಡಿಸಿ, ಆ ಪತ್ರಗಳೆಲ್ಲವಕ್ಕೂ ಅದೇ ನೋಟರಿಯ ಹತ್ತಿರ (ಅವರು ಸಿಗದಿದ್ದರೆ ಇನ್ನೊಬ್ಬರು ನೋಟರಿಯ ಹತ್ತಿರ) “ನಿಜಪ್ರತಿ’ ಎಂದು ಸಹಿ ಹಾಕಿಸಿಟ್ಟುಕೊಳ್ಳಿ. ಅವಶ್ಯಕತೆ ಬಿದ್ದಾಗ ಈ ನಕಲನ್ನು ಮಾತ್ರ ಕೊಡಿ. ಮೂಲ ಪತ್ರವನ್ನು ಫೈಲ್‌ ಮಾಡಿ ಇಟ್ಟುಕೊಳ್ಳಿ. ನೀವು ಮೈನರ್‌ ಆಗಿದ್ದರೆ ನಿಮ್ಮ ಪರವಾಗಿ ನಿಮ್ಮ ತಂದೆ/ ತಾಯಿ/ ಪೋಷಕರು ಹೆಸರು ಬದಲಾವಣೆ ಕುರಿತು ಸ್ಪಷ್ಟನೆ ನೀಡಬೇಕು.

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.