ಕಾರು ಮಾರಾಟ ಜೋರು
Team Udayavani, Oct 12, 2020, 7:49 PM IST
ಲಾಕ್‌ಡೌನ್ ಮುಗಿದ ನಂತರದಲ್ಲಿ ನಿಧಾನಗತಿಯಲ್ಲಿ ಆಟೋ ಮೊಬೈಲ್ ಕಾರು ಮಾರುಕಟ್ಟೆಯೂ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೆಪ್ಟೆಂಬರ್‌ನಲ್ಲಿಕಾರು ಮಾರಾಟ ಜೋರಾಗಿಯೇ ನಡೆದಿದೆ. ಅದರಲ್ಲೂ ಈ 10 ಮಾಡೆಲ್‌ಕಾರುಗಳು ಹೆಚ್ಚು ಮಾರಾಟವಾಗಿವೆ. ವಿಶೇಷವೆಂದರೆ, ಮಾರುತಿ ಸುಜುಕಿಕಂಪನಿಯಕಾರುಗಳೇ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿರುವುದು.
1.ಮಾರುತಿ ಸುಜುಕಿ ಸ್ವಿಫ್ಟ್… : ಸೆಪ್ಟೆಂಬರ್ ನಲ್ಲಿ ಸುಮಾರು 22,643 ಕಾರುಗಳು ಮಾರಾಟವಾಗಿವೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಶೇ.75ರಷ್ಟು ಹೆಚ್ಚೇ ಇದೆ. ಆಗ 12,934ಕಾರುಗಳು ಮಾರಾಟವಾಗಿದ್ದವು. ಆಗಸ್ಟ್ ಗೆ ಹೋಲಿಕೆ ಮಾಡಿದರೂ, ಸ್ವಿಫ್ಟ್ ಕಾರುಗಳ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
2.ಮಾರುತಿ ಸುಜುಕಿಬಲೆನೋ- : ನೆಕ್ಸಾದಲ್ಲಿ ಮಾರಲ್ಪಡುವ ಇದಕ್ಕೂ ಹೆಚ್ಚೇ ಬೇಡಿಕೆ ಇದೆ.19,433ಕಾರುಗಳು ಮಾರಾಟವಾಗಿವೆ.2019ರ ಸೆಪ್ಟೆಂಬರ್‌ನಲ್ಲಿ 11,420ಕಾರುಗಳು ಮಾರಾಟವಾಗಿದ್ದವು. ಇದೂ ಶೇ.75ರಷ್ಟು ಪ್ರಗತಿ ಕಂಡಿದೆ.
3.ಮಾರುತಿ ಸುಜುಕಿ ಅಲ್ಟೋ- : ಈ ವರ್ಷದ ಸೆಪ್ಟೆಂಬರ್‌ನಲ್ಲಿ18,246 ಕಾರುಗಳು ಮಾರಾಟವಾಗಿವೆ. ಕಳೆದವರ್ಷದ ಅದೇ ತಿಂಗಳಿನಲ್ಲಿ15,079 ಕಾರುಗಳ ಮಾರಾಟವಾಗಿತ್ತು. ಇದರಲ್ಲೂ ಶೇ.21ರಷ್ಟು ಪ್ರಗತಿಯಾಗಿದೆ.
4.ಮಾರುತಿ ಸುಜುಕಿ ವ್ಯಾಗನಾರ್- : ವ್ಯಾಗನಾರ್‌ಕೂಡ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಸೆಪ್ಟೆಂಬರ್‌ನಲ್ಲಿ 17,581ಕಾರುಗಳ ಮಾರಾಟವಾಗಿದೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.50ರಷ್ಟು ಹೆಚ್ಚಾಗಿದೆ.
5.ಮಾರುತಿ ಸುಜುಕಿ ಡಿಸೈರ್- : ಕಾಂಪ್ಯಾಕ್ಟ್ ಸೆಡಾನ್ ಆಗಿರುವ ಇದು 13,988ಕಾರುಗಳು ಮಾರಾಟವಾಗಿವೆ. ಆದರೆ,ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಕೆ ಮಾಡಿದರೆ, ಇದುಕಡಿಮೆ. ಆಗ 15,662ಕಾರುಗಳು ಮಾರಾಟವಾಗಿದ್ದವು.
6.ಹುಂಡೈ ಕ್ರೀಟಾ- : ಭಾರತದ ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲಿಂಗ್ ಎಸ್ ಯುವಿ ಎಂದೇ ಖ್ಯಾತಿ ಗಳಿಸಿರುವ ಇದು, ಗಣನೀಯವಾದ ಬೇಡಿಕೆ ಸೃಷ್ಟಿಸಿಕೊಂಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಕೇವಲ 6,641ಕಾರುಗಳ ಮಾರಾಟವಾಗಿತ್ತು. ಈ ವರ್ಷ 12,325ಕಾರುಗಳು ಮಾರಾಟವಾಗಿವೆ. ಶೇ.82 ಪ್ರಗತಿಯಾಗಿದೆ.
7.ಮಾರುತಿ ಸುಜುಕಿ ಎಕೋ- : ಈ ಸೆಪ್ಟೆಂಬರ್‌ನಲ್ಲಿ ಎಕೋಗೂ ಒಳ್ಳೇ ಬೇಡಿಕೆ ಕುದುರಿದೆ.11,220ಕಾರುಗಳ ಮಾರಾಟವಾಗಿವೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.13ರಷ್ಟು ಏರಿಕೆಯಾಗಿದೆ.
8.ಹುಂಡೈ ಗ್ರಾಂಡ್‌ಐ10 – : ಸೆಪ್ಟೆಂಬರ್ ನಲ್ಲಿ10,385ಕಾರುಗಳ ಮಾರಾಟ ವಾಗಿವೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಶೇ.11ರಷ್ಟು ಹೆಚ್ಚಳವಾಗಿದೆ.
9.ಮಾರುತಿ ಸುಜುಕಿ ಎರ್ಟಿಗಾ- : ಮಾರುತಿ ಸುಜುಕಿಕಂಪನಿಯ ದೊಡ್ಡ ಗಾಡಿಯಾಗಿರುವ ಇದಕ್ಕೂ ಸೆಪ್ಟೆಂಬರ್‌ನಲ್ಲಿ ಉತ್ತಮ ಬೇಡಿಕೆಕುದುರಿದೆ.9982 ಕಾರುಗಳು ಮಾರಾಟವಾಗಿದ್ದು,ಕಳೆದವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಶೇ.59ರಷ್ಟು ಹೆಚ್ಚಾಗಿದೆ.
10.ಹುಂಡೈಐ20 ಎಲೈಟ್- : ಈ ಸೆಪ್ಟೆಂಬರ್‌ನಲ್ಲಿ9,852 ಕಾರುಗಳ ಮಾರಾಟವಾಗಿದೆ. ಆದರೆ,ಕಳೆದ ವರ್ಷದ ಇದೇ ಸಮಯದಲ್ಲಿ10 ಸಾವಿರಕ್ಕೂ ಹೆಚ್ಚುಕಾರುಗಳು ಮಾರಾಟವಾಗಿದ್ದವು.
-ಸಿ.ಜೆ. ಸೋಮಶೇಖರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.