ಹೊಸ ಫೋನಿಗೆ ಹೊಸ ಫೇಸ್‌ಬುಕ್ ಅಕೌಂಟು!?
Team Udayavani, Aug 31, 2020, 7:54 PM IST
ನೀವು ಮೊಬೈಲಿನಲ್ಲಿ ಫೇಸ್‌ಬುಕ್ ನೋಡುತ್ತಿದ್ದರೆ ಗಮನಿಸಬಹುದು. ಈಗಾಗಲೇ ಫೇಸ್‌ಬುಕ್ ಅಕೌಂಟ್ ಹೊಂದಿರುವ ಕೆಲವು ಗೆಳೆಯರು, ಅವರ ಹೆಸರಿನ ಇನ್ನೊಂದು ಅಕೌಂಟ್ ತೆರೆದು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿರುತ್ತಾರೆ. ಇವರಲ್ಲಿ ಕೆಲವರ ಫ್ರೆಂಡ್‌ಗಳ ಸಂಖ್ಯೆ 5000 ಮೀರಿರುವುದರಿಂದ, ಇನ್ನೊಂದು ಹೊಸ ಅಕೌಂಟ್ ತೆರೆದವರಿರುತ್ತಾರೆ. ಇನ್ನು ಕೆಲವರು, ಬೇಕಂತಲೇ ಎರಡು ಮೂರು ಅಕೌಂಟ್ ಮಾಡಿಕೊಂಡಿರುತ್ತಾರೆ. ನಾನು ಹೇಳ ಹೊರಟಿರುವುದು ಮೂರನೇ ವಿಧದವರ ಬಗ್ಗೆ!
ಈ ಮೂರನೇ ಕೆಟಗರಿಯವರ ಸಮಸ್ಯೆಯೆಂದರೆ, ಅವರು ಗ್ಯಾಜೆಟ್ ವಿಷಯದಲ್ಲಿ ಅಷ್ಟೊಂದು ತಿಳಿದವರಲ್ಲ. ಫೋನ್ ನಲ್ಲಿ ವಾಟ್ಸಾéಪ್ ಕಳುಹಿಸುವುದು, ಫೇಸ್ ಬುಕ್ ನೋಡುವುದು, ಯಾವುದಕ್ಕಾ ದರೂ ಕಮೆಂಟ್ ಮಾಡುವುದು, ಇಲ್ಲವೇ ಅಪರೂಪಕ್ಕೆ ಫೋಟೋ ಇತ್ಯಾದಿ ಹಂಚಿಕೊಳ್ಳುವುದಷ್ಟೇ ಅವರಿಗೆ ಗೊತ್ತಿರುತ್ತದೆ. ಇಂಥವರು ಹೊಸದಾಗಿ ಸ್ಮಾರ್ಟ್ ಫೋನ್ ಕೊಂಡಾಗ, ಪರಿಚಯದ ಯುವಕರು ಫೇಸ್‌ಬುಕ್ ಅಕೌಂಟ್ ಮಾಡಿಕೊಟ್ಟಿರುತ್ತಾರೆ. ಅದರ ಇಮೇಲ್ ಐಡಿ, ಪಾಸ್‌ವರ್ಡನ್ನು ಆಗಲೇ ಸೃಷ್ಟಿಸಿರುತ್ತಾರೆ. ಮೊಬೈಲ್ ಫೋನಿನಲ್ಲಿ ಪದೇಪದೆ ಯೂಸರ್ ಐಡಿ, ಪಾಸ್‌ವರ್ಡ್ ಕೇಳದಿರುವುದರಿಂದ, ಆ ಫೇಸ್‌ಬುಕ್ ಅಕೌಂಟು ಅಬಾಧಿತವಾಗಿ ನಡೆದುಕೊಂಡು ಹೋಗುತ್ತಿರುತ್ತದೆ!.
ಸಮಸ್ಯೆಯಾಗುವುದು, ಆ ಮೊಬೈಲ್ ಫೋನ್ ಕೆಟ್ಟಾಗ ಅಥವಾ ಹೊಸ ಸ್ಮಾರ್ಟ್‌ಫೋನ್ ಕೊಂಡಾಗ! ಹೊಸ ಫೋನ್‌ನಲ್ಲಿ ಮತ್ತೆ ಫೇಸ್‌ಬುಕ್ ಇನ್‌ಸ್ಟಾಲ್ ಮಾಡಿದಾಗ, ಅದು ಇಮೇಲ್ ಐಡಿ, ಪಾಸ್‌ವರ್ಡ್ ಕೇಳುತ್ತದೆ. ಫೋನಿನ ಒಡೆಯರಿಗೆ ಎರಡೂ ಗೊತ್ತಿರುವುದಿಲ್ಲ! ಆ ಫೋನಿಗೆ ಮತ್ತೆ ಹೊಸ ಗೂಗಲ್ ಅಕೌಂಟನ್ನು ಅಂಗಡಿಯಾತನೋ, ಪರಿಚಯದ ಹುಡುಗರೋ ಸೃಷ್ಟಿಸಿಕೊಡುತ್ತಾರೆ. ಫೇಸ್‌ಬುಕ್ ಬೇಕೆಂದಾಗ, ಮತ್ತೆ ಹೊಸ ಐಡಿ, ಪಾಸ್‌ವರ್ಡ್ ಹಾಕುತ್ತಾರೆ! ಆಗ ನಿಮ್ಮ ಗೆಳೆಯರಿಂದ ಹೊಸದಾದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ! ಅವರ ಈ ಹಿಂದಿನ ಫೇಸ್‌ಬುಕ್ ಅಕೌಂಟ್ ಅಸ್ತಿತ್ವದಲ್ಲಿದ್ದರೂ ಅವರು ಬಳಸದ ಕಾರಣ, ಪಾಳುಬಿದ್ದ ಮನೆಯಂತೆ ಗತಕಾಲದ ಫೋಸ್ಟ್‌ಗಳನ್ನು ಹೊತ್ತು ನಿಂತಿರುತ್ತದೆ!
ಹೊಸ ಫೇಸ್‌ಬುಕ್ ಅಕೌಂಟಿಗೆ ಹೊಸದಾಗಿ ಫ್ರೆಂಡ್‌ಗಳು ಸೇರುತ್ತಾ ಹೋಗುತ್ತಾರೆ. ಎರಡು ವರ್ಷ ಕಳೆದು ಮೊಬೈಲ್ ಬದಲಿಸಿದರೆ, ಮತ್ತೆ ಹೊಸ ಫೇಸ್‌ಬುಕ್ ಅಕೌಂಟು! ನನ್ನ ಪರಿಚಿತರೊಬ್ಬರು ಹೀಗೆ ಫೋನ್ ಬದಲಿಸಿದಾಗೆಲ್ಲ ಹೊಸ ಫೇಸ್‌ಬುಕ್ ಅಕೌಂಟ್ ತೆರೆದು ಕನಿಷ್ಠ 10 ಅಕೌಂಟು ಹೊಂದಿದ್ದಾರೆ! ಅವರ ಯಾವ ಅಕೌಂಟು ಹಾಲಿ ಆಕ್ಟೀವ್ ಆಗಿದೆ ಎಂಬುದೇ ತಿಳಿಯುವುದಿಲ್ಲ!
ಇದಕ್ಕೇನು ಪರಿಹಾರ? :
- ನೀವು ಫೇಸ್‌ಬುಕ್ ಅಕೌಂಟ್ ತೆರೆಯುವಾಗ ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಕೇಳುತ್ತದೆ. ಆ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಯೂಸರ್ ಐಡಿ ಎಂದು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅದಕ್ಕೆ ನೀವು ನೀಡಿದ ಪಾಸ್‌ವರ್ಡ್ ಅನ್ನು ಸಹ ಅದರ ಕೆಳಗೇ ಬರೆದುಕೊಳ್ಳಿ. ಮನೆಯಲ್ಲಿ ನಿಮಗೆ ಗೊತ್ತಿರುವ ಜಾಗದಲ್ಲಿ ಅದನ್ನು ಎತ್ತಿಡಿ.
- ಪ್ರತಿ ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿದಾಗಲೂ, ಅದಕ್ಕೊಂದು ಮೊಬೈಲ್ ಸಂಖ್ಯೆ ಸೇರಿಸುವ ಆಯ್ಕೆ ಕೇಳುತ್ತದೆ. ಅಥವಾ ಈಗಾಗಲೇ ಅಕೌಂಟ್ ಇದ್ದರೆ, ಸೆಟಿಂಗ್ಸ್‌ಗೆ ಹೋಗಿ, ನಂತರ ಅಕೌಂಟ್ ಸೆಟಿಂಗ್ಸ್, ಅದರಲ್ಲಿ ಪರ್ಸನಲ್ ಇನಾರ್ಮೇಶನ್, ಅದರಲ್ಲಿ ಕಾಂಟ್ಯಾಕ್ಟ್ ಇನ್‌ಫೋ ಇರುತ್ತದೆ. ಅಲ್ಲಿ ನಿಮ್ಮ ಫೋನ್ ನಂ. ಸೇರಿಸಿ, ಆ ನಂಬರನ್ನು ಯಾರು ನೋಡಬಹುದು ಎಂಬ ಆಯ್ಕೆಯೂ ಇರುತ್ತದೆ. ನಿಮಗೆ ಇಷ್ಟ ಇದ್ದರೆ, ಪಬ್ಲಿಕ್, ಫ್ರೆಂಡ್ಸ್ ಆಯ್ಕೆ ಕೊಡಬಹುದು. ಇಲ್ಲವಾದರೆ “ಓನ್ಲಿ ಮಿ’ ಆಯ್ಕೆ ಮಾಡಿ. ಈಗ ನಿಮ್ಮ ಫೇಸ್‌ಬುಕ್‌ನಲ್ಲಿ ನಿಮ್ಮ ಮೊಬೈಲ್ ನಂ. ಸೇರಿತು.
- ಮುಂದೆ ನಿಮ್ಮ ಹೊಸ ಫೋನಿಗೆ ನಿಮ್ಮ ಫೇಸುºಕ್ ಅಕೌಂಟ್ ಸೇರಿಸಬೇಕಾದಾಗ, ನಿಮಗೀಗ ಎರಡು ಆಯ್ಕೆ ಲಭ್ಯ. ನಿಮ್ಮ ಇಮೇಲ್ ಐಡಿ ಟೈಪ್ ಮಾಡಿ ಪಾಸ್‌ವರ್ಡ್ ಕೊಡಬಹುದು. ಪಾಸ್ವರ್ಡ್ ಮರೆತರೆ, ಫರ್‌ಗಾಟ್ ಪಾಸ್ವರ್ಡ್ ಆಯ್ಕೆ ಒತ್ತಿದರೆ, ನಿಮ್ಮ ಮೊಬೈಲ್ ಸಂಖ್ಯೆ ಕೇಳುತ್ತದೆ. ಅದನ್ನು ಹಾಕಿದರೆ, ಆ ಸಂಖ್ಯೆಗೆ ಓಟಿಪಿ ಬರುತ್ತದೆ. ಮತ್ತೆ ಹೊಸ ಪಾಸ್ವರ್ಡ್ ಸೇರಿಸಬಹುದು.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.