ಸಾಲದ ಸೋಲು : ಬೇಡಿಕೆ ಕಳೆದುಕೊಂಡ ಬ್ಯಾಂಕ್‌ ಸಾಲ

Team Udayavani, May 11, 2020, 12:38 PM IST

ಸಾಲದ ಸೋಲು : ಬೇಡಿಕೆ ಕಳೆದುಕೊಂಡ ಬ್ಯಾಂಕ್‌ ಸಾಲ

ಸಾಂದರ್ಭಿಕ ಚಿತ್ರ

ಬ್ಯಾಂಕುಗಳಲ್ಲಿ ಸಾಲ ದೊರಕುತ್ತಿಲ್ಲ. ಗ್ರಾಹಕರ ಸಾಲದ ಬೇಡಿಕೆಗೆ, ಬ್ಯಾಂಕುಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕೇಳಿದ ಪ್ರಮಾಣದಲ್ಲಿ ಸಾಲ ಮಂಜೂರಿ ಮಾಡುತ್ತಿಲ್ಲ…- ಇದು, ತೀರಾ ಇತ್ತಿಚಿನವರೆಗೆ ಕೇಳಿಬರುತ್ತಿದ್ದ ಸಾಮಾನ್ಯ ದೂರು. ಆದರೆ ಈಗಿನ ಸುದ್ದಿಯೇ ಬೇರೆ. ಈಗ ಬ್ಯಾಂಕ್‌ಗಳು ಉದ್ಯಮ ನಡೆಸುವವರಿಗೆ ಸಾಲ ಕೊಡಲು ಸಿದ್ಧವಾಗಿವೆ. ಆದರೆ, ಸಾಲ ಪಡೆಯಲು ಹೆಚ್ಚಿನ ಜನ ಉತ್ಸಾಹ ತೋರುತ್ತಿಲ್ಲ. ಕಾರಣವಿಷ್ಟೇ: ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದ ನಂತರ, ಔದ್ಯಮಿಕ ಚಟುವಟಿಕೆಗಳು, ಉದ್ದಿಮೆ ವ್ಯವಹಾರಗಳು ಕಳೆಗುಂದಿವೆ. ಸಣ್ಣಪುಟ್ಟ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ. ಪರಿಣಾಮ, ಕೈಗಾರಿಕಾ ವಲಯದ ಅರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಉತ್ಪಾದನೆ ನಿಂತಿದೆ.

ಗೋಡೌನ್‌ಗಳಲ್ಲಿರುವ ಸ್ಟಾಕ್‌ಗಳು ಕರಗುತ್ತಿಲ್ಲ. ನಿತ್ಯ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಬಿಟ್ಟು, ಬೇರೆ ವಸ್ತುಗಳಿಗೆ ಖರೀದಿದಾರರಿಲ್ಲ. ಉತ್ಪಾದನೆ- ಸಂಪಾದನೆ- ಲಾಭ- ಇದ್ಯಾವುದೂ ಇಲ್ಲದ ಕಾರಣದಿಂದ, ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ. ಅರ್ಥಿಕ ಮತ್ತು ಔದ್ಯಮಿಕ ಚಟುವಟಿಕೆಗಳು ಕ್ರಿಯಾಶೀಲವಾಗುವ ಬಗೆಗೆ, ದೃಢವಾದ ಮಾಹಿತಿ ಇಲ್ಲ. ಸಣ್ಣ ಉದ್ಯಮ ನಡೆಸುವವರಿಗೆ ಕೊಡುತ್ತಿದ್ದ ಸಾಲದ ಮಿತಿಯನ್ನು, ಬ್ಯಾಂಕ್‌ಗಳು ಆರು ತಿಂಗಳ ಹಿಂದೆಯೇ ಹೆಚ್ಚಿಸಿವೆ. ಆದರೆ, ಸಾಲ ಪಡೆಯಲು ಉದ್ಯಮಿಗಳೂ ಆಸಕ್ತಿ ತೋರಿಸಿಲ್ಲ. ಪರಿಣಾಮ, ಆ ಹಣ ಕೂಡ ಹಾಗೆಯೇ ಉಳಿದುಹೋಗಿದೆ. ಠೇವಣಿ ಹಣವೇ ಬಳಕೆಯಾಗದಿರುವುದು, ಬ್ಯಾಂಕಿನ ಆದಾಯದ ಮೇಲೆ ಬಾರೀ ಪರಿಣಾಮ ಬೀರಿದೆ. ಬ್ಯಾಂಕ್‌ಗಳು ರಿಸರ್ವ್‌ ಬ್ಯಾಂಕ್‌ನಲ್ಲಿ ರಿವರ್ಸ್‌ ರೆಪೋ ಇರಿಸುವುದು, ಅಥವಾ ತಮ್ಮಲ್ಲಿಯೇ ಸುಮ್ಮನೆ ಇಟ್ಟುಕೊಳ್ಳುವುದು, ಬ್ಯಾಂಕಿನ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ.

ಬ್ಯಾಂಕ್‌ಗೆ ಜಮಾ ಆದ ಹಣ, ರೊಟೇಷನ್‌ ರೀತಿಯಲ್ಲಿ ಖಾಲಿಯಾಗುತ್ತಾ ಇರಬೇಕು. ಆಗ ಮಾತ್ರ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿ ಇರುತ್ತದೆ. ಆದರೆ, ಈಗ
ಬ್ಯಾಂಕ್‌ಗಳೇ ಸಾಲ ಕೊಡುತ್ತೇವೆ ಅಂದರೂ ಅದನ್ನು ಪಡೆಯಲು ಸಣ್ಣ ಉದ್ಯಮದ ಜನರು ಮುಂದೆ ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲ ಪಡೆದರೆ, ಮುಂದಿನ ತಿಂಗಳಿಂದಲೇ ಕಂತು ಕಟ್ಟಬೇಕು. ಆದರೆ, ಉತ್ಪಾದನೆಯೇ ಇಲ್ಲದಿರುವಾಗ, ಕಂತು ಕಟ್ಟಲು ಹೇಗೆ ಸಾಧ್ಯ? ಈಗ ಸಾಲ ಪಡೆಯುವುದೂ ಬೇಡ, ನಂತರ ಒದ್ದಾಡುವುದೂ ಬೇಡ ಎಂಬುದು ಕೈಗಾರಿಕಾ ವಲಯದ
ಜನರ ಮಾತಾಗಿದೆ.

ಅಷ್ಟಾದರೂ ಬಡ್ಡಿ ಸಿಗಲಿ..!
ನಂಬಲರ್ಹ ಮೂಲಗಳ ಪ್ರಕಾರ, ಇಂದು 8.42 ಲಕ್ಷ ಕೋಟಿ ರೂಪಾಯಿಗಳನ್ನು ರಿಸರ್ವ್‌ ಬ್ಯಾಂಕ್‌ನಲ್ಲಿ “ರಿವರ್ಸ್‌ ರೆಪೋ’ ಅಡಿಯಲ್ಲಿ ಬ್ಯಾಂಕ್‌ಗಳು ಇರಿಸಿವೆಯಂತೆ. ಈ ಠೇವಣಿಗೆ ರಿಸರ್ವ್‌ ಬ್ಯಾಂಕ್‌ನಿಂದ ಕೇವಲ ಶೇ.3.75 ಬಡ್ಡಿಯನ್ನು ಪಡೆಯುತ್ತವೆ. ದುಡಿತವಿಲ್ಲದೇ, ಅದಾಯಗಳಿಸದೆ, ಸ್ಟಾಕ್‌ ರೀತಿಯಲ್ಲಿ ಬಿದ್ದಿರುವ ಈ ಹಣಕ್ಕೆ, ಕಿಂಚಿತ್ತಾದರೂ ಆದಾಯ ಬರಲಿ
ಉದ್ದೇಶದಿಂದಲೇ ರೆಪೋ ಅಡಿಯಲ್ಲಿ ಹಣ ಇಡಲಾಗಿದೆ ಎಂದು ಅರ್ಥಿಕ ತಜ್ಞರು ಹೇಳುತ್ತಿದ್ದಾರೆ. ಈ ಬೆಳವಣಿಗೆ, ಬ್ಯಾಂಕಿಂಗ್‌ ಇತಿಹಾಸದಲ್ಲೇ ಅಪರೂಪ ಎನ್ನಬಹುದು.

ರಮಾನಂದ ಶರ್ಮಾ

ಟಾಪ್ ನ್ಯೂಸ್

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.