ನಾಮದ ಬದನೆಗೆ ಬೇಡಿಕೆ ತುಂಬ


Team Udayavani, May 28, 2018, 6:00 AM IST

namada.jpg

ನಾಮದ ಬದನೆ, ಸಮಾರಂಭಗಳ ಅಡುಗೆಗೆ ಬೇಕೇ ಬೇಕು. ಕರಾವಳಿಯ ಪೋಡಿ ಅಥವಾ ಬೋಂಡಾ ತಯಾರಿಕೆಗೆ ಅದು ಸೂಕ್ತವಾಗಿದೆ. ಪಲ್ಯ, ಸಾಂಬಾರು, ಗೊಜ್ಜು ಮತ್ತು ಮಜ್ಜಿಗೆ ಹುಳಿಗಳಿಗಂತೂ ತುಂಬ ರುಚಿ ಕೊಡುತ್ತದೆ. ಏಪ್ರಿಲ್‌ ತಿಂಗಳ ಬಳಿಕ ರುಚಿ ಕಹಿಯಾಗುವ ಕಾರಣ ಬೇಡಿಕೆ ತಗ್ಗುತ್ತದೆಯಂತೆ. 

ಕರಾವಳಿಗೆ ಬಂದವರಿಗೆ ಇಷ್ಟವಾಗುವ ತರಕಾರಿಗಳಲ್ಲಿ ಉಡುಪಿ ಗುಳ್ಳ ಬದನೆ ಮುಖ್ಯವಾದುದು. ಹಾಗೆಯೇ, ಕರಾವಳಿಯ ಎಲ್ಲ ತಾಲೂಕುಗಳಲ್ಲಿಯೂ ಬೇಸಿಗೆಯಲ್ಲಿ ಹೆಚ್ಚು ಜನರು ಬೆಳೆಯುವ ಕಾಯಿಪಲ್ಲೆಗಳಲ್ಲಿ ನಾಮದ ಬದನೆಗೆ ಅಗ್ರಸ್ಥಾನವಿದೆ. ದುಂಡಗಿರುವ ಈ ಬದನೆಕಾಯಿ, ಚೆನ್ನಾಗಿ ಪೋಷಿಸಿದರೆ ಒಂದು ಕಿ.ಲೋದ ತನಕ ತೂಗುವ ಕಾರಣ ಬೆಳೆದವನಿಗೆ ಸಮೃದ್ಧವಾಗಿ ಲಾಭ ತಂದುಕೊಡುತ್ತದೆ.

ಪ್ರತೀ ವರ್ಷವೂ ಇದನ್ನು ಬೆಳೆಯುವವರಲ್ಲಿ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಪಾದೆಮಾರು ಮನೆಯ ಯುವ ರೈತ ವಿನ್ಸಿ ರೋಡ್ರಿಗಸ್‌ ಒಬ್ಬರು. ದುಬೈಯಲ್ಲಿ ಹದಿನೈದು ವರ್ಷ ಕೆಲಸ ಮಾಡಿದ ವಿನ್ಸಿ, ನಾಲ್ಕು ವರ್ಷಗಳ ಹಿಂದೆ ಊರಿಗೆ ಬಂದಿದ್ದಾರೆ. ತಂದೆಗೆ ವಯಸ್ಸಾಗಿರುವುದರಿಂದ ಅವರ ಜೊತೆಗಿದ್ದು ಪಿತ್ರಾರ್ಜಿತ ಕೃಷಿಭೂಮಿಯಲ್ಲಿ ಭತ್ತ ಮತ್ತು ಬಸಳೆ, ಹರಿವೆಯಂಥ ವೈವಿಧ್ಯಮಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

“ದುಬೈಯಲ್ಲಿ ಗಳಿಸುತ್ತಿದ್ದ ವೇತನವನ್ನು ಇಲ್ಲಿ ತರಕಾರಿ ಮಾರಾಟದಿಂದ ಐದಾರು ತಿಂಗಳಲ್ಲಿ ಗಳಿಸಬಲ್ಲೆನೆಂಬ ವಿಶ್ವಾಸದಿಂದಲೇ ನೌಕರಿ ಬಿಟ್ಟುಬಂದೆ’ ಎನ್ನುತ್ತಾರೆ ಅವರು. ನಾಮದ ಬದನೆ ಬೇಸಿಗೆಗಾಲದ ಕೃಷಿ. ಮಳೆಗಾಲದಲ್ಲಿ ಅದನ್ನು ಬೆಳೆಯುವ ಕ್ರಮವಿಲ್ಲ. ಅಕ್ಟೋಬರ್‌ ತಿಂಗಳಲ್ಲಿ ಭತ್ತದ ಕೊಯ್ಲು ಮುಗಿದ ಬಳಿಕ ಹೊಲದಲ್ಲಿ ಅದನ್ನು ನೆಡುವ ಕಾರಣ ಪೂರ್ವಭಾವಿಯಾಗಿ ಗಿಡಗಳನ್ನು ಮೊದಲೇ ತಯಾರಿಸುತ್ತಾರೆ.

ಎತ್ತರವಾದ ಮಡಿಗಳನ್ನು ಸಿದ್ಧಗೊಳಿಸಿ, ಸುತ್ತಲೂ ನೀರು ನಿಲ್ಲುವಂತೆ ಮಾಡಿ ಇರುವೆಗಳ ಹಾವಳಿಯನ್ನು ತಡೆದ ಬಳಿಕ ಕಟ್ಟಿಗೆ ಉರಿಸಿದ ಬೂದಿಯನ್ನು ಮಡಿಯಲ್ಲಿರುವ ಮಣ್ಣಿನಲ್ಲಿ ಮಿಶ್ರಗೊಳಿಸುತ್ತಾರೆ. ಹಿಂದಿನ ವರ್ಷ ಹಣ್ಣು ಮಾಡಿದ ಬದನೆಯಿಂದ ಸಂಗ್ರಹಿಸಿಟ್ಟ ಬೀಜಗಳನ್ನು ಅದರಲ್ಲಿ ಬಿತ್ತಿ, ನೆಲ್ಲಿ ಗಿಡದ ಎಲೆಗಳಿಂದ ಮುಚ್ಚುತ್ತಾರೆ. ಮೊಳಕೆಯೊಡೆದ ಗಿಡಗಳಿಗೆ ಬೇರೆ ಏನೂ ಗೊಬ್ಬರ ಹಾಕುವುದಿಲ್ಲ.

ಗಿಡ ನಾಟಿಗೆ ಎರಡು ಅಡಿ ಆಳ ಮತ್ತು ಅಗಲವಿರುವ ಸಾಲುಗಳನ್ನು ತೆಗೆದು, ಕಸಕಡ್ಡಿಗಳನ್ನು ಸುಟ್ಟು ಸಿದ್ಧಪಡಿಸಿದ ಸುಡುಮಣ್ಣು ಮತ್ತು ಒಣಗಿದ ಸಗಣಿ ಗೊಬ್ಬರವನ್ನು ತುಂಬುತ್ತಾರೆ. ಮಡಿಯಿಂದ ಕಿತ್ತ ಬದನೆ ಗಿಡವನ್ನು ಕರಗಿಸಿದ ಹಸೀ ಸಗಣಿಯಲ್ಲಿ ಬೇರಿನ ತನಕ ಮುಳುಗಿಸಿ ನಾಟಿ ಮಾಡಿದರೆ ಗಿಡಗಳಿಗೆ ಅದೇ ಮೊದಲ ಪೋಷಕಾಂಶವಾಗುವುದಂತೆ.

ನೆಟ್ಟ ಗಿಡಗಳಿಗೆ ಬೆಳಗ್ಗೆ ಮತ್ತು ಸಂಜೆ ಬಿಸಿಲಿಲ್ಲದಿರುವಾಗ ಸಗಣಿಯನ್ನು ನೀರಿನಲ್ಲಿ ತೆಳ್ಳಗೆ ಕರಗಿಸಿ,ಬುಡಕ್ಕೆ ಹೊಯ್ದು, ಅದು ನೆನೆಯುವಷ್ಟು ನೀರು ಚಿಮುಕಿಸುತ್ತಾರೆ. ಗಿಡ ಜೀವ ಹಿಡಿಯುವ ತನಕ ಕೃತಕ ನೆರಳೂ ಬೇಕಾಗುತ್ತದೆ.  ಗಿಡ ಚಿಗುರುತ್ತಿದ್ದಂತೆ ಹಸಿರೆಲೆಯ ಸಗಣಿ ಗೊಬ್ಬರವನ್ನು ಬುಡಕ್ಕಿರಿಸಿ ತೆಳ್ಳಗೆ ಸುತ್ತಲಿನ ಮಣ್ಣನ್ನು ಸಾಲುಗಳ ಇಕ್ಕಡೆಗಳಿಗೂ ಹಾರೆಯಿಂದ ಸೇರಿಸುತ್ತಾರೆ.

ಸುಫ‌ಲ ರಸಗೊಬ್ಬರವನ್ನು ಅಲ್ಪ ಪ್ರಮಾಣದಲ್ಲಿ ವಾರಕ್ಕೊಮ್ಮೆ ಕೊಡಬೇಕು, ತಿಂಗಳಿಗೊಮ್ಮೆ ಸಗಣಿ ಗೊಬ್ಬರವನ್ನು ಬುಡಕ್ಕಿಡಬೇಕು. ಮತ್ತೆ ಮಣ್ಣು ಸೇರಿಸಬೇಕು. ನೆಟ್ಟು ಒಂದೂವರೆ ತಿಂಗಳಲ್ಲಿ ಕಾಯಿಗಳಿಂದ ಗಿಡ ಬಾಗಿ, ಕಿ.ಲೋ ಗಾತ್ರದ ಬದನೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಮೂರು ದಿನಗಳಿಗೊಮ್ಮೆ ಒಂದು ಗಿಡದಿಂದ ಎರಡು ಕಿ.ಲೋ ಬದನೆಕಾಯಿಗಳನ್ನು ಐದು ತಿಂಗಳವರೆಗೆ ಕೊಯ್ಯಬಹುದು.

ಕಿ.ಲೋಗೆ ಆರಂಭದಲ್ಲಿ ಮೂವತ್ತು ರೂಪಾಯಿ ಇರುತ್ತದೆ. ಇದು ತುಂಬ ಲಾಭ ತರುವ ಸುಲಭ ಕೃಷಿಯ ಬೆಳೆ ಎಂಬುದು ವಿನ್ಸಿ ಅನುಭವ. ಎರಡು ಅಡಿಗೊಂದರಂತೆ ಗಿಡ ನಾಟಿ ಮಾಡಬೇಕು. ಗಿಡಗಳು ಹೆಚ್ಚು ಒತ್ತಾಗಿದ್ದರೆ ಫ‌ಸಲು ಕಡಮೆಯಾಗುತ್ತದೆ.  ಒಂದು ಗಿಡದಿಂದ ಕಡಮೆ ಎಂದರೂ ಐದು ನೂರು ರೂಪಾಯಿ ಗಳಿಸಬಹುದು. ಎಕರೆಗೆ ಖರ್ಚು ಕಳೆದು ಐವತ್ತು ಸಾವಿರ ಲಾಭ.

ಇದರ ಜೊತೆಗೆ ಅಂತರದ ನಡುವೆ ಹರಿವೆ, ಅಲಸಂದೆ, ಬೆಂಡೆ, ಮೆಣಸಿನಕಾಯಿ, ಸಿಹಿ ಗೆಣಸು, ಮರಗೆಣಸು ಬೆಳೆಯುತ್ತ ಅದರಿಂದ ಪ್ರತ್ಯೇಕ ಆದಾಯ ಪಡೆಯುತ್ತಿದ್ದೇನೆಂದು ವಿನ್ಸಿ ವಿವರಿಸುತ್ತಾರೆ. ನಾಮದ ಬದನೆ, ಸಮಾರಂಭಗಳ ಅಡುಗೆಗೆ ಬೇಕೇ ಬೇಕು. ಕರಾವಳಿಯ ಪೋಡಿ ಅಥವಾ ಬೋಂಡಾ ತಯಾರಿಕೆಗೆ ಅದು ಸೂಕ್ತವಾಗಿದೆ. ಪಲ್ಯ, ಸಾಂಬಾರು, ಗೊಜ್ಜು ಮತ್ತು ಮಜ್ಜಿಗೆ ಹುಳಿಗಳಿಗಂತೂ ತುಂಬ ರುಚಿ ಕೊಡುತ್ತದೆ.

ಏಪ್ರಿಲ್‌ ತಿಂಗಳ ಬಳಿಕ ರುಚಿ ಕಹಿಯಾಗುವ ಕಾರಣ ಬೇಡಿಕೆ ತಗ್ಗುತ್ತದೆಯಂತೆ. ನಾಮದ ಬದನೆಗೂ ಹಳುಗಳ ಕಾಟವಿದೆ.  ಎಲೆಗಳನ್ನು ಸುರುಳಿ ಸುತ್ತುವ ಹುಳಗಳನ್ನು ವಿನ್ಸಿ ಕೈಯಿಂದ ತೆಗೆದು ಕೊಲ್ಲುತ್ತಾರೆ. ಕಾಯಿ ಕೊರಕಗಳ ನಿವಾರಣೆಗೆ ಪೂರ್ವಭಾವಿಯಾಗಿ ಪರಿಸರ ಸ್ನೇಹಿಯಾದ ಕೀಟನಾಶಕ ಸಿಂಪಡಿಸುತ್ತಾರೆ. ಗಿಡಗಳಿಗೆ ಬುಡಕ್ಕೆ ನೀರಿನ ಕೊರತೆಯಾದರೆ ಗೆದ್ದಲುಗಳ ಬಾಧೆಯಿಂದ ಗಿಡ ಸಾಯುವ ಸಮಸ್ಯೆಯೂ ಇದೆಯಂತೆ.

ನೂರು ಬದನೆ ಗಿಡಗಳಿದ್ದರೆ ಸರಾಸರಿ ತಿಂಗಳಿಗೆ ಎಂಟರಿಂದ ಹತ್ತು ಸಾವಿರ ರೂಪಾಯಿಗಳಿಸಲು ಸಾಧ್ಯವೆನ್ನುವ ವಿನ್ಸಿ ಒಂದು ಹಸು ಸಾಕಿದ್ದಾರೆ. ಕೊಟ್ಟಿಗೆ ತೊಳೆದ ಗಂಜಲು ಮಿಶ್ರಿತ ನೀರನ್ನು ಗಿಡಗಳ ಬುಡಕ್ಕೆ ಸೇರಿಸುತ್ತಾರೆ. ನೆನೆಸಿದ ಶೇಂಗಾ ಹಿಂಡಿಯನ್ನು ಹಸೀ ಸೆಗಣಿಯೊಂದಿಗೆ ನೀರಿನಲ್ಲಿ ಕರಗಿಸಿ ಹುಳಿ ಬಂದ ಬಳಿಕ ಪ್ರತೀ ಗಿಡದ ಬುಡಕ್ಕೆ ಮಿತವಾಗಿ ನೀಡುವ ಕ್ರಮವನ್ನು ಇಪ್ಪತ್ತು ದಿನಗಳಿಗೊಮ್ಮೆ ಮಾಡುತ್ತಾರೆ. ಇದರಿಂದಾಗಿ ಹೆಚ್ಚು ಸಾವಯವದ ಸಣ್ತೀವುಂಡ ಗಿಡಗಳು ಭರ್ತಿ ತೂಕದ ಕಾಯಿ ಕೊಡುತ್ತವೆ. ಪರಿಮಳ, ಮೃದುವಾಗಿ ಬೇಯುವ ಗುಣ, ಆಕರ್ಷಕ ಬಣ್ಣಗಳಿಂದಾಗಿ ಬದನೆಕಾಯಿಗಳು ಸುಲಭವಾಗಿ ಗ್ರಾಹಕರ ಮನ ಗೆಲ್ಲುತ್ತವೆ.

* ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Savarkar defamation case:: Rahul ordered to appear in person on December 2

Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

5

Sullia: ಆಡುಮರಿಯನ್ನು ಅಮಾನುಷವಾಗಿ ಎಳೆದೊಯ್ದ ಬಗ್ಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.