ನೋಟಾ- ಬೇಕು, ಬೇಡಗಳ ಮಧ್ಯೆ…. 


Team Udayavani, May 28, 2018, 6:00 AM IST

nota.jpg

ನೋಟಾವನ್ನು ಸಕಾರಾತ್ಮಕವಾಗಿ ನೋಡಿದರೆ ಮಾತ್ರ ಅದು ಅಸ್ತ್ರವಾಗುತ್ತದೆ. ಇಲ್ಲದಿದ್ದರೆ ಅಣ್ಣಾ ಹಜಾರೆಯವರ ಹೋರಾಟದಂತೆ ಭ್ರಷ್ಟತೆಯ ಸಮುದ್ರಕ್ಕೆ ಸೇರಿದ ಪುಟ್ಟ ತೊರೆಯಾಗುತ್ತದೆ. ಎಲ್ಲವೂ ಉಪ್ಪು ಉಪ್ಪು!

ಜನತಂತ್ರದ ಪವಿತ್ರ ವ್ಯವಸ್ಥೆಯಲ್ಲಿ ಈಗಿನ ಜನಪ್ರತಿನಿಧಿಗಳ ದೊಂಬರಾಟವನ್ನು ನೋಡಿದ ಮೇಲೆ ಮತ್ತೂಮ್ಮೆ ಮತದಾನದ ಯಂತ್ರದ ನೋಟಾ ಬಟನ್‌ಗೆ ಮಹತ್ವ ಬಂದಿದೆ. ಬಹುಶಃ ರೆಸಾರ್ಟ್‌ ರಾಜಕಾರಣವನ್ನು ನೋಡಬೇಕಾಗುತ್ತದೆ ಎಂಬ ಅರಿವಿದ್ದರೆ ಕರ್ನಾಟಕದ ಜನ ಇನ್ನಷ್ಟು “ಮೇಲಿನ ಯಾರೂ ಅರ್ಹರಿಲ್ಲ’ ಎಂದು ನೋಟಾ ಒತ್ತುತ್ತಿದ್ದರೇನೋ.

ಒಂದರ್ಥದಲ್ಲಿ, ಕರ್ನಾಟಕದಲ್ಲಿ ಈ ಬಾರಿ ನೋಟಾವನ್ನು ಕೂಡ ವ್ಯವಸ್ಥಿತವಾಗಿ ಪರಾಭವಗೊಳಿಸಲಾಯಿತು. ಚುನಾವಣಾ ಆಯೋಗ ಯಾವ ಹಂತದಲ್ಲೂ ಜನರಿಗೆ ನೀವು ನೋಟಾ ಪ್ರಯೋಗ ಮಾಡಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಕುರಿತಾಗಿ ನಿಮಗೆ ಇರಬಹುದಾದ ಆಕ್ರೋಶವನ್ನು ವ್ಯಕ್ತಪಡಿಸಬಹುದು ಎಂದು ಹೇಳಲಿಲ್ಲ. ಮತದಾನ ಬಹಿಷ್ಕಾರದ ಬೆದರಿಕೆಯಷ್ಟು ಪ್ರಭಾವಯುತವಾಗಿ ನೋಟಾವನ್ನು ಕೂಡ ಬಳಸಬಹುದು ಎಂದು ಸರ್ಕಾರೇತರ ಸಂಸ್ಥೆಗಳು ಅರಿವು ಮೂಡಿಸಲಿಲ್ಲ.

ಅಲ್ಪಮತ….: ಕರ್ನಾಟಕದಲ್ಲಿ ಈ ಬಾರಿ ಬಂದಿದ್ದು ಶೇ. 0.9ರಷ್ಟು ನೋಟಾ ಮತಗಳು ಮಾತ್ರ. ಮತ ಎಣಿಕೆ ಕ್ರಮದಲ್ಲಿ ಹೇಳುವುದಾದರೆ 3.22 ಲಕ್ಷ. ಆ ಲೆಕ್ಕದಲ್ಲಿ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ನೋಟಾ ಪಾದಾರ್ಪಣೆ ಮಾಡಿದಾಗ 2.57 ಲಕ್ಷ ಮತ ಪಡೆದಿತ್ತು.

ಹೆಚ್ಚು ವಿದ್ಯಾವಂತರನ್ನು ಹೊಂದಿದೆ ಎನ್ನಲಾದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 15,829 ನೋಟಾ ಮತಗಳು ಚಲಾವಣೆಯಾಗಿವೆ. 28 ಕ್ಷೇತ್ರಗಳಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಮತಗಳು ನೋಟಾಕ್ಕೆ ದಕ್ಕಿವೆ. ಬದಾಮಿ, ಅಳಂದ, ಗದಗ, ಹಿರೇಕೆರೂರು, ಕುಂದಗೋಳ, ಮಸ್ಕಿ ಹಾಗೂ ಪಾವಗಡದಲ್ಲಿ ಜಯಕ್ಕೆ ಅಂತರಕ್ಕಿಂತ ನೋಟಾ ಹೆಚ್ಚು ಮತ ಗಳಿಸಿದೆ.

ರಾಜಕೀಯ ಪಕ್ಷಗಳಲ್ಲಿ ಬಿಜೆಪಿ 104 ಸ್ಥಾನ ಪಡೆಯುವುದರ ಜೊತೆಗೆ 66ರಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಕಾಂಗ್ರೆಸ್‌ ಗೆದ್ದ 78ಕ್ಕಿಂತ 112ರಲ್ಲಿ ರನ್ನರ್‌ ಅಪ್‌ ಆಗಿದೆ. ಜೆಡಿಎಸ್‌ 37 ಗೆದ್ದು, 36ರಲ್ಲಿ ಜಯದ ನಿಕಟವಾಗಿ ನಿಂತಿದೆ. ಐದು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಸಾವಿರ ಮತಕ್ಕಿಂತ ಕಡಿಮೆ. ನೋಟಾ ಪ್ರಭಾವಿಸಿದ ಏಳು ಕ್ಷೇತ್ರಗಳಲ್ಲಿ ಆರನ್ನು ಕಾಂಗ್ರೆಸ್‌ ಗೆದ್ದಿದೆ. ಆದರೆ ನೋಟಾ ಕಾರಣದಿಂದ ಬಿಜೆಪಿಗೆ ಆರು ಸ್ಥಾನ ಗಳಿಕೆಗೆ ಧಕ್ಕೆಯಾಯಿತು ಎಂಬುದೇ ಅವಾಸ್ತವ. ನೋಟಾಗೆ ಬಿದ್ದ ಮತಗಳಷ್ಟು ಬಿಜೆಪಿಗೆ ಹಾಕಲಾಗುತ್ತಿತ್ತು ಎಂದು ನಂಬಲು ಯಾವುದೇ ಕಾರಣಗಳಿಲ್ಲ.

ಹೊಸ ಆಯ್ಕೆಯ ನಿಷ್ಕ್ರಿಯತೆಯೇ……: ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಬರಬಹುದಾದ ಸಂದರ್ಭಗಳಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಅಂತಹ ಸಾಧ್ಯತೆಗಳನ್ನು ವಿರೋಧಿಸುತ್ತವೆ. ಅಣ್ಣಾ ಹಜಾರೆಯವರ ಹೋರಾಟದ ಫ‌ಲವನ್ನು ನಿಷ್ಕ್ರಿಯಗೊಳಿಸುವಲ್ಲಿ ಪ್ರಮುಖ ಪಕ್ಷಗಳ ಪಾತ್ರವಿದೆ. ಅವತ್ತು ಹೋರಾಟವನ್ನು ಬೆಂಬಲಿಸಿದ ಬಿಜೆಪಿ ಕೂಡ ಬಹುಮತವಿದ್ದರೂ ಈವರೆಗೆ ಜನ ಲೋಕಪಾಲ ಕಾಯ್ದೆಯನ್ನು ಜಾರಿಗೆ ತರಲಿಲ್ಲ.

ಆಮ್‌ಆದ್ಮಿ ಎಂಬ ಪಕ್ಷದ ಅವತಾರವಾದಾಗ ಎಲ್ಲ ಪಕ್ಷಗಳು ಅದರ ಮೇಲೆ ಮುಗಿಬಿದ್ದವು. ಜನರಿಗೆ ಆಕರ್ಷಕವಾದ ಒಂದು ಆಯ್ಕೆ ಸಿಕ್ಕರೆ ತಮ್ಮಂಥ ರಾಜಕೀಯ ಪಕ್ಷಗಳ ಬುಡ ಅಲುಗಾಡುತ್ತದೆ ಎಂಬುದು ಅವಕ್ಕೆ ಗೊತ್ತು. ಒಂದರ ಹಿಂದೊಂದು ಭ್ರಷ್ಟಾಚಾರದ ಆರೋಪ ಮಾಡುವುದರ ಹಿಂದೆ ಅವುಗಳ ಉದ್ದೇಶ ಸ್ಪಷ್ಟವಿತ್ತು, ಆಮ್‌ಆದ್ಮಿ ಪಕ್ಷವೂ ಭಿನ್ನವಲ್ಲ.

ನಮ್ಮಂತೆ. ಇಂತಹ ರಾತ್ರಿ ಕಂಡ ಬಾವಿಗೆ ಬೀಳುವುದಕ್ಕಿಂತ ನಾವೇ ನಿಮಗೆ ಉತ್ತಮ ಎಂದು ಸಾರಿ ಹೇಳುವುದು! ಯಾವಾಗ ಆಮ್‌ಆದ್ಮಿಯ ಚಹರೆಗಳು ತಮ್ಮ ನಡವಳಿಕೆಗಳನ್ನೇ ಹೋಲುತ್ತದೆ, ಇದು ಜನಕ್ಕೆ ಮನದಟ್ಟಾಗಿದೆ ಎಂಬುದು ಅರಿವಾಯಿತೋ, ಅಲ್ಲಿಂದ ರಾಜಕೀಯ ಪಕ್ಷಗಳು ನಿರುಮ್ಮಳಗೊಂಡಿವೆ. ನೋಟಾ ಕುರಿತಾಗಿಯೂ ಎರಡು ವರ್ಗಕ್ಕೆ ತೀವ್ರ ಭಯವಿದೆ. ಎಂದಿನಂತೆ ರಾಜಕೀಯ ಪಕ್ಷಗಳು ಇದನ್ನು ತಮ್ಮ ಅತಿ ದೊಡ್ಡ ಶತ್ರು ಎಂದೇ ಭಾವಿಸುತ್ತವೆ.

ಇದಕ್ಕೆ ಆಡಳಿತಯಂತ್ರ ಮತ್ತು ಖುದ್ದು ಚುನಾವಣಾ ಆಯೋಗ ಹೆಚ್ಚಿನ ಪ್ರೋತ್ಸಾಹ ನೀಡಬಾರದು ಎಂಬುದು ಅವುಗಳ ಆಗ್ರಹ. ನೋಟಾ ಮತಗಳ ಸಂಖ್ಯೆ ಬೃಹತ್‌ ಆದರೆ, ಯಾವುದೋ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಅದಕ್ಕೇ ಬಹುಮತ ಬಂದರೆ ಅದು ಇಡೀ ರಾಷ್ಟ್ರದ ಮತದಾನ ಪ್ರಕ್ರಿಯೆಯಲ್ಲಿ ಹೊಸ ಹೊಸ ನಿಯಮಗಳ ಜಾರಿಗೆ ಒತ್ತಡವನ್ನು ತಂದುಬಿಡಬಲ್ಲದು ಎಂಬುದು ಅವರಿಗೆ ಗೊತ್ತು.

ಮೊನ್ನೆ ವರುಣಾ ಕ್ಷೇತ್ರದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರನಿಗೆ ಬಿಜೆಪಿ ಟಿಕೆಟ್‌ ಕೊಡದಿದ್ದಾಗ ಅವರ ಪಕ್ಷದ ಕಾರ್ಯಕರ್ತರೇ ನೋಟಾ ಅಭಿಯಾನಕ್ಕೆ ಮುಂದಾಗಿದ್ದರು. ಅಂತಹ ಸಂದರ್ಭದಲ್ಲಿ ಪಕ್ಷಗಳು ತಮ್ಮ ಎದುರಾಳಿ ಪಕ್ಷಕ್ಕೆ ಬೇಕಾದರೂ ಮತ ಚಲಾಯಿಸಿ, ನೋಟಾಕ್ಕೆ ಬೇಡ ಎಂದೇ ಮನಃ ಪರಿವರ್ತನೆ ಮಾಡುತ್ತಾರೆ. ಅಂತಹ ವಿದ್ಯಮಾನಗಳನ್ನು ನಾವು ನೋಡಿದ್ದೇವೆ.

ಭ್ರಷ್ಟ ಜನಪ್ರತಿನಿಧಿಗಳು ಬೇಕು: ಕಾರ್ಯಾಂಗ ಇಂದು ಸಂಪೂರ್ಣವಾಗಿ ಭ್ರಷ್ಟ ಜನಪ್ರತಿನಿಧಿಗಳನ್ನೇ ಬಯಸುತ್ತದೆ! ಭ್ರಷ್ಟತೆಗೆ ಸೂಕ್ತ ಶಿಕ್ಷೆ ಇಲ್ಲ. ಕಾನೂನಿನ ಸಹಾಯದಿಂದ ಜೀವನಪರ್ಯಂತ ಶಿಕ್ಷೆಗೊಳಗಾದರೂ ಆರಾಮವಾಗಿರಬಹುದಾದ ವಿದ್ಯಮಾನವನ್ನು ಕಂಡಿದ್ದೇವೆ. ನಿವೃತ್ತರಾದರೆ ಸಾಕು, ವ್ಯವಸ್ಥೆಯ ಆಕ್ರೋಶ ಮಾಜಿ ಅಧಿಕಾರಿಯ ಮೇಲಿನ ನಮ್ಮ ಕೋಪ ತಣ್ಣಗಾಗುತ್ತದೆ.

ಲಾಲೂ ಪ್ರಸಾದ್‌ ಯಾದವ್‌ರಂತ ಭ್ರಷ್ಟತೆಯ ಆರೋಪ ಸಾಬೀತಾದವರು ಕೂಡ ರಾಜಕೀಯ ಸಮೀಕರಣಗಳಲ್ಲಿ ಮಿಂಚುತ್ತಾರೆ. ಇಂತವರಿಗೆ ನೋಟಾ ಬಾಧಕ. ಇದೇ ಕಾರಣದಿಂದ ಈ ಬಾರಿ ಶೇ. 100ರ ಮತದಾನವಾಗಬೇಕು ಎಂಬ ಜಾಗೃತಿಗೆ ಮುಂದಾದ ಕಾರ್ಯಾಂಗ ಯಾವುದೇ ಸಂದರ್ಭದಲ್ಲಿ ನೋಟಾ ಒಂದು ಅತ್ಯುತ್ತಮ ಆಯ್ಕೆ ಎಂಬುದನ್ನು ಪ್ರಸ್ತಾಪಿಸಲಿಲ್ಲ.

2017ರಲ್ಲಿ ಗುಜರಾತ್‌ ಚುನಾವಣೆಯ ಸಂದರ್ಭದಲ್ಲಿ ಶೇ. 1.8ರ ನೋಟಾ ಚಲಾವಣೆಯಾಗಿತ್ತು. 2015ರ ಬಿಹಾರ ಕಣದಲ್ಲಿ ಶೇ. 2.5, 2016ರ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಶೇ. 1.52 ನೋಟಾ ದಾಖಲಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಗುಜರಾತ್‌ನಲ್ಲಿ 30 ಕ್ಷೇತ್ರಗಳ ವಿಜಯದ ಅಂತರಕ್ಕಿಂತ ನೋಟಾ “ಲೀಡ್‌’ ಪಡೆದಿತ್ತು. ಬಿಹಾರದಲ್ಲಿ 21, ಬಂಗಾಳ ಹಾಗೂ ತಮಿಳುನಾಡಿನಲ್ಲಿ 24 ಕ್ಷೇತ್ರಗಳ ಫ‌ಲಿತಾಂಶದಲ್ಲಿ ಮೇಲಿನ ಅನುಭವವೇ ಕಂಡುಬಂದಿತ್ತು.

ಕರ್ನಾಟಕದಲ್ಲೂ ರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಬಹುಜನ ಸಮಾಜ ಪಕ್ಷ, ಕಮ್ಯುನಿಸ್ಟ್‌ ಪಕ್ಷಗಳಿಗಿಂತ ನೋಟಾಗೆ ಹೆಚ್ಚು ಮತ ಸಿಕ್ಕಿದೆ. ಸಣ್ಣ ರಾಜಕೀಯ ಪಕ್ಷಗಳಿಗೆ ಅವುಗಳದ್ದೇ ಆದ  ಅಜೆಂಡಾವಿದೆ. ತಮಗೆ ಸಿಗುವ ಮತ ನಗಣ್ಯ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತಿದ್ದರೂ, ಸ್ಥಳೀಯವಾಗಿ ಒಂದಷ್ಟು ರಾಜಿ ಮಾತುಕತೆಗೆ ಸ್ಪರ್ಧೆಯಿಂದ ಮಾತ್ರ ಸಾಧ್ಯ. ನೋಟಾಗೆ ಪ್ರಚಾರ ಮಾಡಿದರೆ ಯಾರು ಕಾಸು ಕೊಡುತ್ತಾರೆ?

ಭಾರತೀಯ ಮನೋಭಾವದ ಪ್ರಕಾರ, ನಾನು ಮತ ಹಾಕುವ ಅಭ್ಯರ್ಥಿ ಗೆಲ್ಲಬೇಕು ಎಂಬುದಕ್ಕಿಂತ ನಾನು ಗೆಲ್ಲುವ ಉಮೇದುವಾರನಿಗೇ ಮತ ಹಾಕಬೇಕು ಎಂಬ ಇರಾದೆ ದಟ್ಟವಾಗಿದೆ. ಇಂತಹ ಸಂದರ್ಭದಲ್ಲಿ ಬಹುಮತ ಪಡೆದರೂ ನೋಟಾ ವಿಜೇತವಾಗುವುದಿಲ್ಲ. ಆನಂತರ ಅಭ್ಯರ್ಥಿಯನ್ನು ಗೆದ್ದವರೆಂದು ಪರಿಗಣಿಸಲಾಗುತ್ತದೆ ಎಂಬ ನಿಯಮ ನೋಟಾದ ವ್ಯಾಪಕತೆಗೆ ಧಕ್ಕೆಯಾಗಿದೆ. ಇಲ್ಲಿ ಸರ್ಕಾರೇತರ ಸಾರ್ವಜನಿಕ ಸಂಸ್ಥೆಗಳ ಪಾತ್ರ ಮುಖ್ಯವಾಗುತ್ತದಾದರೂ, ಈವರೆಗೆ ಅವುಗಳ ಕಾರ್ಯಚಟುವಟಿಕೆ ನಿರಾಶಾದಾಯಕವಾಗಿಯೇ ಇದೆ. 

ವಿರೋಧಕ್ಕೊಂದು ತಾರ್ಕಿಕ ಅಂತ್ಯ: ಜನಾಭಿಪ್ರಾಯದ ಗುರಾಣಿ ಹಿಡಿದ ರಾಜಕೀಯ ಪಕ್ಷಗಳು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಬಹುಪಾಲು ಎರಡು ಗುಂಪುಗಳಾಗಿ ಭಜನೆಗೊಂಡಿರುವ ರಾಜಕೀಯ ಪಕ್ಷಗಳಿಗೆ ಈ ಬಾರಿ ಅವರಿಗೆ ಅಧಿಕಾರ ಸಿಕ್ಕರೆ ಮುಂದಿನ ಭಾರಿ ನಮ್ಮ ಪಾಲಾಗುತ್ತದೆ ಎಂಬ ನಂಬಿಕೆ ಇದೆ.

ಜನಕ್ಕೆ ಎರಡೇ ಆಯ್ಕೆಗಳನ್ನು ಕೊಟ್ಟಿರುವಾಗ ತಮ್ಮ ಸರದಿ ಬಂದೇ ಬರುತ್ತದೆ. ಆ ಸಂದರ್ಭದಲ್ಲಿ ಸಿಗುವ ಅನುಕೂಲಗಳನ್ನು ಬಳಸಿಕೊಳ್ಳಲು ಅವು ಆಡಳಿತ ನಡೆಸುವ ಪಕ್ಷವನ್ನು ನಿಜ ಅರ್ಥದಲ್ಲಿ ವಿರೋಧಿಸುವುದಿಲ್ಲ. ವಿರೋಧಕ್ಕೊಂದು ತಾರ್ಕಿಕ ಅಂತ್ಯ ಎಂಬುದಿರುವುದಿಲ್ಲ. ಈ ಹಂತದಲ್ಲಿ ನೋಟಾ ಹೊಸ ಸಾಧ್ಯತೆಗಳನ್ನು ತೆರೆದಿಡುವಂತದು. ಸಧ್ಯ ಅದಕ್ಕೆ ಪೂರಕವಾದ ನಿಯಮಗಳಿಲ್ಲದಿರಬಹುದು.  

ಮತದಾನದಲ್ಲಿ ಅದು ಅತ್ಯಧಿಕ ಪಾಲನ್ನು ಪಡೆಯಲಾರಂಭಿಸಿದರೆ ರಾಜಕೀಯ ಪಕ್ಷಗಳು ಗೆದ್ದ ಮೇಲೂ ಅಕ್ಷರಶಃ ಜನರ ಮಾತನ್ನು ಕೇಳುವ ಸ್ಥಿತಿ ನಿರ್ಮಾಣವಾಗುತ್ತದೆ. 2019ರ ಲೋಕಸಭಾ ಚುನಾವಣೆ ಇಂತಹ ಸಂಭಾವ್ಯತೆಗೆ ವೇದಿಕೆ ಆಗಬೇಕಾಗಿದೆ. ನೋಟಾವನ್ನು ಸಕಾರಾತ್ಮಕವಾಗಿ ನೋಡಿದರೆ ಮಾತ್ರ ಅದು ಅಸ್ತ್ರವಾಗುತ್ತದೆ. ಇಲ್ಲದಿದ್ದರೆ ಅಣ್ಣಾ ಹಜಾರೆಯವರ ಹೋರಾಟದಂತೆ ಭ್ರಷ್ಟತೆಯ ಸಮುದ್ರಕ್ಕೆ ಸೇರಿದ ಪುಟ್ಟ ತೊರೆಯಾಗುತ್ತದೆ. ಎಲ್ಲವೂ ಉಪ್ಪು ಉಪ್ಪು!

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.