ಟ್ವಿಟರ್‌ ಬಳಕೆದಾರರೇ ಗಮನಿಸಿ…


Team Udayavani, Apr 13, 2020, 1:15 PM IST

ಟ್ವಿಟರ್‌ ಬಳಕೆದಾರರೇ ಗಮನಿಸಿ…

ಸಾಂದರ್ಭಿಕ ಚಿತ್ರ

ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಮತ್ತು ಅನಗತ್ಯ ಮಾಹಿತಿಗಳು ಎಗ್ಗಿಲ್ಲದಂತೆ ಪ್ರಸಾರವಾಗುತ್ತಿವೆ. ಇದರಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂಬ ಗೊಂದಲ ಸಾರ್ವಜನಿಕರಿಗೆ ಮೂಡುತ್ತದೆ.

ಎಲ್ಲಿ ನೋಡಿದರೂ ಈಗ ಕೊರೊನಾದ್ದೇ ಸುದ್ದಿ. ಕೊರೊನಾ ವೈರಸ್‌ ಕುರಿತು, ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಮತ್ತು ಅನಗತ್ಯ ಮಾಹಿತಿಗಳು ಎಗ್ಗಿಲ್ಲದಂತೆ ಪ್ರಸಾರವಾಗುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎಂಬ ಗೊಂದಲ ಸಾರ್ವಜನಿಕರಿಗೆ ಮೂಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಟ್ವಿಟರ್‌, ತನ್ನ ಬಳಕೆದಾರರಿಗೆ ಈ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಖಚಿತ ಮಾಹಿತಿ ಪಡೆಯಲು ಟ್ವಿಟರ್‌ ಬಳಕೆದಾರರು ಏನು ಮಾಡಬೇಕು ಎಂದು ವಿವರವಾಗಿ ಹೇಳಿದೆ.
ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲರೂ ದೂರದೂರವೇ ಇದ್ದರೂ, ಮಾನಸಿಕವಾಗಿ ಒಟ್ಟಿಗಿರುವುದಕ್ಕಾಗಿ, ಟ್ವಿಟ್ಟರ್‌ನಲ್ಲಿ ವಿಶ್ವಸನೀಯ ಮಾಹಿತಿಯನ್ನು ಪಡೆಯಲು ಕೆಲವು ಸಲಹೆಗಳನ್ನು ನೀಡಿದೆ.  #ThinkBefore YouShare #FlattenTheCurve ಎಂಬ ಹ್ಯಾಶ್‌
ಟ್ಯಾಗನ್ನು ಇದಕ್ಕಾಗಿ ನೀಡಿದೆ.

ವಿಶ್ವಸನೀಯ ಮೂಲಗಳನ್ನೇ ಅನುಸರಿಸಿ, ಮತ್ತು ವಿಶ್ವಸನೀಯ ಮೂಲಗಳಿಂದ ಕೊರೊನಾ ಮಾಹಿತಿ ಪಡೆಯಿರಿ. COVID&19 search promptAನ್ನೇ ಉಪಯೋಗಿಸಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಃ@MoHFW), @WHO @PMO ದಂತಹ ಅಧಿಕೃತ ಖಾತೆಗಳಿಗೆ ಸೂಚನೆಗಳನ್ನು (ನೋಟಿಫಿಕೇಶನ್‌) ಆನ್‌ ಮಾಡಿ.

ಪರಿಶೀಲಿತ ಮೂಲಗಳಿಂದ ಕೋವಿಡ್‌-19 ಕುರಿತಾದ ಇತ್ತೀಚಿನ ವಾಸ್ತವಾಂಶಗಳಿಗಾಗಿ dedicated bilingual events page ನೋಡಿ. ಭಾರತೀಯರು ತಮ್ಮ ದೇಶದ ಕಾಲಮಾನದ ಮೇಲ್ಭಾಗದಲ್ಲಿ ಈ ಪುಟವನ್ನು ನೋಡಬಹುದು. ಈ ಕಾಲಮಾನವು ಇತ್ತೀಚಿನ ಸಾಮಾಜಿಕ ಅಂತರ ಮತ್ತು ಆರೋಗ್ಯ ಶುಶ್ರೂಷಾ ಮಾಹಿತಿಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಲು ಜನರಿಗೆ ನೆರವಾಗುತ್ತದೆ.

ದೊಡ್ಡ ಸಂವಾದಗಳ ಗುಂಪನ್ನು ಸೇರಿಕೊಳ್ಳಲು, ನಿಮ್ಮ ಟ್ವೀಟ್‌ಗಳಲ್ಲಿ ಅದಕ್ಕೆ ಸಂಬಂಧಪಟ್ಟ ಹ್ಯಾಶ್‌ ಟ್ಯಾಗ್‌ ಉಪಯೋಗಿಸಿ. ಉದಾಹರಣೆಗೆ, ವೈರಾಣುವನ್ನು ನಿಗ್ರಹಿಸಲು ಭಾರತದ ಪ್ರಯತ್ನಗಳು ಮತ್ತು ಕಾರ್ಯಾಚರಣೆಗಳ ಕುರಿತಾದ ಟ್ವೀಟ್‌ಗಳನ್ನು ಅನುಸರಿಸಲು #IndiaFightsCorona ಸೂಕ್ತವಾದ ಹ್ಯಾಶ್‌ ಟ್ಯಾಗ್‌ ಆಗಿದೆ.

ಜವಾಬ್ದಾರಿಯಿಂದ ಟ್ವೀಟ್‌ ಮತ್ತು ಮರುಟ್ವೀಟ್‌ ಮಾಡಿ. ನಿಮ್ಮ ಮಾಹಿತಿಯ ಮೂಲವು ವಿಶ್ವಸನೀಯ ಎಂಬುದನ್ನು
ಖಾತರಿಪಡಿಸಿಕೊಳ್ಳಿ. ಯಾವುದೇ ಸಂದೇಶ ಆಗಿರಲಿ, ಅದು ಅಧಿಕೃತ ಮೂಲದಿಂದ ಬಂದಿರಬೇಕು. ಇಲ್ಲವೇ ಪರಿಶೀಲನೆಗೆ
ಒಳಪಟ್ಟಿರಬೇಕು. ಆಗಮಾತ್ರ ಆ ಸಂದೇಶವನ್ನು ಫಾರ್ವರ್ಡ್‌ ಮಾಡಿ ಅಥವಾ ಶೇರ್‌ ಮಾಡಿ. ಅನಧಿಕೃತ ಮೂಲದ ಸಂದೇಶಗಳು ಅಥವಾ ಸ್ಕ್ರೀನ್‌ ಶಾಟ್‌ ಗಳನ್ನು ಹಂಚಿಕೊಳ್ಳಲು ಹೋಗಬೇಡಿ. ಅಥವಾ ಇನ್ನೊಬ್ಬರಿಗೆ ಕಳಿಸಬೇಡಿ. ಒಂದು ಮೆಸೇಜ್‌ನ ಕಳಿಸುವ, ಶೇರ್‌ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. .#ThinkBeforeYouShare

ಜಾಗತಿಕ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂದರ್ಭದಲ್ಲಿ, ಕೋವಿಡ್‌-19 ಸುತ್ತಲಿರುವ ಇತ್ತೀಚಿನ ಮಾಹಿತಿ ಮತ್ತು ಸುದ್ದಿಗಳನ್ನು
ತಿಳಿದುಕೊಂಡಿರಲು ವಿಶ್ವಸನೀಯ ಪತ್ರಿಕೆಗಳ ಖಾತೆಗಳನ್ನು ಅನುಸರಿಸಿ.

ಒಂದು ಟ್ವೀಟ್‌ ಕೋವಿಡ್‌ -19 ಕುರಿತು ಗಾಳಿಸುದ್ದಿ ಹರಡುತ್ತಿದೆ ಅಥವಾ ಮೂಢನಂಬಿಕೆ ಬೆಳೆಸುತ್ತಿದೆ ಎಂದು ನಿಮಗನಿಸಿದರೆ, ಅಥವಾ ಟ್ವಿಟರ್‌ ನಿಯಮ ಗಳನ್ನು ಉಲ್ಲಂ ಸುತ್ತಿದೆ ಎನಿಸಿದರೆ ದಯ ವಿಟ್ಟು ಅದನ್ನು ವರದಿ ಮಾಡಿ. ಟ್ವಿಟ್ಟರ್‌ ಉದ್ಯೋಗಿಗಳು ಅಥವಾ ಟ್ವಿಟ್ಟರ್‌ ಸಂಸ್ಥೆಯ ಖಾತೆಗಳಿಗೆ ಟ್ಯಾಗ್‌ ಮಾಡಿ. ಒಂದು ಟ್ವೀಟ್ ಅನ್ನು ವರದಿ ಮಾಡಲು, ಟ್ವೀಟ್‌ನ ಮೇಲ್ಭಾಗದಲ್ಲಿರುವ ಡ್ರಾಪ್‌ಡೌನ್‌ ಮೆನು
ಮೇಲೆ ಕ್ಲಿಕ್‌ ಮಾಡಿ. https://tinyurl.com/v5oyg5c

ಇಚ್ಛೆಯಿಲ್ಲದ ಖಾತೆಗಳನ್ನು ಅನುಸರಿಸಬೇಡಿ. ಅಂಥ ಖಾತೆಗಳು ನಿಮ್ಮನ್ನು ಅನುಸರಿಸುವುದನ್ನು ಬ್ಲಾಕ್‌ ಮಾಡಿ. ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಮಾತುಕತೆ ನಡೆಸಿ. ನಿಮ್ಮ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ.

ನಿಮ್ಮ ಆಸಕ್ತಿಯನ್ನು ಗಮನಿಸಿ. ನೀವು ಅನುಸರಿಸಲು ಬಯಸುವ ಖಾತೆಗಳ ಪಟ್ಟಿ ಮಾಡಿ. ಪಟ್ಟಿಯ ಸಮಯಸೂಚಿ ನೋಡುವುದರಿಂದ, ನೀವು ಕೇವಲ ಆ ಪಟ್ಟಿಯಲ್ಲಿರುವ ಖಾತೆಗಳಿಗೆ ಮಾತ್ರ ಟ್ವೀಟ್‌ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಸಮಯಸೂಚಿಗೆ ಪಟ್ಟಿಯನ್ನು ಪಿನ್‌
ಮಾಡುವುದರಿಂದ ನಿಮ್ಮ ಸರಿಸಮಾನ ಆಸಕ್ತರು ಅದನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ: https://tinyurl.com/yapws7b6

ನೇರ ಸಂದೇಶಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ ನೋಟಿಫಿಕೇಶನ್‌ಗಳನ್ನು ಫಿಲ್ಟರ್‌ ಮಾಡಬಹುದು. ಇವುಗಳು ಹಾಗು ಇತರ ಸುರಕ್ಷತಾ ಅಂಶಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ: https://tinyurl.com/so6rpuz

ಗೌರಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.