ಹಳೆಯದಾಯ್ತು 4G, ಬರಲಿದೆ 5G!

ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ!

Team Udayavani, Nov 25, 2019, 5:30 AM IST

5g

ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ಆಗತೊಡಗಿದೆ. ಮೊಬೈಲ್‌, ಈ ದಿನಗಳ ಅನಿವಾರ್ಯ, ಅಗತ್ಯ ವಸ್ತು ಆಗಿರುವುದರಿಂದ ಆ ಕ್ಷೇತ್ರದ ಚಿಕ್ಕ ಬದಲಾವಣೆಗಳೂ ಸುದ್ದಿಯಾಗುತ್ತದೆ. ಈಗ ನಾವೆಲ್ಲ ಬಳಸುತ್ತಿರುವುದು 4G ತಂತ್ರಜ್ಞಾನ. ಇದೀಗ 5G ತಂತ್ರಜ್ಞಾನ ನಮ್ಮ ನಡುವೆ ಸದ್ದು ಮಾಡುತ್ತಿದೆ. ಹಾಗೊಂದು ವೇಳೆ 5G ತಂತ್ರಜ್ಞಾನ ಬಂದಿದ್ದೇ ಆದಲ್ಲಿ ಕೇವಲ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವೇ ಅಲ್ಲ ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಏನಿದು 5G ತಂತ್ರಜ್ಞಾನ? ಅದರ ಉಪಯೋಗಗಳೇನು ಎಂಬುದರ ಮಾಹಿತಿಯನ್ನು ಲೇಖಕರು ಇಲ್ಲಿ ನೀಡಿದ್ದಾರೆ.

ದಿನಕ್ಕೊಂದರಂತೆ, ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ, ಹೊಸ ಬೆಳವಣಿಗೆಗಳಾಗುವ ಕ್ಷೇತ್ರಗಳ ಪೈಕಿ ಮೊಬೈಲ್‌ ತಂತ್ರಜ್ಞಾನಕ್ಕೆ ಪ್ರಮುಖ ಸ್ಥಾನ. ಇಷ್ಟೆಲ್ಲ ಬದಲಾವಣೆಗಳ ಪೈಕಿ ಕೆಲವಂತೂ ಜಾಗತಿಕ ಮಟ್ಟದಲ್ಲೇ ಸುದ್ದಿ ಮಾಡುತ್ತವೆ. ಸದ್ಯ ಸುದ್ದಿಯಲ್ಲಿರುವುದು 5G ತಂತ್ರಜ್ಞಾನ

5G ಅಂದರೆ ಏನು?
ಮೊಬೈಲ್‌ ತಂತ್ರಜ್ಞಾನ ಪರಿಚಯವಾದಾಗಿನಿಂದ ಇಂದಿನವರೆಗೂ ಆಗಿರುವ ಬದಲಾವಣೆಗಳನ್ನು ಹಲವು ತಲೆಮಾರುಗಳನ್ನಾಗಿ (“ಜನರೇಶನ್‌’) ವಿಂಗಡಿಸಲಾಗಿದೆ. 2G, 3G, 4G ಇತ್ಯಾದಿ ಹೆಸರುಗಳಲ್ಲಿ ಕಾಣಸಿಗುವ “ಜಿ’ ಅಕ್ಷರ ಪ್ರತಿನಿಧಿಸುವುದು ಇದನ್ನೇ.

ಮೊದಮೊದಲು ರೂಪುಗೊಂಡ ಮೊಬೈಲ್‌ ಫೋನುಗಳು ಅನಲಾಗ್‌ ತಂತ್ರಜ್ಞಾನವನ್ನು ಬಳಸುತ್ತಿದ್ದವು. ದೂರವಾಣಿ ಕರೆಗಳನ್ನು ಮಾಡಲಷ್ಟೆ ನೆರವಾಗುತ್ತಿದ್ದ ಆ ತಂತ್ರಜ್ಞಾನವನ್ನು ಮೊಬೈಲ್‌ ದೂರವಾಣಿಯ ಮೊದಲ ತಲೆಮಾರು (1G) ಎಂದು ಕರೆಯುತ್ತಾರೆ. ಆನಂತರ ಬಂದ 2ಎ ತಂತ್ರಜ್ಞಾನ, ಮೊಬೈಲ್‌ ಬಳಸಿ ದೂರವಾಣಿ ಕರೆ ಮಾಡುವುದರ (ವಾಯ್ಸ…) ಜೊತೆಗೆ ದತ್ತಾಂಶದ (ಈಚಠಿಚ) ವರ್ಗಾವಣೆಯನ್ನೂ ಸಾಧ್ಯವಾಗಿಸಿತು. ಮೂರನೆಯ ತಲೆಮಾರಿನ ತಂತ್ರಜ್ಞಾನ (3G) ಬಂದಾಗಲಂತೂ ಹಿಂದೆಂದಿಗಿಂತ ಹೆಚ್ಚು ಪ್ರಮಾಣದ ದತ್ತಾಂಶವನ್ನು, ಹಿಂದೆಂದಿಗಿಂತ ಹೆಚ್ಚು ವೇಗದಲ್ಲಿ ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾಯಿತು. ಇನ್ನು ನಮಗೆ VoLTEಯ ಪರಿಚಯ ಆಗಿದ್ದು 4G ತಂತ್ರಜ್ಞಾನದ ಜೊತೆಗೆ. ಅಂತರಜಾಲ ಸಂಪರ್ಕದ ವೇಗವನ್ನು ಇನ್ನಷ್ಟು ಹೆಚ್ಚಿಸಿದ್ದಲ್ಲದೆ, ಧ್ವನಿರೂಪದ ಕರೆಗಳು ಹಾಗೂ ಅಂತರಜಾಲ ಸಂಪರ್ಕ ಬಳಸುವ ಸೇವೆಗಳನ್ನು ಒಟ್ಟಿಗೆಯೇ ನಿರ್ವಹಿಸುವ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು ಈ ತಂತ್ರಜ್ಞಾನ.

ಇದಕ್ಕೂ ಮುಂದಿನ ಹಂತವೇ 5G. ಸದ್ಯ ಭಾರೀ ಎನ್ನಿಸುತ್ತಿರುವ, ಹಲವು ಎಂ.ಬಿ.ಪಿ.ಎಸ್‌.ಗಳಲ್ಲಿರುವ ಮೊಬೈಲ್‌ ಅಂತರಜಾಲ ಸಂಪರ್ಕದ ವೇಗವನ್ನು ಈ ತಂತ್ರಜ್ಞಾನ ಹಲವಾರು ಪಟ್ಟು ಹೆಚ್ಚಿಸಿ ಜಿ.ಬಿ.ಪಿ.ಎಸ್‌ (ಗಿಗಾಬಿಟ್ಸ್‌ ಪರ್‌ ಸೆಕೆಂಡ್‌) ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ತಜ್ಞರು ಹೇಳುತ್ತಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಡ್‌ ತಂತ್ರಜ್ಞಾನ ತಂದಂಥದ್ದೇ ಕ್ರಾಂತಿಕಾರಕ ಬದಲಾವಣೆಯನ್ನು ಮೊಬೈಲ್‌ ಜಗತ್ತಿನಲ್ಲಿ 5G ತಂತ್ರಜ್ಞಾನ ತರಲಿದೆ ಎನ್ನುವುದು ಅವರ ನಿರೀಕ್ಷೆ.

ಇದರ ವೈಶಿಷ್ಟ್ಯ ಏನು?
ಅಂತರಜಾಲ ಸಂಪರ್ಕದ ವೇಗ ಎಂ.ಬಿ.ಪಿ.ಎಸ್‌ ಮಟ್ಟದಿಂದ ಜಿ.ಬಿ.ಪಿ.ಎಸ್‌ ಮಟ್ಟಕ್ಕೆ ತಲುಪಿದರೆ ಎಚ್‌.ಡಿ ಚಲನಚಿತ್ರದಂತಹ ಭಾರೀ ಕಡತಗಳನ್ನೂ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. 3G ವೇಗದಲ್ಲಿ 26 ಗಂಟೆ ಹಾಗೂ 4G ವೇಗದಲ್ಲಿ 6 ನಿಮಿಷ ಬೇಕಾಗುವ ಡೌನ್‌ಲೋಡ್‌ಗೆ, 5G ಸಂಪರ್ಕದಲ್ಲಿ ಕೇವಲ 3.6 ಸೆಕೆಂಡುಗಳು ಸಾಕಾಗುತ್ತವಂತೆ!

ಇಷ್ಟೆಲ್ಲ ಹೆಚ್ಚಿನ ವೇಗದ ಸಂಪರ್ಕದ ಮೂಲಕ ಛಾಯಾವಾಸ್ತವ (ವರ್ಚುವಲ್‌ ರಿಯಾಲಿಟಿ- ವಿಆರ್‌) ಹಾಗೂ ಅತಿರಿಕ್ತ ವಾಸ್ತವದಂತಹ (ಆಗೆ¾ಂಟೆಡ್‌ ರಿಯಾಲಿಟಿ- ಎಆರ್‌) ತಂತ್ರಜ್ಞಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬಹುದು. ನಮ್ಮ ಕಣ್ಣೆದುರಿಗೆ ಮಾಯಾಲೋಕವನ್ನೇ ತೆರೆದಿಡಬಹುದು. ಅಷ್ಟೇ ಅಲ್ಲ, ವಾಹನಗಳ ಚಾಲನೆಯನ್ನೂ, ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟ ಪ್ರಕ್ರಿಯೆಗಳನ್ನೂ ಅಂತರಜಾಲದ ಮೂಲಕವೇ ನಿರ್ವಹಿಸುವುದನ್ನು ಕೂಡ ಇದು ಪ್ರಾಯೋಗಿಕವಾಗಿ ಸಾಧ್ಯವಾಗಿಸಲಿದೆ.

ಹಾಗೆಂದು 5ಎಯ ವೈಶಿಷ್ಟ್ಯ ಹೆಚ್ಚಿನ ವೇಗ ಮಾತ್ರವೇ ಅಲ್ಲ. ಅತಿವೇಗದ ಸಂಪರ್ಕ ಒದಗಿಸುವ ಜೊತೆಗೆ ಆ ಸಂಪರ್ಕ ಅಡಚಣೆಗಳಿಲ್ಲದೆ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆಯೂ ಈ ತಂತ್ರಜ್ಞಾನ ನೋಡಿಕೊಳ್ಳಲಿದೆ. ಹೆಚ್ಚಿನ ಜನಸಂದಣಿಯಿರುವ ಜಾಗಗಳಲ್ಲಿ – ಚಲಿಸುವ ವಾಹನಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಸಂಪರ್ಕ ಪಡೆದುಕೊಳ್ಳುವುದು ಇದರಿಂದಾಗಿ ಸಾಧ್ಯವಾಗಲಿದೆ. ಅಂತರಜಾಲ ಸಂಪರ್ಕ ಎಂದ ಮೇಲೆ, ಎರಡು ಕಡೆಗಳ ನಡುವೆ ಸಂವಹನ ನಡೆಯಬೇಕಲ್ಲ, ಆ ಸಂವಹನದಲ್ಲಿ ಹೆಚ್ಚಿನ ವಿಳಂಬ (ಲೇಟೆನ್ಸಿ) ಇಲ್ಲದಂತೆಯೂ ಈ ತಂತ್ರಜ್ಞಾನ ನಿಗಾವಹಿಸಲಿದೆ. ವಿಳಂಬ ರಹಿತ ಸಂಪರ್ಕಗಳ ಮೂಲಕ ಅಂತರಜಾಲದ ಬಳಕೆ ಇನ್ನಷ್ಟು ಸುಲಭ ಹಾಗೂ ಸರಾಗವಾಗಲಿದೆ!

ಐಓಟಿ ಪರಿಕಲ್ಪನೆಗೆ ಅದ್ಭುತ ಕೊಡುಗೆ
ನಿತ್ಯದ ಬಳಕೆಯ ವಸ್ತುಗಳನ್ನೂ ಅಂತರಜಾಲದ ವ್ಯಾಪ್ತಿಗೆ ತಂದು ಅವುಗಳೊಡನೆ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಪರಿಕಲ್ಪನೆಯೇ ಇಂಟರ್ನೆಟ್‌ ಆಫ್ ಥಿಂಗÕ… (ಐಓಟಿ) ಅಥವಾ ವಸ್ತುಗಳ ಅಂತರಜಾಲ. ನಮ್ಮ ಪರಿಚಯದ ಅಂತರಜಾಲದಲ್ಲಿ ಹೇಗೆ ಲ್ಯಾಪ್‌ಟಾಪ್‌- ಡೆಸ್ಕ್ಟಾಪುಗಳು, ಸರ್ವರುಗಳು, ಮೊಬೈಲ್‌- ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂಪರ್ಕ ಪಡೆದುಕೊಂಡಿವೆಯೋ ಹಾಗೆಯೇ, ವಸ್ತುಗಳ ಈ ಅಂತರಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಸಾಧನ ಜಾಲದ ಸಂಪರ್ಕ ಪಡೆದುಕೊಳ್ಳಬಲ್ಲದು.

ವಸ್ತುಗಳ ಅಂತರಜಾಲದ ಪರಿಕಲ್ಪನೆ ಬೆಳೆದಂತೆ ಅಡುಗೆಮನೆಯ ಫ್ರಿಜ್‌ನಿಂದ ಆರಂಭಿಸಿ, ಕಾರ್ಖಾನೆಯ ಯಂತ್ರದವರೆಗೆ ಅಸಂಖ್ಯ ಸಣ್ಣ- ದೊಡ್ಡ ಸಾಧನಗಳು ಅಂತರಜಾಲದ ಸಂಪರ್ಕಕ್ಕೆ ಬರುವುದು ಸಾಧ್ಯವಾಗುತ್ತಿದೆ. ಇವಕ್ಕೆಲ್ಲ ಬೇಕಾಗುವ ಅಗಾಧ ಸಾಮರ್ಥ್ಯದ ಸಂಪರ್ಕ ಕೂಡ 5G ತಂತ್ರಜ್ಞಾನದಿಂದಾಗಿ ಲಭ್ಯವಾಗಲಿದೆ. ಭಾರೀ ಸಂಖ್ಯೆಯ ಯಂತ್ರಗಳನ್ನು ಏಕಕಾಲದಲ್ಲಿ ನಿಯಂತ್ರಿಸುವುದು, ಅವು ರವಾನಿಸುವ ದತ್ತಾಂಶವನ್ನು ಸಂಗ್ರಹಿಸಿ ಸಂಸ್ಕರಿಸುವುದು, ರಸ್ತೆಯಲ್ಲಿರುವ ವಾಹನಗಳು ಪರಸ್ಪರ ಮಾತನಾಡಿಕೊಳ್ಳುವುದು, ಬೃಹತ್‌ ಕಾರ್ಖಾನೆಗಳ ಕ್ಷಣಕ್ಷಣದ ಸ್ಥಿತಿಗತಿಯನ್ನು ಆಯಾ ಕ್ಷಣದಲ್ಲೇ ತಿಳಿದುಕೊಳ್ಳುವುದು – ಇಂಥದ್ದೆಲ್ಲ 5ಜಿ ತಂತ್ರಜ್ಞಾನದಿಂದಾಗಿ ಸಾಧ್ಯವಾಗುವ ನಿರೀಕ್ಷೆಯಿದೆ.

5G ಬರುವುದು ಯಾವಾಗ?
ಮೊಬೈಲ್‌ ಹಾಗೂ ಅಂತರಜಾಲ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದಲ್ಲಿ 5ಎ ಸಂಪರ್ಕಗಳನ್ನು ಈಗಾಗಲೇ ನೀಡಲಾಗುತ್ತಿದೆ. ಇದೇ ಸಾಲಿನಲ್ಲಿರುವ ಎಸ್ಟೋನಿಯಾ, ಜಪಾನ್‌ ಮುಂತಾದ ದೇಶಗಳಲ್ಲೂ ಈ ತಂತ್ರಜ್ಞಾನದ ಪರೀಕ್ಷೆ ನಡೆದಿದೆ. ಅಮೆರಿಕಾ, ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳು ಮುಂದಿನ ವರ್ಷದ (2020) ವೇಳೆಗೆ 5G ತಂತ್ರಜ್ಞಾನ ಅಳವಡಿಸಿಕೊಳ್ಳುವ ಯೋಜನೆಗಳನ್ನು ಪ್ರಕಟಿಸಿವೆ.

5G ಅನುಷ್ಠಾನದ ಹಾದಿಯಲ್ಲಿ ನಮ್ಮ ದೇಶವೂ ಹಿಂದುಳಿದಿಲ್ಲ. ಕೇಂದ್ರ ಸರಕಾರ ಇದಕ್ಕೆ ಬೇಕಾದ ತಾಂತ್ರಿಕ ಹಾಗೂ ಆಡಳಿತಾತ್ಮಕ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದು, 5ಎ ತರಂಗ ಗುತ್ಛದ (ಸ್ಪೆಕ್ಟ್ರಮ…) ಹಂಚಿಕೆ ಕೂಡ ಇಷ್ಟರಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಮೊಬೈಲ್‌ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ಸೆಲ್ಯುಲರ್‌ ಆಪರೇಟರ್ ಅಸೋಸಿಯೇಶನ್‌ ಆಫ್ ಇಂಡಿಯಾ ಅಡಿಯಲ್ಲಿ “5G ಇಂಡಿಯಾ ಫೋರಮ…’ ಎಂಬ ವೇದಿಕೆ ರೂಪಿಸಿಕೊಂಡು ತಮ್ಮ ಕಡೆಯಿಂದಲೂ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಸಂದರ್ಭದಲ್ಲಿ 5G ಸಂಪರ್ಕದ ಸಾರ್ವಜನಿಕ ಪ್ರಾತ್ಯಕ್ಷಿಕೆಯನ್ನು ಕೂಡ ಏರ್ಪಡಿಸಲಾಗಿತ್ತು.

ಈಗಿನ ಫೋನಿನಲ್ಲೇ 5ಎ ಬಳಸಬಹುದೇ?
3G-4G ಸಂಪರ್ಕಗಳು ಬಂದಾಗ ಆದ ಹಾಗೆಯೇ, 5G ತಂತ್ರಜ್ಞಾನವನ್ನು ಬೆಂಬಲಿಸುವ ಮೊಬೈಲುಗಳಿಂದ ಮಾತ್ರ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವುದು ಸಾಧ್ಯವಾಗಲಿದೆ. ಅಂದರೆ, 5Gಯ ಎಲ್ಲ ಉಪಯೋಗಗಳನ್ನೂ ಪಡೆದುಕೊಳ್ಳಲು ನಾವು ಹೊಸ ಮೊಬೈಲನ್ನು ಖರೀದಿಸಬೇಕಾಗುತ್ತದೆ. 5G ಬೆಂಬಲವಿರುವ ಅನೇಕ ಮಾದರಿಯ ಫೋನುಗಳನ್ನು ಮೊಬೈಲ್‌ ನಿರ್ಮಾತೃಗಳು ಈಗಾಗಲೇ ಘೋಷಿಸಿದ್ದು ಅವುಗಳಲ್ಲಿ ಕೆಲವು ಮಾರುಕಟ್ಟೆಗೂ ಬಂದಿವೆ.

– ಟಿ. ಜಿ. ಶ್ರೀನಿಧಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.