ಒಂಬುಡ್ಸ್‌ಮನ್‌ ಕ್ರಾಂತಿಯ ಅವಕಾಶ, ಕೈಗೆಟುಕದ ಕನಸೇ?


Team Udayavani, Feb 5, 2018, 3:30 PM IST

ombudsman.jpg

ಭಾರತದಲ್ಲಿ ಪ್ರಭಾವಯುತವಾದ ಮಾಹಿತಿ ಹಕ್ಕು ಕಾಯ್ದೆ ಹಾಗೂ ಕರ್ನಾಟಕದ ಸಕಾಲ ಸೌಲಭ್ಯಕ್ಕಿಂತ ಮೊದಲೇ ಅವತರಿಸಿದ್ದು ಲೋಕಪಾಲ ಅಲಿಯಾಸ್‌ ಒಂಬುಡ್ಸ್‌ಮನ್‌ ವ್ಯವಸ್ಥೆ. ಬ್ಯಾಂಕಿಂಗ್‌, ವಿಮೆ, ವಿದ್ಯುತ್‌ ಕ್ಷೇತ್ರಗಳಲ್ಲೆಲ್ಲ 
ಒಂಬುಡ್ಸ್‌ಮನ್‌ ಗ್ರಾಹಕ ವ್ಯಾಜ್ಯ ಪರಿಹಾರ ಸೌಲಭ್ಯವಿದೆ.

ವಿದ್ಯುತ್‌ ಸೇವಾ ಕ್ಷೇತ್ರದ ಒಂಬುಡ್ಸ್‌ಮನ್‌ ವ್ಯವಸ್ಥೆಯ ಮುಖ್ಯ ರೂಪುರೇಷೆಗಳನ್ನು ಮೊದಲು ಗಮನಿಸುವ ಪ್ರಯತ್ನ ಮಾಡೋಣ. ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸಲು ರಚಿಸಲಾಗಿರುವ ವ್ಯವಸ್ಥೆಯಲ್ಲಿ ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವುದೇ ಒಂಬುಡ್ಸ್‌ಮನ್‌. ಎಸ್ಕಾಂನ ಆಂತರಿಕ ಗ್ರಾಹಕರ ವೇದಿಕೆಯ ತೀರ್ಪು ತೃಪ್ತಿ ತರದಿದ್ದಲ್ಲಿ ಗ್ರಾಹಕನು ವಿದ್ಯುತ್ಛಕ್ತಿ ಒಂಬುಡ್ಸ್‌ಮನ್‌ಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ಹೀಗೆ ಮೇಲ್ಮನವಿ ಸಲ್ಲಿಸುವ ಅವಕಾಶವು ಗ್ರಾಹಕನಿಗೆ ಮಾತ್ರ ಇರುತ್ತದೆಯೇ ಹೊರತು ಕಂಪನಿಗಲ್ಲ. 

ಹಣಕಾಸು, ಕಾನೂನು, ಆಡಳಿತ, ಇಂಧನ ಕ್ಷೇತ್ರಗಳಲ್ಲಿ ಅನುಭವವಿರುವ ಹಿರಿಯರನ್ನು ಒಂಬುಡ್ಸ್‌ಮನ್‌ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ.  ಇವರ ಅಧಿಕಾರಾವಧಿಯು ಗರಿಷ್ಟ 3 ವರ್ಷವಾಗಿರುತ್ತದೆ. ಇದನ್ನು ಎರಡು ವರ್ಷಗಳವರೆಗೆ (ಆ ವ್ಯಕ್ತಿಗೆ 65 ವರ್ಷವಾಗುವವರೆಗೆ ಮಾತ್ರ) ವಿಸ್ತರಿಸಬಹುದು. ಕರ್ನಾಟಕ ವಿದ್ಯುತ್‌ ಒಂಬುಡ್ಸ್‌ಮನ್‌ರ ಕೇಂದ್ರ ಕಚೇರಿಯು ಬೆಂಗಳೂರಿನ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ಕಚೇರಿಯಲ್ಲಿದೆ. 

ಗ್ರಾಹಕನು ಖುದ್ದಾಗಿ ಇಲ್ಲವೇ ಪ್ರತಿನಿಧಿಯ ಮೂಲಕ ವಿಚಾರಣೆಗೆ ಹಾಜರಾಗಬೇಕು. ನಿಗದಿತ ಅರ್ಜಿಯಲ್ಲಿಯೇ ಎಲ್ಲ ಅವಶ್ಯಕ ಮಾಹಿತಿಗಳನ್ನು ಗ್ರಾಹಕನು ಕಡ್ಡಾಯವಾಗಿ ನೀಡಬೇಕು. ಅರ್ಜಿಯೊಂದಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು 3 ಪ್ರತಿಗಳಲ್ಲಿ ಲಗತ್ತಿಸಿರಬೇಕು. ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯು ನೀಡಿರುವ ಆದೇಶದ ಪ್ರತಿಯನ್ನೂ ಕೊಡಬೇಕು. 

ಗಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯು ತನ್ನ ದೂರನ್ನು ತಿರಸ್ಕರಿಸಿದೆ ಅಥವಾ ನಿಗದಿತ 60 ದಿನಗಳ ಅವಧಿಯಲ್ಲಿ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದನ್ನು ಒಂಬುಡ್ಸ್‌ಮನ್‌ಗೆ ಮೇಲ್ಮನವಿಯಲ್ಲಿ ಗ್ರಾಹಕ ಕಾಣಿಸಿರಬೇಕು. ಒಂಬು
ಡ್ಸ್‌ಮನ್‌ಗೆ ಸಲ್ಲಿಸುವ ಮೇಲ್ಮನವಿಯು ವೇದಿಕೆಯ ತೀರ್ಪು ಪ್ರಕಟವಾದ ದಿನದಿಂದ 30 ದಿನಗಳನ್ನು ಮೀರಿರಕೂಡದು. ಒಂಬುಡ್ಸ್‌ಮನ್‌ರಲ್ಲಿ ದಾಖಲಿಸುವ ಪ್ರಕರಣವನ್ನು ಬೇರೆ ನ್ಯಾಯಾಲಯಗಳಿಗೆ ಕೊಂಡೊಯ್ದಿರಬಾರದು.

ಒಂದೊಮ್ಮೆ ರಾಜಿ ಸಂಧಾನ ಮೂಲಕ ದೂರು ಬಗೆಹರಿದಲ್ಲಿ ಒಂಬುಡ್ಸ್‌ಮನ್‌ ಎರಡೂ ಪಕ್ಷದವರ ಹಾಜರಾತಿಯಲ್ಲಿ ಒಪ್ಪಂದವನ್ನು ಜಾರಿಗೊಳಿಸುವ ಆದೇಶವನ್ನು ಬರೆದು, ದಾಖಲಿಸಿಕೊಂಡು ಅದಕ್ಕೆ ಇಬ್ಬರ ಸಹಿಯನ್ನೂ ಪಡೆದುಕೊಳ್ಳುವರು. ಒಂದೊಮ್ಮೆ ಒಪ್ಪಂದ ಏರ್ಪಡದಿದ್ದಲ್ಲಿ ಗ್ರಾಹಕ ಮತ್ತು ವಿದ್ಯುತ್‌ ಕಂಪನಿ ಇಬ್ಬರಿಗೂ ತಮ್ಮ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶವನ್ನು ಒದಗಿಸಬೇಕು. ವಿಚಾರಣೆಗೆ  ಗೊತ್ತುಪಡಿಸಿದ ದಿನಾಂಕ, ಸಮಯ, ಸ್ಥಳಗಳನ್ನು ಮುಂಚಿತವಾಗಿ ತಿಳಿಸಬೇಕಾದ್ದು ಕಡ್ಡಾಯ. ವಿಚಾರಣೆಯನ್ನು ತ್ವರಿತವಾಗಿ ಮತ್ತು ದೂರನ್ನು ಸಮರ್ಥವಾಗಿ ಇತ್ಯರ್ಥಪಡಿಸಲು ಅನುವಾಗುವ ಯಾವುದೇ ಸ್ಥಳದಲ್ಲಿಯೂ ವಿಚಾರಣೆಯನ್ನು ಒಂಬುಡ್ಸ್‌ಮನ್‌ ಏರ್ಪಡಿಸಬಹುದು.

ವಿಚಾರಣೆಗೆ ಗ್ರಾಹಕ ಖುದ್ದಾಗಿ ಹಾಜರಾಗಬಹುದು ಇಲ್ಲವೇ ತನ್ನ ಪ್ರತಿನಿಧಿಯಾಗಿ ಒಬ್ಬರನ್ನು ಕಳುಹಿಸಬಹುದು. ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರಲ್ಲಿ ಯಾರೇ ಒಬ್ಬರು ವಿಚಾರಣೆಗೆ ಹಾಜರಾಗದಿದ್ದಲ್ಲಿ ಒಂಬುಡ್ಸ್‌ಮನ್‌ ಏಕಪಕ್ಷೀಯ ನಿರ್ಣಯವನ್ನು ಪ್ರಕಟಿಸುವರು. ತೃಪ್ತಿಕರ ಕಾರಣಗಳನ್ನು ಲಿಖೀತವಾಗಿ ಒದಗಿಸಿದಲ್ಲಿ ಒಂಬುಡ್ಸ್‌ಮನ್‌ ವಿಚಾರಣೆಯ ದಿನಾಂಕವನ್ನು ಮುಂದೂಡಬಹುದು. ಎರಡೂ ಪಕ್ಷಗಳವರ ಹೇಳಿಕೆಗಳನ್ನು ಆಲಿಸಿದ ನಂತರದಲ್ಲಿ ಅದರ ಆಧಾರದಲ್ಲಿ ಮತ್ತು ಲಭ್ಯ ಮಾಹಿತಿಯನ್ನು ಅವಲಂಬಿಸಿ ತಮ್ಮ ತೀರ್ಮಾನವನ್ನು ಪ್ರಕಟಿಸುವರು. ಈ ಆದೇಶಕ್ಕೆ ವಿದ್ಯುತ್‌ ಕಂಪನಿ ಬದ್ಧವಾಗಿರಲೇಬೇಕು. ಒಂಬುಡ್ಸ್‌ಮನ್‌ ಎರಡು ತಿಂಗಳ ಒಳಗಾಗಿ ತನ್ನ ನಿರ್ಣಯವನ್ನು ಪ್ರಕಟಿಸಬೇಕು. ಮಧ್ಯಂತರ ಆದೇಶ ನೀಡಲು ಕೂಡ ಒಂಬುಡ್ಸ್‌ಮನ್‌ಗೆ ಅಧಿಕಾರವಿದೆ. ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ವೆಬ್‌ ಪುಟ [http://www.karnataka.gov.in/kerc]ದಲ್ಲಿ ಇಣುಕಿದರೆ ಒಂಬುಡ್ಸ್‌ಮನ್‌ ವಿಳಾಸ, ಅದರ 2007ರಿಂದ ಈವರೆಗಿನ ತೀರ್ಪುಗಳು ಇತರ ಮಾಹಿತಿಗಳನ್ನು ಕಾಣಬಹುದು. ರಾಜ್ಯದ ವಿದ್ಯುತ್‌ ಒಂಬುಡ್ಸ್‌ಮನ್‌ ಬಿ.ಎನ್‌.ಕೃಷ್ಣಯ್ಯ, ನಂ. 9/2, 6ನೇ ಮಹಡಿ, ಮಹಾಲಕ್ಷಿ$¾ ಛೇಂಬರ್, ಎಂ.ಜಿ.ರಸ್ತೆ, ಬೆಂಗಳೂರು 560001  E-mail : [email protected]  Phone : 080 41692617 / 9449425533

ಇದೇ ರೀತಿ ಬ್ಯಾಂಕಿಂಗ್‌ ಲೋಕಪಾಲವೂ ಇದೆ. 1995ರಿಂದಲೇ ಜಾರಿಗೆ ಬಂದ ಈ ವ್ಯವಸ್ಥೆ 2002ರಲ್ಲಿ ಕೆಲ ತಿದ್ದುಪಡಿಗಳನ್ನು ಕಂಡಿದೆ. ಬಹುತೇಕ ವಿದ್ಯುತ್‌ ಲೋಕಪಾಲದ ನೀತಿನಿಯಮಗಳೇ ಇಲ್ಲಿ ಜಾರಿಯಲ್ಲಿವೆ. 2002ರಿಂದ 2006ರ ವೇಳೆಗೇ 36 ಸಾವಿರ ದೂರುಗಳನ್ನು ದಾಖಲಿಸಲಾಗಿತ್ತು. ಬಹುತೇಕ ರಾಜ್ಯಗಳ ರಾಜಧಾನಿಗಳಲ್ಲಿ ಒಬ್ಬ ಒಂಬುಡ್ಸ್‌ಮನ್‌ರನ್ನು ರಿಸರ್ವ್‌ ಬ್ಯಾಂಕ್‌ ನೇಮಕ ಮಾಡಿದ್ದು, ಈಗ 15 ಒಂಬುಡ್ಸ್‌ಮನ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ಕಮರ್ಷಿಯಲ್‌ ಬ್ಯಾಂಕ್‌, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಶೆಡ್ನೂಲ್ಡ್‌ ಪ್ರಾಥಮಿಕ ಕೋ ಅಪರೇಟಿವ್‌ ಬ್ಯಾಂಕ್‌ ಈ ಲೋಕಪಾಲದ ಅಡಿ ಬರುತ್ತವೆ. ಬ್ಯಾಂಕಿಂಗ್‌ ಲೋಕಪಾಲದ ಪರಿಪೂರ್ಣ ಮಾಹಿತಿ ಈ ವೆಬ್‌ ಲಿಂಕ್‌ನಲ್ಲಿ ಲಭ್ಯ…. https://www.rbi.org.in/Scripts/bs_viewcontent.aspx?Id=159 ದೂರು ಸಲ್ಲಿಸುವ ಅರ್ಜಿ ವಿಧಾನ, ಕರ್ನಾಟಕದ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ ವಿಳಾಸ Ms.C R Samyuktha C/o Reserve Bank of India 10/3/8, Nrupathunga Road Bengaluru -560 001 STD Code: 080 Tel. No. 22210771/22275629 Fax No. 22244047 Email : [email protected] 

ವಿಮಾ ಕ್ಷೇತ್ರದಲ್ಲಿಯೂ ಲೋಕಪಾಲದ ವ್ಯವಸ್ಥೆಯಿದೆ. ಐಆರ್‌ಡಿಎ ವೆೆಬ್‌ ತಾಣದಲ್ಲಿ ಇಣುಕಿದರೆ ಈ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಲಭ್ಯ. ವೆಬ್‌ ಲಿಂಕ್‌…https://www.irdai.gov.in ಬೆಂಗಳೂರಿನ ವಿಮಾ ಲೋಕಪಾಲದ ವಿಳಾಸ ಇಂತಿದೆ, Office of the Insurance Ombudsman, Jeevan Soudha Building,PID No. 57-27-N-19, Ground Floor, 19/19, 24th Main Road, JP Nagar, Ist Phase, Bengaluru – 560 078. Tel.: 080 – 26652048 / 26652049 Email: [email protected]

ವಾಸ್ತವವಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಟ್ರಾಯ್‌ ಕೂಡ ಸತತವಾಗಿ ಕೇಂದ್ರ ಸರ್ಕಾರದ ಮೇಲೆ ಟೆಲಿಕಾಂ ಒಂಬುಡ್ಸ್‌ಮನ್‌ ಜಾರಿಗೆ ತರುವಂತೆ ಒತ್ತಡ ಹೇರುತ್ತಲೇ ಬಂದಿದೆ. ಹಲವು ಬಾರಿ ಎಲ್ಲ ಆಸಕ್ತರ ಅಭಿಪ್ರಾಯವನ್ನು ಕ್ರೋಢೀಕರಿಸಿ ಅದು ಟೆಲಿಕಾಂ ಒಂಬುಡ್ಸ್‌ಮನ್‌ ಮಾದರಿಯನ್ನು ರೂಪಿಸಿ ಕೇಂದ್ರಕ್ಕೆ ಒಪ್ಪಿಸಿದೆ. ಮೊಬೈಲ್‌ ಸೇವೆ ಕೊಡುತ್ತಿರುವ ದೈತ್ಯ ಕಂಪನಿಗಳಿಗೆ ಇದು ಯಾವತ್ತೂ ನುಂಗಲಾರದ ತುತ್ತು. ಇದೇ ಕಾರಣಕ್ಕಾಗಿಯೇ ಅವುಗಳ ಲಾಬಿ ಯಶಸ್ವಿಯಾಗಿ ನಡೆದಿದ್ದು, ಈ ತಾರೀಖೀನವರೆಗೆ ಟೆಲಿಕಾಂ ಲೋಕಪಾಲ ಜಾರಿಗೆ ಕೇಂದ್ರ ಮನಸ್ಸು ಮಾಡಿಲ್ಲ.
ಸಮಸ್ಯೆ ಇರುವುದು ಒಂಬುಡ್ಸ್‌ಮನ್‌ರ ಕಾರ್ಯ ವೈಖರಿಯಲ್ಲಿ. 

ಆರ್‌ಬಿಐ ಲೋಕಪಾಲರಾಗಿ ಅತ್ಯಂತ ಹಿರಿಯ ಅಧಿಕಾರಿಗಳನ್ನು ನೇಮಿಸುತ್ತದೆ. ಬಹುಪಾಲು ಪ್ರಕರಣಗಳಲ್ಲಿ ಗಮನಿಸಿದಂತೆ, ಲೋಕಪಾಲರು ಗ್ರಾಹಕ ಪರ ಚಿಂತನೆ ನಡೆಸುವುದಕ್ಕಿಂತ ಬ್ಯಾಂಕ್‌ಗಳ ಹಿತ ಕಾಪಾಡುವುದಕ್ಕೇ ಆದ್ಯತೆ ನೀಡುತ್ತಾರೆ. ಈ ಮಾತು ವಿದ್ಯುತ್‌ ಒಂಬುಡ್ಸ್‌ಮನ್‌ಗೂ ಅನ್ವಯ. ಒಂಬುಡ್ಸ್‌ಮನ್‌ ಕೊಡುವ ತೀರ್ಪನ್ನು ಸೇವಾದಾತರು ತಿರಸ್ಕರಿಸುವ ಅವಕಾಶವನ್ನೇ ನೀಡದಿರುವುದರಿಂದ ಲೋಕಪಾಲಕ್ಕೆ ಪ್ರಕರಣ ಹೋಯಿತು ಎಂದರೆ ಬ್ಯಾಂಕ್‌, ಎಸ್ಕಾಂ ಮತ್ತು ವಿಮಾ ಕಂಪನಿಗಳಿಗೆ ನಡುಕ ಬರಬೇಕಿತ್ತು. ಸಾಂಪ್ರದಾಯಿಕ ನ್ಯಾಯಾಲಯಗಳಲ್ಲಿರುವಂತೆ ಸಾಕ್ಷ್ಯ, ಕಾನೂನಿನ ಒಳಸುಳಿಗಳಿಗಿಂತ ಈ ದೇಶದ ಗ್ರಾಹಕನ ಹಿತ, ಸೇವಾ ಗುಣಮಟ್ಟದ ಬಗ್ಗೆ ಸೇವಾದಾತರು ಸದಾ ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳುವ ಗಮನಾರ್ಹ ತೀರ್ಪುಗಳು ಬರಲಾರಂಭಿಸಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತೇನೋ!

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.