ಒಂದ್‌ ಮಸ್ಸಾಲೇ….!


Team Udayavani, Oct 30, 2017, 11:49 AM IST

30-16.jpg

ಚಿತ್ರದುರ್ಗಕ್ಕೆ ಹೋದವರು ಚನ್ನಗಿರಿ ಹೋಟೆಲಿನ ಮಸಾಲೆದೋಸೆ ತಿನ್ನದೇ ಮರಳಲಾರರು! ಇಡೀ ಚಿತ್ರದುರ್ಗಕ್ಕೆ ಹೆಸರಾಗಿರುವ ಹೋಟೆಲ್‌ ಇದು. ಸ್ವಾರಸ್ಯವೆಂದರೆ, ಕೃಷ್ಣಭವನ ಎಂಬ ಒರಿಜಿನಲ್‌ ಹೆಸರಿಗಿಂತ ಚನ್ನಗಿರಿ ಹೋಟೆಲ್‌ ಎಂಬ ಅಡ್ಡ ಹೆಸರೇ ಜನಪ್ರಿಯವಾಗಿದೆ….

ಬಿಸಿ ಬಿಸಿ, ಗರಿಗರಿ ಮಸಾಲೆ ದೋಸೆಯ ಪರಿಮಳ  ದಾರಿ ಹೋಕರ ಮೂಗಿಗೆ ಸೋಕಿದೊಡನೆ ಬಾಯಲ್ಲಿ ನೀರೂರಿ ಹೋಟೆಲ್‌ ಕಡೆಗೆ ದಾರಿ ತೋರುತ್ತದೆ. ಆ ವೇಳೆಗೆ ಹೊಟ್ಟೆ ಚುರುಕುಗೊಂಡು ಮೆದುಳಿಗೆ ಬುದ್ದಿ ಹೇಳಿ ಬೇಗ ನಡೆ ಚನ್ನಗಿರಿ ಹೋಟೆಲ್‌ಗೆ ಎಂದು ಸೂಚನೆ ನೀಡುತ್ತದೆ. ಹೋಟೆಲ್‌ ನ ಯಾವುದೋ ಒಂದು ಕೋಣೆಯಲ್ಲಿ ದೋಸೆಯ ಘಮ ಮೂಗಿಗೆ ಬಡಿಯುತ್ತಿರುತ್ತದೆ. ಹೋಟೆಲ್‌ ಗೆ ಕಾಲಿಡುವ ಪ್ರತಿಯೊಬ್ಬರೂ ಹಿಂದೆ ಮುಂದೆ ಯೋಚಿಸದೆ ಒಂದು ಮಸಾಲೆ ದೋಸೆ ಅರ್ಡರ್‌ ಮಾಡಿ ಇಪ್ಪತ್ತು ನಿಮಿಷದ ನಂತರ ಸಂತೃಪ್ತಿಯಿಂದ ತಿಂದು ಹೊಟ್ಟೆ ಸವರಿಕೊಂಡು ಹೊರ ನಡೆಯುತ್ತಾರೆ. ಇದು ಕಳೆದ 65 ವರ್ಷಗಳಿಂದ ಇದು ನಡೆದುಕೊಂಡು ಬಂದಿರುವ ಪರಿ.

ಚಿತ್ರದುರ್ಗ ನಗರದ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣದಿಂದ ಪೂರ್ವ ದಿಕ್ಕಿಗೆ ಬಂದರೆ ದೊಡ್ಡ ಸರ್ಕಲ್‌ ಗಾಂಧಿ ವೃತ್ತ ಸಿಗಲಿದೆ. ಅಲ್ಲಿಂದ ಉತ್ತರ ದಿಕ್ಕಿಗೆ ಮದೇಹಳ್ಳಿ ರಸ್ತೆ ಮೂಲಕ ಹತ್ತಾರು ಹೆಜ್ಜೆ ಇಟ್ಟರೆ ಬಲಗಡೆ ದೊಡ್ಡ ಅರಳಿ ಮರವಿದೆ. ಆ ಮರದ ಸಮೀಪವೇ ಚನ್ನಗಿರಿ ಹೋಟೆಲ್‌ ಇದೆ. ದೋಸೆಯ ಜೊತೆಯಲ್ಲಿ ಕೊಡುವ ಕಡ್ಲೆ ಕಾಯಿ ಮತ್ತು ಉರಿಗಡಲೆ ಚಟ್ನಿ, ಪಲ್ಯ, ದೋಸೆಯಲ್ಲಿ ವಿಶೇಷ ಸ್ವಾದ ಅಡಗಿರುತ್ತದೆ. ಬಾಯಲ್ಲಿಟ್ಟ ತಕ್ಷಣ ಮಸಾಲೆ ದೋಸೆ ಮೃದುವಾದ ಬೆಣ್ಣೆಯಂತೆ ಕರಗಿ ಹೊಟ್ಟೆ ಸೇರುತ್ತದೆ. 

ಈ ಹೋಟೆಲ್‌ನಲ್ಲಿ ಸ್ವತ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ಹೋಟೆಲ್‌ ಒಳಗೆ ಕಾಲಿಡುತ್ತಿದ್ದಂತೆಯೇ ಒಳಗಡೆ ಎಲ್ಲೂ ಕಸ ಕಾಣುವುದಿಲ್ಲ. ಪ್ಲೇಟ್‌, ಲೋಟ, ಚಮಚಗಳೆಲ್ಲವೂ ಶುಭಾತಿ ಶುಭ್ರ. ದೋಸೆಯ ದರವೂ ದುಬಾರಿ ಅಲ್ಲ. ಕೇವಲ 35 ರೂ.ಗೆ ಗರಿಗರಿ ಮಸಾಲೆ ದೋಸೆ ಲಭ್ಯ. 

ೋಟೆಲ್‌ ಮುಂದಾಗಲಿ, ತಿಂಡಿ ತಿಂದಾಗ ನೀಡುವ ಬಿಲ್‌  ನಲ್ಲಾಗಲಿ ಎಲ್ಲೂ ಚನ್ನಗಿರಿ ಹೋಟೆಲ್‌ ಎಂದು ನಮೂದಾಗಿಲ್ಲ. ಆದರೂ ಚಿತ್ರದುರ್ಗದ ಜನರಿಗೆ ಚನ್ನಗಿರಿ ಹೋಟೆಲ್‌ ಎಂದರೆ ಮಾತ್ರ ತಿಳಿಯುತ್ತದೆ. ಸ್ವರಸ್ಯವೇನು ಗೊತ್ತೆ? “ಚನ್ನಗಿರಿ ಹೋಟೆಲ್‌’ ಎಂದು ಮಾಲೀಕರು ಇಟ್ಟ ಹೆಸರಲ್ಲ. ಹಳ್ಳಿಯ ಜನತೆ 65 ವರ್ಷಗಳ ಹಿಂದೆಯೇ ಪ್ರೀತಿಯಿಂದ ಇಟ್ಟ ಹೆಸರು ಇದು. ಆ ಹೆಸರಿನಿಂದಲೇ ಹೋಟೆಲನ್ನು ಈಗಲೂ ಗುರುತಿಸಲಾಗುತ್ತದೆ. 

ಹೋಟೆಲ್‌ ಮಾಲೀಕರು ಕುಂದಾಪುರದವರು. ಅಲ್ಲಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದರು. ಆಗ ಇಲ್ಲಿನವರಿಗೆ ಕುಂದಾಪುರ ಎನ್ನುವ ಹೆಸರಿನ ಉಚ್ಚಾರ ಕಷ್ಟವಾಗುತ್ತಿದ್ದರಿಂದ ಹೋಟೆಲ್‌ ಮಾಲಿಕರು ಚನ್ನಗಿರಿ ಮಾರ್ಗವಾಗಿ ಬರುತ್ತಿದ್ದುದರಿಂದ ಅದನ್ನು ಚನ್ನಗಿರಿ ಹೋಟೆಲ್‌ ಎಂದು ಕರೆದರು. ಮುಂದೆ ಆ ಹೆಸರೇ ಕಾಯಂ ಆಯಿತು. ಆ ಹೋಟೆಲ್‌ನ ಮೂಲ ಹೆಸರು ಶ್ರೀಕೃಷ್ಣ ಭವನ.

ಆನಂದರಾವ್‌ ಮುಳ್ಳೂರು ಈ ಹೋಟೆಲಿನ ಮೂಲ ಮಾಲೀಕರು. ಇವರು 1952ರಲ್ಲಿ ಚಿತ್ರದುರ್ಗಕ್ಕೆ ಆಗಮಿಸಿ 60*25 ಅಳತೆಯ ಕಟ್ಟಡ ಬಾಡಿಗೆ ಪಡೆದು ಶ್ರೀಕೃಷ್ಣ ಭವನ ಆರಂಭಿಸಿದರು. ಇವರ ನಂತರ ಇವರ ಬಂಧುಗಳಾದ ಕೃಷ್ಣಮೂರ್ತಿ ಐತಾಳ್‌ ನಿರ್ವಹಿಸಿದರು. ಇವರ ನಂತರ ಇವರ ಬಂಧು ಯು.ಪರಮೇಶ್ವರ್‌ ಅವರು ಈಗ ಈ ಹೋಟೆಲ್‌ ನೆಡೆಸುತ್ತಿದ್ದಾರೆ. ಕಳೆದ 42 ವರ್ಷಗಳಿಂದ ಇದೇ ಹೋಟೆಲ್‌ ನಲ್ಲಿ  ಕೆಲಸ ಮಾಡಿಕೊಂಡು ಪರಮೇಶ್ವರ್‌ಗೆ ಒಮ್ಮೆ ಒಂದು ದಿನ ಕೃಷ್ಣಮೂರ್ತಿ ಐತಾಳ್‌ ಅವರು ಈ ಹೋಟೆಲ್‌ ಅನ್ನುವಹಿಸಿಕೊಟ್ಟರು. ಅಲ್ಲಿಂದ ಇವರು ಈ ಹೋಟೆಲ್‌ ನಡೆಸುತ್ತಿದ್ದಾರೆ. 

ಹರಿಯಬ್ಬೆ ಹೆಂಜಾರಪ್ಪ

ಟಾಪ್ ನ್ಯೂಸ್

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.