ಒನ್‌ಪ್ಲಸ್‌ 7ಗೊಂದು ಸಂಗಾತಿ 7T


Team Udayavani, Oct 7, 2019, 5:42 AM IST

one-plus

ಒನ್‌ ಪ್ಲಸ್‌ ಮೊಬೈಲ್‌ ಕಂಪೆನಿ ಬೇಸಿಗೆ ಸಂದರ್ಭದಲ್ಲಿ ಒಂದು, ದಸರೆಯ ಸಂದರ್ಭದಲ್ಲಿ ಒಂದು ಮೊಬೈಲನ್ನು ಸಾಮಾನ್ಯವಾಗಿ ಬಿಡುಗಡೆ ಮಾಡುತ್ತದೆ. ಕಳೆದ ಬೇಸಿಗೆಯಲ್ಲಿ 7 ಮತ್ತು 7 ಪ್ರೊ ಮಾಡೆಲ್‌ಗ‌ಳನ್ನು ಹೊರತಂದಿತ್ತು. ಒನ್‌ ಪ್ಲಸ್‌ 7 ಅನ್ನು ಉನ್ನತೀಕರಣಗೊಳಿಸಿದ 7ಟಿ ಮೊಬೈಲನ್ನು ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಉನ್ನತ ದರ್ಜೆಯ (ಫ್ಲಾಗ್‌ಶಿಪ್‌) ಮೊಬೈಲ್‌ ಫೋನ್‌ಗಳು ಕೈಗೆಟುಕದ ಸನ್ನಿವೇಶದಲ್ಲಿ ಅವನ್ನು ಮಧ್ಯಮವರ್ಗದ ಜನರಿಗೂ ತಲುಪಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದು ಒನ್‌ಪ್ಲಸ್‌ ಕಂಪೆನಿ. ಇಂದು ಭಾರತದಲ್ಲಿ ಪ್ರೀಮಿಯಂ ದರ್ಜೆಯ ಫೋನ್‌ ಮಾರುಕಟ್ಟೆಯಲ್ಲಿ ಅದು ಮೊದಲ ಸ್ಥಾನದಲ್ಲಿದೆ. ಇದರ ಹೊಸ ಫೋನ್‌ಗಾಗಿ ಅಭಿಮಾನಿಗಳು ತಿಂಗಳುಗಟ್ಟಲೆ ಕಾದಿರುತ್ತಾರೆ. ಸಾಮಾನ್ಯವಾಗಿ ವರ್ಷಕ್ಕೆ ಎರಡು ಮೊಬೈಲ್‌ಗ‌ಳನ್ನು ಒನ್‌ ಪ್ಲಸ್‌ ಬಿಡುಗಡೆ ಮಾಡುತ್ತದೆ. (ಈ ವರ್ಷ ಇದಕ್ಕೆ ಅಪವಾದ, 3 ಫೋನ್‌ಗಳನ್ನು ಒಂದು ವರ್ಷದಲ್ಲಿ ಹೊರತಂದಿದೆ).

ಶಾಲಾ ಮಕ್ಕಳಿಗೆ ಬೇಸಿಗೆ ಮತ್ತು ದಸರಾ ಸೀಸನ್‌ ಇರುವಂತೆ, ಒನ್‌ಪ್ಲಸ್‌ ಕೂಡ, ಬೇಸಿಗೆಯಲ್ಲೊಂದು (ಏಪ್ರಿಲ್‌- ಮೇ), ದಸರೆಯ ಸಮಯದಲ್ಲೊಂದು (ಸೆಪ್ಟೆಂಬರ್‌- ಅಕ್ಟೋಬರ್‌) ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ! ಬೇಸಿಗೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಫೋನ್‌ಗೆ ಮತ್ತಷ್ಟು ಹೊಸ ಫೀಚರ್‌ಗಳನ್ನು ಸೇರಿಸಿ ಉನ್ನತೀಕರಣ ಮಾಡಿ ಟಿ (ಒನ್‌ ಪ್ಲಸ್‌ 5ಟಿ, 6ಟಿ )ಹೆಸರಿನಲ್ಲಿ ದಸರೆಯ ಸಂದರ್ಭದಲ್ಲಿ ಬಿಡಲಾಗುತ್ತದೆ. ಇದೀಗ ಬಿಡುಗಡೆ ಮಾಡಿರುವ ಹೊಸ ಫೋನು, ಒನ್‌ಪ್ಲಸ್‌ 7ಟಿ. ಇದು ಕಳೆದ ಬೇಸಿಗೆಯಲ್ಲಿ ಬಿಡುಗಡೆ ಮಾಡಿದ್ದ ಒನ್‌ಪ್ಲಸ್‌ 7ನ ಉನ್ನತೀಕರಣಗೊಳಿಸಿದ ಮಾಡೆಲ್‌.

ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 855 ಪ್ಲಸ್‌ ಪ್ರೊಸೆಸರ್‌:
ಇದು ಉನ್ನತ ದರ್ಜೆಯ ಫೋನ್‌ ಆದ್ದರಿಂದ ಇದಕ್ಕೆ ಸದ್ಯ ಅತ್ಯುನ್ನತವಾದ ಸ್ನಾಪ್‌ಡ್ರಾಗನ್‌ 855 ಪ್ಲಸ್‌ ಪ್ರೊಸೆಸರ್‌ ಅಳವಡಿಸಲಾಗಿದೆ. (2.96 ಗಿ.ಹ. ಎಂಟು ಕೋರ್‌ಗಳು)ಇದು 3ಡಿ ಗೇಮ್‌ಗಳು, ವಿಡಿಯೋ, ಬಹುಬಗೆಯ ಕೆಲಸಗಳನ್ನು ವೇಗವಾಗಿ ಮಾಡುವ ಪ್ರೊಸೆಸರ್‌. ಹೀಗಾಗಿ, ತಮ್ಮ ಮೊಬೈಲ್‌ ಫ‌ಟಾಫ‌ಟ್‌ ಆಗಿ ಕೆಲಸ ಮಾಡಬೇಕು ಎನ್ನುವವರಿಗೆ ಸೂಕ್ತವಾಗಿದೆ

ಮೂರುಲೆನ್ಸಿನ ಹಿಂಬದಿ ಕ್ಯಾಮರಾ
ಈ ಫೋನಿಗೆ 48+12+16 ಮೆಗಾಪಿಕ್ಸಲ್‌ ಲೆನ್ಸ್‌ಗಳುಳ್ಳ ಹಿಂಬದಿ ಕ್ಯಾಮರಾ ನೀಡಲಾಗಿದೆ. ಮುಂಬದಿಗೆ 16 ಮೆಗಾಪಿಕ್ಸಲ್‌ ಕ್ಯಾಮರಾ ಇದೆ. ಹಿಂದಿನಂತೆಯೇ ಒನ್‌ ಪ್ಲಸ್‌ ಫೋನ್‌ಗಳಲ್ಲಿ ಕ್ಯಾಮರಾ ಚೆನ್ನಾಗಿರುತ್ತದೆ. ಇದು ಸಹ ಉತ್ತಮ ಕ್ಯಾಮರಾ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಿನ ಪೈಪೋಟಿಯಲ್ಲಿ ಮುಂಬದಿಗೆ ಕೇವಲ 16 ಮೆ.ಪಿ.ಗಿಂತ ಹೆಚ್ಚು ಸಾಮರ್ಥ್ಯದ ಕ್ಯಾಮರಾ ಅಗತ್ಯವಿತ್ತು ಎನಿಸುತ್ತದೆ.

90 ಹಟ್ಜ್ ಅಮೋಲೆಡ್‌ ಡಿಸ್‌ಪ್ಲೇ
ಫೋನಿನ ಪರದೆಯ ಮೇಲಿನ ಡಿಸ್‌ಪ್ಲೇ ಸುಂದರವಾಗಿ ಸುರಳಿತವಾಗಿ ಕಾಣಲು 90 ಹಟ್ಜ್ì ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇತರ ಮೊಬೈಲ್‌ ಫೋನ್‌ಗಳ ರಿಫ್ರೆಶ್‌ ರೇಟ್‌ 60 ಹಟ್ಜ್ì ಇರುತ್ತದೆ. ಒನ್‌ ಪ್ಲಸ್‌ 7 ಪ್ರೊದಲ್ಲಿ ಮೊದಲ ಬಾರಿಗೆ 90 ಹಟ್ಜ್ì ರಿಫ್ರೆಶ್‌ ರೇಟ್‌ ಪರಿಚಯಿಸಲಾಗಿತ್ತು. ಅದನ್ನು 7ಟಿ ಗೂ ವಿಸ್ತರಿಸಲಾಗಿದೆ. ಇದರಿಂದೇನು ಲಾಭ? ಪರದೆಯನ್ನು ನಾವು ಸಾðಲ್‌ ಮಾಡಿದಾಗ ಅದು ತುಂಬಾ ಮೃದುವಾಗಿ ಸುಗಮವಾಗಿ ಸರಿಯುತ್ತದೆ. ಪರದೆಯಲ್ಲಿ ಚಿತ್ರಗಳು ಸ್ಪಷ್ಟವಾಗಿ ಮೂಡಿಬರುತ್ತವೆ. ಎಂದಿನಂತೆ ಅಮೋಲೆಡ್‌ ಪರದೆ ಅಳವಡಿಸಲಾಗಿದೆ. ಪರದೆ(2400×1080) 6.55 ಇಂಚಿದೆ.

ಅಂಡ್ರಾಯ್ಡ 10 ಕಾರ್ಯಾಚರಣಾ ವ್ಯವಸ್ಥೆ
ಅಂಡ್ರಾಯ್ಡ 10 ಆವೃತ್ತಿಯನ್ನು ಬಾಕ್ಸಿನಲ್ಲೇ ಒಳಗೊಂಡ ಮೊದಲ ಫೋನ್‌ ಎಂಬ ಹೆಗ್ಗಳಿಕೆ ಈ ಫೋನ್‌ಗಿದೆ. ಇದಕ್ಕೆ ಆಕ್ಸಿಜನ್‌ ಓಎಸ್‌ ಸಂಗಾತಿಯಾಗಿದೆ. ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್‌ ಇದೆ. ಉತ್ತಮ ಆಡಿಯೋಗಾಗಿ ಡಾಲ್ಬಿ ಆಟೋಮ್ಸ್‌ ಚಿಪ್‌ ನೀಡಲಾಗಿದೆ.

3800 ಎಂಎಎಚ್‌ ಬ್ಯಾಟರಿ
ಫೋನಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಬ್ಯಾಟರಿ ಇನ್ನೂ ಸ್ವಲ್ಪ ಹೆಚ್ಚು ಎಂಎಎಚ್‌ ಹೊಂದಿರಬೇಕಿತ್ತು. ಸದ್ಯ 3800 ಎಂಎಎಚ್‌ ಇದೆ. ಇದಕ್ಕೆ ವಾರ್ಪ್‌ ಚಾರ್ಜರ್‌ ನೀಡಲಾಗಿದೆ. ಇದು ವೇಗವಾಗಿ ಚಾರ್ಜ್‌ ಮಾಡುತ್ತದೆ. ಅರ್ಧಗಂಟೆಯಲ್ಲಿ ಶೇ. 70ರಷ್ಟು ಚಾರ್ಜ್‌ ಆಗುತ್ತದೆ. ಟೈಪ್‌ ಸಿ ಕೇಬಲ್‌ ಹೊಂದಿದೆ.

8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಗೆ 3800ರೂ ಮತ್ತು 8 ಜಿಬಿ ರ್ಯಾಮ್‌ ಹಾಗೂ 256 ಜಿಬಿ ಸಂಗ್ರಹದ ಆವೃತ್ತಿಗೆ 40 ಸಾವಿರ ರೂ. ಅಞಚzಟn.ಜಿnನಲ್ಲಿ ಲಭ್ಯ.

ಹಳತು ಹೊಸತರ ನಡುವಿನ ವ್ಯತ್ಯಾಸ
ಎಲ್ಲ ಸರಿ, ಕಳೆದ ಬೇಸಿಗೆಯಲ್ಲಿ ಬಿಡುಗಡೆಯಾದ ಒನ್‌ಪ್ಲಸ್‌ 7ಗೂ, ಈ “7ಟಿ’ಗೂ ಏನೇನು ವ್ಯತ್ಯಾಸವೇನು ಎಂಬ ಪ್ರಶ್ನೆ ಮೂಡುವುದು ಸಹಜ.
ಒನ್‌ ಪ್ಲಸ್‌ 7ಟಿ 6.55 ಇಂಚಿನ 90 ಹಟ್ಜ್ì ರಿಫ್ರೆಶ್‌ ರೇಟ್‌ ಪರದೆ ಹೊಂದಿದೆ. ಹಿಂದಿನ ಒನ್‌ಪ್ಲಸ್‌ 7 ಮೊಬೈಲ್‌ 6.41 ಇಂಚಿನ ಪರದೆ ಹೊಂದಿತ್ತು. 90 ಹಟ್ಜ್ì ರಿಫ್ರೆಶ್‌ ರೇಟ್‌ ಹೊಂದಿಲ್ಲ.

ಒನ್‌ ಪ್ಲಸ್‌ 7 ಸ್ನಾಪ್‌ಡ್ರಾಗನ್‌ 855 ಪ್ರೊಸೆಸರ್‌, ಒನ್‌ಪ್ಲಸ್‌ 7ಟಿ ಸ್ನಾಪ್‌ಡ್ರಾಗನ್‌ 855 ಪ್ಲಸ್‌ ಪ್ರೊಸೆಸರ್‌.

ಕ್ಯಾಮರಾ: 7ಟಿ 48+12+16 ಮೆಗಾಪಿಕ್ಸಲ್‌ 3 ಲೆನ್ಸ್‌ಕ್ಯಾಮರಾ (ದೊಡ್ಡವೃತ್ತದೊಳಗೆಮೂರುಕ್ಯಾಮರಾ ವಿನ್ಯಾಸ, ಒನ್‌ಪ್ಲಸ್‌ 7, 48+5 ಎರಡು ಲೆನ್ಸ್‌ ಕ್ಯಾಮರಾ (ಲಂಬವಾಗಿ ಒಂದರ ಮೇಲೊಂದು ವಿನ್ಯಾಸ). ಮುಂಬದಿ ಕ್ಯಾಮರಾ ಎರಡರಲ್ಲೂ 16 ಮೆ.ಪಿ.

ಒನ್‌ಪ್ಲಸ್‌ 7 3700 ಎಂಎಎಚ್‌ ಬ್ಯಾಟರಿ 20 ವ್ಯಾಟ್ಸ್‌ ವೇಗದ ಚಾರ್ಜರ್‌. 7ಟಿ 3800 ಎಂಎಎಚ್‌ 30 ವ್ಯಾಟ್ಸ್‌ ವಾರ್ಪ್‌ ಚಾರ್ಜರ್‌. (ಇದು 7 ಪ್ರೊದಲ್ಲಿರುವ ಚಾರ್ಜರ್‌).

ದರ: ಒನ್‌ ಪ್ಲಸ್‌ 7 ಟಿ ದರ 38 ಸಾವಿರದಿಂದ ಆರಂಭ. ಒನ್‌ ಪ್ಲಸ್‌ 7 ದರ 33 ಸಾವಿರದಿಂದ ಆರಂಭ.

ಈಗಾಗಲೇ ಒನ್‌ ಪ್ಲಸ್‌ 7 ಕೊಂಡಿದ್ದರೆ 7ಟಿಯನ್ನೇ ಕೊಂಡಿದ್ದರೆ ಒಳ್ಳೆಯದಿತ್ತೇನೋ ಎಂದು ಕೊರಗುವ ಅಗತ್ಯವಿಲ್ಲ. ಎರಡು ಫೋನಿಗೂ ತೀರಾ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇನ್ನೊಂದು ಮಾತು- ಒನ್‌ ಪ್ಲಸ್‌ 7 ಮತ್ತು 7ಟಿ ಗಿಂತಲೂ ಹೆಚ್ಚಿನ ವೈಶಿಷ್ಟéಉಳ್ಳದ್ದು, ಒನ್‌ ಪ್ಲಸ್‌ 7 ಪ್ರೊ. ಅದು ಕಳೆದ ಬೇಸಿಗೆಯಲ್ಲಿ ಬಿಡುಗಡೆಯಾಗಿತ್ತು.

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

Panth–Iyer

IPL Auction: 27 ಕೋ. ರೂ. ಒಡೆಯ ರಿಷಭ್‌ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.