ಆಫ್ ಲೈನ್‌ ಶಾಪರ್‌ ಮೇಲೆ ಆನ್‌ಲೈನ್‌ ಛಾಯೆ ಆನ್‌ ಆಫ್!


Team Udayavani, Feb 10, 2020, 2:27 PM IST

isiri-tdy-6

ಸಾಂಧರ್ಬಿಕ ಚಿತ್ರ

ಇ- ಕಾಮರ್ಸ್‌ ಕ್ಷೇತ್ರ ಅತೀವ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಅನೇಕ ಎಲೆಕ್ಟ್ರಾನಿಕ್‌ ಸಂಸ್ಥೆಗಳು ತಮ್ಮ ಉತ್ಪನ್ನಗಳು ಅಂಗಡಿ- ಮಳಿಗೆಗಳಲ್ಲಿ ಲಭ್ಯವಾಗುವುದಕ್ಕೆ ಮುನ್ನವೇ ಆನ್‌ಲೈನಿನಲ್ಲಿ ಬಿಡುಗಡೆ ಮಾಡುತ್ತಿರುವುದು ಆನ್‌ಲೈನ್‌ ಶಾಪಿಂಗ್‌ಗೆ ಸಿಗುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿ. ಆನ್‌ಲೈನ್‌ನಲ್ಲಿ ಥರಹೇವಾರಿ ಆಫ‌ರ್‌ಗಳು ಮತ್ತು ಆಯ್ಕೆಗಳು ಲಭ್ಯವಿರುವುದರಿಂದ ಗ್ರಾಹಕರು ಆನ್‌ಲೈನ್‌ ಶಾಪಿಂಗ್‌ ಮೊರೆ ಹೋಗುತ್ತಿರುವುದು ಸಹಜವೇ ಆಗಿದೆ.

ಆನ್‌ಲೈನ್‌ನಲ್ಲಿ ಆಫ‌ರ್‌ ಗಳು ಕ್ಷಣಕ್ಷಣಕ್ಕೂ ಬದಲಾಗುತ್ತಾ ಇರುತ್ತದೆ. ಹೀಗಾಗಿ, ಗ್ರಾಹಕರು ನೋಟಿಫಿಕೇಷನ್‌ಗಳನ್ನು ಆನ್‌ ಮಾಡಿಟ್ಟು ಕೊಂಡಿರುತ್ತಾರೆ. ಆಫ‌ರ್‌ ಗಳು ಘೋಷಣೆಯಾದ ಕ್ಷಣವೇ ಅವರಿಗೆ ತಿಳಿದುಬಿಡುತ್ತದೆ. ಅವರೇನೋ ಆನ್‌ ಲೈನಿನಲ್ಲಿಯೇ ಖರೀದಿಸುವವರು, ಹೀಗಾಗಿ ಸಹಜವಾಗಿ ಆನ್‌ಲೈನಿನಲ್ಲಿ ಆ್ಯಕ್ಟಿವ್‌ ಇರುತ್ತಾರೆ ಎನ್ನಬಹುದು. ಅಂಗಡಿ ಮಳಿಗೆಗಳಿಗೆ ಭೇಟಿ ನೀಡುವ ಆಫ್ಲೈನ್‌ ಗ್ರಾಹಕರು ಕೂಡಾ ಈಗೀಗ ಆನ್‌ಲೈನಿನಲ್ಲಿ ಹೆಚ್ಚಾಗಿಯೇ ಕ್ರಿಯಾಶೀಲರಾಗಿರುತ್ತಾರೆ ಎನ್ನುವುದು ಗೂಗಲ್‌ ನಡೆಸಿದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಓಲೈಸುವುದು ಸುಲಭವಲ್ಲ :  ಭಾರತದಲ್ಲಿ ಸುಮಾರು 46 ಕೋಟಿ ಮಂದಿ ಆನ್‌ಲೈನಿನಲ್ಲಿ ಮಾಹಿತಿ ಪಡೆದು ಅಂಗಡಿ ಮಳಿಗೆಗಳಲ್ಲಿ ಖರೀದಿಸುವ ಟ್ರೆಂಡ್‌ಅನುಸರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಿಂದೆಲ್ಲಾ ಕಷ್ಟವೋ ನಷ್ಟವೋ, ಆಗಿದ್ದಾಗಲಿ ಎಂದುಕೊಂಡು ಮಳಿಗೆಗಳಲ್ಲಿ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಆದರೆ ಇಂದು, ವಸ್ತುವಿನ ಗುಣಮಟ್ಟವನ್ನು, ಬಾಳಿಕೆಯನ್ನು ಕೊಳ್ಳುವುದಕ್ಕೆ ಮುನ್ನವೇ ತಿಳಿದುಕೊಳ್ಳಲು ಜನರು ಇಚ್ಛಿಸುತ್ತಿದ್ದಾರೆ. ಹೀಗಾಗಿ ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಡಿಜಿಟಲ್‌ ಶಾಪಿಂಗ್‌ನ ನೆರವನ್ನು ಆಫ್ಲೈನ್‌ ಗ್ರಾಹಕರೂ ಪಡೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಮಾಹಿತಿಯನ್ನು ಆಧರಿಸಿ ನಿರ್ಧಾರ ಮಾಡಿಕೊಂಡ ನಂತರ, ಅಂಗಡಿಗೆ ತೆರಳಿ ಆಯಾ ವಸ್ತುಗಳನ್ನು ಪರೀಕ್ಷಿಸುತ್ತಾರೆ. ಎಲ್ಲವೂ ತಾವಂದುಕೊಂಡ ರೀತಿಯಲ್ಲಿಯೇ ಇದ್ದರೆ ಕೊಳ್ಳುತ್ತಾರೆ. ಇವರನ್ನು ಸ್ಮಾರ್ಟ್‌ ಗ್ರಾಹಕರು ಎಂದು ಕರೆಯಬಹುದು. ಈ ವಿಭಾಗಕ್ಕೆ ಸೇರುವ ಗ್ರಾಹಕರನ್ನು ಓಲೈಸುವುದು ಸುಲಭವಲ್ಲ.

ಆನ್‌ಲೈನ್‌ನಲ್ಲಿ ಮ್ಯಾನುವಲ್‌ ಕೈಪಿಡಿ :  ಅಚ್ಚರಿಯೆಂದರೆ ಈ ರೀತಿಯಾಗಿ ಆನ್‌ಲೈನ್‌ ಸಹಾಯದಿಂದ ಆಫ್ಲೈನ್‌ ಶಾಪಿಂಗ್‌ ಮಾಡಿದವರಲ್ಲಿ ಅನೇಕರು, ಶಾಪಿಂಗ್‌ ನಂತರವೂ ಆ ವಸ್ತುಗಳ ರಿವ್ಯೂಗಳನ್ನು ಪರೀಕ್ಷಿಸುತ್ತಿರುವ ಪ್ರವೃತ್ತಿ ಕಂಡುಬಂದಿದೆ. ಅಂದರೆ, ಯಾವ ರೀತಿ ವಸ್ತುವನ್ನು ಬಳಸಿದರೆ ಅದರ ಬಾಳಿಕೆ ಹೆಚ್ಚುತ್ತದೆ, ಏನು ಮಾಡಿದರೆ ಅದು ಹಾಳಾಗುತ್ತದೆ ಎಂಬಿತ್ಯಾದಿ ವಿಚಾರಗಳ ಕುರಿತು ಅವರು ಇಂಟರ್ನೆಟ್‌ ಜಾಲಾಡುತ್ತಾರೆ. ಹಿಂದೆಲ್ಲಾ ವಸ್ತುಗಳ ಜೊತೆ ಬರುತ್ತಿದ್ದ ಮ್ಯಾನುವಲ್‌ ಕೈಪಿಡಿಯನ್ನು ಓದುವವರ ಸಂಖ್ಯೆ ವಿರಳವಾಗಿತ್ತು. ಇಂದು ಕೂಡಾ ಆ ಸಂಖ್ಯೆ ವಿರಳವೇ. ಆದರೆ ಆನ್‌ಲೈನ್‌ ಶಾಪಿಂಗ್‌ ಬಂದ ಮೇಲೆ ಆ ಮ್ಯಾನುವಲ್‌ನ ಸರಳೀಕೃತ ರೂಪದಲ್ಲಿರುವ ಮಾಹಿತಿಯನ್ನು ಗ್ರಾಹಕರು ಓದಿ ತಿಳಿದುಕೊಳ್ಳುತ್ತಿದ್ದಾರೆ. ಅದರಲ್ಲೂ “ಹೌ ಟು ಯೂಸ್‌?’ ಎಂಬ ವಿಭಾಗಕ್ಕೆ ಹೆಚ್ಚು ಭೇಟಿ ಕೊಡುತ್ತಾರೆ.

 

ಹಳೆ ಬಳಕೆ ದಾರರೇ ಸೇಲ್ಸ್‌ ಮ್ಯಾನ್‌ : ಮುಂಚೆಲ್ಲಾ ಯಾವುದೇ ವಸ್ತು ಕೊಳ್ಳಲು ಶೋರೂಂಗಳಿಗೆ ತೆರಳಿದಾಗ ಮಾಹಿತಿಗಾಗಿ ಅಲ್ಲಿನ ಸೇಲ್ಸ್‌ಮ್ಯಾನ್‌ಗಳನ್ನು ಅವಲಂಬಿಸಬೇಕಾಗುತ್ತಿತ್ತು. ಆತ, ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಆದರೆ ಈಗ ಆ ಮಾಹಿತಿಯನ್ನು ತಿಳಿದುಕೊಳ್ಳಲು ಗ್ರಾಹಕರು ಸೇಲ್ಸ್‌ಮ್ಯಾನ್‌ನ ಮೊರೆ ಹೋಗುತ್ತಿಲ್ಲ. ಬದಲಾಗಿಇಂಟರ್ನೆಟ್‌ ಮೊರೆ ಹೋಗುತ್ತಿದ್ದಾರೆ. ಇಂಟರ್ನೆಟ್‌ನಲ್ಲಿ ಆಯಾ ವಸ್ತುವಿನ ಕುರಿತು ಇಡೀ ಬಯೋ ಡಾಟಾವೇ ಸಿಕ್ಕಿಬಿಡುತ್ತದೆ. ಕೇವಲ ವಸ್ತುವಿನ ಗುಣವಿಶೇಷಗಳಲ್ಲ, ಅದನ್ನು ಈ ಹಿಂದೆ ಬಳಸಿದವರ ಅಭಿಪ್ರಾಯವೂ ಸಿಗುತ್ತದೆ. ಹೀಗಾಗಿ ಇಂದು ಹಳೆಯ ಗ್ರಾಹಕರೇ ಸೇಲ್ಸ್‌ಮ್ಯಾನ್‌ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಇದರಿಂದ ಗ್ರಾಹಕ ತಾನು ಆ ವಸ್ತುವನ್ನು ಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸುವುದು ಸುಲಭವಾಗುತ್ತದೆ. ಅದು ಲೇಟೆಸ್ಟ್‌ ಟ್ರೆಂಡ್‌ ಎನ್ನಬಹುದು.

 

-ಹವನ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.