ಚರಿತ್ರೆಯ ಪುಟಗಳಲ್ಲಿ ನೆನಪು ಮಾತ್ರ


Team Udayavani, Mar 27, 2017, 1:09 PM IST

2nd.jpg

ದೇಶದ ಅಭ್ಯುದಯ ಕಥನಕ್ಕೆ ನಾಂದಿ ಹಾಕಿ ಮೈಸೂರು ಸಂಸ್ಥಾನದಿಂದ ಸ್ಥಾಪಿಸಲ್ಪಟ್ಟ ಬ್ಯಾಂಕು “ದಿ ಬ್ಯಾಂಕ್‌ ಆಫ್‌ ಮೈಸೂರು ಲಿಮಿಟೆಡ್‌’. ನಾಡಿನ ಜನತೆಯಲ್ಲಿ ಮೈಸೂರು ಬ್ಯಾಂಕ್‌ ಎಂತಲೇ ಜನಜನಿತವಾಗಿದ್ದ ಬ್ಯಾಂಕು, ಸದ್ಯದಲ್ಲೇ ಚರಿತ್ರೆಯ ಪುಟಗಳಲ್ಲಿ ನೆನಪಾಗಿ ಉಳಿಯಲಿದೆ.

ಸರ್‌. ಎಂ. ವಿಶ್ವೇಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಬ್ಯಾಂಕಿಂಗ್‌ ಸಮಿತಿಯ ಶಿಫಾರಸಿನ ಮೇರೆಗೆ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ 1913ರ ಅಕ್ಟೋಬರ್‌ 2ರಂದು ದಿ ಬ್ಯಾಂಕ್‌ ಆಫ್‌ ಮೈಸೂರು ಲಿ., ಸ್ಥಾಪಿಸಲಾಯಿತು. ಪ್ರಪ್ರಥಮ 20 ಲಕ್ಷ ರೂ. ಬಂಡವಾಳ ನಿಧಿಯನ್ನು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹೂಡಿದರು.
ವರ್ಷಗಳು ಉರುಳಿದಂತೆ ದಿ ಬ್ಯಾಂಕ್‌ ಆಫ್‌ ಮೈಸೂರು ಲಿ., ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ಎಂದು ನಾಮಕರಣಗೊಂಡು 103 ವರ್ಷಗಳನ್ನು ಪೂರೈಸಿದೆ. ಈ ಐತಿಹಾಸಿಕ ಬ್ಯಾಂಕ್‌ ಇಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ವಿಲೀನವಾಗುತ್ತಿರುವ ಈ ಸಂದರ್ಭದಲ್ಲಿ ಎಸ್‌ಬಿಎಂ ಕೇಂದ್ರ ಕಚೇರಿಯ (ತನಿಖೆ ಮತ್ತು ಲೆಕ್ಕ ಪರಿಶೋಧನೆ, ಸಿಸಿಎಸ್‌ಡಿ ವಿಭಾಗ) ಪ್ರಧಾನ ವ್ಯವಸ್ಥಾಪಕ ಹೆಚ್‌.ಸಿ. ನೇಮಿರಾಜ ಅವರು ಉದಯವಾಣಿಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ..

– ಸರ್‌ ಎಂ.ವಿಶ್ವೇಶ್ವರಯ್ಯ ಮತ್ತು ರಾವ್‌ ಬಹಾದ್ದೂರ್‌ ನಾಲ್ವಡಿ ಕೃಷ್ಣರಾಜ ಒಡೆಯರ ಪರಿಶ್ರಮದಿಂದ ಸ್ಥಾಪಿಸಿದ ಮೈಸೂರು ಬ್ಯಾಂಕ್‌ಗೆ ಒಂದು ಇತಿಹಾಸವಿದೆ. ಇನ್ನು ಮುಂದೆ ಈ ಐತಿಹ್ಯ ನೆನಪು ಮಾತ್ರ ಆಗಲಿದೆ. ಇದರ ಬಗ್ಗೆ ತಾವೇನು ಹೇಳಲಿಚ್ಛಿಸುತೀ¤ರಿ?
– ಸರ್‌.ಎಂ.ವಿ  ಮತ್ತು ಮೈಸೂರು ಅರಸರ ಮಾರ್ಗ ದರ್ಶನದಲ್ಲಿ ಸ್ಥಾಪಿಸಿದ ಮೈಸೂರು ಬ್ಯಾಂಕ್‌ಗೆ 103 ವರ್ಷಗಳ ಇತಿಹಾಸವಿದೆ. 1960ರಲ್ಲಿ ಎಸ್‌ಬಿಎಂ ಅನ್ನು ಸಹವರ್ತಿ ಬ್ಯಾಂಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತೆಗೆದುಕೊಂಡಿತು. ಸಹವರ್ತಿ ಬ್ಯಾಂಕ್‌ಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಟಿಯಾಲ, ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಮತ್ತು ಜೈಪುರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಈ ಎಲ್ಲ ಬ್ಯಾಂಕುಗಳನ್ನು ತೆಗೆದುಕೊಂಡರು.

ಆಗ ಎಸ್‌ಬಿಎಂನ ಶೇ.75 ರಷ್ಟು ಷೇರುಗಳನ್ನು ಎಸ್‌ಬಿಐ ಹಿಡಿದುಕೊಂಡಿತ್ತು. ಉಳಿದ ಶೇ.25 ರಷ್ಟು ಮಾತ್ರ ಸಾರ್ವಜನಿಕರಲ್ಲಿತ್ತು. ಹಾಗಾಗಿ ಒಟ್ಟಾರೆ ಎಲ್ಲ ಸಹವರ್ತಿ ಬ್ಯಾಂಕಿನ ನಿಯಂತ್ರಣ ಅವರ ಕೈಲಿತ್ತು. ಅಂದಿನಿಂದ ಎಸ್‌ಬಿಐ ನಿಯಮಗಳ ಹಾದಿಯಲ್ಲಿ ನಡೆದುಕೊಂಡು ಬಂದಿದ್ದೆವು. ಆಗಿನಿಂದಲೇ ಎಲ್ಲ ಸಹವರ್ತಿ ಬ್ಯಾಂಕುಗಳು ಎಸ್‌ಬಿಐನಲ್ಲಿ ವಿಲೀನವಾಗುತ್ತವೆ ಎಂದು ಹೇಳಿಕೊಂಡು ಬರುತ್ತಲೇ ಇದ್ದವು. ಬ್ಯಾಂಕಿನ ಮೇಲಿದ್ದ ಅಭಿಮಾನ, ಪ್ರೀತಿಯಿಂದ ಇದು ಆಗೋದಿಲ್ಲ ಎಂದು ಹೇಳಿಕೊಂಡು ಬರುತ್ತಲಿದ್ದೆವು. ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಎಲ್ಲ ಎಸ್‌ಬಿಐ ಸಹವರ್ತಿ ಬ್ಯಾಂಕ್‌ಗಳು ಮತ್ತು ಮಹಿಳಾ ಬ್ಯಾಂಕ್‌ಗಳು ಏಪ್ರಿಲ್‌ 1, 2017ರಿಂದ 
ಎಸ್‌ಬಿಐನಲ್ಲಿ ವಿಲೀನವಾಗಲಿವೆ. ಆ ದಿಸೆಯಲ್ಲಿ ಫೆಬ್ರವರಿಯಲ್ಲಿ ಆದೇಶ ಬಂತು. ಅದೇ ರೀತಿ ಸಂಸತ್ತು ಕೂಡ ಇದನ್ನು ನಮೂದಿಸಿತ್ತು.

– ಈ ವಿಲೀನ ಕಾರ್ಯ ಬ್ಯಾಂಕಿಂಗ್‌ ಕ್ಷೇತ್ರದ ಮೇಲೆ ಯಾವ ರೀತಿ ಪರಿಣಾಮಬೀರುತ್ತದೆ?
– ಈ ವಿಲೀನ ಕಾರ್ಯದಿಂದ ಒಳ್ಳೆಯದಾಗುತ್ತೋ ಕೆಟ್ಟದಾಗುತ್ತೋ ಅನ್ನೋದಕ್ಕಿಂತ ಹೆಚ್ಚಾಗಿ, ಐತಿಹಾಸಿಕ 
ಎಸ್‌ಬಿಎಂ ವಿಲೀನವಾಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಇಂದಿನ ಗ್ಲೋಬಲೈಸೇಷನ್‌ನಲ್ಲಿ ವಿಲೀನ ಮತ್ತು ಸ್ವಾಧೀನ ಮಾಮೂಲಾಗಿದೆ. ಜಾಗತಿಕ ಮಟ್ಟದಲ್ಲಿ ಅದರಲ್ಲೂ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಎಸ್‌ಬಿಐ ಅನ್ನು ದೊಡ್ಡ ಸಂಸ್ಥೆಯನ್ನಾಗಿ ರೂಪಿಸುವ ಉದ್ದೇಶದಿಂದ ಇದನ್ನು ಮಾಡಿದ್ದಾರೆ ಅಷ್ಟೇ. 

– ಗ್ರಾಹಕರಿಗೆ ಯಾವ ರೀತಿ ಅನುಕೂಲವಾಗಲಿದೆ?
– ಗ್ರಾಹಕರಿಗೆ ಯಾವುದೇ ರೀತಿ ಅನಾನುಕೂಲವಂತೂ ಖಂಡಿತ ಆಗುವುದಿಲ್ಲ. ಕಾರಣವೆನೆಂದರೆ ನಮ್ಮ ಶಾಖೆಗಳು ಮತ್ತು ನಮ್ಮ ಸಿಬ್ಬಂದಿ ಇದೇ ರೀತಿ ಮುಂದುವರಿಯಲಿದೆ. ಇದರಿಂದ ಮತ್ತಷ್ಟು ಉತ್ತಮ ಸೇವೆಗಳನ್ನು ಕೊಡಲು ಅನುಕೂಲವಾಗಲಿದೆ.

– ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವ ರೀತಿಯ ಈ ಪ್ರಕ್ರಿಯೆಯಲ್ಲಿ ಸಿಬ್ಬಂದಿ, ಅಧಿಕಾರಿಗಳ ಮೇಲೆ ಯಾವ ಪರಿಣಾಮವಾಗ‌ಲಿದೆ?
– ಮೊದಲನೆದಾಗಿ ಗ್ರಾಹಕರಿಗೆ ಯಾವುದೇ ರೀತಿ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಆದರೆ, ಸಿಬ್ಬಂದಿ, ಅಧಿಕಾರಿಗಳ ವಿಷಯಕ್ಕೆ ಬಂದರೆ, ವಿಲೀನ ಪ್ರಕ್ರಿಯೆ ಮುಗಿದನಂತರ ಹೊಸ ವಾತಾವರಣದಲ್ಲಿ ಕೆಲಸ ಮಾಡಲು ಇಷ್ಟವಿಲ್ಲದವರಿರುತ್ತಾರೆ. ಅವರಿಗೆ ಕೆಲವು ಬೆನಿಫಿಟ್ಸ್‌ ಕೊಟ್ಟು ವಿಆರ್‌ಎಸ್‌ ಸೀRಮ್‌ ಅನ್ನು ಜಾರಿಗೆ ತರಲಾಗಿದೆ. ಅದರ ಲಾಭ ಪಡೆದು ನಿವೃತ್ತಿ ಪಡೆದುಹೋಗುವವರು ಹೋಗಬಹುದು.

ನರಸಿಂಹನ್‌ ಕಮಿಟಿ ವಿಆರ್‌ಎಸ್‌ ರೀತಿಯದ್ದಾ ಅಥವಾ ಇದರಲ್ಲೇನಾದರೂ ಹೊಸತನವಿದೆಯೇ?
– 2002 ಮತ್ತು 2006ರಲ್ಲಿ ಒಂದು ರೀತಿ ವಿಆರ್‌ಎಸ್‌ ಪದ್ಧತಿ ಜಾರಿಗೆ ತಂದಿದ್ದರು. ಅದಕ್ಕಿಂತ ಈ ವಿಆರ್‌ಎಸ್‌ ವಿಭಿನ್ನವಾಗಿದ್ದು, ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಕೇವಲ ವಿಲೀನವಾಗುತ್ತಿರುವ ಸಹವರ್ತಿ ಬ್ಯಾಂಕ್‌ಗಳ ಸಿಬ್ಬಂದಿಗೆ ಮಾತ್ರ ಅನ್ವಯವಾಗುವ ವಿಶೇಷ ಯೋಜನೆ ಇದು. ಇತರ ಬ್ಯಾಂಕುಗಳಿಗೂ ಈ ವಿಆರ್‌ಎಸ್‌ಗೂ ಸಂಬಂಧವಿಲ್ಲ.

– ಈ ವಿಲೀನದ ಸಂಗತಿಯಿಂದ ಎಸ್‌ಬಿಎಂ ಗ್ರಾಹಕರಲ್ಲಿ ತೃಪ್ತಿಕರ ವಾತಾವರಣ ನಿರ್ಮಾಣವಾಗಿದೆಯೇ?
– ನಮ್ಮ ಗ್ರಾಹಕರಲ್ಲಿ ಯಾವುದೇ ರೀತಿ ಗೊಂದಲ ಅಥವಾ ಭಿನ್ನಾಭಿಪ್ರಾಯವಿಲ್ಲ. ಕಾರಣವೆನೆಂದರೆ ಕಳೆದ ಮೂರು ತಿಂಗಳ ಹಿಂದೆ ನಾವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಸಹವರ್ತಿ ಬ್ಯಾಂಕುಗಳು ಸೇರಿ “ಟೌನ್‌ ಹಾಲ್‌ ಮೀಟಿಂಗ್‌’ ಅಂತ ಏರ್ಪಾಟು ಮಾಡಿದ್ದೇವು. ಅದರಲ್ಲಿ ಸಾರ್ವಜನಿಕರನ್ನು, ಗ್ರಾಹಕರನ್ನು ಆಹ್ವಾನಿಸಿ ಅಹವಾಲುಗಳನ್ನು ಸೀÌಕರಿಸಿದ್ದಲ್ಲದೆ ಅವರ ಅಭಿಪ್ರಾಯಗಳನ್ನು ಕೇಳಿದ್ದೇವು. ಅಲ್ಲದೆ, ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಹೇಳಿದ್ದೇವೆ. ಏ.1 ಅಥವಾ 2ನೇ ತಾರೀಖೀನೊಳಗೆ ನಮ್ಮ ಎಲ್ಲ ಸಹವರ್ತಿ ಬ್ಯಾಂಕಿನ ಗ್ರಾಹಕರಿಗೆ ಎಸ್‌ಬಿಐ ನಿಂದ ‘ಸುಸ್ವಾಗತ’
ಮೆಸೇಜ್‌ ಬರುತ್ತದೆ. ಗ್ರಾಹಕರಿಗೆ ಯಾವುದೇ ರೀತಿ ಅನಾನುಕೂಲ ಖಂಡಿತ ಅಗುವುದಿಲ್ಲವೆಂಬುದು ನನ್ನ ಅಭಿಪ್ರಾಯ.

– ಕಾನೂನಾತ್ಮಕ ವಿಲೀನ ಪ್ರಕ್ರಿಯೆ ಯಾವಾಗ ಆಗಲಿದೆ?
– ಕಾನೂನಾತ್ಮಕವಾಗಿ 1-4-2017ರಿಂದ ಬ್ಯಾಂಕ್‌ ವಿಲೀನವಾಗಲಿದೆ. ಏಕೆಂದರೆ ಏ.24-25ಕ್ಕೆ ಲೆಕ್ಕಪತ್ರಗಳ ಆಡಿಟ್‌
ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದಾದನಂತರ ಪ್ರತಿ ಒಂದೊಂದು ವಾರ ಒಂದು ಸಹವರ್ತಿ ಬ್ಯಾಂಕ್‌ ಅಕೌಂಟ್ಸ್‌ ಡೇಟಾ ವಿಲೀನ ಮಾಡಲಿದ್ದಾರೆ ಎಂಬ ಮಾತಿದೆ. ಆನಂತರ ಸಹವರ್ತಿ ಬ್ಯಾಂಕಿನ ಗ್ರಾಹಕರಿಗೆ ಮತ್ತು ಎಸ್‌ಬಿಐ ಗ್ರಾಹಕರಿಗೆ ಒಂದೇ ರೀತಿ ಉತ್ಪನ್ನಗಳು ಹಾಗೂ ಸೇವೆಗಳು ದೊರೆಯಲಿವೆ. ಅದುವರೆಗೆ ಎಸ್‌ಬಿಎಂ ಅಥವಾ ಇತರೆ ಸಹವರ್ತಿ ಬ್ಯಾಂಕಿನ ಗ್ರಾಹಕರು ಅವರವರ ಬ್ಯಾಂಕಿನಲ್ಲಿ ವ್ಯವಹಾರ ನಡೆಸಬೇಕಾಗುತ್ತದೆ. ಒಮ್ಮೆ ಅಟೌಂಟ್ಸ್‌ ಡೇಟಾ ಮರ್ಜರ್‌ ಆದಮೇಲೆ ಯಾವುದೇ ರೀತಿ ವ್ಯತ್ಯಾಸಗಳಿರುವುದಿಲ್ಲ.

– ಎಸ್‌ಬಿಎಂ ಷೇರುದಾರರಿಗೆ ಇದರಿಂದ ಲಾಭವಾಗಲಿದೆಯೇ?
– ಈಗಾಗಲೇ ಮಾ.17ಕ್ಕೆ ಷೇರುದಾರರಿಗೆ “ಸ್ವಾಪ್‌’ ನೋಟಿಫೈ ಆಗಿದೆ. ಅದರ ಪ್ರಕಾರ ನಮ್ಮ ಬ್ಯಾಂಕಿನ (ಎಸ್‌ಬಿಎಂ) 10 ಷೇರಿಗೆ, ಎಸ್‌ಬಿಐ 22 ಷೇರುಗಳನ್ನು ನೀಡಲಿದೆ. ಖಾತೆದಾರರ ಡಿಮ್ಯಾಟ್‌ ಅಟೌಂಟ್ಸ್‌ನಲ್ಲಿ ಜಮೆ ಆಗಿದೆ.

– ಒಂದಕ್ಕಿಂತ ಹೆಚ್ಚು ಖಾತೆಗಳನ್ನಿಟ್ಟಿಕೊಂಡಿರುವ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
– ಇವರಿಗೆ ಏನೂ ತೊಂದರೆಯಿಲ್ಲ. ನಿಮ್ಮ ಅಕೌಂಟ್‌ ನಂಬರು ಬೇರೆ ಇರುತ್ತೆ. ಸಿಐಎಫ್‌ ನಂಬರು ಬೇರೆ ಇರುತ್ತೆ.
ವಿಲೀನ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ, ಕಾಮನ್‌ ಸಿಐಎಫ್‌ ಮಾಡಲು ತೀರ್ಮಾನಿಸುತ್ತೇವೆ.
ಸದ್ಯದಲ್ಲಿ ಗ್ರಾಹಕರು ತಮ್ಮ ಅಕೌಂಟ್‌ ಗಳನ್ನು ಕ್ಲೋಸ್‌ ಮಾಡುವ ಅಗತ್ಯವಿಲ್ಲ. ಎಸ್‌ಬಿಐನಲ್ಲಿ ಯಾವ ಉದ್ದೇಶಕ್ಕೆ
ಖಾತೆ ಇಟ್ಟುಕೊಂಡಿದೀªರಿ ಎಂಬ ಅಗತ್ಯ ಎಸ್‌ಬಿಎಂಗೆ ಇರುವುದಿಲ್ಲ. ಅದೇ ರೀತಿ ಎಸ್‌ಬಿಎಂನಲ್ಲಿ ಎರಡು ಖಾತೆಗಳಿದ್ದರೆ, ಯಾಕೆ ಇಟ್ಟುಕೊಂಡಿದೀªರಿ ಎಂಬ ಅಗತ್ಯ ಎಸ್‌ಬಿಐಗೆ ಇರುವುದಿಲ್ಲ.

– ನಿಮ್ಮ ಗ್ರಾಹಕರಿಗೆ ಏನು ಸಂದೇಶ ಕೊಡಲು ಇಚ್ಛಿಸುತೀ¤ರಿ?
– ನೋಡಿ, 103 ವರ್ಷಗಳ ಕಾಲ ನಮ್ಮ ಗ್ರಾಹಕರು ಬ್ಯಾಂಕನ್ನು ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ನಾವು ಅಭಾರಿಗಳಾಗಿದ್ದೇವೆ. ಮೈಸೂರು ಬ್ಯಾಂಕಿನ ಗ್ರಾಹಕರಿಗೆ ನಾವು ಸದಾ ಚಿರಋಣಿ. ಇನ್ನು ಮುಂದೆಯೂ ನಮ್ಮ ಸೇವೆ ಮುಂದುವರೆಯುತ್ತದೆ.

– ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.