ಒಪ್ಪೋ ತಕ್ಕ ಎಫ್ 15
5 ನಿಮಿಷದ ಚಾರ್ಜ್= 2 ಗಂಟೆಗಳ ಟಾಕ್
Team Udayavani, Feb 3, 2020, 5:15 AM IST
ಒಪ್ಪೋ ಆಫ್ಲೈನ್(ಅಂಗಡಿ) ಮೊಬೈಲ್ ಮಾರಾಟದಲ್ಲಿ ಹೆಸರಾಗಿರುವ ಮೊಬೈಲ್ ಬ್ರ್ಯಾಂಡ್ . ಇದೀಗ ಸಂಸ್ಥೆ, ಒಪ್ಪೋ ಎಫ್ 15 ಎಂಬ ಹೊಸ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ವೈಶಿಷ್ಟé, ದರ ಮತ್ತಿತರ ವಿವರಗಳು ಇಲ್ಲಿದೆ.
ಒಪ್ಪೋ ಕಂಪೆನಿ ತನ್ನ ಹೊಸ ಫೋನೊಂದನ್ನು ಇದೀಗ ತಾನೇ ಬಿಡುಗಡೆ ಮಾಡಿದೆ. ಇದು ಮಿಡಲ್ ರೇಂಜ್ ಸ್ಮಾರ್ಟ್‌ಫೋನ್. ಇದರ ಹೆಸರು ಒಪ್ಪೋ ಎಫ್15. ಇದರ ದರ 19,999 ರೂ. ಇದು 128 ಜಿಬಿ ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್ ಹೊಂದಿದೆ.
ರ್ಯಾಮ್ ಚೆನ್ನಾಗಿದೆ
ದೊಡ್ಡ ಗೇಮ್‌ಗಳನ್ನು ಆಡುವವರಿಗೂ ಸಹ 6 ಜಿಬಿ ರ್ಯಾಮ್ ಬೇಕಾದಷ್ಟಾಗುತ್ತದೆ. ಗೇಮ್‌ಗಳು ಅಡತಡೆಯಿಲ್ಲದೇ ಸಾಗಲು ಮೊಬೈಲ್‌ಗಳಲ್ಲಿರುವ ಪ್ರೊಸೆಸರ್ ಯಾವುದು ಎಂಬುದು ಮೊದಲು ಮುಖ್ಯವಾಗುತ್ತದೆ. ಎಷ್ಟೇ ಹೆಚ್ಚು ರ್ಯಾಮ್ ಇದ್ದರೂ ಪ್ರೊಸೆಸರ್ ಬಲಿಷ್ಠವಾಗಿಲ್ಲದಿದ್ದರೆ ಬರೀ ರ್ಯಾಮ್‌ನಿಂದ ಏನೂ ಪ್ರಯೋಜನವಿಲ್ಲ. ಇಷ್ಟಕ್ಕೂ, ರ್ಯಾಮ್ ಎಂಬುದು ಮೊಬೈಲ್‌ನಲ್ಲಿ ಏಕಕಾಲಕ್ಕೆ ಅನೇಕ ಆ್ಯಪ್‌ಗ್ಳನ್ನು ತೆರೆದಾಗ ಅವುಗಳು ಕುಳಿತುಕೊಳ್ಳುವ ತಾತ್ಕಾಲಿಕ ಜಾಗವಷ್ಟೇ. ಹಾಗೆಯೇ, ನಮ್ಮ ಮೊಬೈಲ್‌ನಲ್ಲಿರುವ ಅನೇಕ ಅಪ್ಲಿಕೇಷನ್‌ಗಳನ್ನು ಏಕಕಾಲಕ್ಕೆ ತೆರೆದಿಟ್ಟುಕೊಂಡರೂ ಸಾಮಾನ್ಯವಾಗಿ 4 ಜಿಬಿ ರ್ಯಾಮ್ ಸಾಕಾಗುತ್ತದೆ. ಇನ್ನೂ ಹೆಚ್ಚು ಸಾಮರ್ಥ್ಯವುಳ್ಳ ರ್ಯಾಮ್ ಬೇಕೆಂದರೆ 6 ಜಿ.ಬಿ. ರ್ಯಾಮ್ ಅಗತ್ಯಕ್ಕಿಂತ ಹೆಚ್ಚೇ ಆಯಿತು. ಇನ್ನು 8, 12 ಜಿಬಿ ರ್ಯಾಮ್ ಎಂಬುದು ಗ್ರಾಹಕರನ್ನು ಆಕರ್ಷಿಸಲು ಮೊಬೈಲ್ ಕಂಪೆನಿಗಳು ಮಾಡುವ ಕಸರತ್ತು ಅಷ್ಟೇ. ರ್ಯಾಮ್‌ಗಿಂತಲೂ ಅಂತರಿಕ ಸಂಗ್ರಹ ಹೆಚ್ಚಿದ್ದರೆ ಉಪಯೋಗಕ್ಕೆ ಬರುತ್ತದೆ. 4 ಜಿಬಿ ರ್ಯಾಮ್ ಇದ್ದು 128 ಜಿಬಿ ಆಂತರಿಕ ಸಂಗ್ರಹ ಇದ್ದರೆ ಅದು ಒಳ್ಳೆಯ ಕಾನ್ಫಿಗರೇಷನ್. 64 ಜಿಬಿ ಆಂತರಿಕ ಸಂಗ್ರಹ ಇದ್ದು ಅದಕ್ಕೆ 6 ಜಿಬಿ ರ್ಯಾಮ್ ಇದ್ದರೆ ಅದರಿಂದ ಹೆಚ್ಚಿನ ಉಪಯೋಗವಿಲ್ಲ.
ನಾಲ್ಕು ಕ್ಯಾಮರಾಗಳು ಮತ್ತು ಮೀಡಿಯಂ ಪ್ರೊಸೆಸರ್ ಹಾಗೆಯೇ ಒಪ್ಪೋ ಎಫ್15ನಲ್ಲಿ 8 ಜಿಬಿ ರ್ಯಾಮ್ ನೀಡಲಾಗಿದೆ. ಆದರೆ ಇದರಲ್ಲಿರುವುದು ಮಧ್ಯಮ ವರ್ಗದ ಪ್ರೊಸೆಸರ್. 2.1 ಗಿಗಾಹಟ್ಜ್ì ವೇಗದ ಮೀಡಿಯಾ ಟೆಕ್ ಹೀಲಿಯೋ ಪಿ70 ಎಂಬ 8 ಕೋರ್‌ಗಳ ಪ್ರೊಸೆಸರ್. ಅಂಡ್ರಾಯ್ಡ 9ಪೈ ಅನ್ನು ಕಲರ್ ಓಎಸ್ ಜೊತೆಗೆ ನೀಡಲಾಗಿದೆ. ಅಂಡ್ರಾಯ್ಡ 10 ಬಂದು ಅನೇಕ ತಿಂಗಳೇ ಕಳೆದರೂ ಇನ್ನೂ ಆನೇಕ ಕಂಪೆನಿಗಳು ಅಂಡ್ರಾಯ್ಡ 9 ಅನ್ನೇ ನೀಡುತ್ತಿವೆ. ಅದಕ್ಕೆ ಕಾರಣಗಳು ತಿಳಿದುಬರಬೇಕಷ್ಟೆ.
ಕ್ಯಾಮರಾ: ಇದರಲ್ಲಿ ನಾಲ್ಕು ಲೆನ್ಸ್‌ಗಳ ಕ್ಯಾಮರಾ ಇದೆ. ಮುಖ್ಯ ಕ್ಯಾಮರಾ 48 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದೆ. ಜೊತೆಗೆ 8 ಮೆ.ಪಿ., 2 ಮೆ.ಪಿ., 2. ಮೆ.ಪಿ. ಸೆಕೆಂಡರಿ ಲೆನ್ಸ್‌ಗಳು ಸಹ ಇವೆ. 16 ಮೆಗಾಪಿಕ್ಸೆಲ್ ಸಾಮರ್ಥ್ಯವುಳ್ಳ ಸೆಲ್ಫಿà ಕ್ಯಾಮರಾ ಇದೆ. ಮೊಬೈಲ್‌ನ ದರಕ್ಕೆ ಹೋಲಿಸಿದರೆ, ಸೆಲ್ಫಿà ಕ್ಯಾಮರಾದ ಪಿಕ್ಸೆಲ್ ಸಾಮರ್ಥ್ಯ ಕಡಿಮೆಯೇ.
ಸ್ಕ್ರೀನ್ ಮತ್ತು ಸ್ಕ್ಯಾನರ್
ಇದು 6.4 ಇಂಚುಗಳ ಅಮೋಲೆಡ್ ಪರದೆ ಹೊಂದಿದೆ. 2400×1080 ರೆಸಲ್ಯೂಶನ್ ಹೊಂದಿದೆ. (408 ಪಿಪಿಐ). ಪರದೆಗೆ ಗೊರಿಲ್ಲಾ ಗ್ಲಾಸ್ ಕೋಟಿಂಗ್ ಇದ್ದು, ಮೊಬೈಲು 7.9 ಮಿ.ಮೀ. ದಪ್ಪ, 172 ಗ್ರಾಂ ತೂಕ ಹೊಂದಿದೆ. ಮೊಬೈಲ್‌ನ ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್ ನೀಡಲಾಗಿದೆ ಎನ್ನುವುದೇನೋ ಸರಿ. ಆದರೆ, ಅದು ಮೊಬೈಲ್‌ನ ಹಿಂಬದಿ ಬರುವ ಸ್ಕ್ಯಾನರ್‌ನಷ್ಟು ವೇಗವಾಗಿರುವುದಿಲ್ಲ. ಬೆರಳಲ್ಲಿ ಕೊಂಚ ಧೂಳು ಕುಳಿತಿದ್ದರೂ ಕೆಲಸ ಮಾಡುವುದಿಲ್ಲ. ಎಲ್ಲ ರೀತಿಯಿಂದಲೂ ಮೊಬೈಲ್‌ನ ಹಿಂಬದಿಯಲ್ಲಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನುಕೂಲಕರ.
ಒಪ್ಪೋ ಎಫ್ 15 ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರಕುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಅಲ್ಲದೇ ಇತರೆ ಮೊಬೈಲ್ ಮಾರಾಟದ ಅಂಗಡಿಗಳಲ್ಲೂ ಲಭ್ಯ. ಒಟ್ಟಾರೆ, ಈ ಮೊಬೈಲ್‌ನಲ್ಲಿ ನೀಡಲಾಗಿರುವ ಸವಲತ್ತುಗಳಿಗೆ ಹೋಲಿಸಿ ನೋಡುವುದಾದರೆ, ಈ ಸೆಟ್‌ಗೆ ನಿಗದಿಯಾಗಿರುವ ದರ ಹೆಚ್ಚೆಂದೇ ಹೇಳಬೇಕಾಗುತ್ತದೆ. ಇದಕ್ಕಿಂತ ಉತ್ತಮ ಪ್ರೊಸೆಸರ್, ಕ್ಯಾಮರಾ ಉಳ್ಳ ಮೊಬೈಲ್‌ಗಳು 15- 17 ಸಾವಿರಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತವೆ.
ಸ್ಲಾಟ್ ಮತ್ತು ಬ್ಯಾಟರಿ
ಇದಕ್ಕೆ ಎರಡು ಸಿಮ್ ಕಾರ್ಡ್ ಹಾಕಿಕೊಂಡು ಒಂದು ಮೆಮೊರಿ ಕಾರ್ಡ್ ಸಹ ಹಾಕಿಕೊಳ್ಳಬಹುದು. 4000 ಎಂಎಎಚ್ ಬ್ಯಾಟರಿ ಇದೆ. ಇದಕ್ಕೆ ಟೈಪ್ ಸಿ ಚಾರ್ಜರ್ ಪೋರ್ಟ್ ಇದ್ದು, VOOC ವೇಗದ ಚಾರ್ಜರ್ (20 ವ್ಯಾಟ್) ನೀಡಲಾಗಿದೆ.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.