ಬ್ಯಾಂಕುಗಳಲ್ಲಿ ಅಪ್ರಂಟಿಸ್‌ಶಿಪ್‌ಗೆ ಅವಕಾಶ
Team Udayavani, Dec 21, 2020, 7:42 PM IST
8500 ಅಭ್ಯರ್ಥಿಗಳಿಗೆ ಅಪ್ರಂಟಿಸ್‌ಶಿಪ್ ತರಬೇತಿ ನೀಡಲಾಗುವುದು. ಅವರಿಗೆ ಸ್ಟೈಫಂಡ್‌ಕೂಡ ನೀಡಲಾಗುವುದು. ಆದರೆ, ಅವರನ್ನು ತನ್ನ ನೌಕರರೆಂದು ಪರಿಗಣಿಸುವುದಿಲ್ಲ ಎಂದು ಎಸ್‌ಬಿಐನ ಪ್ರಕಟಣೆ ತಿಳಿಸಿದೆ!
ಅಪ್ರಂಟಿಸ್‌ಶಿಪ್ ಆಕ್ಟ್ 1961ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 8500 ಕ್ಲರಿಕಲ್ ಹುದ್ದೆಗಳಿಗಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಕೌಶಲ್ಯಾಭಿವೃದ್ಧಿ ಮಂತ್ರಾಲಯದ ನಿಯಂತ್ರಣದಲ್ಲಿರುವ ಈ ಕಾಯ್ದೆ ಅನ್ವಯ 8500 ಅಭ್ಯರ್ಥಿಗಳು ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಪಡೆಯುತ್ತಾರೆ. ಆದರೆ, ಹೀಗೆ ಆಯ್ಕೆಯಾದವರನ್ನು ತನ್ನ ಉದ್ಯೋಗಿಗಳೆಂದುಪರಿಗಣಿಸುವುದಿಲ್ಲ ಎಂದೂ ಎಸ್‌ಬಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಅಪ್ರಂಟಿಸ್‌ಶಿಪ್ ಮಾಡಬೇಕೆಂದರೆ… :
ಅಭ್ಯರ್ಥಿಗಳುಕನಿಷ್ಠ20 ವರ್ಷ ಮತ್ತು ಗರಿಷ್ಠ28 ವರ್ಷಗಳ ವಯೋಮಿತಿಯಲ್ಲಿರ ಬೇಕು. ಯಾವುದಾದರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ತರಬೇತಿಯ ಅವಧಿ ಮೂರು ವರ್ಷಗಳು. ಅಷ್ಟರೊಳಗೆ CAIIB/JAIIB/IIBF ಎನ್ನುವ ಬ್ಯಾಂಕುಗಳ ಅಂತರಿಕ ಪರೀಕ್ಷೆಗಳಿಗೆ ಅರ್ಹತೆ ಪಡೆಯಬೇಕು.ತರಬೇತಿಯ ಮೊದಲ ವರ್ಷ 15000, ಎರಡನೆ ವರ್ಷ 16500 ಮತ್ತು ಮೂರನೇ ವರ್ಷ 19500 ಸ್ಟೈಪೆಂಡ್ ನೀಡಲಾಗುವುದು. ಬೇರೆ ಯಾವುದೇ ರೀತಿಯ ಸೌಲಭ್ಯಗಳಿರುವುದಿಲ್ಲ. ಅಭ್ಯರ್ಥಿಗಳ ಆಯ್ಕೆಯನ್ನು ಅನ್ ಲೈನ್ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಜ್ಞಾನದ ಪರೀಕ್ಷೆ ಮೂಲಕ ಮಾಡಲಾಗುವುದು ಎಂದು ಎಸ್‌ಬಿಐ ಪ್ರಕಟಣೆ ತಿಳಿಸಿದೆ.
ಕಾರ್ಮಿಕ ಸಂಘಗಳ ವಿರೋಧ : ಬ್ಯಾಂಕ್‌ಕಾರ್ಮಿಕ ಸಂಘಗಳು ಈ ಕ್ರಮವನ್ನು ವಿರೋಧಿಸಿವೆ. ಅವರ ಪ್ರಕಾರಬ್ಯಾಂಕಿಂಗ್ ವಲಯದಲ್ಲಿ ಕ್ಲರಿಕಲ್ ಉದ್ಯೋಗಿಗಳ ಸಂಖ್ಯೆಕ್ಷೀಣಿಸುತ್ತಿದೆ. 2016-17ರಲ್ಲಿ ಕ್ಲರಿಕಲ್ ನೇಮಕಾತಿ 30000, 17-18ರಲ್ಲಿ19243,18-19ರಲ್ಲಿ7883,19-20ರಲ್ಲಿ7275, 20-21ರಲ್ಲಿ 18954 ಮತ್ತು21-22ರಲ್ಲಿ ಕೇವಲ 2500 ಇರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ಈಗ8500 ಜನರನ್ನು ಅಪ್ರಂಟಿಸ್‌ಶಿಪ್ ನೆಪದಲ್ಲಿ ನೇಮಕ ಮಾಡಿಕೊಂಡರೆ, ಮುಂದಿನ ವರ್ಷದಿಂದ ನೇಮಕಾತಿಯಲ್ಲಿ ಕಡಿತವಾಗಬಹುದು ಎಂಬ ಆತಂಕವನ್ನುಕಾರ್ಮಿಕ ಧುರೀಣರು ವ್ಯಕ್ತಪಡಿಸಿದ್ದಾರೆ. ಕೌಶಲ್ಯಾಭಿವೃದ್ಧಿ ಹೊಂದಿದ ನೌಕರರು ಉತ್ಪಾದನಾ ವಿಭಾಗಕ್ಕೆ ಬೇಕಾಗುತ್ತಾರೆಯೇ ವಿನಾ ಬ್ಯಾಂಕಿಂಗ್ ನಂಥ ಸೇವಾಕ್ಷೇತ್ರಕ್ಕೆ ಅಲ್ಲ. ಜೊತೆಗೆ, ಬ್ಯಾಂಕುಗಳಲ್ಲಿ ಮೂರು ವರ್ಷಗಳಷ್ಟು ಸುದೀರ್ಘ ಉದ್ಯೋಗ ಪೂರ್ವ ತರಬೇತಿಯೂ ಬೇಕಾಗುವುದಿಲ್ಲ ಎಂಬ ಮಾತುಗಳೂ ಇವೆ.
ಬ್ಯಾಂಕುಗಳಲ್ಲಿ ಅಪ್ರಂಟಿಸ್‌ಶಿಪ್ ಮಾಡಿದರೆ,ಅವರಿಗೆ ಬ್ಯಾಂಕ್‌ಉದ್ಯೋಗ ವಿನಹಬೇರೆ ಎಲ್ಲಿಯೂಅವರ ತರಬೇತಿಯಬಳಕೆ ಆಗುವುದಿಲ್ಲ. ಮುಂದೊಂದು ದಿನ, ಉದ್ಯೋಗ ತರಬೇತಿಯ ಹೆಸರಿನಲ್ಲಿ ಇವರನ್ನು ರೆಗ್ಯುಲರ್‌ಉದ್ಯೋಗಿಗಳ ಜಾಗದಲ್ಲಿಕೂರಿಸುವ ಸಾಧ್ಯತೆಯೂ ಇಲ್ಲದಿಲ್ಲ. ಇದು ಬ್ಯಾಂಕ್‌ವ್ಯವಹಾರಗಳ ರಹಸ್ಯ ಹೊರಹೋಗಲು ಅವಕಾಶ ನೀಡಬಹುದು. ಹಾಗೆಯೇಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡಿಸುವ ತಂತ್ರವೂ
ಆಗಿರಬಹುದು. ಮುಂದಿನ ದಿನಗಳಲ್ಲಿ ಇದು ಹೊರ ಗುತ್ತಿಗೆಯ ರೂಪ ತಳೆದು ಹೊಸ ನೇಮಕಾತಿಗಳೇ ನಡೆಯದೇ ಹೋಗಬಹುದು. ಹೀಗೇನಾದರೂ ಆದರೆ, ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲ ಇಲಾಖೆ ಇದ್ದೂ ಇಲ್ಲದಂತೆ ಆಗುತ್ತದೆ.ಸದ್ಯ ಸ್ಟೇಟ್ ಬ್ಯಾಂಕ್ ಒಂದೇ ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಇದುನಿರೀಕ್ಷಿತ ಫಲ ನೀಡಿದರೆ ಇತರ ಬ್ಯಾಂಕುಗಳೂ ಈ ಹಾದಿಯನ್ನು ಹಿಡಿಯುವುದು ಖಂಡಿತ. ಉದ್ಯೋಗದ ಭರವಸೆ ಇಲ್ಲದ ಮತ್ತು ಬೇರೆ ಕಡೆ ಉಪಯೋಗವೂ ಇಲ್ಲದ ಮೇಲೆಅಪ್ರಂಟಿಸ್‌ಶಿಪ್ ಹೆಸರಿನ ತರಬೇತಿಯ ಹಿಂದಿನ ಉದ್ದೇಶ ಏನು ಎನ್ನುವ ಪ್ರಶ್ನೆ ಈಗ ಹಲವರನ್ನುಕಾಡುತ್ತಿದೆ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.