ಅವರ್ ಗ್ಲಾಸ್
Team Udayavani, Feb 17, 2020, 5:44 AM IST
ಮ್ಯೂಸಿಯಂಗಳಲ್ಲಿ ಇವುಗಳನ್ನು ನೋಡಿರುವ ಸಾಧ್ಯತೆ ಹೆಚ್ಚು. ಗೋಡೆ ಗಡಿಯಾರ, ಕೈಗಡಿಯಾರ, ಅಲಾರಂ , ಅಷ್ಟೇ ಯಾಕೆ ಸಮಯ ಅಳೆಯುವ ಯಾವುದೇ ಉಪಕರಣ ಆವಿಷ್ಕಾರಗೊಳ್ಳುವುದಕ್ಕೆ ಮೊದಲೇ ಬಳಕೆಯಲ್ಲಿದ್ದ ಸಮಯ ಅಳೆಯುವ ಸಾಧನವಿದು. ಇಂದು ಸಮಯವನ್ನು ಅಳೆಯಲು ಸ್ಟಾಪ್‌ವಾಚ್ ಇದೆ. ಮೊಬೈಲಿನಲ್ಲೂ ಸ್ಟಾಪ್‌ವಾಚ್ ನೀಡಲಾಗಿರುತ್ತದೆ. ಆದರೆ ಹಿಂದೆ ಅಂಥ ಯಾವುದೇ ಸವಲತ್ತು ಇರಲಿಲ್ಲ. ಆ ಸಮಯದಲ್ಲಿ ಸಮಯವನ್ನು ಅಲೆಯಲು ಬಳಕೆಯಾಗುತ್ತಿದ್ದ ಉಪಕರಣ “ಅವರ್ ಗ್ಲಾಸ್’. ಎರಡು ಗಾಜಿನ ಬಲ್ಬ್ಗಳನ್ನು ಒಂದಕ್ಕೊಂದು ಕೂರಿಸಿ ತಯಾರಿಸುವ ಅವರ್‌ಗ್ಲಾಸ್‌ನ ಒಳಗೆ ಮರಳನ್ನು ತುಂಬಲಾಗುತ್ತದೆ. ಅವರ್ ಗ್ಲಾಸನ್ನು ಉಲ್ಟಾ ಮಾಡಿದರೆ ಬಲ್ಬಿನಿಂದ ಬಲ್ಬಿಗೆ ಮರಳು ಸ್ವಲ್ಪ ಸ್ವಲ್ಪವಾಗಿ ಸುರಿಯತೊಡಗುತ್ತದೆ.
ವಿವಿಧ ಗಾತ್ರದ ಅವರ್‌ಗ್ಲಾಸ್ ಮರಳು ವಿವಿಧ ಸಮಯವನ್ನು ತಿಳಿಸುತ್ತಿತ್ತು. ಗಾತ್ರ ಹೆಚ್ಚಿದಂತೆ ಅವು ತಿಳಿಸುವ ಸಮಯವೂ ಹೆಚ್ಚುತ್ತಿತ್ತು. ಅದರ ಹಿಂದಿನ ಲಾಜಿಕ್ ಇಷ್ಟೆ. ದೊಡ್ಡ ಗಾತ್ರದ ಅವರ್ ಗ್ಲಾಸ್‌ನಲ್ಲಿ ತುಂಬಾ ಮರಳನ್ನು ತುಂಬಬಹುದಿತ್ತು. ಹೀಗಾಗಿ ಮರಲು ಪೂರ್ತಿಯಾಗಿ ಸುರಿದು ಬೀಳಲು ಹೆಚ್ಚು ಸಮಯ ಬೇಕಾಗುತ್ತಿತ್ತು. ಹಿಂದೆಲ್ಲಾ ಸಮುದ್ರಯಾನ ಮಾಡುವ ಸಂದರ್ಭದಲ್ಲಿ ಅವರ್ ಗ್ಲಾಸ್‌ನಿಂದ ತುಂಬಾ ಸಹಾಯವಾಗುತ್ತಿತ್ತು. ಇಂದಿಗೂ ಬ್ಯಾಟರಿ ಬೇಡದ, ಅಲ್ಟಾವಯಲೆಟ್ ಕಿರಣ- ಕಾಂತ ಕ್ಷೇತ್ರ ಪ್ರಭಾವಕ್ಕೆ ಬಗ್ಗದೇ ಇರುವ ಈ ಸಾಧನವನ್ನು ವೈಜ್ಞಾನಿಕ ಕಾರಣಗಳಿಗಾಗಿ ಬಳಸುವುದುಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.