ಚೆನ್ನಾಗಿ ಪ್ಯಾಕ್‌ ಮಾಡಿ ಕೃಷಿ ಉತ್ಪನ್ನಗಳ ಸಂರಕ್ಷಣಾ ವಿಧಾನಗಳು


Team Udayavani, Feb 3, 2020, 5:00 AM IST

packing

ಕೃಷಿ ಉತ್ಪನ್ನಗಳು ಬಹುಕಾಲದವರೆಗೆ ಕೆಡದಂತೆ ನೋಡಿಕೊಳ್ಳಲು ಬಳಕೆಯಾಗುತ್ತಿರುವುದೇ ಪ್ಯಾಕಿಂಗ್‌ ವಿಧಾನ. ಪ್ಯಾಕಿಂಗ್‌ ಮಾಡಿ ಮಾರುಕಟ್ಟೆ ಮುಟ್ಟುವರೆಗೂ ಜೋಪಾನ ಮಾಡುವುದು ಮತ್ತು ಹಣ್ಣು,ತರಕಾರಿಗಳು ಕೊಳೆಯಾಗದಂತೆ, ಕೆಡದಂತೆ ನೋಡಿಕೊಳ್ಳಲು ಕೊಯ್ಲಿನ ನಂತರದ ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಯಾವ ರೀತಿ ನಿರ್ವಹಿಸಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಪ್ರತ್ಯೇಕ ಮನೆ ಇರಲಿ
ಪ್ಯಾಕಿಂಗ್‌ ಮಾಡಲು ಪ್ರತ್ಯೇಕ ಮನೆಯನ್ನು ಇದ್ದರೆ ಚೆನ್ನ. ಮುಖ್ಯವಾಗಿ ಅದು ಉತ್ಪನ್ನಗಳನ್ನು ಸಾಗಿಸಲು ಅನುಕೂಲಕರವಾಗಿರಬೇಕೇ ಹೊರತು ತೋಟದ ನಡುವಲ್ಲಿದ್ದು, ಬೇರೆ ಬೆಳೆಗಳಿಗೆ ನಷ್ಟ ಮಾಡುವಂತಿರಬಾರದು. ಉತ್ಪನ್ನಗಳನ್ನು ವಾಹನಗಳಿಗೆ ತುಂಬಿಸುವ ಸಂದರ್ಭದಲ್ಲಿ, ಕೆಲಸಗಾರರು ಓಡಾಡುವಷ್ಟು ಜಾಗವಿರಬೇಕು. ಪ್ಯಾಕಿಂಗ್‌ ನಡೆಯುವ ಸ್ಥಳ ಈ ರೀತಿ ಇದ್ದಾಗ ಯಾವ ಬಗೆಯ ನಷ್ಟಕ್ಕೂ ಆಸ್ಪದವಿರುವುದಿಲ್ಲ.

ಪ್ರೀ- ಸಾರ್ಟಿಂಗ್‌, ಅಂದರೆ- ಪೂರ್ವ ಹಂತದ ವರ್ಗೀಕರಣ. ಕೊಯ್ಲು ಮಾಡಿದ ಉತ್ಪನ್ನಗಳನ್ನು ಪ್ಯಾಕಿಂಗ್‌ ಮನೆಗೆ ತಂದಾಗ ಅವುಗಳನ್ನು ವರ್ಗೀರಣ ಮಾಡುವುದು ಸುಲಭ. ವಿವಿಧ ಬಗೆಯ ಹಣ್ಣು ಅಥವಾ ತರಕಾರಿಗಳನ್ನು ಸಾಗಿಸಿದಾಗ ಪರಸ್ಪರ ಸ್ಪರ್ಶವಾದರೆ ಕೆಡುವ ಸಂಭವ ಇರುತ್ತದೆ.

ಬ್ಯಾಕ್ಟೀರಿಯಾ ಹತೋಟಿ
– ಕೊಳೆಯಲು ಬಿಡದೇ ಗ್ಲವಸು ಬಳಸಿ ಸುಣ್ಣದ ಪುಡಿ ಆಲಮ್‌ ದ್ರಾವಣ ಎಲೆ, ತುಂಬುಗಳನ್ನು ಕತ್ತರಿಸಿ ತೊಟ್ಟಿನ ಜಾಗಕ್ಕೆ ಸಿಂಪಡಣೆ ಮಾಡಬೇಕು.
– ಬಿಸಿ ನೀರಿನ ಉಪಚಾರ ಹಣ್ಣುಗಳಿಗೆ ಸೂಕ್ತ. ಬಿಸಿನೀರಲ್ಲಿ ಹಣ್ಣುಗಳನ್ನು ಅದ್ದಿ ತೆಗೆದರೆ, ಅಥವಾ ಸ್ವಲ್ಪ ಹೊತ್ತು ನೆನೆಸಿದರೆ ಹಣ್ಣುಗಳಲ್ಲಿ ಕಿಣ್ವಗಳ ಆಕ್ರಮಣವನ್ನು ತಡೆಬಹುದು.
– ಪ್ಯಾಕಿಂಗ್‌ ಸಮಯದಲ್ಲಿ ಉತ್ಪನ್ನಗಳನ್ನು ಧೂಳಿನಿಂದ ದೂರವಿಡಬೇಕು. ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ಪ್ಯಾಕಿಂಗ್‌ ಮನೆಯ ಸುತ್ತಲೂ ನೈರ್ಮಲ್ಯ ಕಾಪಾಡಬೇಕು, ಬಿಗಿಯಾಗಿ ಪ್ಯಾಕ್‌ ಮಾಡಿದರೆ ಸಾಗಾಣಿಕೆಗೆ ಸೂಕ್ತ. ಹೆಚ್ಚು ಭಾರ ಹೇರದಿರುವುದು, ಚೀಲಗಳ ಮಗ್ಗುಲ ಉಬ್ಬಲು ಬಿಡದಿರುವುದು.
– ಪ್ಯಾಕೆಟ್‌ ಒಳಗೆ ಗಾಳಿಯಾಡಲು ಬಿಡುವುದು.

ಉಪಯುಕ್ತತೆಗಳು ಏನೇನು?
– ಆಕರ್ಷಕವಾಗಿ ಪ್ಯಾಕಿಂಗ್‌ ಮಾಡುವುದರಿಂದ ಗ್ರಾಹಕರ, ಕೊಂಡುಕೊಳ್ಳುವವರ ಗಮನ ಸೆಳೆಯಬಹುದು.
– ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಬಹುದು.
– ಸಾಗಾಟಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
– ಸುಲಭ ಮತ್ತು ಸರಳ ಸಾಗಣಿಕೆಗೆ ಉಪಯುಕ್ತ.
– ಸಾಗಾಟದ ಸಂದರ್ಭದಲ್ಲಿ ಆಗುವ ನಷ್ಟ ಕಡಿಮೆಯಾಗುತ್ತದೆ.

ಪ್ಯಾಕಿಂಗ್‌ ಸಾಮಗ್ರಿ
ಫೈಬರ್‌ ಬೋರ್ಡ್‌: ಪದಾರ್ಥಗಳನ್ನು ಸುಗಮವಾಗಿ ಸಾಗಿಸಲು ಫೈಬರ್‌ ಬುಟ್ಟಿಗಳನ್ನು, ಮರದ ಬಾಕ್ಸ್‌ಗಳನ್ನು, ಕಾಗದವನ್ನು,ಉತ್ತಮ ಗುಣಮಟ್ಟದ ಕ್ಯಾರಿ ಬ್ಯಾಗ್‌ಗಳನ್ನು ಬಳಸಬೇಕು. ಮುಖ್ಯವಾಗಿ, ಪದಾರ್ಥಗಳಿಗೆ ಹೊಡೆತ ಬೀಳದ ಹಾಗೆ ಬುಟ್ಟಿ, ಬಾಕ್ಸ್‌, ಬ್ಯಾಗ್‌ ತುಂಬಬಾರದು.

– ಶ್ರೀನಾಥ ಮರಕುಂಬಿ

ಟಾಪ್ ನ್ಯೂಸ್

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.