ಎಲ್ಲ ಕಡೆ ಪ್ಯಾನ್‌ಗೆ ಅಗ್ಬುಟ್ಟೈತೆ


Team Udayavani, Apr 17, 2017, 3:01 PM IST

17-ISIRI-7.jpg

ಆರ್ಥಿಕ ವ್ಯವಹಾರಗಳನ್ನು ನಡೆಸುವಾಗ ಬ್ಯಾಂಕಿನಲ್ಲೋ, ಅಥವಾ ಬೇರೆಡೆಯಲ್ಲೋ ‘ನಿಮ್ಮ ಪ್ಯಾನ್‌ ಕಾರ್ಡಿನ ಒಂದು ಜೆರಾಕ್ಸ್‌ ಪ್ರತಿಯನ್ನು ನೀಡಿ’ ಎಂದಾಗ ‘ಮನೆಯಲ್ಲಿ ಬಿಟ್ಟು ಬಂದಿದ್ದೇನೆ, ತೆಗೆದುಕೊಂಡು ಬರುತ್ತೇನೆ’ ಎಂದು ಹೇಳಿ ಹಲವು ಬಾರಿ ಸುತ್ತಾಡಿದ್ದಿದೆ. ಆದರೆ ಯಾವ ಯಾವ ಸಂದರ್ಭದಲ್ಲಿ ಪ್ಯಾನ್‌ ಕಾರ್ಡ್‌ ಅವಶ್ಯಕ ಎಂದು ಯೋಚಿಸಿದ್ದೇವೆಯೇ? ಇಲ್ಲ ಎಂಬ ಉತ್ತರ ನಿಮ್ಮದಾದರೆ ಆರ್ಥಿಕ ವ್ಯವಹಾರದ ಹಲವು ಸಂದರ್ಭಗಳಲ್ಲಿ ಪ್ಯಾನ್‌ಕಾರ್ಡ್‌ ಬಳಕೆಯ ಇಣುಕು ನೋಟ ಇಲ್ಲಿದೆ..!
 
ಪ್ಯಾನ್‌ಕಾರ್ಡ್‌ ಪ್ಲಾನ್‌ ಗಾರ್ಡ್‌
ಅಯ್ಯೋ ಪ್ಯಾನ್‌ ಕಾರ್ಡ್‌ ತಂದೇ ಇಲ್ಲಾ.. ಈಗ ಮನೆಗೆ ಹೋಗಿ ತರಬೇಕಾ..? ಪ್ಯಾನ್‌ ಕಾರ್ಡ್‌ ಇಲ್ಲದಿದ್ದರೆ ನಡೆಯೋದಿಲ್ವಾ.. ಪ್ಯಾನ್‌ ನಂಬರ್‌ ಹೇಳಿದ್ರೆ ಸಾಕಾ, ಅಥವಾ ಜೆರಾಕ್ಸ್‌ ಬೇಕಾ..? ಇತ್ಯಾದಿ ಮಾತುಗಳು ಎದುರಿಗಿರುವ ಆರ್ಥಿಕ ವ್ಯವಹಾರ ನಡೆಸುವಾತನೊಂದಿಗೆ ಸಾಮಾನ್ಯವಾಗಿ ಆಡಿರುತ್ತೇವೆ. ಆದರೆ ಪ್ಯಾನ್‌ ಕಾರ್ಡ್‌ವೊಂದು ಜೇಬಿನಲ್ಲಿದ್ದರೆ ಎಂತಹ ಗಹನವಾದ ಆರ್ಥಿಕ ವ್ಯವಹಾರವಾದರೂ ಸುಲ¸‌ವಾಗಿ ನಡೆಯುತ್ತೆ ಎನ್ನುವುದು ನೆನಪಿನಲ್ಲಿರಲಿ.   ಅಂದ ಹಾಗೆ, ದೇಶದ ಎಲ್ಲ ಆರ್ಥಿಕ ವ್ಯವಹಾರಗಳಿಗೂ ಪ್ಯಾನ್‌ ಕಾರ್ಡ್‌ಅನ್ನು ಕಡ್ಡಾಯಗೊಳಿಸಲಾಗುತ್ತಿದೆ. ತೆರಿಗೆ ಪಾವತಿಗೆ ಮಾತ್ರ ಪ್ಯಾನ್‌ ಕಾರ್ಡ್‌ ಬಳಸಬೇಕು ಎನ್ನುತ್ತಿದ್ದ ಕಾಲ ಈಗಿಲ್ಲ, ಬ್ಯಾಂಕಿನ ಖಾತೆ ತೆರೆಯುವುದರಿಂದ ಹಿಡಿದು ದುಬಾರಿ ಮೊತ್ತದ ಪೋನ್‌ ಖರೀದಿವರೆಗೆ ಪ್ಯಾನ್‌ ಕಾರ್ಡ್‌ ಬಳಕೆಯಾಗುತ್ತಿದೆ.

ಅಷ್ಟಕ್ಕೂ ಪ್ಯಾನ್‌ ಕಾರ್ಡ್‌ ಎಂದರೆ ಏನು?
ಪರ್ಮನೆಂಟ್‌ ಅಕೌಂಟ್‌ ನಂಬರ್‌ ಎನ್ನುವುದು ಪ್ಯಾನ್‌ನ ವಿಸು ರೂಪ. ಕನ್ನಡದಲ್ಲಿ ಇದನ್ನು ಶಾಶ್ವತ ಖಾತೆ ಸಂಖ್ಯೆ ಎಂದು ಕರೆಯುತ್ತಾರೆ. ಆದಾಯ ತೆರಿಗೆ ಇಲಾಖೆಯಿಂದ ದೇಶದ ಪ್ರತಿಯೊಬ್ಬ ಪೌರನಿಗೂ ಆರ್ಥಿಕ ವ್ಯವಹಾರ ನಡೆಸಲು ನೀಡುವ ಶಾಶ್ವತ ಖಾತೆ ಸಂಖ್ಯೆಯೇ ಪ್ಯಾನ್‌ ಕಾರ್ಡ್‌. ಇದು 10 ಅಂಕಿಗಳನ್ನು ಹೊಂದಿದ್ದು, ವಿಳಾಸ ಬದಲಾವಣೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಸಂಖ್ಯೆಯನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಅಲ್ಲದೆ ಒಂದಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ಗಳನ್ನು ಹೊಂದುವುದು ಅಕ್ಷಮ್ಯ. ಪ್ಯಾನ್‌ ಕಾರ್ಡ್‌ಗಳು ವ್ಯಕ್ತಿಯ ಯೂನಿವರ್ಸಲ್‌ ಗುರಿತಿನ ಚೀಟಿಯಾಗಿಯೂ  ಕೆಲಸ ಮಾಡುತ್ತದೆ.  ಕಾಯ್ದೆ 114ಬಿ ಅಡಿಯಲ್ಲಿ ಹಲವು ಸಂದ¸‌ìದಲ್ಲಿ ಶಾಶ್ವತ ಖಾತೆ ಸಂಖ್ಯೆ ಬಳಕೆ ಕಡ್ಡಾಯವಾಗಿದೆ.  ಹಾಗಾದರೆ ಪ್ಯಾನ್‌ ಸಂಖ್ಯೆ ಎಲ್ಲೆಲ್ಲಿ ಬಳಸುತ್ತೇವೆ ನೋಡೋಣ

ಬ್ಯಾಂಕ್‌ ಖಾತೆ ತೆರೆಯಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಯನ್ನು ತೆರಯಲು ಪ್ಯಾನ್‌ ನಂಬರ್‌ ಕಡ್ಡಾಯ. ಅನೇಕ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿ ಹೆಚ್ಚಿನ ಹಣವಿಟ್ಟು ತೆರಿಗೆ ಪಾವತಿ ಮಾಡದಿರುವವರಿಗಾಗಿ ಸರ್ಕಾರ ಬಳಸಿದ ಅಸ್ತ್ರವೇ ಬ್ಯಾಂಕುಗಳಲ್ಲಿ ಕಡ್ಡಾಯ ಪ್ಯಾನ್‌ ಬಳಕೆ. ಇದರಿಂದ ಅನೇಕ ಬ್ಯಾಂಕುಗಳಲ್ಲಿ ಖಾತೆ ಹೊಂದಿದವರ ಹಣ, ಬ್ಯಾಂಕಿನ ಸಾಲ ಮುಂತಾದ ವಿವರಗಳು ಬಹುಬೇಗನೇ ತಿಳಿಯುತ್ತದೆ. ತೆರಿಗೆ ವಿಷಯದಲ್ಲಿ ಸರ್ಕಾರಕ್ಕೆ ಮೋಸ ಸಾಧ್ಯವೇ ಇಲ್ಲ. ಜಂಟಿ ಖಾತೆಗೆ ಖಾತೆದಾರರ ಪ್ಯಾನ್‌ ನಂಬರ್‌ ವಿವಿರ ಅವಶ್ಯ. ಈಗ ಉಳಿತಾಯ ಖಾತೆಗೂ ಪ್ಯಾನ್‌ ನಂಬರ್‌ ಕಡ್ಡಾಯಗೊಳಿಸಲಾಗುತ್ತಿದೆ. ಅದರೆ ಕೋ-ಆಪರೇಟಿವ್‌ ಬ್ಯಾಂಕುಗಳಲ್ಲಿ ಪ್ಯಾನ್‌ ಬಳಕೆ ಇನ್ನೂ ಕಡ್ಡಾಯವಾಗಿಲ್ಲ.

ಆಸ್ತಿ ಖರೀದಿ, ತೆರಿಗೆ ಪಾವತಿಸಲು
ಸರ್ಕಾರ ನಿಗದಿ ಮಾಡಿರುವುದಕ್ಕಿಂತ ವಾರ್ಷಿಕ ತಲಾದಾಯ ಹೆಚ್ಚಿದ್ದಲ್ಲಿ ತೆರಿಗೆ ಪಾವತಿ ಅನಿವಾರ್ಯ. ಈ ಸಂದ¸‌ìದಲ್ಲಿ ಶಾಶ್ವತ ಖಾತೆ ಸಂಖ್ಯೆ ಬಳಕೆಯಾಗುತ್ತದೆ.  ಐದು ಲಕ್ಷ, ಅದಕ್ಕಿಂತ ಹೆಚ್ಚಿನ ವîೌಲ್ಯದ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಪ್ಯಾನ್‌ ಸಂಖ್ಯೆ ಕಡ್ಡಾಯ. ನಿವೇಶನ ಪರಬಾರೆ, ಹಸ್ತಾಂತರ, ಸೈಟ್‌ ರಿಜಿಸ್ಟರ್‌, ಸ್ಟಾಂಪ್‌ ಮೌಲ್ಯಾಂಕನದಲ್ಲಿ ಪ್ಯಾನ್‌ ಬಳಕೆಯಾಗುತ್ತದೆ. ಜಂಟಿ ಆಸ್ತಿ, ಟ್ರಸ್ತಿನ ಆಸ್ತಿ ಇದ್ದರೆ ಪ್ರತಿ ವ್ಯಕ್ತಿಯ ಶಾಶ್ವತ ಖಾತೆ ಸಂಖ್ಯೆ ವಿವರ ನೀಡಬೇಕಾಗುತ್ತದೆ.

ಅಂಚೆ ಕಚೇರಿಯಲ್ಲಿ ಠೇವಣಿ ಇಡಲು, 50 ಸಾವಿರ ರೂ, ಗಿಂತ ಹೆಚ್ಚು ಹಣವನ್ನು ಖಾತೆಗೆ ಜಮೆ ಮಾಡಲು, ಹಾಗೂ ಅಂಚೆ ಕಚೇರಿಯ ಎಪ್‌ಡಿ, ಆರ್‌ಡಿ ಇತ್ಯಾದಿ ಸೇವೆಗಳನ್ನು ಬಳಸಿಕೊಳ್ಳಲು ಪ್ಯಾನ್‌ ಕಾರ್ಡ್‌ ಅಗತ್ಯ.

ಸಾಲ-ವಾಹನ ಖರೀದಿ
ಕೆಲವೊಂದು ದ್ವಿಚಕ್ರ ವಾಹಗಳನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ವಾಹನಗಳನ್ನು ಖರೀದಿಸಲು ಪ್ಯಾನ್‌ ಕಡ್ಡಾಯವಾಗಿದೆ. ಮಾರಾಟ, ಪರಬಾರೆ ಮಾಡುವಾಗಲೂ ಸಹ ಬಳಸುವುದುಂಟು.   ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಗೃಹಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಸೇರಿದಂತೆ ಮಾಡುವ ಎಲ್ಲ ಸಾಲಗಳಿಗೂ ಪ್ಯಾನ್‌ ಬಳಕೆಯಾಗುತ್ತದೆ. ಜೊತೆಗೆ ಆರ್ಥಿಕ ಕ್ಷೇತ್ರಗಳಲ್ಲಿ 50 ಸಾವಿರ ರೂ.ಗಿಂತ ಮಿಗಿಲಾಗಿ ಸಾಲ ಪಡೆಯಲು, ನೀಡಲು ಪ್ಯಾನ್‌ ಬಳಸುವುದುಂಟು.  ಹೊಸದಾಗಿ ಮನೆಗೆ ದೂರವಾಣಿ ಸಂಪರ್ಕವನ್ನು ಕಲ್ಪಿಸಲು ಪ್ಯಾನ್‌ ಅಗತ್ಯ. ಲ್ಯಾಂಡ್‌ ಲೈನ್‌, ಬ್ರಾಡ್‌ ಬ್ಯಾಂಡ್‌ ಸೇವೆಗಳನ್ನು ಪಡೆಯಲು ಶಾಶ್ವತ ಖಾತೆ ಸಂಖ್ಯೆಯನ್ನು ಬಳಸುವುದುಂಟು.

ಬಾರಿ ಮೊತ್ತದ ಹಣ ಜಮೆಗೆ
ಒಂದು ದಿನದಲ್ಲಿ ಒಂದು ಖಾತೆಗೆ ಬ್ಯಾಂಕುಗಳಲ್ಲಿ 50 ಸಾವಿರ ರೂ. ಮಿಗಿಲಾಗಿ ಹಣ ಜಮೆ ಮಾಡಲು, ಹಣದ ಮೂಲ ಮಾಹಿತಿಯ ಜೊತೆಗೆ, ಪ್ಯಾನ್‌ ನಂಬರ್‌ ಅನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಬ್ಯಾಂಕ್‌ ಡ್ರಾಪ್ಟ್, ಬ್ಯಾಂಕರ್ಸ್‌ ಚೆಕ್‌, ಪೇ ಆರ್ಡರ್ಸ್‌ಗಳ 50 ಸಾವಿರ ರೂ. ಹೆಚ್ಚಿನ ವ್ಯವಹಾರಕ್ಕೆ ಪ್ಯಾನ್‌ ಅಗತ್ಯ. ಕೆಲವೊಂದು ಬ್ಯಾಂಕುಗಳಲ್ಲಿ ಚಲನ್‌ಗಳಲ್ಲಿಯೇ ಪ್ಯಾನ್‌ ನಂಬರ್‌ ಗಾಗಿ ಸ್ಥಳವನ್ನು ನಮೂದಿಸಿರುತ್ತಾರೆ.

ವಿದೇಶಿ ಪ್ರವಾಸ, ಹೋಟೆಲ್‌, ರೆಸ್ಟೋರೆಂಟ್‌
ಐಷಾರಾಮಿ, ದುಬಾರಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ 50 ಸಾವಿರ ರೂ. ಮಿಗಿಲಾಗಿ ಬಿಲ್‌ಗ‌ಳನ್ನು ಪಾವತಿಸಲು ಪ್ಯಾನ್‌ ಅಗತ್ಯವಿದೆ. ಕೆಲವು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ 25 ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟಿಗೂ ಪ್ಯಾನ್‌ ನಂಬರ್‌, ವಿಳಾಸ, ಅಗತ್ಯ ದಾಖಲೆ ಕೇಳುವುದುಂಟು.  25 ಸಾವಿರ ರೂ. ಹೆಚ್ಚಿನ ಮೊತ್ತದ ವಿದೇಶಿ ಪ್ರವಾಸದ ಟಿಕೆಟ್‌ ಖರೀದಿ, 50 ಸಾವಿರ ರೂ.ಗಿಂತ ಹೆಚ್ಚಿನ ವಿದೇಶಿ ಹಣ ವಿನಿಮಯ, ಪಾಸ್‌ ಪೋರ್ಟ್‌ ಪಡೆಯಲು ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿ ಬೇಕೆ ಬೇಕು. ವಿದೇಶದಲ್ಲಿ ಉಳಿದುಕೊಂಡ ದೇಶಿ ವ್ಯಕ್ತಿಗಳು ದೇಶಿಯ ಬ್ಯಾಂಕುಗಳಲ್ಲಿ ಹಣದ ವ್ಯವಹಾರವನ್ನು ನಡೆಸಲು ಪ್ಯಾನ್‌ ಕಾರ್ಡ್‌ಗಳನ್ನು ಬಳಸುವುದುಂಟು.

ವಿಮೆ, ಚಿನ್ನಾಭರಣ ಖರೀದಿ
ಬೃಹತ್‌ ಮೌಲ್ಯದ ಚಿನ್ನಾ¸‌ರಣ ಖರೀದಿ, ಬಿಲ್‌ ಪಾವತಿ ಸಂದ¸‌ìದಲ್ಲಿ ಪ್ಯಾನ್‌ ಸಂಖ್ಯೆ ಅವಶ್ಯವಿದೆ. ಐದು ಲಕ್ಷಕ್ಕಿಂತ ಹೆಚ್ಚಿನ ಖರೀದಿಗೆ ಪ್ಯಾನ್‌ ಬಳಕೆಯಲ್ಲಿತ್ತು. ಅಪನಗದೀಕರಣ ಬಳಿಕ ಆ¸‌ರಣ ಖರೀದಿ ಸಂದ¸‌ìದಲ್ಲಿ ಪ್ಯಾನ್‌ ಕಡ್ಡಾಯಗೊಳಿಸಲಾಗಿದೆ. ಹಾಗೆಯೇ 2 ಲಕ್ಷ ಮೀರಿದ ಸರಕು ಸೇವೆಗಳ ಖರೀದಿ, ಮಾರಾಟಕ್ಕೂ ಪ್ಯಾನ್‌ ಬಳಸಲಾಗುತ್ತಿದೆ.   ಬೃಹತ್‌ ಗಾತ್ರದ ವಿಮಾ ಪಾಲಿಸಿಗಳನ್ನು ಖರೀದಿಸುವಾಗ, ವಾರ್ಷಿಕವಾಗಿ 50 ಸಾವಿರ ರೂ. ಗಿಂತ ಹೆಚ್ಚು ಪ್ರೀಮಿಯಂ ಪಾವತಿಗೆ, ಲಕ್ಷಕ್ಕಿಂತ ಹೆಚ್ಚು ಪ್ರೀಮಿಯಂ ಹಣವನ್ನು ಪಡೆಯಲು ಪ್ಯಾನ್‌ ಬಳಕೆಯಾಗುತ್ತದೆ. ಜೀವ ಮಿಮೆಯನ್ನು ತಮ್ಮ ನಂಬಿದವರಿಗೆ ನೀಡಲು ಸಹ ಪ್ಯಾನ್‌ ನಂಬರ್‌ ಪರಿಶೀಲಿಸುವುದುಂಟು.

ಠೇವಣಿ: ಕ್ರೆಡಿಟ್‌ ಕಾರ್ಡ್‌
ಎಪ್‌ಡಿ, ಆರ್‌ಡಿ ಇತ್ಯಾದಿ ಹೊಸ ಡೆಪಾಸಿಟ್‌ಗಳನ್ನು ನಿಗದಿತ ವರ್ಷಗಳಿಗೆ ಠೇವಣಿ ಇಡಲು ಪ್ಯಾನ್‌ ಬಳಕೆಯಾಗುತ್ತದೆ. ಪಿಪಿಎಪ್‌, ಟಿಡಿಎಸ್‌ ಗಳ ಬಳಕೆಯಲ್ಲಿಯೂ ಪ್ಯಾನ್‌ ಅಗತ್ಯ. ಸರ್ಕಾರಿ ಆರ್ಥಿಕ ಯೋಜನೆ ಸಂಧ್ಯಾ ಸುರûಾ, ಪ್ರಧಾನ ಮಂತ್ರಿ ಆವಾಸ್‌, ಸುಕನ್ಯಾ ಇತ್ಯಾದಿ ಯೋಜನೆಗಳಲ್ಲಿ ಬಳಕೆ   ಬಾಂಕುಗಳಲ್ಲಿ ಕ್ರೆಡಿಟ್‌ ಕಾರ್ಡಿಗಾಗಿ ಅರ್ಜಿಸಲ್ಲಿಸುವಾಗ ಅಗತ್ಯವಾಗಿ ಶಾಶ್ವತ ಖಾತೆ ಸಂಖ್ಯೆಯನ್ನು ಕೇಳುತ್ತಾರೆ. ಹೊಸದಾಗಿ ಡೆಬಿಟ್‌ ಕಾರ್ಡ್‌, ಇ- ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಅವಕಾಶಗಳನ್ನು ಬ್ಯಾಂಕಿನಿಂದ ಪಡೆಯಲು ಪ್ಯಾನ್‌ ನಂಬರ್‌ ಅತ್ಯಗತ್ಯ. ಕ್ಯಾಶ್‌ ಕಾಡ್ಸ್‌ ಗಳ ವಾರ್ಷಿಕ 50 ಸಾವಿರ ರೂ. ಮಿಗಿಲಾಗಿ ಹಣ ಪಾವತಿಗೆ ಪ್ಯಾನ್‌ ಬೇಕು.

ಬಾಂಡ್‌ ಖರೀದಿ; ಷೇರು ಮಾರುಕಟ್ಟೆ:
ವಿವಿಧ ಕಂಪನಿಗಳ ಬಾಂಡ್‌, ಆರ್‌ಬಿಐ ಬಾಂಡುಗಳ ಗಾತ್ರ 50 ಸಾವಿರ ರೂ. ಮಿಗಿಲಾಗಿದ್ದರೆ, ಅವುಗಳ ಖರೀದಿ ಮತ್ತು ಸ್ವಾಧೀನ ಪಡಿಸಲು ಪ್ಯಾನ್‌ ಅಗತ್ಯ. ಇದು ಸಂದಬೋìಚಿತವಾಗಿ ಬಳಕೆಗೆ ಬರುವುದುಂಟು. ಬಾಂಡುಗಳ ವîೌಲ್ಯ ಕಡಿಮೆಯಾದಂತೆ ಪ್ಯಾನ್‌ ಅವಶ್ಯಕತೆಯಿರುವುದಿಲ್ಲ.   ಷೇರು ಮಾರುಕಟ್ಟೆಗೆ ಸಂಬಂಧಿಸಿದ ಮೊದಲ ಹೆಜ್ಜೆ ಡಿಮ್ಯಾಟ್‌ ಅಕೌಂಟ್‌ ತೆರೆಯಲು ಪ್ಯಾನ್‌ ಅಗತ್ಯ. ನಂತರ 50 ಸಾವಿರ ರೂ. ಹೆಚ್ಚಿನ ವಿವಿಧ ಉತ್ಪನ್ನ ಪ್ರತಿ ಖರೀದಿ, ಮಾರಾಟ, ಸ್ವಾಧೀನ ಪಡಿಸಲು ಪ್ಯಾನ್‌ ಬಳಕೆ, ಕೆಲವೆಡೆ ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಪ್ಯಾನ್‌ ಬಳಸುವುದುಂಟು.

ವಿವಿಧ ಕಂಪನಿಗಳ ಮ್ಯೂಚುಯಲ್‌ ಪಂಡ್‌ಗಳನ್ನು ಖರೀದಿ, ಪಾವತಿ ಮಾಡಲು ಪ್ಯಾನ್‌ ಕಡ್ಡಾಯ. ಅದರೆ ಖರೀದಿಸುವ ಪಂಡಿನ ಗಾತ್ರ 50 ಸಾವಿರ ರೂ.ಗಿಂತ ಮಿಗಿಲಾಗಿರಬೇಕು. ತಮ್ಮ ಬ್ಯಾಂಕಿನ ಖಾತೆಗಳಿಂದಲೇ ಖರೀದಿಸುವವರಿಗೆ ಪ್ಯಾನ್‌ ಅವಶ್ಯಕತೆಯಿರುವುದಿಲ್ಲ. ಇದಲ್ಲದೆ ¸‌ದ್ರತೆ ಮಾರಾಟದಲ್ಲಿಯೂ ಪ್ಯಾನ್‌ ಬಳಕೆಯಿದೆ.
 
 ಉಳಿತಾಯ ಖಾತೆಗೆ ಪ್ಯಾನ್‌ ಕಡ್ಡಾಯ
 ಉಳಿತಾಯ ಖಾತೆ ತೆರೆಯುವಾಗ ಮೊದಲೆಲ್ಲಾ ಪ್ಯಾನ್‌ ಕಡ್ಡಾಯವಿರಲಿಲ್ಲ. ಹೀಗಾಗಿ ಖಾತೆ ತೆರೆದವರಿಗೆ ಪ್ಯಾನ್‌ ನಂಬರ್‌ ಲಿಂಕ್‌ ಆಗಿಯೇ ಇಲ್ಲ. ಅಪನಗದೀಕರಣವಾದ ಬಳಿಕ ಉಳಿತಾಯ ಖಾತೆದಾರರಿಗೂ ಪ್ಯಾನ್‌ ನಂಬರ್‌ ಲಿಂಕ್‌ ಮಾಡುವುದನ್ನು ಕೇಂದ್ರ ನೇರ ತೆರಿಗೆ ಮಂಡಲಿ (ಸಿಬಿಟಿಬಿ) ಕಡ್ಡಾಯಗೊಳಿಸಿದೆ. ಅದಕ್ಕಾಗಿ ಜೂ. 30ರ ವರೆಗೆ ಸಮಯಾವಕಾಶವನ್ನು ನೀಡಿದೆ. ಅಂದರೆ ಅವರಿಗೂ ಸಹ ಆದಾಯ ತೆರಿಗೆ ಪಾವತಿಸುವ ಹಕ್ಕನ್ನು ನೀಡಿದಂತಾಗಿದೆ.

ಪ್ಯಾನ್‌, ಆಧಾರ್‌ ವ್ಯತ್ಯಾಸವೇನು?
 ಪ್ಯಾನ್‌ ಕಾರ್ಡ್‌ ಆರ್ಥಿಕ ವ್ಯವಹಾರಗಳಿಗಾಗಿ ಆದಾಯ ತೆರಿಗೆ ಇಲಾಖೆ ಕೊಡಮಾಡುವ ಶಾಶ್ವತ ಖಾತೆ ಸಂಖ್ಯೆ. ಆಧಾರ್‌ ಬಾರತದ ಪ್ರತಿಯೊಬ್ಬ ನಾಗರಿಕನ ವಿಶಿಷ್ಟ ಗುರುತಿನ ಚೀಟಿ. ಪ್ಯಾನ್‌ ಕಾರ್ಡಿನಿಂದ ಆರ್ಥಿಕ ವ್ಯವಹಾರ ಮಾತ್ರ ಸಾಧ್ಯ, ಆಧಾರ್‌ ಕಾರ್ಡಿನಲ್ಲಿ ಸರ್ಕಾರಿ ಸೌಲ¸‌ ಸೇವೆಗಳು, ಬ್ಯಾಂಕಿನ ವ್ಯವಹಾರಗಳು ಸಾಧ್ಯ. ಆಧಾರ್‌ ಆಧಾರಿತ ಇ-ಕೆವೈಸಿ ಸೌಲ¸‌Â ಪಡೆದುಕೊಂಡರೆ ಷೇರು ಮಾರುಕಟ್ಟೆಯಲ್ಲಿಯೂ ಆಧಾರ್‌ ಬಳಸಬಹುದು.

ಆಧಾರ್‌ನೊಂದಿಗೆ ಪ್ಯಾನ್‌ ಲಿಂಕ್‌
 ಹೊಸ ಪ್ಯಾನ್‌ ಕಾರ್ಡ್‌ ಅರ್ಜಿಸಲ್ಲಿಸಲು ಆಧಾರ್‌ ಕಡ್ಡಾಯಗೊಳಿಸುವ ಮಸೂದೆ ಲೋಕಸಬೆಯಲ್ಲಿ ಅಂಗೀಕೃತಗೊಂಡ ಮೇಲೆ ಪ್ಯಾನ್‌ ಕಾರ್ಡಿಗೆ ಆಧಾರ್‌ ನಂಬರ್‌ ಜೋಡಣೆ ಕಾರ್ಯ ಬಿರುಸಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ತೆರಿಗೆ ಇಲಾಖೆ ಇ-ಪೈಲಿಂಗ್‌ ವೆಬ್‌ಸೈಟಿನಲ್ಲಿ ಅವಕಾಶ ಕಲ್ಪಿಸಿದೆ. ಅಲ್ಲದೆ ಪ್ಯಾನ್‌ ಮತ್ತು ಆಧಾರ್‌ ಕಾರ್ಡಿನಲ್ಲಿ ಅಕ್ಷರಗಳ ವ್ಯತ್ಯಾಸಗಳಿದ್ದರೆ ಪ್ಯಾನ್‌ಕಾರ್ಡಿನ ಪೂರ್ಣಹೆಸರು ಮತ್ತು ಆಧಾರ್‌ ಮೊದಲಕ್ಷರಗಳನ್ನು ಬಳಸಿ ಲಿಂಕ್‌ ಮಾಡಲು ಅವಕಾಶ ನೀಡಲಾಗಿದೆ. ಇನ್ನೂ ಮುಂದುವರಿದು ಆಧಾರ್‌ ಜಾಲತಾಣದಲ್ಲಿ ಪ್ಯಾನ್‌ ಪ್ರತಿ ಅಪ್‌ಲೋಡ್‌ ಮಾಡುವ ಅವಕಾಶ ಕಲ್ಪಿಸಲಾಗಿದೆ. 

 ಲೋಪಕ್ಕೆ ದೂರು ಕೊಡೋದು ಹೇಗೆ?
 ಆರ್ಥಿಕ ವ್ಯವಹಾರಕ್ಕೆ ಪ್ಯಾನ್‌ ಕಡ್ಡಾಯ ಆದರೆ ಪ್ಯಾನ್‌ಕಾರ್ಡಿನಲ್ಲಿ ಹೆಸರು, ತಂದೆ ಹೆಸರು, ಚಿತ್ರ, ಜನ್ಮದಿನಾಂಕದಲ್ಲಿ ವ್ಯತ್ಯಾಸವಾದರೆ ಏನು ಮಾಡಬೇಕು? ದೂರು ದಾಖಲಿಸುವುದು ಹೇಗೆ ಎಂಬ ಪ್ರಶ್ನೆ ಮೂಡದೇ ಇರದು. ಅದಕ್ಕಾಗಿ ಆದಾಯ ತೆರಿಗೆ ಇಲಾಖೆ ವೆಬ್‌ಸೈಟಿನಲ್ಲಿ ಲಾಗ್‌ಆನ್‌ ಆಗಿ, ನಿಮಗಾಗಿರುವ ತೊಡಕು ಯಾವುದು ಯಾವ ಬಗೆಯ ದೂರು ದಾಖಲಿಸಲಬೇಕು ಎಂಬುದನ್ನು ಆಯ್ಕೆಮಾಡಿ, ಅದರಲ್ಲಿ ಎನ್ನೆಸಿಎಲ್‌ ಅಥವಾ ಯುಟಿಐಐಎಸ್‌ಎಲ್‌ ಎಂಬೆಡರು ಎಜೆನ್ಸಿಯಲ್ಲಿ ನಿಮಗೆ ಸಂಬಂಧಿಸಿದ ಏಜೆನ್ಸಿಯನ್ನು ಆಯ್ಕೆಮಾಡಿಕೊಂಡು ಮೂಲ ಮಾಹಿತಿ ತುಂಬಿ ಸಬ್‌ಮಿಟ್‌ ಮಾಡಿ, ಈಗ ದಾಖಲಿಸಿದ ದೂರಿಗೆ ಕೂಪನ್‌ ಸಂಖ್ಯೆ ಸಿಗುತ್ತದೆ. ಅದನ್ನು ಬಳಸಿಕೊಂಡು ಸ್ವಲ್ಪದಿನದಲ್ಲಿಯೇ ಪರಿಷ್ಕೃತ ಪ್ಯಾನ್‌ಕಾರ್ಡ್‌ ಪಡೆಯಬಹುದು. ಇನ್ನು ಹೆಚ್ಚಿನ ಮಾಹಿತಿಗೆ ತೆರಿಗೆ ಇಲಾಖೆಯನ್ನು ಸಂಪರ್ಕಿಸುವುದು ಸೂಕ್ತ. 
 
 ಎನ್‌.ಅನಂತನಾಗ್‌

ಟಾಪ್ ನ್ಯೂಸ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

9(1

Mangaluru: 10ಕ್ಕೂ ಅಧಿಕ ಅಪಾಯಕಾರಿ ಕ್ರಾಸಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.