ಆದಾಯಕ್ಕೂ, ಆರೋಗ್ಯಕ್ಕೂ ಪಪ್ಪಾಯಿ


Team Udayavani, Mar 27, 2017, 12:28 PM IST

pappaya.jpg

ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ. ಹೃದಯ ಹಾಗೂ ನರಗಳ ದೌರ್ಬಲ್ಯ ಸಮಸ್ಯೆ ಇರುವವರಿಗೆ ನವಚೈತನ್ಯ ನೀಡುವ, ಅಜೀರ್ಣ ಮತ್ತು ಮಲಬದ್ಧತೆ ನಿವಾರಿಸಿ, ದೇಹದ ಕೊಬ್ಬು, ಕೊಲೆಸ್ಟ್ರಾಲ್‌ ಹಾಗೂ ಬೊಜ್ಜಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಕೆಲಸ ಮಾಡುವ ಪಪ್ಪಾಯಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮ. 

ಆರೋಗ್ಯ ವೃದ್ಧಿಸುವ ಪಪ್ಪಾಯಿ ಹಣ್ಣಿನ ಬೆಳೆ ಹೇಳಿಕೇಳಿ ಸುಲಭ ಅಂತ ಅನ್ನಿಸಿದರೂ ಒಂದಿಷ್ಟು ಶ್ರಮ ಬೇಕೇ ಬೇಕು. ಬಡ ರೈತನ ಕೈತುಂಬ ರುಪಾಯಿ ನೀಡುವ ಪಪ್ಪಾಯಿ ಬೆಳೆ ಇಂದಿನ ದಿನಮಾನದಲ್ಲಿ ಲಾಭದಾಯಕ ಬೆಳೆಯಾಗಿದೆ. ಸಾಕಷ್ಟು ನೀರಾವರಿ ಅನುಕೂಲವಿರುವ ರೈತರು ವಿವಿಧ ತಳಿಯ ಪಪ್ಪಾಯಿ ಬೆಳೆಗಳನ್ನು ಬೆಳೆದು ಕೈ ತುಂಬಾ ರುಪಾಯಿಗಳಿಸುವ ಮೂಲಕ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.

ದರ್ಣಪ್ಪ ಗೌಡ, ತರಕಾರಿ ಕೃಷಿಯಲ್ಲಿ ಈ ಹೆಸರು ಕೇಳದವರ ಬಹುಶ ತಾಲೂಕಿನಲ್ಲಿ ಯಾರೂ ಇಲ್ಲವೆಂದೇ ಹೇಳಬಹುದು. ಕೃಷಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಧರ್ಣಪ್ಪ ಗೌಡರವರು ಮೂಲತಃ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಕುಂಟಿಯಾನದವರು. ಚಾರ್ವಕ, ಮಾಡಾವು, ಸಂಪ್ಯ ಮತ್ತು ಕುಂಟಿಯಾನ ಇತ್ಯಾದಿ ಕಡೆಗಳಲ್ಲಿ ಇವರು ಸುಮಾರು 30 ಎಕರೆಗೂ ಅಧಿಕ ಭೂಮಿಯಲ್ಲಿ ವಿವಿಧ ಕೃಷಿಗಳನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಅಡಿಕೆ, ತೆಂಗಿನಂತಹ ವಾಣಿಜ್ಯ ಬೆಳೆಗಳ ಜೊತೆಯಲ್ಲಿ ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಡಿಕೆ ಕೃಷಿಗೆ ಪರ್ಯಾಯ ಬೆಳೆಯಾಗಿ ವಿವಿಧ ತರಕಾರಿಗಳನ್ನು ಇವರು ಬೆಳೆಸುತ್ತಿದ್ದಾರೆ. ಬಸಳೆ ಕೃಷಿ ಇವರ ನೆಚ್ಚಿನ ಕೃಷಿಯಾಗಿದೆ. ಇದರೊಂದಿಗೆ ಇತರ ಬಹಳಷ್ಟು ತರಕಾರಿಗಳನ್ನು ಬೆಳೆಸುತ್ತಿದ್ದಾರೆ.

ಸಾವಯವ ಗೊಬ್ಬರದಿಂದ ಬೆಳೆದ ಪಪ್ಪಾಯಿ ರುಚಿಯಾಗಿರುತ್ತೆ. ಧರ್ಣಪ್ಪ ಗೌಡರವರು ಸಸಿಗಳಿಗೆ ರಾಸಾಯನಿಕ ಗೊಬ್ಬರದ ಬದಲಾಗಿ ಹೆಚ್ಚಾಗಿ ಸಗಣಿ ಗೊಬ್ಬರ,ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಹಣ್ಣುಗಳು ರುಚಿಕರವಾಗಿದ್ದು, ಆರೋಗ್ಯಕ್ಕೂ ಹಾನಿಯಾಗುವುದಿಲ್ಲ. ಅಲ್ಲದೆ ಪಪ್ಪಾಯಿ ಮರಗಳಿಗೂ ಯಾವುದೇ ರೋಗ ಬರುವುದಿಲ್ಲ ಎನ್ನುತ್ತಾರೆ. ಪಪ್ಪಾಯಿ ಬೆಳೆ ಮಾಡುವವರು ಮೊದಲಿಗೆ ಉತ್ತಮ ಜಾತಿಯ ಕಂಪೆನಿ ಜೀಜಗಳನ್ನು ಖರೀದಿ ಮಾಡಬೇಕಾಗುತ್ತದೆ. ಜನವರಿ ತಿಂಗಳಿನಲ್ಲಿ ಬಿತ್ತನೆ ಮಾಡಬೇಕು. ಸಸಿಯಾದ ಬಳಿಕ ಒಳ್ಳೆಯ ಫ‌ಲವತ್ತಾದ ಮರಳು ಮಿಶ್ರಿತ ಮಣ್ಣಿನಲ್ಲಿ ನಾಟಿ ಮಾಡಬೇಕು. ನಮ್ಮ ಈ ಪ್ರದೇಶದ ಗುಡ್ಡದ ಮಣ್ಣು ಪಪ್ಪಾಯಿ ಬೆಳೆಗೆ ಉತ್ತವಾಗಿದೆ ಎನ್ನುತ್ತಾರೆ ಧರ್ಣಪ್ಪ ಗೌಡರು. ಸಸಿಗಳನ್ನು ನೆಟ್ಟ 3 ತಿಂಗಳಿನಲ್ಲಿ ಹೂ ಬಿಡುತ್ತದೆ. ಸುಮಾರು 65 ದಿನಗಳಲ್ಲಿ ಪಪ್ಪಾಯಿ ಹಣ್ಣುಗಳು ಕೊಯ್ಲಿಗೆ ಬರುತ್ತದೆ. ಜೇಡಿ ಮಣ್ಣಿನಲ್ಲಿ ಪಪಾು³ ಬೆಳೆ ಚೆನ್ನಾಗಿ ಬರುವುದಿಲ್ಲ ಎನ್ನುತ್ತಾರೆ.

ಪಪ್ಪಾಯಿ ಹಣ್ಣಿನ ಕಟಾವು 
ಪಪ್ಪಾಯಿ ಹಣ್ಣುಗಳನ್ನು ಪೂರ್ತಿ ಹಣ್ಣಾದ ಮೇಲೆ ಕಟಾವು ಮಾಡಬಾರದು. ಸ್ವಲ್ಪ ಕಾಯಿ ಇದ್ದಾಗಲೇ ಕಟಾವು ಮಾಡಬೇಕು. ಏಕೆಂದರೆ ಪಪ್ಪಾಯಿ ಹಣ್ಣುಗಳು ತುಂಬಾ ಮೃದುವಾಗಿರುತ್ತದೆ. ಹೆಚ್ಚು ಹಣ್ಣಾದ ಕಾಯಿಯನ್ನು ಕಟಾವು ಮಾಡಿದರೆ ಅದನ್ನು ರಾಶಿ ಹಾಕಲು ತುಂಬಾ ಕಷ್ಟವಾಗುತ್ತದೆ.ಯಾವುದೇ ರೀತಿಯಲ್ಲಿ ಪೆಟ್ಟಾದ ಹಣ್ಣನ್ನು ಗುಂಪು ಹಣ್ಣಿನಲ್ಲಿ ಸೇರಿಸಿ ಕಟಾವು ಮಾಡಬಾರದು. ಹೀಗೆ ಮಾಡುವುದರಿಂದ ಹಣ್ಣುಗಳು ಹಾಳಾಗುತ್ತವೆ. 

ಆರೋಗ್ಯ ವೃದ್ಧಿಸುವ ಪಪ್ಪಾಯಿ ಹಣ್ಣಿನ ಬೆಳೆಯನ್ನು ಯಾರೂ ಬೇಕಾದರೂ ಮಾಡಬಹುದು. ನಮ್ಮೂರಿನ ಮಣ್ಣು ಪಪ್ಪಾಯಿ ಬೆಳೆಗೆ ಉತ್ತಮವಾಗಿದೆ. ಸಸಿ ನೆಟ್ಟು 3 ತಿಂಗಳಲ್ಲಿ ಹೂ ಬಿಡುತ್ತದೆ. ಬಳಿಕ 65 ದಿನಗಳಲ್ಲಿ ಕಾಯಿಗಳನ್ನು ಕಟಾವು ಮಾಡಬಹುದು. ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆದ ಪಪ್ಪಾಯಿ ಮರಗಳಿಗೆ ರೋಗ ಬರುವುದು ಕಮ್ಮಿ. ಸುಲಭ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ ಧರ್ಣಪ್ಪ ಗೌಡ. 

ಮಾಹಿತಿಗೆ -9481973387

– ಸಿಶೇ ಕಜೆಮಾರ್‌

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.