ಪರಶುರಾಮರ ಪವರ್‌ಫುಲ್ ಚರಿತೆ
Team Udayavani, Jan 29, 2018, 12:40 PM IST
ಎಂಬಿಎ ಮುಗಿಸಿರುವ ಬಾಗಲಕೋಟೆಯ ಎಸ್.ಎಂ.ಪರಶುರಾಂ 12 ತಿಂಗಳ ಹಿಂದಷ್ಟೇ ತಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಹಾಕಿದ್ದಾರೆ. 30ಕೆ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಬೆಸ್ಕಾಂ ಜೊತೆ 25 ವರ್ಷದ ಒಪ್ಪಂದದ ಅನುಸಾರ ಯೂನಿಟ್‌ಗೆ 6.61 ರೂ. ಖರೀದಿಯೂ ಆಗುತ್ತದೆ. ಮಹಾ ಸಿಮೆಂಟ್‌ನಲ್ಲಿ ಮಾರುಕಟ್ಟೆ ವ್ಯವಸ್ಥಾಪಕರಾಗಿರುವ ಪರಶುರಾಂ,
ಊರೂರು ತಿರುಗುವವರು. ದಾವಣಗೆರೆಯ ಬಿ.ಎಂ. ಬಸಪ್ಪರೆಡ್ಡಿ, ಚಿತ್ರದುರ್ಗದ ಹಲವು ಗ್ರಾಹಕರು ಸೇರಿದಂತೆ ಹತ್ತಾರು ಜನರನ್ನು ಭೇಟಿ ಮಾಡಿದ್ದಾರೆ. ಸೋಲಾರ್ ರೂಫ್ ಟಾಪ್ ಸ್ಥಾವರಗಳನ್ನು ವೀಕ್ಷಿಸಿದ್ದಾರೆ. ಈ ಅನುಭವದ ಆಧಾರದಲ್ಲಿ ಅವರು ಯಾವುದೇ ಕಂಪನಿಗೆ ಪ್ರಾಜೆಕ್ಟ್ ಗುತ್ತಿಗೆ ಕೊಡಲಿಲ್ಲ. ನೇರವಾಗಿ ಅವರೇ ಸೋಲಾರ್ ಪ್ಯಾನೆಲ್‌ನಿಂದ ಹಿಡಿದು ಬೇಕಾದುದೆಲ್ಲವನ್ನು ಅಳವಡಿಸಿಕೊಂಡರು.
ಆದ ಲಾಭ?
ಇಡೀ ಯೋಜನೆಯ ವೆಚ್ಚದಲ್ಲಿ ಬರೋಬ್ಬರಿ 5 ಲಕ್ಷ ರೂ.ಗಳ ಉಳಿತಾಯವಾಗಿದೆ! ಇದನ್ನು ಹೀಗೂ ವಿವರಿಸಬಹುದು. ಒಂದು ಕಿಲೋ
ವ್ಯಾಟ್‌ಗೆ 85 ಸಾವಿರ ರೂ.ಗಳಷ್ಟು ವೆಚ್ಚವಾಗುತ್ತದೆ. ಗುಣಮಟ್ಟದ ವಿಚಾರದಲ್ಲಿ ಕೇಂದ್ರದ ಅಸಂಪ್ರದಾಯಿಕ ಇಂಧನ ಇಲಾಖೆ ಕೆಲವು ಷರತ್ತುಗಳನ್ನು ಹಾಕಿರುತ್ತದೆ. ವಿದ್ಯುತ್ ಪ್ರಸರಣ ಕಂಪನಿ ತನ್ನ ಕಡೆಯಿಂದ ಶಿಫಾರಸಾದ ಕಂಪನಿಗಳ ಉತ್ಪನ್ನಗಳನ್ನೇ ಬಳಸಿ ಈ ಸ್ಥಾವರ ಸ್ಥಾಪಿಸಿದ್ದರೆ ಮಾತ್ರ “ಎಸ್’ ಅನ್ನುತ್ತದೆ. ಸ್ವಾರಸ್ಯ ಎಂದರೆ, ನಾವೇ ಬಿಡಿಬಿಡಿ ವಸ್ತುಗಳನ್ನು ಖರೀದಿಸಿ ಕೆಲಸ
ಮಾಡಿಸಲು ಹೋದರೆ ಖರೀದಿಯಿಂದ ಕೆಲಸ ಜಾಸ್ತಿಯಾಗಬಹುದು. ಆದರೆ ಗುಣಮಟ್ಟ ಇನ್ನಷ್ಟು ಸುಧಾರಿಸುತ್ತದೆ. ಇದೇ ಕಾಲಕ್ಕೆ ಕಿಲೋ ವ್ಯಾಟ್‌ನ ಖರ್ಚಿನಲ್ಲಿ 55ರಿಂದ 60 ಸಾವಿರದಷ್ಟು ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತದೆ. ಬಾಗಲಕೋಟೆಯ 63ಎ ಸೆಕ್ಟರ್ ಬೃಂದಾವನ ಹೊಸಮನೆಯಲ್ಲಿ ನಡೆಸಿದ ಈ ಪ್ರಯೋಗದ ಫಲ ಇತರ ಸಂಭಾವ್ಯ ಸೋಲಾರ್ ರೂಫ್ಟಾಪ್‌ಉತ್ಪಾದಕರಿಗೂ ಸಿಗಬೇಕು ಎಂಬುದು ಪರಶುರಾಂ ಆಕಾಂಕ್ಷೆ.
2016ರ ಫೆಬ್ರವರಿಯಲ್ಲಿ ನೋಂದಣಿ ಹಾಗೂ ಡಿಸೆಂಬರ್‌ನಲ್ಲಿ ಜಾರಿಯ ಮಧ್ಯೆ ಎಲ್ಲೂ ಲಂಚದ ಖರ್ಚಿಲ್ಲ! ಕೇಂದ್ರದ ಜಿಎನ್‌ಎಸ್ ಎಸ್ ಯೋಜನೆಯಡಿ ಶೇ. 5ರ ಬಡ್ಡಿದರದ ಸಾಲ ಪಡೆಯುವುದು ಕೂಡ ತಮಗೆ ಸಮಸ್ಯೆಯಾಗಲಿಲ್ಲ ಎನ್ನುತ್ತಾರೆ ಪರಶುರಾಂ. ಕರ್ನಾಟಕದಲ್ಲಿನ ಏಕೈಕ ಸಮಸ್ಯೆ ಎಂದರೆ ಮನೆಯ ಮಂಜೂರಾದ ಲೋಡ್‌ಗೆ ಅನುರೂಪವಾದ ಸೋಲಾರ್ ವಿದ್ಯುತ್ ಮಾರಾಟದ ಅವಕಾಶ ಸಿಗುತ್ತದೆ. ಇದರಿಂದ ಅನಿವಾರ್ಯವಾಗಿ ಹೆಚ್ಚಿನ ಲೋಡ್‌ಗೆ ಅನುಮತಿ ಪಡೆಯುವುದರಿಂದ ಮಂಜೂರಾತಿ ಶುಲ್ಕ ಹಾಗೂ ಮಾಸಿಕ ಮೀಟರ್ ನಿರ್ವಹಣಾ ವೆಚ್ಚ ಅಧಿಕವಾಗುತ್ತದೆ. ಈಗಾಗಲೇ ವಿದ್ಯುತ್ ಬರದಿಂದ ತತ್ತರಿಸಿರುವ ರಾಜ್ಯ ಈ ನಿಯಮದಲ್ಲಿ ರಿಯಾಯಿತಿ ತೋರಿಸಿದರೆ ಗ್ರಾಹಕ ಎಸ್ಕಾಂಗೂ, ಉತ್ಪಾದಕ ನಾಗರಿಕರಿಗೂ ಲಾಭವಾಗುತ್ತದೆ. ಈ ನಡುವೆಯೇ ಪರಶುರಾಂ ಮತ್ತೂಂದು ವಿಶೇಷ ಮಾತಿನಿಂದ ನಮ್ಮ ಗಮನ ಸೆಳೆಯುತ್ತಾರೆ. ಬೇರೆ ರಾಜ್ಯದಲ್ಲಿ ಇಂತಹ ಷರತ್ತು ಇಲ್ಲ! ಇನ್ನೂ ಒಂದು ಅಂಶ ಗಮನಾರ್ಹ.
ಪರಶುರಾಂರ ಮನೆ ನಿರ್ಮಾಣವಾದುದು 13 ವರ್ಷಗಳ ಹಿಂದೆ. ಒಂದರ್ಥದಲ್ಲಿ “ಪಾಳು’ ಬಿದ್ದಿದ್ದ ಮನೆಯ ಮಾಳಿಗೆ ಈಗಷ್ಟೇ
ಉತ್ಪಾದನಾ ಕ್ಷೇತ್ರವಾಗಿದೆ. ಪರಶುರಾಂ ಹೇಳುವುದು ಇದನ್ನೇ, ರಾಜ್ಯದಲ್ಲಿ ಸದ್ಯ ಒಂದೇ ಊರು ಕೇರಿಗಳಲ್ಲಿ ಸಾಲು ಸಾಲು ರೂಫ್
ಟಾಪ್ ವಿದ್ಯುತ್‌ನ್ನು ಈಗಿರುವ ಬಹುಸಂಖ್ಯಾತ ಹಳೆಯ ಮನೆಗಳಲ್ಲಿ ಉತ್ಪಾದನೆ ಮಾಡುವಂತಾದರೆ ಮತ್ತು ಸರ್ಕಾರದ ನಿರಂತರ ವಿದ್ಯುತ್ ಸರಬರಾಜಿನ ಪ್ರತ್ಯೇಕ ಪ್ರಸರಣ ವ್ಯವಸ್ಥೆ ಮಾಡಿದರೆ ಸೋಲಾರ್ ವಿದ್ಯುತ್‌ನ ಒಂದು ಯೂನಿಟ್ ಕೂಡ ವ್ಯರ್ಥವಾಗುವುದಿಲ್ಲ. ಅಂತಹ “ಭಾಗ್ಯ’ಗಳ ಮೂಲಕ ಸರ್ಕಾರ ಸ್ಪಂದಿಸಲಿ ಅಂತ !
ಮಾಹಿತಿಗೆ- ಬಸಪ್ಪ ರೆಡ್ಡಿ-9481670482 ಪರಶುರಾಂ ಮೊ: 9538823477
ಗುರು ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.