ಪಾಟೀಲರ ಯಂತ್ರ ಲೋಕದಲ್ಲಿ…
Team Udayavani, Oct 9, 2017, 1:25 PM IST
ಸಾಮಾನ್ಯ ರೈತನ ಕೈಗೆಟುಕದ, ಸಂಕೀರ್ಣಮಯ ತಂತ್ರಜ್ಞಾನದ ನೂರಾರು ಕೃಷಿಯಂತ್ರಗಳು ಮಾರುಕಟ್ಟೆಯಲ್ಲಿವೆ. ಅವುಗಳ ಕಾರ್ಯವೈಖರಿಗೆ ಹೋಲಿಸಿದರೆ ಶರಣಬಸಪ್ಪ ಪಾಟೀಲರು ರೂಪಿಸುವ ಸಲಕರಣೆಗಳು ಸರಳ ಹಾಗೂ ಅಲ್ಪ ವೆಚ್ಚದಾಯಕ.
ಬಳಕೆಯೂ ಸುಲಭ. ಈ ಅನುಶೋಧಕ ವಿನ್ಯಾಸ ಮಾಡಿರುವ ‘ರೈತಪರ’ ಯಂತ್ರಗಳ ಲೋಕದಲ್ಲೊಂದು ಸುತ್ತು ಹಾಕೋಣ ಬನ್ನಿ
ತಮ್ಮ ತೋಟದಲ್ಲಿ ಯಥೇತ್ಛವಾಗಿ ಬೆಳೆಯುವ ನಿಂಬೆ ಹಣ್ಣುಗಳನ್ನು ವಿವಿಧ ಗಾತ್ರಗಳಿಗೆ ಅನುಸಾರವಾಗಿ ವಿಂಗಡಿಸುವ ಯಂತ್ರವೊಂದನ್ನು ನೋಡಿದ್ದ ಶರಣಬಸಪ್ಪ ಪಾಟೀಲರಿಗೆ ಅದನ್ನು ಖರೀದಿಸುವ ಆಸೆಯೇನೂ ಆಗಲಿಲ್ಲ. ಯಾಕೆಂದರೆ ಅದರ ಬೆಲೆ ಹಲವು ಸಾವಿರ ರೂಪಾಯಿ! ಹಾಗೆಂದು ಅದರಿಂದ ಸಿಗುತ್ತಿದ್ದ ಪ್ರಯೋಜನವೇನೂ ಕಡಿಮೆಯಲ್ಲ! ಮೂರ್ನಾಲ್ಕು ದಿನಗಳ ಕಾಲ ಅದರ ಕುರಿತು ಚಿಂತಿಸಿದ ಪಾಟೀಲರಿಗೆ ವಿಶಿಷ್ಟ ಐಡಿಯಾ ಹೊಳೆಯಿತು. ಒಂದಷ್ಟು ಹೊಸ ಕಚ್ಚಾ ಸಾಮಗ್ರಿ ತಂದು ತಾವೇ ಒಂದು ಹೊಸ ಸಲಕರಣೆಯನ್ನು ಮಾಡಿಯೇಬಿಟ್ಟರು. ಕಳೆದ ವಾರ ಅದು ಸಾಮಾಜಿಕ ಜಾಲತಾಣದಲ್ಲಿ ‘ವೈರಲ್’ ಆಯಿತು! ಎಷ್ಟೊಂದು
ಭೇಷ್‌ಗಳು, ಎಷ್ಟೊಂದು ಜನರ ಶಹಬ್ಟಾಸ್‌ಗಳು. ಫೋನ್ ಮಾಡಿದವರಿಗಂತೂ ಲೆಕ್ಕವೇ ಇಲ್ಲ. ಕಲಬುರ್ಗಿ ಸಮೀಪದ ಹಾಲಸುಲ್ತಾನಪುರದ ರೈತ ಶರಣಬಸಪ್ಪ ಪಾಟೀಲರ ಅನುಶೋಧನೆ ಇದೊಂದೇ ಅಲ್ಲ. ಅವರು ಆ ಈವರೆಗೆ ಮಾಡಿರುವ ಕೃಷಿ ಯಂತ್ರಗಳ ಸಂಶೋಧನೆಯ ಸ್ವರೂಪವಂತೂ ಅಚ್ಚರಿಪಡಿಸುತ್ತದೆ. ರೈತರು ನಿತ್ಯವೂ ಕೃಷಿಯಲ್ಲಿ ಎದುರಿಸುವ ಹಲವು ಬಗೆಯ ಸಂಕಟಗಳಿಗೆ ಇವರಲ್ಲಿ ಸುಲಭ ‘ಚಿಕಿತ್ಸೆ’ಗಳಿವೆ. ‘ಅವಶ್ಯಕತೆಯೇ ಸಂಶೋಧನೆಯ ಮೂಲ’ ಎಂಬ ಮಾತಿಗೆ
ನಿದರ್ಶನದಂತಿರುವ ಪಾಟೀಲರ ಕ್ರಿಯಾಶೀಲತೆ ಬೆರಗು ಮೂಡಿಸುತ್ತದೆ.
ತೊಗರಿ ಬೆಳೆಯ ಕುಡಿ ಚಿವುಟಿದರೆ ಇಳುವರಿ ಹೆಚ್ಚಾಗುತ್ತದೆ ಎಂಬ ಮಾಹಿತಿ ಸಿಗುತ್ತಲೇ, ಆ ಕೆಲಸಕ್ಕೆ ತೀರಾ ಸರಳ ಉಪಕರಣವೊಂದನ್ನು ರೂಪಿಸಿದರು. ಕೇವಲ ಒಂದು ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಸಾಧನವನ್ನು ಬಳಸಿ, ಒಬ್ಬನೇ ಒಂದು ಹೆಕ್ಟೇರಿನಷ್ಟು ಬೆಳೆಯ ಕುಡಿ ಚಿವುಟಬಹುದು. ಅದೂ ಬ್ಯಾಟರಿ ಚಾಲಿತ. ಪೀಡೆನಾಶಕ ಸಿಂಪಡಣೆಯ ‘ಸ್ಪ್ರೆಯರ್’ ಬ್ಯಾಟರಿ ಖಾಲಿಯಾದಾಗ, ಮತ್ತೆ ಅದನ್ನು ರಿಚಾರ್ಜ್ ಮಾಡುವ ಬದಲಿಗೆ ಅನುಪಯುಕ್ತ ಹೆಲ್ಮೆಟ್‌ಗೆ ಸೌರಫಲಕ ಜೋಡಿಸಿ, ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುವ ಬಗೆಯನ್ನು ತೋರಿಸಿಕೊಟ್ಟರು! ಗಿಡಗಳಿಗೆ ಇಷ್ಟೇ ಪ್ರಮಾಣದ ನೀರು ಕೊಡಬೇಕು ಎಂಬ ಉದ್ದೇಶದಿಂದ ರೂಪಿಸಿದ “ವಾಟರ್ ಮೀಟರ್’ ಸಾಧನವು ತೀರಾ ಸರಳ. ಬೆಳೆಯನ್ನು ರಕ್ಷಿಸುವ ಸೌರ ಬೇಲಿ (ಸೋಲಾರ್ ಫೆನ್ಸ್) ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸಿ, ಅದರ ಪ್ರಯೋಜನವನ್ನು ಹಲವು ರೈತರಿಗೆ ನೀಡಿದ ಪಾಟೀಲರು, ಕಡಿಮೆ ನೀರು
ಎತ್ತುವ ಕೊಳವೆಬಾವಿಯ ಕಾರ್ಯಕ್ಷಮತೆಯನ್ನು ತಮ್ಮದೇ ಆದ ಜಾಣತನದಿಂದ ಸುಧಾರಿಸಿದ್ದೂ ಉಂಟು. ಹಕ್ಕಿಗಳನ್ನು ಓಡಿಸುವ ಸೈರನ್, ನವಣೆ ಸಂಸ್ಕರಣೆಯ ಸರಳ ಸಾಧನ, ಹೊಸ ಮಾದರಿಯ ಗೋಬರ್ ಗ್ಯಾಸ್ ಘಟಕ ಇನ್ನಿತರ ಕೌಶಲದ ಸಲಕರಣೆಗಳು ಪಾಟೀಲರ ಅನುಶೋಧನೆಯ ಪಟ್ಟಿಯಲ್ಲಿವೆ.
ಈಚೆಗಷ್ಟೇ ಅವರು ನಿಂಬೆಯ ಹಣ್ಣುಗಳನ್ನು ಗಾತ್ರಕ್ಕೆ ಪೂರಕವಾಗಿ ಗ್ರೇಡಿಂಗ್ ಮಾಡುವ ಸುಲಭ ಸಾಧನ ಅನುಶೋಧಿಸಿದ್ದಾರೆ. ಎರಡು ಕಬ್ಬಿಣದ ತುಂಡು ಹಾಗೂ ನಾಲ್ಕು ಪ್ಲಾಸ್ಟಿಕ್ ಕೊಳವೆಗಳೊಂದಿಗೆ ಒಂದಷ್ಟು ಬೋಲ್ಟ್ ಹಾಗೂ ನಟ್- ಇವಷ್ಟೇ ಬೇಕಾಗುವ ಸಾಮಗ್ರಿ. ಈ ಕೆಲಸ ಮಾಡಲು ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಲೆಯ ಯಂತ್ರಗಳಿವೆ. ಆದರೆ ಆ ಯಂತ್ರ ಮಾಡುವ
ಕೆಲಸವನ್ನು ಶರಣಬಸಪ್ಪ ಪಾಟೀಲರು ಸುಲಭವಾಗಿ ತಮ್ಮ ಅನುಶೋಧನೆಯ ಮೂಲಕ ಮಾಡಿಬಿಟ್ಟಿದ್ದಾರೆ. ‘ಇದಕ್ಕ ಕರೆಂಟ್ ಬ್ಯಾಡ, ಹೆಚ್ಚು ಜಾಗಾನೂ ಬ್ಯಾಡ್ರಿ. ಹುಡುಗ್ರು ಸೈತ ಈ ಕೆಲಸ ಆರಾಮಾಗಿ ಮಾಡಲಿಕ್ಕೆ ಸಾಧ್ಯ’ ಎನ್ನುವ ಪಾಟೀಲರು, ಆ ಯಂತ್ರದ ಗುಟ್ಟನ್ನೆಲ್ಲ
ವಿಡಿಯೋದೊಂದಿಗೆ ರಟ್ಟು ಮಾಡಿದ್ದಾರೆ.
‘ರೊಕ್ಕ ಹೆಚ್ಚು ಖರ್ಚು ಮಾಡಿದ್ರ ಯಂತ್ರ ಅಂತಾರ. ಕಡಿಮೆ ಖರ್ಚು ಮಾಡಿದ್ರ ಅದನ್ಯಾಕ ಯಂತ್ರ ಅನಬಾರ್ದು’ ಎಂದು ನಗುತ್ತ ಪ್ರಶ್ನಿಸುವ ಶರಣಬಸಪ್ಪ ಪಾಟೀಲ ತಮ್ಮ ಯಂತ್ರಗಳ ಗುಟ್ಟನ್ನು ಯಾವತ್ತೂ ರಹಸ್ಯವಾಗಿ ಇಟ್ಟುಕೊಂಡವರಲ್ಲ. ಆಸಕ್ತರ ಜತೆ ಎಲ್ಲವನ್ನೂ ಹಂಚಿಕೊಳ್ಳುವ ನಿಸ್ವಾರ್ಥ ಮನೋಭಾವ ಅವರಲ್ಲಿದೆ. ಅಗತ್ಯವಿದ್ದರೆ ತಾವೇ ಹೋಗಿ ಸಲಕರಣೆ ತಯಾರಿಸಿಕೊಟ್ಟು ಬರುತ್ತಾರೆ. ಅದನ್ನೆಲ್ಲ ರೂಪಿಸುವ ರಗಳೆ ಬೇಡ ಎನ್ನುವವರಿಗೆ ತಾವೇ ತಯಾರಿಸಿಕೊಡುತ್ತಾರೆ.
ಈವರೆಗೆ ಕರ್ನಾಟಕ ಮಾತ್ರವಲ್ಲದೇ, ನೆರೆಹೊರೆಯ ರಾಜ್ಯಗಳ ನೂರಾರು ರೈತರು ಪಾಟೀಲರ ಸರಳ ಸಲಕರಣೆಗಳ ಪ್ರಯೋಜನ ಪಡೆದಿದ್ದಾರೆ. ಇವರ ಅನುಶೋಧನೆಗಳನ್ನು ಹೆಚ್ಚೆಚ್ಚು ರೈತರಿಗೆ ತಲುಪಿಸುವಲ್ಲಿ ಕಲಬುರ್ಗಿ ಕೃಷಿ ವಿಜಾnನ ಕೇಂದ್ರದ ಹಿರಿಯ ವಿಜಾನಿ ಡಾ. ರಾಜು ತೆಗ್ಗಳ್ಳಿ ಅವರ ಮುತುವರ್ಜಿ ಸಾಕ್ಟಷ್ಟಿದೆ. ಪಾಟೀಲರ ಕೌಶಲಕ್ಕೆ ಸಂದಿರುವ ಪ್ರಶಸ್ತಿ- ಪುರಸ್ಕಾರಗಳು ಕೂಡ ಹಲವು.
ಯಂತ್ರವೆಂದರೆ, ಅದಕ್ಕೊಂದು ಸಂಶೋಧನೆ- ಉತ್ಪಾದನೆ- ಪೇಟೆಂಟ್ ಎಂಬೆಲ್ಲ ಆಯಾಮಗಳಿವೆ. ಸಬ್ಸಿಡಿ ಕರಾಮತ್ತಿನೊಂದಿಗೆ ಹೊರಬರುವ ಆ ಯಂತ್ರ ಕೃಕರಿಗೆ ಎಷ್ಟರಮಟ್ಟಿಗೆ ಪ್ರಯೋಜನ ಕೊಡುತ್ತದೋ, ಆ ಮಾತು ಬೇರೆ. ಸಾಮಾನ್ಯ ರೈತರು ಖರೀದಿಸಲೂ ಆಗದ, ಕೃಕರಿಗೆ ಉಪಯೋಗಕ್ಕೆ ಬಾರದ ದುಬಾರಿ ತಂತ್ರಜಾnನದ ಯಂತ್ರಗಳನ್ನು ಪೇಟೆಂಟ್ ಮಾಡಿಕೊಳ್ಳುವವರ ಎದುರು
ಶರಣಬಸಪ್ಪ ಪಾಟೀಲರ ಉದಾರತನ ಬಹು ದೊಡ್ಡದು, ಅಲ್ಲವೇ?
ಮಾಹಿತಿಗೆ ಮೊ: 9900438541
ಆನಂದತೀರ್ಥ ಪ್ಯಾಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.