ನೀರ್ನಳ್ಳಿ ತೋಟದಲ್ಲಿ ಕರಿಮೆಣಸಿನ ಮಾಯಾಲೋಕ
Team Udayavani, Dec 18, 2017, 12:52 PM IST
ಪ್ರತಿ ನೂರು ಕರಿಮೆಣಸಿನ ಬಳ್ಳಿಗಳಲ್ಲಿ ಪ್ರತಿ ವರ್ಷ ಸುಮಾರು 15 ಬಳ್ಳಿಗಳು ರೋಗದಿಂದ ಸಾಯುತ್ತವೆ; ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು. ಅಲ್ಲಿ ಪುನಃ ಹೊಸ ಬಳ್ಳಿ ನೆಟ್ಟು ಬೆಳೆಸಿದರಾಯಿತು ಎನ್ನುತ್ತಾರೆ. ಅಡಿಕೆ ತೋಟದಲ್ಲಿ ಬಾಳೆ ಕೃಷಿಗಿಂತ ಕರಿಮೆಣಸಿನ ಕೃಷಿ ಹೆಚ್ಚು ಲಾಭದಾಯಕ; ಕರಿಮೆಣಸಿಗೆ ಈಗಿನ ಬೆಲೆಯ ಅರ್ಧ ಬೆಲೆ ಸಿಕ್ಕಿದರೂ ಅದುವೇ ಹೆಚ್ಚು ಲಾಭದಾಯಕ.
ತೆಂಗು, ಅಡಿಕೆ ಮರಗಳು ನಳನಳಿಸುವ ಆ ತೋಟದಲ್ಲಿ ಎದ್ದು ಕಾಣುವುದು ಅಲ್ಲಿನ ಕರಿಮೆಣಸಿನ ಬಳ್ಳಿಗಳು. ಆ ಮರಗಳನ್ನು ಅಪ್ಪಿಕೊಂಡಿರುವ 10 – 20 ಅಡಿಗಳೆತ್ತರದ ಕರಿಮೆಣಸಿನ ಬಳ್ಳಿಗಳು ನಮ್ಮ ಎರಡು ಕೈಗಳನ್ನು ಅಗಲಿಸಿದರೂ ತಬ್ಬಿಕೊಳ್ಳಲಾಗದಷ್ಟು ದಟ್ಟವಾಗಿ ಬೆಳೆದಿವೆ. ಆ ಬಳ್ಳಿಗಳ ತುಂಬ ಕಡು ಹಸಿರು ಎಲೆಗಳಿವೆ. ಬಳ್ಳಿಗಳಲ್ಲಿ ಅಲ್ಲಲ್ಲಿ ತೂಗಾಡುವ ಎಳೆಕರಿಮೆಣಸಿನ ಗೊಂಚಲುಗಳಿವೆ.
ಇದು ನೀರ್ನಳ್ಳಿ ಸೀತಾರಾಮ ಹೆಗ್ಡೆಯವರ ತೋಟ. ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ ನೀರ್ನಳ್ಳಿಗೆ ವಾಹನದಲ್ಲಿ ಅರ್ಧ ತಾಸಿನ ಹಾದಿ. ಅವರ ಮನೆಯೆದುರಿನ ಅಡಿಕೆ ತೋಟ ದಾಟಿದರೆ, ನಾಲ್ಕು ಎಕರೆ ತೆಂಗಿನ ತೋಟ. ಅದನ್ನು ದಾಟಿದರೆ, ಮತ್ತೆ ಅಡಿಕೆ ತೋಟ. ಅವರ 20 ಎಕರೆ ಅಡಿಕೆ ತೋಟ ಮತ್ತು 4 ಎಕರೆ ತೆಂಗಿನ ತೋಟ ಸುತ್ತಾಡಲು ಅರ್ಧ ದಿನ ಬೇಕೇಬೇಕು. ಒಂದು ಎಕರೆ ಅಡಿಕೆ ತೋಟದಿಂದ 17 ಕ್ವಿಂಟಾಲ… ಇಳುವರಿ ಪಡೆಯಬಹುದು ಎಂಬುದು ಸೀತಾರಾಮ ಹೆಗ್ಡೆಯವರ ಅನುಭವದ ಮಾತು.
ಆ ತೋಟದ ಉತ್ತಮ ನಿರ್ವಹಣೆಗೆ ಒಂದು ಪುರಾವೆ ಇದೆ. ಅದುವೇ ಅಲ್ಲಿನ ಫಣಿಯೂರು ಮತ್ತು ಕರಿಮುಂಡ ಕರಿಮೆಣಸಿನ ಬಳ್ಳಿಗಳಿಂದ ಸೀತಾರಾಮ ಹೆಗ್ಡೆಯವರು ಪಡೆಯುತ್ತಿರುವ ಸುಮಾರು 80 ಕ್ವಿಂಟಾಲ… ವಾರ್ಷಿಕ ಫಸಲು. ಇದಕ್ಕೆ ಕಾರಣಗಳು ಎರಡು: ಮೊದಲನೆಯದು, ಅವರು ಮರಬಳ್ಳಿಗಳಿಗೆ ಒದಗಿಸುವ ಸಮೃದ್ಧ ಸಾವಯವ ಗೊಬ್ಬರ ಮತ್ತು ಸೂಪರ್ ಫಾಸೆ#àಟ್. ಎರಡನೆಯದು, ಕರಿಮೆಣಸಿನ ಕೃಷಿಗೆ ನಿವೃತ್ತ ವಿಜ್ಞಾನಿ ಡಾ. ವೇಣುಗೋಪಾಲ… ನೀಡುತ್ತಿರುವ ಮಾರ್ಗದರ್ಶನ. ಎರಡು ತಿಂಗಳಿಗೊಮ್ಮೆ ಇವರ ತೋಟಕ್ಕೆ ಆ ಅಪರೂಪದ ವಿಜ್ಞಾನಿ ಭೇಟಿ ನೀಡುತ್ತಾರೆ.
ತಮ್ಮ ತೋಟದ ಮರಬಳ್ಳಿಗಳಿಗೆ ವರ್ಷದಲ್ಲಿ ಎರಡು ಕಂತುಗಳಲ್ಲಿ ಗೊಬ್ಬರ ಹಾಕಿಸುತ್ತಾರೆ ಸೀತಾರಾಮ ಹೆಗ್ಡೆ. ಪ್ರತಿ ಎರಡು ಮರಗಳಿಗೆ ಫಣಿಯೂರು ಕರಿಮೆಣಸಿನ ಬಳ್ಳಿ ಹಬ್ಬಿಸಿದರೆ, ಮೂರನೆಯದಕ್ಕೆ ಕರಿಮುಂಡ ತಳಿ ಹಬ್ಬಿಸುವುದು ಉತ್ತಮ ಎನ್ನುವುದು ಅವರ ಸಲಹೆ. ಪ್ರತಿ ನೂರು ಕರಿಮೆಣಸಿನ ಬಳ್ಳಿಗಳಲ್ಲಿ ಪ್ರತಿ ವರ್ಷ ಸುಮಾರು 15 ಬಳ್ಳಿಗಳು ರೋಗದಿಂದ ಸಾಯುತ್ತವೆ; ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು. ಅಲ್ಲಿ ಪುನಃ ಹೊಸ ಬಳ್ಳಿ ನೆಟ್ಟು ಬೆಳೆಸಿದರಾಯಿತು ಎನ್ನುತ್ತಾರೆ. ಅಡಿಕೆ ತೋಟದಲ್ಲಿ ಬಾಳೆಕೃಷಿಗಿಂತ ಕರಿಮೆಣಸಿನ ಕೃಷಿ ಹೆಚ್ಚು ಲಾಭದಾಯಕ; ಕರಿಮೆಣಸಿಗೆ ಈಗಿನ ಬೆಲೆಯ ಅರ್ಧ ಬೆಲೆ ಸಿಕ್ಕಿದರೂ ಅದುವೇ ಹೆಚ್ಚು ಲಾಭದಾಯಕ ಎಂದು ವಿವರಿಸುತ್ತಾರೆ.
ನೀರ್ನಳ್ಳಿ ಸೀತಾರಾಮ ಹೆಗ್ಡೆಯವರ ವಿಸ್ತಾರವಾದ ತೋಟದ ಯಶಸ್ಸಿಗೆ ಆಧಾರ ಅವರ ಹೈನುಗಾರಿಕೆ. ಎರಡು ಸಾಲುಗಳ ದೊಡ್ಡ ಹಟ್ಟಿಯಲ್ಲಿ 60 ದನಕರುಗಳನ್ನು ಸಾಕುತ್ತಿದ್ದಾರೆ. ಹಟ್ಟಿಯ ಪಕ್ಕದಲ್ಲೇ ದನಕರುಗಳು ಅಡ್ಡಾಡಲು ಅಂಗಳವಿದೆ. ದನಕರುಗಳ ಕುತ್ತಿಗೆಯ ಕುಣಿಕೆ ಕಳಚಲು ಅಲ್ಲಿ ಸುಲಭ ವ್ಯವಸ್ಥೆಎಂದರೆ… ಆ ಕುಣಿಕೆಗಳನ್ನು ತಗಲಿಸಿರುವ ಕಬ್ಬಿಣದ ಪೈಪನ್ನು ತಿರುಗಿಸಿದರೆ, ಒಂದು ಸಾಲಿನ ಎಲ್ಲ ದನಗಳ ಕಬ್ಬಿಣದ ಕುಣಿಕೆ ಒಮ್ಮೆಲೇ ಕಳಚಿ ನೆಲಕ್ಕೆ ಜಾರುತ್ತದೆ. ಹಟ್ಟಿಯನ್ನು ದಿನಕ್ಕೆರಡು ಸಾರಿ ತೊಳೆಯುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಅವರ ದನಗಳ ಹಟ್ಟಿಯ ಸೆಗಣಿ-ಗಂಜಲ ಗೋಬರ್ ಗ್ಯಾಸ್ ಸ್ಥಾವರಕ್ಕೆ ಹೋಗುವ ವ್ಯವಸ್ಥೆ ಇದೆ. ಅದರಿಂದ ಮನೆ ಬಳಕೆಗೆ ಬೇಕಾದ್ದಕ್ಕಿಂತ ಜಾಸ್ತಿ ಗೋಬರ್ ಗ್ಯಾಸ್ ಉತ್ಪಾದನೆಯಾಗುತ್ತದೆ. ಆ ಸ್ಥಾವರದ ಸ್ಲರಿ ಸುಮಾರು 100 ಅಡಿ ಉದ್ದ 30 ಅಡಿ ಅಗಲದ ಹೊಂಡಕ್ಕೆ ಹೋಗಿ ಬೀಳಲು ಪೈಪ್ ಜೋಡಣೆ ಮಾಡಿದ್ದಾರೆ. ತೋಟದ ಸೋಗೆ, ಕಸಕಡ್ಡಿ, ಅಡಿಕೆ ಸಿಪ್ಪೆಯನ್ನು ಹೊಂಡಕ್ಕೆ ತುಂಬುತ್ತಾ ಬರುತ್ತಾರೆ. ಅದು ಅಲ್ಲೇ ಕೊಳೆತು, ತೋಟಕ್ಕೆ ಸಮೃದ್ಧ ಗೊಬ್ಬರವಾಗುತ್ತದೆ.
ಹತ್ತು ಖಾಯಂ ಕೆಲಸಗಾರರಿಂದ ವಿಸ್ತಾರ ತೋಟದ ನಿರ್ವಹಣೆ ಮಾಡುತ್ತಿರುವ ಸೀತಾರಾಮ ಹೆಗ್ಡೆಯವರು ಪ್ರಯೋಗಗಳಿಗೆ ಸದಾ ಮುಂದು. ಅಗರ್‌ವುಡ್ಸ್ ನಂಥ ಗಿಡಗಳನ್ನು ನೆಟ್ಟು ಬೆಳೆಸಿ¨ªಾರೆ. ಈಗ ಅವುಗಳಿಗೆ ಏಳು ವರ್ಷ ವಯಸ್ಸು. ಕಳೆದ ವರುಷ ಕಂಪೆನಿಯವರಿಂದ ಅಗರ್‌ವುಡ್ ಮರಗಳಿಗೆ ಇಂಜೆಕ್ಷನ್ ಕೊಡಿಸಿದ್ದರೂ ಏನೂ ಪ್ರಯೋಜನ ಆಗಿಲ್ಲ. ಇನ್ನೊಂದು ವರ್ಷ ಕಾದು ನೋಡ್ತೇನೆ. ಅನಂತರ ಪ್ರಯೋಜನಕ್ಕೆ ಬಾರದ ಆ ಮರಗಳನ್ನೆಲ್ಲ ಕಡಿದು ಬಿಸಾಡುತ್ತೇನೆ. ಕೃಷಿಕರು ಅಗರ್‌ವುಡ್ ನಂಥ ಗಿಡಗಳನ್ನು ದುಬಾರಿ ಬೆಲೆಗೆ ಕೊಂಡು, ನೆಟ್ಟು ಬೆಳೆಸುವಾಗ ಬಹಳ ಜಾಗ್ರತೆ ಬೇಕು. ಯಾಕೆಂದರೆ, ತಮ್ಮ ಲಾಭಕ್ಕಾಗಿ ಗಿಡ ಮಾರಾಟ ಮಾಡುವ ಕಂಪೆನಿಗಳಿಗೆ ಯಾವ ರಿಸ್ಕೂ ಇಲ್ಲ. ರಿಸ್ಕೆಲ್ಲ ಕೃಷಿಕರ ತಲೆ ಮೇಲೆ ಬೀಳ್ತದೆ ಎಂದು ಎಚ್ಚರಿಸುತ್ತಾರೆ.
ಹತ್ತು ವರ್ಷಗಳ ಮುಂಚೆ ವೆನಿಲ್ಲಾ ಕೃಷಿಗೆ ದೊಡ್ಡ ಮಟ್ಟದಲ್ಲಿ ಕೈಹಾಕಿದ್ದರು ಸೀತಾರಾಮ ಹೆಗ್ಡೆ. ಕೊನೆಗೆ ವೆನಿಲ್ಲಾ ಕೋಡುಗಳ ಬೆಲೆ ಕುಸಿದಾಗ ಎಲ್ಲ ಬಳ್ಳಿಗಳನ್ನೂ ಕಿತ್ತು ಬಿಸಾಡಿದ್ದರು. ವೆನಿಲ್ಲಾ ಬಳ್ಳಿಗಳನ್ನು ಹಬ್ಬಿಸಲು ಹುಬ್ಬಳ್ಳಿಯಿಂದ ಒಂದು ಸಾವಿರ ಹಳೆ ಟಯರ್ ತರುವಾಗ ಅಲ್ಲಿನ ವರ್ಕ್‌ಷಾಪಿನ ಹುಡುಗ ಪ್ರಶ್ನೆ ಕೇಳಿದ್ದನಂತೆ. ” ಏನ್ಸಾರ್, ಎಷ್ಟು ಜನ ಸತ್ತು ಹೋದ್ರು? ಯಾಕೆಂದರೆ, ಕೆಲವು ಹಳ್ಳಿಗಳಲ್ಲಿ ಹೆಣ ಸುಡಲಿಕ್ಕಾಗಿ ಹಳೆ ಟಯರುಗಳಿಂದ ಬೆಂಕಿ ಮಾಡುತ್ತಾರೆ’ ಹೆಗ್ಡೆಯವರೂ ಅದಕ್ಕಾಗಿ ಹಳೆ ಟಯರ್ ಖರೀದಿಸುತ್ತಿ¨ªಾರೆ ಎಂದು ಭಾವಿಸಿದ್ದ ಆ ಹುಡುಗ.
ಅವರ ಇತ್ತೀಚೆಗಿನ ಪ್ರಯೋಗ ಸಿಲ್ವರ್ ಸಸಿಗಳ ತೋಟ. ಕಳೆದ ವರುಷ 20 ಎಕರೆ ಜಮೀನಿನಲ್ಲಿ ಸಿಲ್ವರ್ ಸಸಿಗಳನ್ನು ನೆಡಿಸಿದ್ದಾರೆ. ವಿಸ್ತಾರ ಜಮೀನಿದ್ದರೆ, ಇನ್ನು ಮುಂದೆ ಅಲ್ಲಿ ಉಪಯುಕ್ತ ಹಾಗೂ ಬಹು ಬೇಡಿಕೆಯ ಸಸ್ಯಗಳ ಸಸಿಗಳನ್ನು ನೆಟ್ಟು ಬೆಳೆಸುವುದೇ ಜಾಣತನ ಎಂಬುದು ಸೀತಾರಾಮ ಹೆಗ್ಡೆಯವರ ಅಭಿಪ್ರಾಯ.
ಎರಡು ವರುಷಗಳ ಮುಂಚೆ ಸೀತಾರಾಮ ಹೆಗ್ಡೆಯವರ ತೋಟಕ್ಕೆ ನಮ್ಮ ತಂಡ ಭೇಟಿ ನೀಡಿತ್ತು. ಇತ್ತೀಚೆಗೆ, ಸಮೃದ್ಧಿ ಗಿಡಗೆಳೆತನ ಸಂಘದ ಸದಸ್ಯರ ಜೊತೆಗೆ ಪುನಃ ಹೋದಾಗಲೂ, ಕೃಷಿಕರಿಗೆ ತಮ್ಮ ಅನುಭವ ಹಂಚಲು ಅವರಿಗೆ ಅದೇ ಉತ್ಸಾಹ.
ಬೀಳ್ಕೊಡುವಾಗ ನೀರ್ನಳ್ಳಿ ಸೀತಾರಾಮ ಹೆಗ್ಡೆಯವರು ದೊಡ್ಡ ರಿಜಿಸ್ಟರ್ ಒಂದನ್ನು ಕೈಗಿತ್ತು ನಿಮ್ಮ ಅನಿಸಿಕೆ ಬರೆಯಿರಿ ಎಂದರು. ಕಳೆದ ಹಲವು ವರುಷಗಳಲ್ಲಿ ಅವರ ತೋಟಕ್ಕೆ ಭೇಟಿಯಿತ್ತ ನೂರಾರು ಜನರ ಮೆಚ್ಚುಗೆಯ ಮಾತುಗಳು ಅದರಲ್ಲಿದ್ದವು. ನಮ್ಮೆಲ್ಲರಲ್ಲಿ ಅವರ ಸಾಧನೆ ಬಗ್ಗೆ ಮೆಚ್ಚುಗೆ ಮೀರಿದ ಭಾವ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೃಷಿಯಲ್ಲಿ ಲಾಭ ಗಳಿಸಲು ಏನು ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ ಸಮಾಧಾನ.
ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.