ಪಿಗ್ಗಿ ಕಾರ್ನರ್: ಕೊಂಡಿದ್ದು ಮಾಲ್‌ನಲ್ಲಿ, ಬಣ್ಣ ಹೋಗಿದ್ದು ಮನೇಲಿ
Team Udayavani, Oct 2, 2017, 11:27 AM IST
ಮಾಲ್ ಬಹಳ ಚೆನ್ನಾಗಿದೆ. ಜಿಗಿಜಿಗಿ ಅನ್ನೋ ಲೈಟಿಂಗ್. ಬಾಗಿಲಲ್ಲೇ ಮುಗುಳ ನಗೆಯ ಸ್ವಾಗತ ಕೋರುವ ಸುಂದರಿಯರು… ಒಳಗೆ ಕಾಲಿಟ್ಟರೆ ಸಾಕು; ಬನ್ನಿ, ಬನ್ನಿ ಅಂತ ಪ್ರೀತಿಯಿಂದ ಕರೆಯುವ ಉದ್ಯೋಗಿಗಳು. ಎಲ್ಲವನ್ನೂ ನೋಡಿ, ಒಳಗಿರುವುದೆಲ್ಲಾ ಚೆನ್ನಾಗೇ ಇದೆ ಅಂದುಕೊಂಡು ಹೋಗಿದ್ದಾಯಿತು.
ಮಾಲ್‌ಗೂ ಒಳಗೆ ಬಿಕರಿಗೆ ನಿಂತಿರುವ ವಸ್ತುಗ ಳಿಗೂ ಸಂಬಂಧ ಇರೋಲ್ಲ. ಮಾಲ್‌ನ ಮಾಲೀಕರೂ ಅವೆಲ್ಲವನ್ನು ಕಂಪೆನಿಗಳಿಂದ ತರಿಸಿಯೇ ನಮಗೆ ಮಾರುವುದು. ಈ ಕಾರಣದಿಂದ ಮಾಲ್‌ಗಳ ಝಗಮಗಕ್ಕೂ, ಅಲ್ಲಿರುವ ಉತ್ಪನ್ನಗಳ ಗುಣಮಟ್ಟಕ್ಕೂ ಸಂಬಂಧವೇ ಇರೋಲ್ಲ ಅಂತ ತಿಳಿದದ್ದು ಪಿಗ್ಗಿ ಬಿದ್ದೆ ಮೇಲೆಯೇ.
ಆವತ್ತು ಹೋಗಿದ್ದು ಪ್ಯಾಂಟ ಖರೀದಿಸಲು. ಶೇ. 50ರಷ್ಟು ಫ್ಲಾಟ್ ಡಿಸ್ಕೌಂಟ್ ಅಂತ ಬೋರ್ಡು ನೋಡಿದ ಮೇಲೆ ಮನಸ್ಸು ಕಂಟ್ರೋಲ್‌ಗೆ ಬರಲಿಲ್ಲ. ಹಾಗಾಗಿ ಮತ್ತೆ ಎರಡು ಪ್ಯಾಂಟ್ ಖರೀದಿಸಿದ್ದಾಯಿತು. ಮೈಸೋಪು, ಬಟ್ಟೆ ಸೋಪಿನ ಬೆಲೆಗಳ ಮೇಲಿದ್ದ ಸೋಡಿ ಬೋರ್ಡುಗಳೂ ಕೂಗಿ ಕರೆಯುತ್ತಿದ್ದವು. ಇರಲಿ, ಇರಲಿ ಅಂತ ಅವುಗಳನ್ನು ಎತ್ತಿ ಬುಟ್ಟಿಗೆ ಹಾಕಿಕೊಂಡದ್ದೂ ಆಯ್ತು.
ಒಳ್ಳೆ ಡಿಸ್ಕೌಂಟ್ ಅಂತ ಮನೆಗೆ ತೆಗೆದು ಕೊಂಡು ಹೋಗಿ..
“ನೋಡೇ, ಎಂಥ ಜೀನ್ಸ್ ತಂದಿದ್ದೀನಿ’ ಅಂತ ತಂಗಿಯ ಮುಂದೆ ಹರಡಿಟ್ಟೆ ಆಗಲೇ ಜಿಪ್ ಹರಿದಿರುವಂತೆ ಕಂಡಿತು. ಅಲ್ಲಲ್ಲಿ ಹೊಲಿದ ದಾರಗಳು ಎದ್ದು, ಎದ್ದು ನೋಡುತ್ತಿದ್ದವು. ಏನೂ ಆಗಲ್ಲ. ಮಾಲ್‌ನಿಂದ ತಂದಿದ್ದಲ್ವಾ? ಅಂತ ಸಮಾಧಾನ ಮಾಡಿಕೊಂಡೆವು.
ಮೂರು ದಿನದ ನಂತರ ಇದೇ ಪ್ಯಾಂಟ್ ಹಾಕಿಕೊಂಡು ನಾಲ್ಕನೇ ದಿನ ಅವನ್ನು ಒಗೆಯೋದಕ್ಕೆ ಹಾಕಿದಾಗಲೇ ಬಣ್ಣ ಬಯಲಾದದ್ದು. ನೀಲಿಯ ಬಣ್ಣ ಎಲ್ಲಾ ಬಟ್ಟೆಗೂ ಹರಡಿಕೊಂಡಿ ಬಿಟ್ಟಿತ್ತು. ಬ್ರಾಂಡ್ ಮಾಲ್‌ನಿಂದ ತಂದ ಬ್ರಾಂಡ್ ಬಟ್ಟೆಯ ಯೋಗ್ಯತೆ ಇಷ್ಟೇನಾ?
ಯಾರನ್ನು ಕೇಳ್ಳೋದು?
ಅಯ್ಯೋ, ಇಂಥ ಬಟ್ಟೆ ಪೀಣ್ಯದಲ್ಲಿ ತಯಾರಾಗುತ್ತೆ, ಅವಕ್ಕೆ ಬ್ರಾಂಡೆಡ್ ಲೇಬಲ್ ಅಂಟಿಸಿರ್ತಾರೆ ಅಂತ ಪಕ್ಕದ ಮನೆ ಪದ್ಮಾವತಿ ಗೊಣಗುಟ್ಟಿದ್ದು ಸತ್ಯ ಅನಿಸಿಬಿಟ್ಟಿತು. ಆ ಮಟ್ಟಿಗೆ ಪ್ಯಾಂಟು ನೆಲ ಒರೆಸುವ ಬಟ್ಟೆಯಂತಾಗಿತ್ತು.
ಥತ್ ಮಾಲ್‌ನಲ್ಲಿ ಮೋಸ ಆಯ್ತು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. “ಅಕ್ಕಾ, ಉರಿತಾ ಇದೆ’ ಅಂತ ಎರಡೂ ಕೈಗಳನ್ನು ಕಣ್ಣ ಮುಂದೆ ಹಿಡಿದಳು ತಂಗಿ. ನೋಡಿದರೆ, ಬೆರಳುಗಳ ಮೇಲೆ ಗೆರೆ, ಗೆರೆಯಾಕಾರ ಸೀಳಿದೆ. ಚೂರು ಬಿಸಿನೀರು ಬಿದ್ದರೂ ಪ್ರಾಣ ಹೋಗುವಷ್ಟು ಉರಿ. ಇದೆಲ್ಲಾ ಹೇಗೆ ಆಯ್ತು ಅಂತ ಹುಡುಕಿದರೆ, ಡಿಸ್ಕೌಂಟ್ ರೇಟಲ್ಲಿ ಮಾಲ್‌ನಿಂದ ತಂದ ಪಾತ್ರೆ ತೊಳೆಯುವ ಸೋಪಿನ ಕರಾಮತ್ತೇ ಇದು ಎಂದು ಗೊತ್ತಾಯಿತು !
ಎರಡು ರೂ. ಕಮ್ಮಿ ಅಂತ ನಾಲ್ಕು ಸೋಪು ತಂದು, 8 ರೂ. ಉಳಿಸಿದ ಸಂತಸದಲ್ಲಿರುವಾಗಲೇ 60ರೂ. ಆಯಿಂಟ್‌ಮೆಂಟ್‌ಗೆà ಖರ್ಚಾಯಿತು. ಕೆಲವು ಮಾಲ್‌ನ ಕಮಾಲ್‌ಗಳು ಹೀಗೂ ಉಂಟು ನೋಡಿ.
* ಅನಂತರಾಮಯ್ಯ, ಸಕಲೇಶಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.