ಪ್ಲೇ ಬಾಯ್ ಸ್ಥಾಪಕನ ಬಿಝಿನೆಸ್ ಮಂತ್ರಗಳು
70,000 ಟು 1,000 ಕೋಟಿ ರು.
Team Udayavani, Jul 8, 2019, 5:00 AM IST
ದುಡ್ಡು ಮಾಡಲು ಸಮರ್ಥವಾಗಿರುವ ಯಾವುದೇ ಐಡಿಯಾ ಬಿಝಿನೆಸ್ ಪ್ರಪಂಚದಲ್ಲಿ ಯಶಸ್ವಿ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಯಶಸ್ವಿ ಎನ್ನಿಸಿಕೊಂಡರೂ ವಿವಾದಾತ್ಮಕ ಐಡಿಯಾ ಮೂಲಕ ಹೆಸರಾದವರು ಹ್ಯೂ ಹೆಪ್ನೆರ್. ಅಮ್ಮನಿಂದ 70,000 ರು. ಸಾಲ ಪಡೆದು, ಇಂದು ಏನಿಲ್ಲವೆಂದರೂ ಸಾವಿರ ಕೋಟಿ ರು.ಗೂ ಅಧಿಕ ಬೆಲೆಬಾಳುವ ಪ್ಲೇಬಾಯ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಅವರ ಸಾಧನೆ ಕಡಿಮೆಯೇನಲ್ಲ. ವಿವಾದಾತ್ಮಕವಾದರೂ ಪ್ಲೇಬಾಯ್ ಜಗತಸಿದ್ಧಿ ಪಡೆಯುವುದರ ಹಿಂದೆ ಪ್ಯೂರ್ ಬಿಝಿನೆಸ್ ತಂತ್ರಗಳಿದ್ದವು!
ಯಾವುದೇ ಒಂದು ಬಿಝಿನೆಸ್ ಸಾಮ್ರಾಜ್ಯವನ್ನು ಕಟ್ಟುವುದು ಸುಲಭದ ಮಾತಲ್ಲ. ಅದರಲ್ಲೂ ಅದುವರೆಗೂ ಯಾರೂ ಮಾಡದೇ ಇರುವ ಐಡಿಯಾ ಮಾಡಿ, ಅದರಲ್ಲಿ ದುಡ್ಡು ಮಾಡಲು ಹೊರಡುವುದೆಂದರೆ ಅದೊಂದು ಸಾಹಸವೇ ಸರಿ! ಯಾವುದೇ ಪತ್ರಿಕೆ, ನಿಯತಕಾಲಿಕೆ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಪ್ಲೇಬಾಯ್ ವಯಸ್ಕರ ನಿಯತಕಾಲಿಕೆಗೆ ದೇಶ ವಿದೇಶಗಳಲ್ಲಿಯೂ ಚಂದಾದಾರರಿದ್ದರು. ನಿಯತಕಾಲಿಕೆ ಸೃಷ್ಟಿಸಿದ ವಿವಾದಗಳು ಸಾವಿರಾರು. ಆದರೆ ಅದು ಜಗತ್ತಿನೆಲ್ಲೆಡೆ ಹೆಸರು ಮಾಡಿದ್ದರ ಹಿಂದೆ ಇದ್ದಿದ್ದು ಪ್ಯೂರ್ ಬಿಝಿನೆಸ್ ತಂತ್ರಗಳು. ಪ್ರತಿಯೊಬ್ಬ ಬಿಝಿನೆಸ್‌ಮನ್‌ಗೂ ಹೆಫ°ರ್‌ನ ಪಯಣದಿಂದ ಕಲಿಯಬಹುದಾದ ಪಾಠಗಳು ಸಿಗುತ್ತವೆ.
1. ಒಂದೇ ಯಶಸ್ಸಿಗೆ ಸುಮ್ಮನಾಗಬಾರದು
ಯಶಸ್ಸು ಮತ್ತು ಸೋಲು, ಇವೆರಡೂ ಹೇಳದೆ ಕೇಳದೆ ಮನೆಗೆ ಬರುವ ನೆಂಟರು. ಅದರಲ್ಲೂ ಯಾವುದೇ ವ್ಯಾಪಾರವಿರಲಿ, ಉದ್ಯಮವಿರಲಿ; ವೈಫಲ್ಯ ಅದರ ಅವಿಭಾಜ್ಯ ಅಂಗ. ಅದನ್ನು ತಡೆದುಕೊಂಡು ಮುನ್ನುಗ್ಗುವ ಮತ್ತು ವೈಫಲ್ಯಗಳನ್ನು ಮೀರಿ ಲಾಭ ಗಳಿಸುವಂಥ ತಂತ್ರಗಳು ನಮ್ಮಲ್ಲಿ ಸಿದ್ಧವಿರಬೇಕು. ಅದರಿಂದ ನಮ್ಮ ಗಮನ ಕಳೆಗುಂದಬಾರದು. ಹಾಗೆಯೇ ಯಶಸ್ಸು ಸಿಕ್ಕಾಗ ಅಷ್ಟಕ್ಕೇ ನಿಲ್ಲಬಾರದು. ಹೆಫ°ರ್ ಸ್ಥಾಪಿಸಿದ ಪ್ಲೇಬಾಯ್ ನಿಯತಕಾಲಿಕೆ ಜಗತ್ತಿನೆಲ್ಲೆಡೆ ಪ್ರಸಿದ್ಧಿ ಪಡೆಯುತ್ತಿದ್ದಂತೆಯೇ ಆತ ಸುಮ್ಮನಾಗಲಿಲ್ಲ. ಪ್ಲೇಬಾಯ್ ಎಂಬುದು ನಿಯತಕಾಲಿಕೆಗೆ ಸೀಮಿತವಾಗಲಿಲ್ಲ. ಹೆಫ°ರ್, ಪ್ಲೇಬಾಯ್‌ಅನ್ನು ಒಂದು ಬ್ರ್ಯಾಂಡ್ ಆಗಿಸಿದ. ಟಿ.ವಿ. ಪ್ರೋಗ್ರಾಂ ಮಾಡಿದ, ಜಾಲತಾಣವನ್ನು ಶುರುಮಾಡಿದ. ಇವೆಲ್ಲದರ ಪರಿಣಾಮ, ಇಂದು ಪ್ಲೇಬಾಯ್ ಎಂಬ ಪದ ಜನಸಾಮಾನ್ಯರ ಪದಪುಂಜದಲ್ಲಿ ಸೇರಿಹೋಗಿದೆ.
2. ಬ್ರ್ಯಾಂಡ್ ಸೃಷ್ಟಿಸಬೇಕು
ಯಾವುದೇ ಒಂದು ಬಿಝಿನೆಸ್‌ಅನ್ನು ಒಂದು ಬ್ರ್ಯಾಂಡ್ ಆಗಿ ರೂಪುಗೊಳಿಸಬೇಕು. ಆಗಲೇ ಆ ಉದ್ಯಮ ಅಥವಾ ವ್ಯಾಪಾರ ಭದ್ರವಾಗಿ ನೆಲೆಯೂರುತ್ತದೆ. ಅದಕ್ಕೆ ಪ್ರಚಾರ ತಂತ್ರಗಳು ಮತ್ತು ಜಾಹೀರಾತುಗಳು ನೆರವಾಗುತ್ತವೆ. ಪ್ಲೇ ಬಾಯ್ ಯಶಸ್ವಿಯಾಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಇದೂ ಒಂದು. ಪಿಂಕ್ ಬಣ್ಣದ ಮೊಲ, ಪ್ಲೇಬಾಯ್ ನಿಯತಕಾಲಿಕೆಯ ಗುರುತಾಗಿತ್ತು. ಈಗ ಇದೇ ಗುರುತಿನ ಸ್ಕ$Rರ್‌ಅನ್ನು ಕಾರು, ಬೈಕುಗಳ ಹಿಂದೆ ಯುವಕರು ಹಾಕಿಕೊಂಡಿರುವುದನ್ನು ಕಾಣಬಹುದು. ಅವರೆಲ್ಲರಿಗೆ ಹ್ಯೂ ಹೆಫ°ರ್‌ನ ಪರಿಚಯ ಇಲ್ಲದೇ ಇರಬಹುದು. ಆದರೆ ಆ ಚಿತ್ರದ ಅರ್ಥ ಮಾತ್ರ ಚೆನ್ನಾಗಿ ಪರಿಚಯವಿರುತ್ತದೆ. ಬ್ರ್ಯಾಂಡಿಂಗ್ ಎಂದರೆ ಇದೇ. ಈ ವಿಚಾರವನ್ನು ಹೆಫ°ರ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು.
3. ಕಾಲಕ್ಕೆ ತಕ್ಕ ನಿರ್ಣಯ
ಎಂಥಾ ಉಪಾಯವಾದರೂ ಅದಕ್ಕೊಂದು ಎಕ್ಸ್‌ಪೈರಿ ಡೇಟ್ ಇರುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವುದರ ಹಿಂದೆ ಯಶಸ್ವಿ ಉದ್ಯಮಿ ಜಾಣ್ಮೆ ಇರುತ್ತದೆ. ಪ್ಲೇಬಾಯ್ ನಿಯತಕಾಲಿಕೆ ವಯಸ್ಕರ ನಿಯತಕಾಲಿಕೆಯಾದರೂ ಅದನ್ನು ಅಶ್ಲೀಲವಾಗಿಸದೆ ಕಲಾತ್ಮಕ ರೂಪವನ್ನು ಕೊಡುವುದರ ಹಿಂದೆ ಹೆಫ°ರ್‌ನ ಮಾರ್ಕೆಟಿಂಗ್ ತಂತ್ರವೂ ಅಡಗಿತ್ತು. 80ರ ದಶಕದಲ್ಲಿ ನಿಯತಕಾಲಿಕೆಯ ಪ್ರಸಾರ 56 ಲಕ್ಷವಿದ್ದದ್ದು, 8 ಲಕ್ಷಕ್ಕೆ ಕುಸಿತ ಕಂಡಿತ್ತು. ಅದಕ್ಕೆ ಕಾರಣ ಇಂಟರ್ನೆಟ್. ಆ ಸಮಯದಲ್ಲಿ ಧೃತಿಗೆಡದ ಹೆಫ°ರ್ ತನ್ನ ತಂತ್ರವನ್ನು ಬದಲಿಸಿದ. ಅದುವರೆಗೂ ವಯಸ್ಕರ ನಿಯತಕಾಲಿಕೆಯೆಂದು ಸಂಪಾದಿಸಿದ್ದ ಹೆಸರನ್ನು ಕಿತ್ತೂಗೆಯಲು ಆತ ಮುಂದಾಗಿದ್ದ. ಅದರ ಪರಿಣಾಮವಾಗಿ 18- 30ರ ವಯೋಮಾನದೊಳಗಿನ ಮಂದಿಯನ್ನು ಸೆಳೆಯಲು ನಿರ್ಧರಿಸಿದ. ಅಂದಿನಿಂದ ಸಹಜವಾದ, ಯಾವುದೇ ವಿವಾದಗಳಿಗೆ ಎಡೆ ಮಾಡದ ಫೋಟೋಗಳು ನಿಯತಕಾಲಿಕೆಯಲ್ಲಿ ಪ್ರಕಟಗೊಳ್ಳಲು ಶುರುವಾದವು. ಯಾವ ಐಡಿಯಾದಿಂದ ತನ್ನ ಸಾಮ್ರಾಜ್ಯ ಶುರುವಾಗಿತ್ತೋ ಅದಕ್ಕೆ ವಿರುದ್ಧವಾದ ನಿರ್ಧಾರವನ್ನು ಹೆಫ°ರ್ ತೆಗೆದುಕೊಂಡಿದ್ದ. ಪ್ರಸಾರ ಸಂಖ್ಯೆ ಮತ್ತೆ ಹೆಚ್ಚಿತು.
4. ಸಮರ್ಥರ ಸಂಪರ್ಕದಲ್ಲಿರಿ
“ನನಗೆ ಬಿಝಿನೆಸ್ ಇಷ್ಟವಾಗುವುದಿಲ್ಲ’ ಎಂದು ಖುದ್ದು ಹೆಫ°ರ್‌ನೆà ಒಂದು ಸಂದರ್ಶನದಲ್ಲಿ ಹೇಳಿದ್ದ. ಆದರೆ ಅನೇಕರು ಈ ಮಾತನ್ನು ಅಲ್ಲಗಳೆಯುತ್ತಾರೆ. ಹಾಗಿದ್ದ ಮೇಲೆ ಕೋಟ್ಯಧಿಪತಿಯಾಗುವುದು ಹೇಗೆ ಸಾಧ್ಯ ಎಂಬುದು ಅವರ ಪ್ರಶ್ನೆ. ಆ ವಿಚಾರ ಏನೇ ಇರಲಿ. ಒಂದಂತೂ ನಿಜ. ಹೆಫ°ರ್ ತನಗೆ ಸಲಹೆ ನೀಡಲು ಸಮರ್ಥರನ್ನು ನಿಯಮಿಸಿಕೊಂಡಿದ್ದ. ಎಂಥಾ ಪರಿಸ್ಥಿತಿ, ತೊಂದರೆ ಎದುರಾದರೂ ಅದನ್ನು ಎದುರಿಸಲು ಅವನ ಸಮರ್ಥರ ತಂಡ ಸದಾ ಸಿದ್ಧವಿರುತ್ತಿತ್ತು. ಯಾವತ್ತೂ ಸರಿಯಾದ ಜನರ ಸಂಪರ್ಕದಲ್ಲಿದ್ದರೆ ಜೀವನದಲ್ಲಿ ಯಾವ ತೊಂದರೆಯೂ ಬಹಳ ಕಾಲ ಉಳಿಯದು.
ನಗ್ನ ಚಿತ್ರಗಳನ್ನು ಮುಖ್ಯವಾಹಿನಿ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದು ಪ್ಲೇಬಾಯ್‌ನ ದೊಡ್ಡ ಮಾರ್ಕೆಟಿಂಗ್ ನಡೆಯಾಗಿತ್ತು. ಆದರೆ ಅಷ್ಟಕ್ಕೇ ಪ್ಲೇಬಾಯ್ ಸೀಮಿತವಾಗಿರಲಿಲ್ಲ.
– ಒಂದು ಕೊಂಡರೆ ಇನ್ನೊಂದು ಉಚಿತ ಆಫರ್‌ಗಳು
– ಹೆಪ್ನೆರ್ ತಾನು ವಾಸಿಸುತ್ತಿದ್ದ ಪ್ಲೇಬಾಯ್ ಬಂಗಲೆಯಲ್ಲಿ ವೈಭವೋಪೇತ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಅದಕ್ಕೆ ಪ್ರಸಿದ್ಧ ವ್ಯಕ್ತಿಗಲಿಗೆ ಮಾತ್ರ ಆಹ್ವಾನವಿರುತ್ತಿತ್ತು. ಪ್ಲೇಬಾಯ್ ನಿಯತಕಾಲಿಕೆಗೆ ಇಮೇಜ್ ರೂಪಿಸುವಲ್ಲಿ ಅದರ ಕಾಣಿಕೆಯೂ ಇತ್ತು.
– ಜಗದ್ವಿಖ್ಯಾತ ಲೇಖಕರಾದ ಇಯಾನ್ ಫ್ಲೆಮಿಂಗ್, ವ್ಲಾದಿಮಿರ್ ನಬಕೋವ್, ಆರ್ಥರ್ ಸಿ. ಕ್ಲಾರ್ಕ್, ರೋಲ್ಡ್ ದಾಹ್ಲ, ಮಾರ್ಗರೆಟ್ ಅಟ್‌ವುಡ್ ಮತ್ತು ಹರುಕಿ ಮುರಾಕಮಿ ಮತ್ತಿತರ ಮಹನೀಯರ ಕಥೆಗಳು ಪ್ರಕಟಗೊಳಿಸಿದ್ದು
– ಕಪ್ಪು ವರ್ಣೀಯರ ಹೋರಾಟಗಾರ ಮಾಲ್ಕಂ ಎಕ್ಸ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟಾನ್ಲಿ ಕ್ಯುಬ್ರಿಕ್, ಹಾಡುಗಾರ ಜಾನ್ ಲೆನನ್ ಮುಂತಾದ ಸೆಲಬ್ರಿಟಿಗಳ ಸಂದರ್ಶನಗಳೂ ಪ್ರಕಟಗೊಳ್ಳುತ್ತಿದ್ದವು.
– ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.