ಬಂತು ನೋಡಿ ಪಾಕೆಟ್ ಆಧಾರ್ ಕಾರ್ಡ್!
Team Udayavani, Nov 2, 2020, 8:19 PM IST
ಸಾಂದರ್ಭಿಕ ಚಿತ್ರ
ಸರ್ಕಾರಿ ಕಚೇರಿಗಳಿಗೆ ಹೋದಾಗಲೋ, ಉದ್ಯೋಗ ಹುಡುಕುತ್ತಿರುವಾಗಲೋ ಅಥವಾ ಶಾಲಾ-ಕಾಲೇಜುಗಳಲ್ಲಿ ಕೆಲವೊಮ್ಮೆ ಆಧಾರ್ ಕಾರ್ಡ್ ಗಳನ್ನು ಕೇಳುವುದು ಈಗಂತೂ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಈ ಆಧಾರ್ ಕಾರ್ಡ್‌ಗಳು ಕೂಡಾ ಎಟಿಎಂ ಕಾರ್ಡ್‌ನಂತೆಯೇ ಇದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅನಿಸುವುದು ಸಹಜ.
ಅಂಥವರಿಗಾಗಿಯೇ ಇದೀಗ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಎಟಿಎಂ ಗಾತ್ರದ ಆಧಾರ್ ಕಾರ್ಡ್ ನೀಡಲಿದೆ!
ಏನಿದು ಪಾಕೆಟ್ ಆಧಾರ್ ಕಾರ್ಡ್? : ಅತ್ಯಾಧುನಿಕ ಭದ್ರತಾ ಪೀಚರ್ ಹೊಂದಿರಲಿರುವ ಈ ಕಾರ್ಡ್‌ನ ಎಟಿಎಂ ಕಾರ್ಡ್ ಗಾತ್ರದಲ್ಲಿ ಪಾಲಿವಿನಿಲ್ ಕ್ಲೋರೈಡ್ (ಪಿವಿಸಿ)ಕಾರ್ಡ್ ನಲ್ಲಿ ಮುದ್ರಿಸಲಾಗುತ್ತದೆ. ಇದರಿಂದಾಗಿ ಆಧಾರ್ ಕಾರ್ಡ್‌ಗಳನ್ನು ಜೇಬಿನಲ್ಲಿಯೇ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.
ಕಾರ್ಡ್ ಪಡೆಯುವುದು ಹೇಗೆ? :
ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವ ಜನರು ಪಿವಿಸಿ ಕಾರ್ಡ್ ಪಡೆಯಬಹುದಾಗಿದೆ. ಯುಐಡಿಎಐನ ಅಧಿಕೃತ ವೆಬ್‌ಸೈಟ್ https://uidai.gov.in/ ಅಥವಾ https://resident.gov.in/ ಗೆ ಭೇಟಿ ನೀಡಿ “ಆರ್ಡರ್ ಆಧಾರ್ ಕಾರ್ಡ್’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಮುಂಬರುವ ಸೂಚನೆಗಳನ್ನು ಪಾಲಿಸುತ್ತಾ ಹೋದಂತೆ ಕೊನೆಯಲ್ಲಿ ಮನವಿ ಸ್ವೀಕೃತಗೊಳ್ಳುತ್ತದೆ. ಶುಲ್ಕ ಕೇವಲ ರೂ.50 ಪಾವತಿಸಿ ಪಿವಿಸಿ ಆಧಾರ್‌ಕಾರ್ಡ್‌ಗೆ ಮನವಿ ಸಲ್ಲಿಸಿದ 5-6 ದಿನದೊಳಗೆ ಸ್ಪೀಡ್ ಪೋಸ್ಟ್ ಮೂಲಕ ಆರ್ಡರ್ ಮಾಡಿದವರ ಮನೆಗೆ ತಲುಪಲಿದೆ ಎಂದು ಯುಐಡಿಎಐ ಹೇಳಿದೆ.
ಆಧಾರ್ ಪಿವಿಸಿ ಕಾರ್ಡ್‌ನ ಸೇವೆಯಲ್ಲಿ…..
- ಉತ್ತಮ ಗುಣಮಟ್ಟದ ಮುದ್ರಣ.
- ಪಿವಿಸಿ ಕಾರ್ಡ್‌ಗೆ ಹೆಚ್ಚು ಬಾಳಿಕೆ. ಒಯ್ಯಲು ಅನುಕೂಲಕರ.
- ಹಾಲೋಗ್ರಾಂ, ಘೋಸ್ಟ್
ಇಮೇಜ್ ಮೊದಲಾದ ಭದ್ರತಾ ಫೀಚರ್. - ಕಾರ್ಡ್‌ನಲ್ಲಿ ಉಬ್ಬಿದ ಆಧಾರ್ ಲಾಂಛನ ಇರುತ್ತದೆ.
- ಮಳೆಯಲ್ಲೂ ಹಾಳಾಗದ ಕಾರ್ಡ್.
- ಆಫ್ಲೈನ್ ಮೂಲಕವೂ ಪರಿಶೀಲಿಸಬಹುದು.
-ಎಂ.ಎಸ್. ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.