ಅಂಚೆ ಕಚೇರಿ ಠೇವಣಿ
Team Udayavani, Dec 16, 2019, 6:04 AM IST
ಬ್ಯಾಂಕುಗಳಲ್ಲಿ ದೊರೆಯುವ ಎಲ್ಲಾ ಉಳಿತಾಯ ಯೋಜನೆಗಳೂ ಅಂಚೆ ಕಚೇರಿಗಳಲ್ಲಿ ತುಂಬಾ ಸರಳವಾದ ರೀತಿಯಲ್ಲಿ (Simple Procedure) ಲಭ್ಯ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ. ಇಂದು ಬ್ಯಾಂಕುಗಳು ಹಲವು ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ, ಆ ಊರುಗಳಲ್ಲಿ ಅಂಚೆ ಕಚೇರಿಗಳು ಇರುವುದರಿಂದ, ಈ ವ್ಯವಸ್ಥೆಯ ಸದುಪಯೋಗ ಪಡೆಯಬಹುದು.
* ಉಳಿತಾಯ ಖಾತೆಯ ಪ್ರಾರಂಭಿಕ ಠೇವಣಿ ರೂ. 50 ಹಾಗೂ ಆರ್.ಡಿ ಖಾತೆಯ ಪ್ರಾರಂಭಿಕ ಠೇವಣಿ 10 ರೂ. ಮಾತ್ರ. ಇದರಿಂದಾಗಿ ಸಣ್ಣ ಆದಾಯದವರು ಕೂಡಾ ಉಳಿತಾಯ ಮಾಡಬಹುದು. “ಸಣ್ಣ ಉಳಿತಾಯ’ ನಿಜವಾಗಿ ಪ್ರಾರಂಭವಾದದ್ದು ಅಂಚೆ ಕಚೇರಿಗಳಲ್ಲಿ ಎನ್ನುವುದನ್ನು ಮರೆಯುವಂತಿಲ್ಲ.
* ಅಂಚೆ ಕಚೇರಿಗಳಲ್ಲಿ ಅವಧಿ ಠೇವಣಿ (Term Deposit) ಇರುವುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಮಾಸಿಕ ಆದಾಯ ಯೋಜನೆ, ಕಿಸಾನ್ ಪತ್ರ, ಎನ್.ಎಸ್.ಸಿ. ಇವೆಲ್ಲವೂ ಎಲ್ಲಾ ವರ್ಗದವರಿಗೆ ಬಹು ಉಪಕಾರಿ.
* ಆದಾಯ ತೆರಿಗೆ ಉಳಿಸುವ ದೃಷ್ಟಿಯಿಂದ ಪಿ.ಪಿ.ಎಫ್., ಎನ್.ಎಸ್.ಸಿ, ಹಿರಿಯ ನಾಗರಿಕರ ಠೇವಣಿ, 5 ವರ್ಷಗಳ ಅವಧಿ ಠೇವಣಿ ಹಾಗೂ ಕಿಸಾನ್ ವಿಕಾಸ ಪತ್ರ ಉಪಯುಕ್ತವಾಗಿದೆ.
* ಅಂಚೆ ಕಚೇರಿ ಠೇವಣಿಗಳನ್ನು ಸಣ್ಣ ಉಳಿತಾಯ ಏಜೆಂಟರ ಮುಖಾಂತರ ಮಾಡಬಹುದು. ಇದರಿಂದ ಏಜೆಂಟರಿಗೂ ಠೇವಣಿದಾರರಿಗೂ ಅನುಕೂಲವಾಗುತ್ತದೆ.
* ಇಲ್ಲಿ ತೊಡಗಿಸಿದ ಹಣಕ್ಕೆ ಭಾರತ ಸರ್ಕಾರದ ಶೇ. 100 ಭದ್ರತೆ ಇರುತ್ತದೆ. ಆ ವಿಚಾರದಲ್ಲಿ ಬೇರೊಂದು ಮಾತಿಲ್ಲ.
* ಎಲ್ಲಾ ಠೇವಣಿಗಳಿಗೂ ನಾಮ ನಿರ್ದೇಶನ ಸವಲತ್ತು ಇರುತ್ತದೆ.
* ಠೇವಣಿ ಮೇಲಿನ ಬಡ್ಡಿ ದರ ಆಯಾಯ ಸಮಯದಲ್ಲಿ ನಿರ್ಧರಿಸಿದಂತಿರುತ್ತದೆ.
* ಎನ್.ಎಸ್.ಸಿ, ಅವಧಿ ಠೇವಣಿ, ಕಿಸಾನ್ ಪತ್ರದ ಮೇಲೆ ಬ್ಯಾಂಕುಗಳಲ್ಲಿ ಸಾಲ ಪಡೆಯಬಹುದು.
* ಅತೀ ಕಡಿಮೆ ಮೊತ್ತದಿಂದ ಬ್ಯಾಂಕಿನಲ್ಲಿ ಠೇವಣಿ ವಿಚಾರದಲ್ಲಿ ಪಡೆಯುವ ಎಲ್ಲಾ ವ್ಯವಹಾರ ಅಂಚೆ ಕಚೇರಿಯಲ್ಲಿ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.