ಪವರ್‌ಸ್ಟಾರ್ ವಿವೋಝಡ್1 ಪ್ರೊ
ಎರಡು ದಿನಗಳ ಕಾಲ ಚಾರ್ಜಿಂಗ್‌ಗೆ ರಜೆ!
Team Udayavani, Jul 15, 2019, 5:09 AM IST
ವಿವೋ, ಒಪ್ಪೋ, ಒನ್‌ಪ್ಲಸ್ ಮತ್ತು ರಿಯಲ್ ಮಿ. ಈ ಮೂರೂ ಬ್ರಾಂಡ್‌ಗಳ ಒಡೆತನ ಒಂದೇ ಕಂಪನಿಯದು. ಆಫ್ಲೈನ್ (ಅಂಗಡಿಗÙ ಮಾರಾಟ)ಕ್ಕೆಂದೇ ಇರುವ ವಿವೋ, ಈಗೀಗ ಆನ್‌ಲೈನ್‌ಗೆ ಮೀಸಲಾದ ಮೊಬೈಲ್‌ಗಳನ್ನೂ ಬಿಡುತ್ತಿದೆ. ಮಿತವ್ಯಯದ ದರ, ಉತ್ತಮ ತಾಂತ್ರಿಕ ಗುಣಗಳು ಇದರಲ್ಲಿರುತ್ತವೆ. ಇದೀಗ ವಿವೋ ಝಡ್1 ಪ್ರೊ ಎಂಬ ಮೊಬೈಲನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪನಿ ಒಪ್ಪೋ, ವಿವೋ, ಒನ್‌ಪ್ಲಸ್ ಮತ್ತು ರಿಯಲ್ ಮಿ ಬ್ರಾಂಡ್‌ನ ಮೊಬೈಲ್‌ಗಳ ಒಡೆತನ ಹೊಂದಿದೆ. ಇವುಗಳಲ್ಲಿ ಒನ್‌ಪ್ಲಸ್ ಬ್ರಾಂಡಿನಡಿ ಅಗ್ರಶ್ರೇಣಿಯ ತಾಂತ್ರಿಕ ಅಂಶಗಳನ್ನುಳ್ಳ (ಫ್ಲಾಗ್‌ಶಿಪ್) ಮೊಬೈಲ್‌ಗಳನ್ನು ಮಾರಾಟ ಮಾಡುತ್ತದೆ. ವಿವೋ, ಒಪ್ಪೋ ಅಂಗಡಿಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡುವ ಬ್ರಾಂಡ್‌ಗಳು. ರಿಯಲ್ ಮಿ ಆರಂಭಿಕ ಮತ್ತು ಮಧ್ಯಮ ವರ್ಗದಲ್ಲಿ ಆನ್‌ಲೈನ್ ಮೂಲಕ ಮಾರಾಟ ಮಾಡಲು ಇತ್ತೀಚಿಗೆ ಹುಟ್ಟಿಕೊಂಡಿದ್ದು.
ವಿವೋ ಮತ್ತು ಒಪ್ಪೋ ಅಂಗಡಿಗಳ ಮೂಲಕ ಮಾರಾಟ ಮಾಡುವ (ಆಫ್ಲೈನ್) ಕೆಲವು ಸ್ಮಾರ್ಟ್‌ಫೋನ್‌ಗಳ ಬೆಲೆ ಅದರಲ್ಲಿರುವ ತಾಂತ್ರಿಕತೆಗೆ ಹೋಲಿಸಿದರೆ ಜಾಸ್ತಿಯೇ. ಆದರೆ ಇತ್ತೀಚಿಗೆ ಶಿಯೋಮಿ ಮತ್ತಿತರ ಕಂಪೆನಿಗಳ ಪೈಪೋಟಿ ಹೆಚ್ಚಾದ ಕಾರಣ ವಿವೋ ಬ್ರಾಂಡ್‌ನಲ್ಲೂ ಫ್ಲಿಪ್‌ಕಾರ್ಟ್ ಅಥವಾ ಅಮೆಝಾನ್‌ಗೆ ಸೀಮಿತವಾಗಿ ಕೆಲವೊಂದು ಮೊಬೈಲ್‌ಗಳನ್ನು ಕಂಪನಿ ಹೊರತರುತ್ತಿದೆ. ಇವುಗಳ ಬೆಲೆ ಅಂಗಡಿಗಳಿಗಾಗಿ ವಿವೋ ತಯಾರಿಸಿದ ಮಾಡೆಲ್‌ಗಳಿಗಿಂತ ಕಡಿಮೆ ಇರುತ್ತದೆ. ಗುಣ ವಿಶೇಷಣಗಳು ಸಹ ತೃಪ್ತಿದಾಯಕವಾಗಿರುತ್ತವೆ.
ಹೀಗೆ ವಿವೋ ಕಳೆದ ಗುರುವಾರ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಬಿಡುಗಡೆ ಮಾಡಿರುವ ಹೊಸ ಮಾಡೆಲ್ ಹೆಸರು ವಿವೋ ಝಡ್1 ಪ್ರೊ.
ಸ್ನಾಪ್‌ಡ್ರಾಗನ್ 712 ಪ್ರೊಸೆಸರ್
ಈ ಮೊಬೈಲ್ ಎರಡು ಆವೃತ್ತಿಗಳನ್ನು ಹೊಂದಿದೆ. 64 ಜಿಬಿ ಆಂತರಿಕ ಸಂಗ್ರಹ ಹಾಗೂ 4 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮತ್ತು 6 ಜಿಬಿ ರ್ಯಾಮ್. ಇದರಲ್ಲಿ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 712 ಪ್ರೊಸೆಸರ್ ಇದೆ. ಅನೇಕ ಬಾರಿ ಹೇಳಿರುವಂತೆ ಸ್ನಾಪ್‌ಡ್ರಾಗನ್ ಉತ್ತಮ ಪ್ರೊಸೆಸರ್. 712 ಮಧ್ಯಮವರ್ಗದಲ್ಲಿ ವೇಗದ ಪ್ರೊಸೆಸರ್. 2.3 ಗಿಗಾಹಟ್ಜ್ ವೇಗ ಹೊಂದಿದ್ದು ಎಂಟು ಕೋರ್‌ಗಳಿವೆ. ಅಡ್ರೆನೋ 616 ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್ (ಜಿಪಿಯು) ಹೊಂದಿದೆ. ಹೀಗಾಗಿ ಆಟಗಳನ್ನಾಡಲು ಮತ್ತು ವಿವಿಧ ಕೆಲಸಗಳನ್ನು ವೇಗವಾಗಿ ಮಾಡಲು ಇದರಿಂದ ಸಹಾಯಕವಾಗುತ್ತದೆ.
5000 ಎಂಎಎಚ್ ಬ್ಯಾಟರಿ!
ಬಹಳಷ್ಟು ಜನರಿಗೆ ಮೊಬೈಲ್‌ನಲ್ಲಿ ಬ್ಯಾಟರಿ ಹೆಚ್ಚು ಇರಬೇಕೆಂಬುದೇ ಮುಖ್ಯಅಂಶವಾಗಿರುತ್ತದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಒಂದು ದಿನ ಬಂದರೆ ಅದೇ ಹೆಚ್ಚು ಎಂಬಂತಾಗಿದೆ. 3000 ಎಂಎಎಚ್ ಇದ್ದರೆ ಪ್ರಸ್ತುತ ದಿನಗಳಲ್ಲಿ ಸಾಕಾಗುವುದಿಲ್ಲ. 4 ಸಾವಿರ ಎಂಎಎಚ್ ಇದ್ದರೆ ಬಹಳ ಒಳ್ಳೆಯದು ಅಂತ ಹಲವರು ಬಯಸುತ್ತಾರೆ. ಈ ಮೊಬೈಲಿನ ಬ್ಯಾಟರಿ 5000 ಎಂಎಎಚ್ ಹೊಂದಿದೆ! ಹೀಗಾಗಿ ಹೆಚ್ಚು ಬಳಕೆಗೆ ಒಂದೂವರೆ ದಿನ, ಸಾಧಾರಣ ಬಳಕೆಗೆ ಎರಡು ದಿನ ಬ್ಯಾಟರಿ ಬರುತ್ತದೆ. ನನಗೆ ಬ್ಯಾಟರಿ ಜಾಸ್ತಿ ಇರಬೇಕಪ್ಪಾ ಎನ್ನುವವರಿಗೆ ಇದು ಸೂಕ್ತ ಆಯ್ಕೆ.
ಫಾಸ್ಟ್ ಜಾರ್ಜಿಂಗ್!
ಬ್ಯಾಟರಿ ಜಾಸ್ತಿ ಇರುವುದಷ್ಟೇ ಅಲ್ಲ, ಇದಕ್ಕೆ 18 ವ್ಯಾಟ್ ಫಾಸ್ಟ್ ಚಾರ್ಜರ್ ಕೂಡ ನೀಡಲಾಗಿದೆ. ಇದು ಬೋನಸ್ ಎಂದೇ ಹೇಳಬಹುದು. ಯಾಕೆಂದರೆ ಕೆಲವೊಂದು ಮೊಬೈಲ್‌ಗಳಲ್ಲಿ ಬ್ಯಾಟರಿ ಹೆಚ್ಚಿರುತ್ತದೆ. ಆದರೆ ಫಾಸ್ಟ್ ಚಾರ್ಜರ್ ಇರುವುದಿಲ್ಲ. ಅಂಥವನ್ನು ಮೂರು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತದೆ.
32 ಎಂಪಿ. ಪರದೆಯೊಳಗಿನ ಮುಂದಿನ ಕ್ಯಾಮರಾ
ಪರದೆಯನ್ನು ಪೂರ್ತಿ ನೀಡಿ, ಪರದೆಯೊಳಗೆ ಒಂದು ತೂತು ನೀಡಿ ಅದರಲ್ಲಿ ಕ್ಯಾಮರಾ ಮಾಡುವುದು ಈಗ ಟ್ರೆಂಡ್. ವಿವೋ ಝಡ್1 ಪ್ರೊದಲ್ಲಿ ಸಹ ಮೊಬೈಲ್‌ನ ಎಡತುದಿಯಲ್ಲಿ ಸಣ್ಣ ತೂತಿನಲ್ಲಿ ಸೆಲ್ಫಿà ಕ್ಯಾಮರಾ ನೀಡಲಾಗಿದೆ. ಇದು 32 ಮೆಗಾಪಿಕ್ಸಲ್ ಹೊಂದಿದೆ. ವಿವೋ ಎಂದಿನಂತೆ ಸೆಲ್ಫಿà ಕ್ಯಾಮರಾಗೆ ಒತ್ತು ನೀಡಿದೆ.
ಹಿಂಬದಿ ಕ್ಯಾಮರಾತ್ರಯ:
ಹಿಂಬದಿ ಕ್ಯಾಮರಾ ಮೂರು ಲೆನ್ಸ್‌ಗಳನ್ನೊಳಗೊಂಡಿದೆ. 16 ಮೆ.ಪಿ. ಮುಖ್ಯ ಕ್ಯಾಮರಾ, 8 ಮೆ.ಪಿ. ವೈಡ್ ಆ್ಯಂಗಲ್ ಹಾಗೂ 2 ಮೆ.ಪಿ. ಡೆಪ್ತ್ ಕ್ಯಾಮರಾ ಹೊಂದಿದೆ.ಇದು ಸೋನಿ ಐಎಂಎಕ್ಸ್ 499 ಕ್ಯಾಮರಾ.
ಆರೂವರೆ ಇಂಚಿನ ಪರದೆ:
ಇದು ಫುಲ್‌ಎಚ್‌ಡಿ ಪ್ಲಸ್ (2340×1080 ಪಿಕ್ಸೆಲ್‌ಗಳು, 394 ಪಿಪಿಐ) ಇರುವ 6.53 ಇಂಚಿನ ಪರದೆಹೊಂದಿದೆ. ಶೇ. 90.77 ರಷ್ಟು ಪರದೆ ಮತ್ತು ದೇಹದ ಅನುಪಾತಹೊಂದಿದೆ. ಅಂದರೆ ಇದರ ಅಂಚು ಪಟ್ಟಿ ಕೇವಲ 1.76 ಮಿ.ಮೀ. ಮಾತ್ರಇದೆ.
ಎರಡು ಸಿಮ್ + ಮೆಮೊರಿ ಕಾರ್ಡ್:
ಎರಡು ಸಿಮ್ ಸ್ಲಾಟ್‌ಗಳನ್ನು ಹೊಂದಿದೆ. ಎರಡಕ್ಕೂ 4 ಜಿಸಿಮ್ ಹಾಕಿಕೊಳ್ಳಬಹುದು. ಜೊತೆಗೆ 256 ಜಿಬಿ ಮೆಮೊರಿ ಕಾರ್ಡ್ ಹಾಕಲು ಪ್ರತ್ಯೇಕ ಸ್ಲಾಟ್ ಸಹ ಇದೆ.
ಹಿಂಬದಿ ಬೆರಳಚ್ಚುಸ್ಕ್ಯಾನರ್ ಇದೆ. ಅಂಡ್ರಾಯ್ಡ 9 ಪೀ ಕಾರ್ಯಾಚರಣೆ ವ್ಯವಸ್ಥೆ ಹೊಂದಿದ್ದು, ಇದಕ್ಕೆ ವಿವೋದವರ ಫನ್‌ಟಚ್ ಓಎಸ್ ಅನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
ಎಲ್ಲ ಸರಿ,ಇದರ ಬೆಲೆಎಷ್ಟು? ಎನ್ನುವ ಪ್ರಶ್ನೆ ಬಂದೇ ಬರುತ್ತದೆ. ಆಫ್ಲೈನ್ ಮಾರಾಟದ ವಿವೋ ಫೋನ್‌ಗಳಿಗೆ ಹೋಲಿಸಿದರೆ ಇದರ ದರ ಪರವಾಗಿಲ್ಲ ಎನ್ನಬಹುದು. 64+4 ಮಾದರಿಯ ಬೆಲೆ 14,990 ರೂ. 128+6 ಮಾದರಿಯ ಬೆಲೆ 17,990 ರೂ. ಇದೇ ಮಾಡೆಲ್ ಆಫ್ಲೈನ್ (ಅಂಗಡಿ) ಮಾರಾಟಕ್ಕಿಟ್ಟಿದ್ದರೆ ಖಂಡಿತ 20 ಮತ್ತು 23 ಸಾವಿರಕ್ಕಿಂತ ಕಡಿಮೆ ಇರುತ್ತಿರಲಿಲ್ಲ.
ವಿವೋ ಇಷ್ಟೆಲ್ಲಾ ನೀಡಿ, ಬೆಲೆಯೊಡನೆ ರಾಜಿ ಮಾಡಿಕೊಳ್ಳುವ ಸಲುವಾಗಿ ಈ ಮೊಬೈಲ್‌ಗೆ ಲೋಹದ ಬಾಡಿ ನೀಡಿಲ್ಲ. ಅಂದರೆ ಇದರದ್ದು ಮೆಟಾಲಿಕ್ ಬಾಡಿ ಅಲ್ಲ, ಪ್ಲಾಸ್ಟಿಕ್ ಬಾಡಿ. ಸಂಪೂರ್ಣ ಮೆಟಾಲಿಕ್ ಅಥವಾ ಗಾಜಿನ ದೇಹ ಇದ್ದರೆ ಈ ದರಕ್ಕೆ ಇದು ಅತ್ಯುತ್ತಮ ಫೋನ್ ಆಗಿರುತ್ತಿತ್ತು. ಒಳಗೆ ಉತ್ತಮ ತಾಂತ್ರಿಕ ಗುಣವಿಶೇಷಗಳನ್ನು ನೀಡಿ, ದೇಹ ಪ್ಲಾಸ್ಟಿಕ್‌ನದು ನೀಡುವುದು ಗ್ರಾಹಕನಿಗೆ ಕೊನೆಗೊಂದು ಅತೃಪ್ತಿ ಉಳಿಸುತ್ತದೆ. ರಿಯಲ್ ಮಿಯದೂ ಇದೇ ಕಥೆ! ಯಾಕೆಂದರೆ ಎರಡೂ ಒಂದೇ ಕಂಪೆನಿಯ ಒಡೆತನದವು!
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.