ರಾಗಿ ಬೆಳದವನಿಗೆ ರಾಜಯೋಗ


Team Udayavani, Jan 1, 2018, 4:41 PM IST

raagi-belaedavannu.jpg

ಮಲೆನಾಡು ಪ್ರದೇಶದ ತಾಲೂಕುಗಳಾದ ಸಾಗರ ,ಹೊಸನಗರ,ತೀರ್ಥಹಳ್ಳಿ ತಾಲೂಕುಗಳಲ್ಲಿ ರಾಗಿ ,ತೊಗರಿ ಬೆಳೆಗಳು ಕಾಣೋದು ಕಷ್ಟ.  ಕಳೆದ ವರ್ಷ ಹಲವು ಬೆಳೆಗಳನ್ನು ಫ‌ಸಲು ಕುಸಿತ ಮತ್ತು ಮಾರುಕಟ್ಟೆ ದರದ ಏರು ಪೇರಿನ ಕಾರಣ ಈ ಭಾಗದ ರೈತರು ಕಡಿಮೆ ಪರಿಶ್ರಮ ಮತ್ತು ಕಡಿಮೆ ಖರ್ಚು ತಗಲುವ ಕೃಷಿ ನಡೆಸುತ್ತ ಸಾಗಿದ್ದಾರೆ. ಇಂಥ ಸಂದರ್ಭದಲ್ಲೇ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿಯ ಯುವ  ರೈತ ಬಿ.ರಘುರಾಮ,  ಈ ವರ್ಷ ರಾಗಿ ಕೃಷಿ ನಡೆಸಿದ್ದು ಬಂಪರ್‌ ಫ‌ಸಲು ದೊರೆತಿದೆ.

ಕೃಷಿ ಹೇಗೆ ?: ಸಾಗರ-ತೀರ್ಥಹಳ್ಳಿ ಹೆದ್ದಾರಿಯ ಯಡೇಹಳ್ಳಿಯಲ್ಲಿ ಇವರ ಹೊಲವಿದೆ. ಒಣ ಮಣ್ಣಿನಿಂದ ಕೂಡಿದ ಜಮೀನು ಇವರದು.  ಹಲವು ರ್ಷಗಳಿಂದ ಈ ಹೊಲದಲ್ಲಿ  ಶುಂಠಿ,ಹತ್ತಿ, ಮೆಕ್ಕೆಜೋಳ,ಭತ್ತ ಇತ್ಯಾದಿ ಕೃಷಿ ನಡೆಸಿದ್ದ ಇವರು ಈ ವರ್ಷ ರಾಗಿ ಬೆಳೆಯಲು ನಿರ್ಧರಿಸಿದರು.ಈ ವರ್ಷದ ಜೂನ್‌ ಕೊನೆಯ ವಾರದ ಸುಮಾರಿಗೆ ಹೊಲವನ್ನು ಟ್ರಾಕ್ಟರ್‌ ನಿಂದ ಹದಗೊಳಿಸಿ ಜುಲೈ ಮೊದಲವಾರ ರಾಗಿ ಬೀಜ ಬಿತ್ತನೆ ಮಾಡಿದರು. 3 ಎಕರೆ ಹೊಲದಲ್ಲಿ 26 ಕೆಜಿ ರಾಗಿ ಬೀಜ ಬಿತ್ತಿದ್ದರು.  ಮೊಳಕೆಯೊಡೆದು ಗಿಡವಾಗಿ ಬೆಳೆಯಲಾರಂಭಿಸುತ್ತಿದ್ದಂತೆ 20:20 ಕಾಂಪ್ಲೆಕ್ಸ್‌ ಗೊಬ್ಬರ ನೀಡಿದ್ದರು.

ನಂತರ 25 ದಿನಕ್ಕೆ ಒಮ್ಮೆಯಂತೆ ಇನ್ನು 2 ಸಲ ಗೊಬ್ಬರ ನೀಡಿದ್ದರು.ಈ ವರ್ಷ 2 3 ದಿನಕ್ಕೊಮ್ಮೆ ಹಗುರ ಮಳೆಯಾದ ಕಾರಣ ಹದವಾಗಿ ನೀರು ದೊರೆತಂತಾಗಿ ರಾಗಿ ಹುಲುಸಾಗಿ ಬೆಳೆದಿದೆ. ಇವರ ಕೃಷಿಗೆ ತಾಯಿ ನಾಗಮ್ಮ ಪ್ರತಿ ಹಂತದಲ್ಲಿ ಮಾರ್ಗದರ್ಶನ ಮಾಡಿದ್ದು ಯಶಸ್ವಿ ಕೃಷಿಗೆ ಕಾರಣರಾಗಿದ್ದಾರೆ.

ಲಾಭ ಹೇಗೆ ?: ಇವರು ಮೂರು ಎಕರೆ ಹೊಲದಲ್ಲಿ ರಾಗಿ ಬೆಳೆಯಲು ಭೂಮಿ ಹದಗೊಳಿಸಿದ್ದು,ರಾಗಿ ಬೀಜ ಖರೀದಿ,ಬಿತ್ತನೆ ಕೂಲಿ, ಕಳೆ ನಿರ್ವಹಣೆ, ಗೊಬ್ಬರ.. ಇತ್ಯಾದಿ ಎಲ್ಲ ಲೆಕ್ಕಹಾಕಿದರೂ ಸುಮಾರು ರೂ.24 ಸಾವಿರ ಖರ್ಚಾಗಿದೆ. ರಾಗಿ ಗಿಡಗಳು ಹುಲುಸಾಗಿ ಬೆಳೆದು ಬಂಪರ್‌ ಫ‌ಸಲು ದೊರತಿದೆ. ಎಕರೆಗೆ ಸರಾಸರಿ 20 ಕ್ವಿಂಟಾಲ್‌ ನಂತೆ ಒಟ್ಟು 50 ಕ್ವಿಂಟಾಲ್‌ ಪಸಲು ಸಿಕ್ಕಿದೆ.ರಾಗಿ ಕ್ವಿಂಟಾಲ್‌ ಗೆ ರೂ.2000 ಮಾರುಕಟ್ಟೆ ದರವಿದೆ.

ಇದರಿಂದ ಇವರಿಗೆ ಸುಮಾರು ರೂ.1 ಲಕ್ಷ ಆದಾಯ ದೊರೆತಿದೆ. ಕೃಷಿ ನಿರ್ವಹಣೆ ಖರ್ಚನ್ನಲ್ಲ ಕಳೆದರೆ ರೂ.80 ಸಾವಿರ ಲಾಭ ದೊರೆಯುತ್ತದೆ. ಕಟಾವಾದ ಬಳಿಕ ರಾಗಿ ಗಿಡಗಳ ಒಣ ಕಾಂಡಗಳು ಜಾನುವಾರುಗಳಿಗೆ ಮೇವಾಗಿ ಬಳಕೆಯಾಗುವ ಕಾರಣ ಇದರಿಂದ ಸಹ ಆದಾಯ ದೊರೆತಿದೆ.  ರಾಗಿಗೆ ಪ್ರಾಣಿ ಪಕ್ಷಿಗಳ ಕಾಟವೂ ಇಲ್ಲ,ಗಿಡಗಳಿಗೆ ರೋಗ ಬಾಧೆಯೂ ಇಲ್ಲದ ಕಾರಣ ಲಾಭದ ಕೃಷಿ ಇದು ಎಂಬ ಅನುಭವದ ಮಾತು ಇವರದಾಗಿದೆ.

ಮಾಹಿತಿಗಾಗಿ ಇವರ ಮೊಬೈಲ್‌ ಸಂಖ್ಯೆ 9880373258 ನ್ನು ಸಂಪರ್ಕಿಸಬಹುದಾಗಿದೆ.

* ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.