ಅಪರೂಪದ ಉದ್ಯಾನ: ಕೃಷಿಯ ಖುಷಿಗೆ ಸೋಪಾನ

Team Udayavani, Dec 24, 2018, 6:00 AM IST

adduru-1-copy-copy.jpg

ತಿರುಮಲೇಶ್ವರ ಭಟ್ಟರಿಗೆ ಕಳ್ಳಿಗಳೆಂದರೆ ಅಪಾರ ಪ್ರೀತಿ ಹಾಗೂ ಆಸಕ್ತಿ. ಅವರ ಸಂಗ್ರಹದಲ್ಲಿರುವ ಕಳ್ಳಿ ಪ್ರಭೇದಗಳ ಸಂಖ್ಯೆ 350ಕ್ಕಿಂತ ಜಾಸ್ತಿ. ಸುಂದರ ಕುಂಡಗಳಲ್ಲಿ ಬೆಳೆಸಿ, ಅಚ್ಚುಕಟ್ಟಾಗಿ ಸಾಲುಸಾಲಾಗಿ ಜೋಡಿಸಿಟ್ಟಿರುವ ಕಳ್ಳಿಗಳ ನೋಟ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. 
                  
ಕುರಿಯಾಜೆ ತಿರುಮಲೇಶ್ವರ ಭಟ್‌ ತಲಾ ಮೂರು ಎಕರೆಯಲ್ಲಿ ಅಡಿಕೆ ಮತ್ತು ರಬ್ಬರ… ತೋಟ ಬೆಳೆಸಿದವರು ಎಂದರೆ ಅವರ ಕೃಷಿ ಮತ್ತು ಸಸ್ಯಪ್ರೀತಿಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ.

ಏಕೆಂದರೆ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಅವರ ಮನೆಯ ಗೇಟು ತೆರೆದು ಒಳಕ್ಕೆ ಕಾಲಿಡುವಾಗಲೇ ಸ್ವರ್ಗದ ತೋಟ ಪ್ರವೇಶಿಸಿದ ಅನುಭವವಾಗುತ್ತದೆ.  ಅಲ್ಲಿವೆ ಬಗೆಬಗೆಯ ಅಲಂಕಾರಿಕ ಗಿಡಗಳು. ಅವುಗಳನ್ನು ಪ್ರೋನಿಂಗ್‌ ಮಾಡಿ ರೂಪಿಸಿದ ಮನಮೋಹಕ ವಿನ್ಯಾಸಗಳು, ಅಪರೂಪದ ಕಳ್ಳಿಗಿಡಗಳು ಹಾಗೂ ಸುಂದರ ಮೂರ್ತಿಗಳು. 

ಆ ನಂದನವನಕ್ಕೆ ಒಂದು ಸುತ್ತು ಹಾಕಿದರೆ ಮಾತ್ರ, ಕೃಷಿಕ ತಿರುಮಲೇಶ್ವರ ಭಟ್‌ ಅವರೊಳಗಿನ ಕಲಾವಿದ ನಮಗೆ ಮುಖಾಮುಖೀಯಾಗುತ್ತಾರೆ.

ಇದು ತಿರುಮಲೇಶ್ವರ ಭಟ್‌ ಅವರ ಎರಡೂವರೆ ದಶಕಗಳ ಶ್ರಮ, ಸಾಹಸ ಹಾಗೂ ಆಸಕ್ತಿಗಳ ಫ‌ಲ.  ಹೊಸಹೊಸ ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳು ಮತ್ತು ಕಳ್ಳಿಗಿಡಗಳನ್ನು ತರಲಿಕ್ಕಾಗಿ ಅದೆಷ್ಟು ಬಾರಿ ದೂರದೂರದ ಊರುಗಳಿಗೆ ಹೋಗಿ ಬಂದಿದ್ದಾ
ರೋ, ಅವರು ಅದರ ಲೆಕ್ಕವಿಟ್ಟಿಲ್ಲ. ಜೋಪಾನವಾಗಿ ಗಿಡಗಳನ್ನು ತಂದು ಮುತುವರ್ಜಿಯಿಂದ ಬೆಳೆಸುವುದೇ ಅವರಿಗೆ ಖುಷಿ.  ಹಾಗಾಗಿಯೇ, ಲಂಡನ್‌ ಪೈನ್‌, ತೂಜಾ, ಗೋಲ್ಡನ್‌ ಸೈಪ್ರಸ್‌ ಮುಂತಾದ, ಹೆಚ್ಚಿನವರಿಗೆ ಗೊತ್ತೇ ಇಲ್ಲದ ಅಲಂಕಾರಿಕ ಗಿಡಗಳು ಅವರ ತೋಟದಲ್ಲಿ ಕಂಗೊಳಿಸುತ್ತಿವೆ.

ಗಿಡಗಳನ್ನು ಪ್ರೋನಿಂಗ್‌ ಮಾಡುತ್ತಾ ಚಿತ್ತಾಕರ್ಷಕ ವಿನ್ಯಾಸ ರೂಪಿಸುವುದರಲ್ಲಿ ಅವರದು ಪಳಗಿದ ಕೈ. ಹಾಗೆ ಅವರು ರೂಪಿಸಿದ ಸಸ್ಯಗೋಲಗಳು, ಸಸ್ಯಕಂಬಗಳು ಮತ್ತು ಸಸ್ಯ ಕಮಾನುಗಳು ಅವರ ಉದ್ಯಾನವನಕ್ಕೆ ಶೋಭೆ ನೀಡಿವೆ. ಅಲ್ಲಿರುವ ತಾವರೆಕೊಳದಲ್ಲಿ ಅರಳಿ ನಿಂತಿವೆ ತಾವರೆಗಳು. ಆ ಕೊಳದಲ್ಲಿ ಊರಿರುವ ಸಿಮೆಂಟಿನ ಕೊಕ್ಕರೆ ಮತ್ತು ಬಾತುಕೋಳಿಗಳು ಕೂಡ ಇವು ಜೀವಂತ ಪ್ರಾಣಿಗಳೇ ಇರಬೇಕು ಎಂಬ ಭಾವವನ್ನು ಉಂಟುಮಾಡುತ್ತದೆ. ಹಾಗೆಯೇ, ಉದ್ಯಾನದಲ್ಲಿ ಅಲ್ಲಲ್ಲಿ ಇಟ್ಟಿರುವ ಜಿಂಕೆ, ಮೊಲ, ಆಮೆ, ಗಿಳಿ, ನವಿಲುಗಳ ಮೂರ್ತಿಗಳೂ ಸುತ್ತಲಿನ ಸಸ್ಯಲೋಕಕ್ಕೆ ಮೆರುಗು ನೀಡಿವೆ.

ತಿರುಮಲೇಶ್ವರ ಭಟ್ಟರಿಗೆ ಕಳ್ಳಿಗಳೆಂದರೆ ಅಪಾರ ಪ್ರೀತಿ ಹಾಗೂ ಆಸಕ್ತಿ. ಅವರ ಸಂಗ್ರಹದಲ್ಲಿರುವ ಕಳ್ಳಿ ಪ್ರಭೇದಗಳ ಸಂಖ್ಯೆ 350ಕ್ಕಿಂತ ಜಾಸ್ತಿ. ಸುಂದರ ಕುಂಡಗಳಲ್ಲಿ ಬೆಳೆಸಿ, ಅಚ್ಚುಕಟ್ಟಾಗಿ ಸಾಲುಸಾಲಾಗಿ ಜೋಡಿಸಿಟ್ಟಿರುವ ಕಳ್ಳಿಗಳ ನೋಟ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ.  ಅಬ್ಟಾ, ಎಲ್ಲಿಂದ ತಂದರೋ, ಹೇಗೆ ಬೆಳೆಸಿದರೋ! ಏಕೆಂದರೆ, ಕಳ್ಳಿಗಿಡಗಳ ಕೃಷಿ ಸುಲಭವಲ್ಲ. ಹಾಕಿದ ನೀರು ಹೆಚ್ಚಾದರೆ ಕಳ್ಳಿಗಿಡಗಳು ಸತ್ತೇ ಹೋಗುತ್ತವೆ. ಆದರೆ, ಮಳೆನೀರು ಸುರಿಯದಂತೆ ಜೋಪಾನವಾಗಿ ಬೆಳೆಸಿದರೆ, ಕಳ್ಳಿಗಿಡಗಳು ಹತ್ತಾರು ವರ್ಷ ಉಳಿದು, ತಮ್ಮ ವಿಲಕ್ಷಣ ವಿನ್ಯಾಸಗಳಿಂದಾಗಿ ಗಮನ ಸೆಳೆಯುತ್ತವೆ. ಅವುಗಳಲ್ಲಿ ಹೂಗಳು ಅರಳಿದಾಗ ಅವನ್ನು ಬೆಳೆಸಲು ಪಟ್ಟ ಶ್ರಮವೆಲ್ಲ ಸಾರ್ಥಕವಾಯಿತು ಅನಿಸುತ್ತದೆ ಎನ್ನುತ್ತಾರೆ ತಿರುಮಲೇಶ್ವರ ಭಟ್‌.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆಯಲ್ಲಿರುವ ತಿರುಮಲೇಶ್ವರ ಭಟ್ಟರ ಜಮೀನಿನ ಮುಖ್ಯ ಬೆಳೆ ಅಡಿಕೆ ಮತ್ತು ರಬ್ಬರ್‌. ಜೊತೆಗೆ ಕರಿಮೆಣಸು, ಕೊಕ್ಕೋ, ಬಾಳೆ ಹಾಗೂ ಜಾಯಿಕಾಯಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. 

ತಮ್ಮ ಜಮೀನಿನ ಒಂದು ಎಕರೆಯಲ್ಲಿ ವಿಧವಿಧದ ಹಣ್ಣುಗಳ ತೋಟ ಬೆಳೆಸಿರುವುದು ಇವರ ಸಾಧನೆ. ಆ ಮೂಲಕ ಹಲವು ವಿದೇಶಿ ಹಣ್ಣುಗಳ ಗಿಡಗಳು ಕರಾವಳಿಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಉದಾಹರಣೆ, ಮಿರಾಕಲ್‌
 ಹಣ್ಣು, ಡ್ರಾಗನ್‌ ಹಣ್ಣು, ಮ್ಯಾಂಗೋಸ್ಟೀನ್‌, ರಾಂಬುಟಾನ್‌. ಥಾಯಿಲ್ಯಾಂಡ್‌ ಮತ್ತು ಮಲೇಷ್ಯಾ ಮೂಲದ ಹಣ್ಣಿನ ಗಿಡಗಳೂ ಸೇರಿ 28 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ಹಣ್ಣಿನ ತೋಟದಲ್ಲಿವೆ. ಹನ್ನೆರಡು ವಿಧದ ಹಲಸಿನ ತಳಿ ಮತ್ತು ಹತ್ತಾರು ಮಾವಿನ ತಳಿಗಳನ್ನು ಬೆಳೆಸುವ ಮೂಲಕ ತಳಿ ರಕ್ಷಣೆಗೂ ಗಮನ ನೀಡಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ, ತಿರುಮಲೇಶ್ವರ ಭಟ್‌ ಅಪ್ಪಟ ಸಾವಯವ ಕೃಷಿಕರು. ಉತ್ತಮ ಫ‌ಸಲು ಪಡೆಯಲು ರಾಸಾಯನಿಕ ಗೊಬ್ಬರ ಅಥವಾ ರಾಸಾಯನಿಕ ಪೀಡೆನಾಶಕಗಳು ಅಗತ್ಯವಿಲ್ಲ ಎಂಬುದು ಅವರ ನಂಬಿಕೆ. ಹೈನುಗಾರಿಕೆಯಿಂದ ಪಡೆಯುತ್ತಿರುವ ಸಾವಯವ ಗೊಬ್ಬರದ ಮೂಲಕ ಇವರ ತೋಟದ ಬೆಳೆಗಳಿಗೆ ಪೋಷಕಾಂಶ ಪೂರೈಕೆ ಮಾಡುತ್ತಾರೆ. ಎಮ್ಮೆ ಮತ್ತು ಗಿರ್‌ ತಳಿಯ ಹಸುಗಳನ್ನು ಸಾಕುತ್ತಿದ್ದು ಹೈನುಗಾರಿಕೆ ರೀತಿಯಿಂದಲೂ ಲಾಭದಾಯಕ ಎನ್ನುತ್ತಾರೆ. 

ಇವರ ಇನ್ನೆರಡು ಆಸಕ್ತಿಗಳು: ಬೋನ್ಸಾಯ್‌ ಗಿಡಗಳನ್ನು ಬೆಳೆಸುವುದು ಮತ್ತು ವಿಶಿಷ್ಟ ಕಲ್ಲುಗಳನ್ನು ಸಂಗ್ರಹಿಸುವುದು. ಹೀಗೆ ಹಲವು ಆಸಕ್ತಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಯಶ ಕಂಡವರು ತಿರುಮಲೇಶ್ವರ ಭಟ್‌. ಇವರು 2007- 2008ನೇ ಸಾಲಿನ ಕರ್ನಾಟಕ ಸರಕಾರದ ಕೃಷಿ ಪಂಡಿತ ಪ್ರಶಸ್ತಿಯ ಗೌರವ ಗಳಿಸಿದ್ದರಲ್ಲಿ ಅಚ್ಚರಿಯಿಲ್ಲ.

ಕೃಷಿಯ ಜೊತೆಗೆ ತಮ್ಮ ಆಸಕ್ತಿಗಳನ್ನು ಹೇಗೆ ಅಳವಡಿಸಿಕೊಂಡು ಸಾಧನೆ ಮಾಡಬಹುದು ಎಂಬುದಕ್ಕೆ ಮಾದರಿ ಕುರಿಯಾಜೆ ತಿರುಮಲೇಶ್ವರ ಭಟ್‌. ಕೃಷಿಯಲ್ಲಿ ಏನಿದೆ? ಆ ಕ್ಷೇತ್ರ ಬೋರ್‌ ಹೊಡೆಯುತ್ತದೆ ಎನ್ನುವವರಿಗೆ ಕೃಷಿಯಲ್ಲಿ ಖುಷಿ ಕಂಡುಕೊಳ್ಳುವ ಮನಸ್ಸಿದ್ದರೆ ಕೃಷಿಯಲ್ಲಿ ಎಲ್ಲವೂ ಇದೆ ಎಂಬುದು ಈ ಸಸ್ಯಪ್ರೇಮಿಯ ಉತ್ತರ. ಅದಕ್ಕೆ ಪುರಾವೆ ಅವರ ಮನೆಯಂಗಳದ ಅಪರೂಪದ ಉದ್ಯಾನ ಮತ್ತು ಹಸುರಿನಿಂದ ನಳನಳಿಸುವ ತೋಟ. 

-ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.