ದರ ಸಮರ:ಏನಾಗುತ್ತಿದೆ ಹೇಳು ಟ್ರಾಯ್‌?


Team Udayavani, Feb 11, 2019, 12:30 AM IST

default-dth-tv-broadcast-service-providers-tata-sky-5.jpg

ಸಾರಾಸಗಟಾಗಿ ಟ್ರಾಯ್‌ ದರ ಮಾದರಿಯ ಮಾರ್ಪಾಡಿಗೆ ಮುಂದಾಗುವ ಅಗತ್ಯವಿರಲಿಲ್ಲ. ಈ ವರ್ಗದ ಗ್ರಾಹಕರಿಗೆ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಸೂಕ್ತ ವೇದಿಕೆಯನ್ನು ನಿರ್ಮಿಸಬೇಕಿತ್ತು. ಗ್ರಾಹಕರಿಗೆ ಅದೇ ಡಿಷ್‌, ರಿಸೀವರ್‌ ಇದ್ದರೂ ಸೇವಾದಾತರನ್ನು ಬದಲಿಸುವ ಮೊಬೈಲ್‌ನ ಎಂಎನ್‌ಪಿ ಮಾದರಿಯನ್ನು ಪರಿಚಯಿಸಬೇಕಿತ್ತು. ಚಾನೆಲ್‌ಗ‌ಳ ದರಕ್ಕೆ ಚೌಕಟ್ಟು ಹಾಕಬೇಕಿತ್ತು. ಐಪಿಎಲ್‌ ಬಂದಕ್ಷಣ 60, 80 ರೂ.ಗೆ ಚಾನೆಲ್‌ ಒಂದರ ದರ ಏರಿಕೆಯಾಗುವಂತಹ ವಿದ್ಯಮಾನವನ್ನು ತಡೆಯಬೇಕಿತ್ತು.

ತುಂಬಾ ವರ್ಷಗಳಿಂದ ಡೈರೆಕ್ಟ್ ಟು ಹೋಮ್‌ ತಂತ್ರಜಾnನದ ಮೂಲಕ ಟಿವಿ ಚಾನೆಲ್‌ ಸೇವೆ ಪಡೆಯುತ್ತಿರುವ ಡಿಟಿಎಚ್‌ ಕ್ಷೇತ್ರದಲ್ಲಿ ಕಾನೂನಿನ ಕಣ್ಗಾವಲು ಕಾಣೆಯಾಗಿತ್ತು. ಕೇಬಲ್‌ ಮೂಲಕ ಟಿವಿ ಚಾನೆಲ್‌ ಪ್ರಸಾರ ಸೇವೆ ಕೊಡುವುದು ಸೇರಿದಂತೆ ಈ ಕ್ಷೇತ್ರ, ದೇಶದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿರ್ವಹಣೆಯಲ್ಲಿತ್ತು ಎಂಬುದು ನಿಜವಾದರೂ, ಖುದ್ದು ಟ್ರಾಯ್‌ ಈ ಕ್ಷೇತ್ರದತ್ತ ಯಕಃಶ್ಚಿತ್‌ ಕಣ್ಣೋಟವನ್ನೂ ಬೀರಿರಲಿಲ್ಲ. ಕೇಬಲ್‌ ಕ್ಷೇತ್ರದಲ್ಲಿ ನಾಲ್ಕು ವರ್ಗಗಳ ನಗರ ರೂಪಿಸಿ ದರ ನಿಗದಿಯ ಪ್ರಯತ್ನವನ್ನು ಅದು ಮಾಡಿದ್ದರೂ, ಅದರ ಜಾರಿ ನಿರಾಶಾದಾಯಕವಾಗಿತ್ತು. ಅಂತೂ ಇಂತೂ ಡಿಷ್‌ ಹಾಗೂ ಕೇಬಲ್‌ ಕ್ಷೇತ್ರದ ಗ್ರಾಹಕನ ಹಿತವನ್ನು ಅರ್ಥೈಸಿಕೊಂಡು ಟ್ರಾಯ್‌ ಮೊದಲ ಬಾರಿಗೆ ದರ ನಿಯಂತ್ರಣದ ಸಾಹಸಕ್ಕೆ ಇಳಿದಿತ್ತು. ತಯಾರಿ ಮತ್ತು ಶಿಕ್ಷಣದ ಕೊರತೆಯಿಂದ ಇಡೀ ವಿದ್ಯಮಾನ ಗೊಂದಲದ ಗೂಡಾಗಿದೆ.

ಫ್ಲ್ಯಾಶ್‌ಬ್ಯಾಕ್‌
ಟ್ರಾಯ್‌ 2018ರ ಜುಲೈ ಮೂರರಂದು ಚಾನೆಲ್‌ಗ‌ಳ ಆಯ್ಕೆಯಲ್ಲಿ ಹೊಸ ದರ ಪಟ್ಟಿಯನ್ನು ಜಾರಿಗೆ ತಂದು, ಇದರ ಅಳವಡಿಕೆಗೆ 180 ದಿನಗಳ ಅವಕಾಶವನ್ನು ಕಲ್ಪಿಸಿತು. ಈ ಲೆಕ್ಕದಲ್ಲಿ ಹೊಸ ದರ ಮಾದರಿ ಡಿಸೆಂಬರ್‌ 30ರಿಂದ ಜಾರಿಯಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ನಿಯಮ ಜಾರಿಗೊಳಿಸಿದ್ದರೂ ಅದರ ಜಾರಿಗೆ ಕಟ್ಟುನಿಟ್ಟಿನ ಸೂಚನೆ ಕೊಡದ ಹಿನ್ನೆಲೆಯಲ್ಲಿ ಟ್ರಾಯ್‌ ಈ ಜಾರಿ ದಿನಾಂಕವನ್ನು ಫೆಬ್ರವರಿ ಒಂದಕ್ಕೆ ಮುಂದೂಡಿತು. ಇಷ್ಟೆಲ್ಲದರ ಹೊರತಾಗಿಯೂ ಟ್ರಾಯ್‌ ಇತ್ತೀಚೆಗೆ ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಹೊಸ ದರ ಮಾದರಿಯನ್ನು ಶೇ. 5ರಷ್ಟು ಗ್ರಾಹಕರು ಮಾತ್ರ ಅಳವಡಿಸಿಕೊಂಡಿದ್ದಾರೆ ಎಂದು ಜಾರಿಯ ಹಿನ್ನಡೆಯನ್ನು ಒಪ್ಪಿಕೊಂಡಿದೆ.

ಟ್ರಾಯ್‌ ಒಂದು ರೀತಿಯಲ್ಲಿ ದಂತಗೋಪುರದ ಮೇಲೆ ಕುಳಿತಿದೆ. 2019ರಲ್ಲಿ ಅದು ಹೊರಡಿಸಿದ ಎಂಟನೇ ಪತ್ರಿಕಾ ಹೇಳಿಕೆಯಲ್ಲಿ ಹೊಸ ಮಾದರಿಯ ಅಳವಡಿಕೆಗೆ ಸರಳ ಮಾರ್ಗವಿದೆ ಎಂದು ಒತ್ತಿಹೇಳಿದೆ. ಆ ಮೂಲಕ ವಾಸ್ತವ ಜಾರಿಯಲ್ಲಿರುವ ಸಮಸ್ಯೆ ಕುರಿತು ಅದು ಗಮನವನ್ನೇ ಹರಿಸದಿರುವುದು ಕಾಣುತ್ತದೆ.

ಅದರ ಸೂಚನೆಗಳನ್ನೇ ಗಮನಿಸಿ. ಬಳಕೆದಾರ ಟಿವಿ ಆನ್‌ ಮಾಡಿ ಪ್ರತಿಯೊಂದು ಚಾನೆಲ್‌ ನೋಡುತ್ತ ಹೋಗಬೇಕು. ಅದು ಹೇಳುತ್ತದೆ, ಸಾಧಾರಣವಾಗಿ ನೋಡುವ ಚಾನೆಲ್‌ನ ನಂಬರ್‌, ಹೆಸರುಗಳನ್ನು ದಾಖಲಿಸಿಕೊಳ್ಳಿ. ಈ ರೀತಿ ಆಯ್ಕೆ ಮಾಡಿದ ಚಾನೆಲ್‌ಗ‌ಳ ಪಟ್ಟಿಯನ್ನು ಸೇವಾದಾತರಿಗೆ ವೆಬ್‌, ಆ್ಯಪ್‌, ಗ್ರಾಹಕವಾಣಿ ಅಥವಾ  ಕೇಬಲ್‌ ಆಪರೇಟರ್‌ ಮೂಲಕ ತಲುಪಿಸಿ. ಎಲೆಕ್ಟ್ರಾನಿಕ್‌ ಪೋ› ಗೈಡ್‌ ಅರ್ಥಾತ್‌ ಇಪಿಜಿ ಮೂಲಕ ನೀವು ಆಯ್ಕೆ ಮಾಡಿದ ಚಾನೆಲ್‌ಗ‌ಳ ದರವೂ ನಿಮಗೆ ಗೊತ್ತಾಗುತ್ತದೆ. ಅವುಗಳ ಪೂರ್ಣ ಪಟ್ಟಿಯನ್ನು ಸೇವಾದಾತರು ಚಾನೆಲ್‌ ನಂ. 999ರಲ್ಲಿ ನಿರಂತರವಾಗಿ ಕೊಟ್ಟಿರುತ್ತಾರೆ. ಇಷ್ಟು ಮಾಡಿದರೆ ನಿಮಗೆ ನೀವೇ ನೋಡಲು ಆಯ್ಕೆ ಮಾಡಿಕೊಂಡ ಹೊಸ ಪ್ಯಾಕೇಜ್‌ ಸಿಗುತ್ತದೆ!

ಬಹುಶಃ ಈ ಮಾದರಿ ಅನುಸರಿಸಿ ತಮ್ಮದೇ ಚಾನೆಲ್‌ಗ‌ಳನ್ನು ನೋಡಲಾರಂಭಿಸಿರುವವರಿಗೆ ಸನ್ಮಾನ ಮಾಡಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ಕೇವಲ ಕನ್ನಡ ಚಾನೆಲ್‌ಗ‌ಳನ್ನಷ್ಟೇ ಆಯ್ಕೆ ಮಾಡಿಕೊಂಡವರು ಬಿಡಿ ಚಾನೆಲ್‌ ದರ ಪಟ್ಟಿಯನ್ವಯ ಸುಮಾರು 158 ರೂ. ಚಾನೆಲ್‌ ದರ ಹಾಗೂ ಸೇವಾ ಶುಲ್ಕ 130 ರೂ. ಮತ್ತು ಶೇ. 18ರ ಜಿಎಸ್‌ಟಿ ಸೇರಿ 300ಕ್ಕೂ ಹೆಚ್ಚು ಮೊತ್ತ ಕೊಡಬೇಕಾಗುತ್ತದೆ. ಹಾಗಾದರೆ ಯಾರಿಗೆ ಆಯ್ತು ಲಾಭ?

ಗೊಂದಲಗಳ ಸರಮಾಲೆ
ಇದರ ನಡುವೆ ಚಾನೆಲ್‌ಗ‌ಳ ಆಯ್ಕೆ, ನಿಯಮಗಳ ಅನುಪಾಲನೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಇದಕ್ಕೆ ಮಾಧ್ಯಮಗಳಲ್ಲಿನ ವರದಿಗಳು ಕೂಡ ಪೂರಕವಾಗಿ ವರ್ತಿಸಿವೆ. ಕೆಲದಿನಗಳ ಹಿಂದೆ, 130 ರೂ.ನ ಮಾಸಿಕ ಕನಿಷ್ಠ ಶುಲ್ಕಕ್ಕೆ ಅನುಗುಣವಾಗಿ 130 ರೂ. ಮೌಲ್ಯದ ಪಾವತಿ ಚಾನೆಲ್‌ಗ‌ಳನ್ನು ಕೂಡ ಗ್ರಾಹಕ ಆಯ್ಕೆ ಮಾಡಿಕೊಳ್ಳಬಹುದು ಎಂಬರ್ಥದ ಸುದ್ದಿಗಳು ಎಲ್ಲೆಡೆ ವೈರಲ್‌ ಆಯಿತು. ವಾಸ್ತವವಾಗಿ, 130 ರೂ. ಸೇವಾದಾತರಿಗೆ ಗ್ರಾಹಕ ಒದಗಿಸುವ ಸೇವಾ ಶುಲ್ಕ. ಇಷ್ಟು ಮೊತ್ತ ಪಡೆದ ಸೇವಾದಾತನಿಂದ ಉಚಿತ ಹಾಗೂ ಪೇ ಚಾನೆಲ್‌ ಸೇರಿ ಗ್ರಾಹಕ 100 ಚಾನೆಲ್‌ ನೋಡಲು ಹಕ್ಕುದಾರ. ಈ ನೂರು ಚಾನೆಲ್‌ಗ‌ಳಲ್ಲಿ ಆತ 10 ಪೇ ಚಾನೆಲ್‌ ಆರಿಸಿಕೊಂಡಿದ್ದಾನೆಂದರೆ, ಆ ಚಾನೆಲ್‌ಗ‌ಳಿಗೆ ತಗಲುವ ಶುಲ್ಕ ಮತ್ತು ಜಿಎಸ್‌ಟಿ ಪ್ರತ್ಯೇಕವಾಗಿಯೇ ಈ 130 ರೂ.ಗೆ ಸೇರ್ಪಡೆಯಾಗುತ್ತದೆ! 100 ಚಾನೆಲ್‌ಗ‌ಳ ಒಂದು ಸ್ಲಾಬ್‌ ಮೀರಿ ಮತ್ತೂ ಚಾನೆಲ್‌ಗ‌ಳು ವೀಕ್ಷಕನಿಗೆ ಬೇಕು ಎಂತಾದರೆ ಆತ ಮುಂದಿನ ಪ್ರತಿ 25 ಉಚಿತ ಅಥವಾ ಪೇ ಚಾನೆಲ್‌ಗ‌ಳ ಒಟ್ಟು ಲೆಕ್ಕಕ್ಕೆ 130 ರೂ.ಗೆ ಹೆಚ್ಚುವರಿಯಾಗಿ 20 ರೂ.ಗಳನ್ನು ಸೇವಾದಾತನಿಗೆ ಬಾಡಿಗೆಯಾಗಿ ಕೊಡಬೇಕಾಗುತ್ತದೆ.

ಆಯ್ಕೆ ಎಂಬ ಚಕ್ರವ್ಯೂಹ
ಬಿಡಿ ಬಿಡಿ ಚಾನೆಲ್‌ಗ‌ಳ ಜೊತೆಗೆ ಕೆಲವು ನೆಟ್‌ವರ್ಕ್‌ಗಳು ತಮ್ಮ ಬ್ರಾಡ್‌ಕಾಸ್ಟಿಂಗ್‌ ಕಂಪನಿಯ ಹಲವು ಚಾನೆಲ್‌ಗ‌ಳನ್ನು ಸೇರಿಸಿ ಬಾಂಕ್ವೆಟ್‌ ಅರ್ಥಾತ್‌ ಗೊಂಚಲುಗಳನ್ನು ರೂಪಿಸಿವೆ. ಅವುಗಳ ಪೂರ್ಣಪಾಠವನ್ನು ಟ್ರಾಯ್‌ ಪ್ರಕಟಿಸಿದೆ, ಗಮನಿಸಬಹುದು. ಅದರ ಜೊತೆಗೆ https://channel.trai.gov.in/home.phpಎಂಬ ವೆಬ್‌ಪುಟದಲ್ಲಿ ಗ್ರಾಹಕ ತನ್ನ ಹೆಸರು, ರಾಜ್ಯ, ಭಾಷೆಗಳನ್ನು ಮೊದಲಾದ ಕೆಲವು ಕಡ್ಡಾಯ ಅಲ್ಲದ ಆಯ್ಕೆ ಮಾಡಿಕೊಂಡು ಸುದ್ದಿ, ಮನರಂಜನೆ, ಸಿನಿಮಾ, ಮಕ್ಕಳ ಚಾನೆಲ್‌ಗ‌ಳ ಕುರಿತು ಇರುವ ಚಾನೆಲ್‌ಗ‌ಳನ್ನು ಆರಿಸಿದರೆ ಅಷ್ಟು ಚಾನೆಲ್‌ಗ‌ಳ ಒಟ್ಟು ದರ ಎಷ್ಟಾಗುತ್ತದೆ ಎಂಬುದನ್ನು ಅದು ತಿಳಿಸುತ್ತದೆ. ಬಹುಪಾಲು ಕೇಬಲ್‌, ಡಿಟಿಎಚ್‌ ಗ್ರಾಹಕರು ದೊಡ್ಡ ಮಟ್ಟದ ಅಕ್ಷರಸ್ಥರೂ ಆಗಿಲ್ಲದ ಹಿನ್ನೆಲೆಯಲ್ಲಿ ಈ ತರಹದ ಮಾದರಿಗಳು ಜನರನ್ನು ತಲುಪುತ್ತವೆಯೇ ಎಂಬುದು ಟ್ರಾಯ್‌ಗೆ ಗೊತ್ತಿಲ್ಲ. ಸ್ವಾರಸ್ಯ ಎಂದರೆ ಸಮಾಜದಲ್ಲಿ ವಿವಿಧ ಸ್ಥಾನದಲ್ಲಿರುವ, ಅಪಾರ ಅರಿರುವವರಿಗೂ ಈ ಚಾನೆಲ್‌ ಆಯ್ಕೆ ಚಕ್ರವ್ಯೂಹವೇ ಆಗಿದೆ.

ಸೇವಾದಾತರು ಆಟ ಆಡುತ್ತಿದ್ದಾರೆ!
ಚಾನೆಲ್‌ಗ‌ಳ ದರ, ಆಯ್ಕೆ ಅವಕಾಶಗಳಿಗಿಂತ ಸೇವಾದಾತರ ಏಕೈಕ ಉದ್ದೇಶ ಈ ವ್ಯವಸ್ಥೆ ಪಾರದರ್ಶಕವಾಗಿರಬಾರದು ಎಂಬುದೇ ಆಗಿದೆ. ಬಹುಶಃ ಟ್ರಾಯ್‌ ಈ ಡಿಟಿಎಚ್‌, ಕೇಬಲ್‌ ನೆಟ್‌ವರ್ಕ್‌ಗಳ ವೆಬ್‌ಪುಟಗಳನ್ನು ಓರ್ವ ಗ್ರಾಹಕ ಸದಸ್ಯನಾಗಿ ಪರಿಶೀಲಿಸಿದಂತಿಲ್ಲ. ಅವುಗಳಲ್ಲಿ ಚಾನೆಲ್‌ಗ‌ಳ ಆಯ್ಕೆ ಸರಳವಾಗಿಲ್ಲ. ಉಚಿತ ಚಾನೆಲ್‌ಗ‌ಳನ್ನು ಇರುವ 564 ಉಚಿತ ಚಾನೆಲ್‌ಗ‌ಳಲ್ಲಿ ಆಯ್ಕೆ ಮಾಡುವ ಅವಕಾಶವನ್ನು ಹಲವು ವೆಬ್‌ಗಳು ಕಲ್ಪಿಸಿಲ್ಲ. ಗ್ರಾಹಕ ಆಯ್ಕೆ ಮಾಡಿಕೊಂಡ ಚಾನೆಲ್‌ಗ‌ಳು ಒಂದು ನಿರ್ದಿಷ್ಟ ಗೊಂಚಲಿಗೆ ಬರುವಂತಿದ್ದರೆ ಅದು ಅಯಾಚಿತವಾಗಿ ಆಯ್ಕೆಯಾಗಿ ಗ್ರಾಹಕನಿಗೆ ಹಣ ಉಳಿಸಿಕೊಡಬೇಕಾಗಿತ್ತು. ಅಂತಹದ್ದನ್ನಂತೂ ಊಹಿಸಲೂ ಆಗುವುದಿಲ್ಲ. ಬಹುಪಾಲು ವೆಬ್‌ಗಳ ಒಳಗೆ ಪ್ರವೇಶಿಸುವುದೇ ಕಷ್ಟ ಎಂಬಂತಹ ಟ್ರಾಫಿಕ್‌ ಜಾಮ್‌ ಕಾಣುತ್ತಿದೆ. ಜನ ಗೊಂದಲಕ್ಕೆ ಬೀಳಬೇಕು ಎಂಬುದನ್ನೇ ಸೇವಾದಾತರು ಗುರಿ ಇರಿಸಿಕೊಂಡಿದ್ದರೆ ಅವರ ಶ್ರಮ ಸಾರ್ಥಕವಾಗಿದೆ!

ಡಿಟಿಎಚ್‌, ಕೇಬಲ್‌ ಸೇವಾದಾತರಿಗೆ ಟ್ರಾಯ್‌ ಈ ಮುನ್ನವೇ ಅವರದೇ ಚಾನೆಲ್‌ಗ‌ಳ ಗೊಂಚಲನ್ನು ರೂಪಿಸಿ ಜನರೆದುರು ಇಡಲು ಅವಕಾಶ ಕೊಟ್ಟಿತ್ತು. ಈ ಎಲ್ಲ ಚಾನೆಲ್‌ಗ‌ಳ ದರದ ಒಟ್ಟು ಮೊತ್ತ ಗೊಂಚಲಿನ ಆಫ‌ರ್‌ ಮೊತ್ತಕ್ಕಿಂತ ಕಡಿಮೆ ಇರಬೇಕು ಎಂಬುದಷ್ಟೇ ನಿಯಮ. ಇದು ಸೇವಾದಾತರಲ್ಲಿ ಹರ್ಷ ಮೂಡಿಸಿದೆ. ಈಗಾಗಲೇ ಗ್ರಾಹಕ ಈ ಹಿಂದೆ ಆಯ್ಕೆ ಮಾಡಿಕೊಂಡಿದ್ದ ಪ್ಯಾಕೇಜ್‌ನ್ನೇ ಅವು ಗ್ರಾಹಕರಿಗೆ ಒಂದೆರಡು ಚಾನೆಲ್‌ ಆಚೀಚೆ ಮಾಡಿ ಪ್ರಕಟಿಸಿವೆ. ಗೊಂದಲಕ್ಕೊಳಗಾಗಿರುವ ಗ್ರಾಹಕ ಹೊಸ ಸಾಹಸಕ್ಕೆ ಮುಂದಾಗದೆ ಈಗಿರುವ ಪ್ಯಾಕೇಜ್‌ ಮುಂದುವರೆಸಿಕೊಂಡು ನಿಟ್ಟುಸಿರು ಬಿಡುತ್ತಾನೆ. ಟ್ರಾಯ್‌ ವೈದ್ಯ ಏನೇ ಹೇಳಲಿ, ಸರ್ವೀಸ್‌ ಪೊ›ವೈಡರ್‌ ರೋಗಿ ಬಯಸಿದ್ದು ಇದೇ!

ಜನ ಬುದ್ಧಿ ಕಲಿಸಬಹುದು!
ಕಳಪೆ ಗುಣಮಟ್ಟದ ಚಾನೆಲ್‌ಗ‌ಳನ್ನು ಅದು ಕಡಿಮೆ ದರಕ್ಕೆ ಸಿಗುತ್ತದೆ ಎಂತಾದರೂ ಆಯ್ಕೆ ಮಾಡಿಕೊಳ್ಳದಿರುವ ಮೂಲಕ ಜನ ಗುಣಮಟ್ಟಕ್ಕೆ ಪ್ರಾಶಸ್ತ ಹೇಳಬಹುದು. ಇನ್ನೊಂದಿದೆ, ಮ್ಯೂಸಿಕ್‌ ಮಾದರಿಯ ಮೂರು ಕನ್ನಡ ಚಾನೆಲ್‌ ಇವೆ ಎಂದುಕೊಂಡರೆ ಗ್ರಾಹಕ ಒಂದನ್ನೇ ಆರಿಸಿಕೊಳ್ಳುವುದಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ದರ ಸಮರ ಚಾನೆಲ್‌ಗ‌ಳಲ್ಲಿ ಸೃಷ್ಟಿಯಾಗುತ್ತದೆ. ಇಂಥ ವಾತಾವರಣವನ್ನು ಗ್ರಾಹಕನೇ ಸೃಷ್ಟಿಸಬೇಕಾಗುತ್ತದೆ.

ಎಡವುತ್ತಲೇ ಇದೆ ಟ್ರಾಯ್‌!
ಸಾರಾಸಗಟಾಗಿ ಟ್ರಾಯ್‌ ದರ ಮಾದರಿಯ ಮಾರ್ಪಾಡಿಗೆ ಮುಂದಾಗುವ ಅಗತ್ಯವಿರಲಿಲ್ಲ. ಈ ವರ್ಗದ ಗ್ರಾಹಕರಿಗೆ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಸೂಕ್ತ ವೇದಿಕೆಯನ್ನು ನಿರ್ಮಿಸಬೇಕಿತ್ತು. ಗ್ರಾಹಕರಿಗೆ ಅದೇ ಡಿಷ್‌, ರಿಸೀವರ್‌ ಇದ್ದರೂ ಸೇವಾದಾತರನ್ನು ಬದಲಿಸುವ ಮೊಬೈಲ್‌ನ ಎಂಎನ್‌ಪಿ ಮಾದರಿಯನ್ನು ಪರಿಚಯಿಸಬೇಕಿತ್ತು. ಚಾನೆಲ್‌ಗ‌ಳ ದರಕ್ಕೆ ಚೌಕಟ್ಟು ಹಾಕಬೇಕಿತ್ತು. ಐಪಿಎಲ್‌ ಬಂದಕ್ಷಣ 60, 80 ರೂ.ಗೆ ಚಾನೆಲ್‌ ಒಂದರ ದರ ಏರಿಕೆಯಾಗುವಂತಹ ವಿದ್ಯಮಾನವನ್ನು ತಡೆಯಬೇಕಿತ್ತು. ಕೆಳ ಹಂತದ ಟಿ.ವಿ ವೀಕ್ಷಕನ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡಿದ್ದರೆ ಟ್ರಾಯ್‌ ಈ ರೀತಿ ಧಾವಂತ ಮಾಡುತ್ತಿರಲಿಲ್ಲವೇನೋ. ಗ್ರಾಹಕ ತರಕ್ಷಣೆಗೆ ಮೀಸಲಾದ ಹಣವನ್ನು ಬಳಸಿಕೊಂಡು ಗ್ರಾಹಕರನ್ನು ಆಮೂಲಾಗ್ರವಾಗಿ ತರಬೇತಿಗೊಳಿಸುವ ಮತ್ತು ಈ ರೀತಿಯ ಸಂಪೂರ್ಣ ಹೊಸ ಮಾದರಿಯನ್ನು ಜನರಿಗೆ ತಿಳಿವಳಿಕೆ ಕೊಡುವ ಕೆಲಸವನ್ನು ಗ್ರಾಹಕ ಪರ ಸರ್ಕಾರೇತರ ಸಂಸ್ಥೆಗಳನ್ನು ಟ್ರಾಯ್‌ ದುಡಿಸಿಕೊಳ್ಳಬೇಕಿತ್ತು. ಅದು ಅತ್ಲಾಗಿರಲಿ, ಗೊಂದಲ ಮುಂದುವರೆದಿದೆ….

– ಮಾ.ವೆಂ.ಸ.ಪ್ರಸಾದ್‌,
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

6

‌Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್‌!

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.