ರೀಚಾರ್ಜ್ ಕಾರ್ಡ್!
ಹೊಚ್ಚ ಹೊಸ ಡಿಜಿಟಲ್ ಪೇಮೆಂಟ್
Team Udayavani, Jan 6, 2020, 5:38 AM IST
ಡಿಜಿಟಲ್ ಪೇಮೆಂಟ್ ಆಯ್ಕೆಗಳಿದ್ದರೂ ಇಷ್ಟು ದಿನ ಜನರು ದೈನಂದಿನ ಖರೀದಿಗಳಿಗೆ, ಸಣ್ಣಪುಟ್ಟ ದಿನಸಿ ಸಾಮಗ್ರಿ ಖರೀದಿಗೆ ನಗದನ್ನೇ ಅವಲಂಬಿಸಿದ್ದರು. ಈ ವರ್ಗದ ಜನರನ್ನು ಗುರಿಯಾಗಿಸಿ ಆರ್‌ಬಿಐ ತಾನೇ ಸ್ವತಃ ಡಿಜಿಟಲ್ ಪೇಮೆಂಟ್ ಆಯ್ಕೆಯನ್ನು ಒದಗಿಸುತ್ತಿದೆ.
ದಿನನಿತ್ಯದ ವ್ಯವಹಾರದಲ್ಲಿ ಜನರು ನಗದನ್ನು ಕಡಿಮೆ ಬಳಸುವಂತಾಗಬೇಕು. ಆ ಮೂಲಕ ಹಣಕಾಸು ವ್ಯವಹಾರಗಳು ಡಿಜಿಟಲ್/ ಎಲೆಕ್ಟ್ರಾನಿಕ್ ರೂಪದಲ್ಲಿ ನಡೆಯಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರ ಪರಿಣಾಮವಾಗಿಯೇ ಈಗಾಗಲೇ ಸುಮಾರು 63% ಬ್ಯಾಂಕಿಂಗ್ ವ್ಯವಹಾರಗಳು ಡಿಜಿಟಲ್ ಆಗಿವೆ. ಈಗ ಬಹುತೇಕ ಯುವಜನರು ಬ್ಯಾಂಕಿನ ಮೆಟ್ಟಿಲುಗಳನ್ನು ತುಳಿಯುವುದಿಲ್ಲ. ಮೊಬೈಲ್ ಮತ್ತು ಇಂಟರ್ನೆಟ್ ಮೂಲಕವೇ ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಪೂರೈಸಿಕೊಳ್ಳುತ್ತಾರೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳಲಾಗದವರು ಮತ್ತು ಕೆಲವು ಹಿರಿಯ ನಾಗರಿಕರು ಮಾತ್ರ ಬ್ಯಾಂಕ್ ಆವರಣದಲ್ಲಿ ಕಾಣಿಸುತ್ತಾರೆ. ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಈ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿತ್ತು. ಇದೀಗ ಜನರ ದೈನಂದಿನ ಹಣಕಾಸು ಪಾವತಿಗೆ ನೆರವಾಗಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಸ್ಥಳೀಯ ಅಂಗಡಿಗಳಲ್ಲಿ ಖರೀದಿಗೆ ಮತ್ತು ಸೇವೆ ಪಡೆದುಕೊಂಡದ್ದಕ್ಕೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಕಲ್ಪಿಸಿದೆ. ಎಲೆಕ್ಟ್ರಾನಿಕ್ ಕಾರ್ಡ್ ಮತ್ತು ಆನ್‌ಲೈನ್/ ಆ್ಯಪ್(ಡಿಜಿಟಲ್) ಎರಡರಲ್ಲೂ ಗ್ರಾಹಕ ಈ ಸವಲತ್ತಿನ ಉಪಯೋಗವನ್ನು ಪಡೆದುಕೊಳ್ಳಬಹುದು. ಆ ಬಗ್ಗೆ ನಿರ್ಧಾರವನ್ನು ಆರ್‌ಬಿಐ ಕೈಗೊಳ್ಳಬೇಕಿದೆ. ಸಣ್ಣ ಮೊತ್ತದ ಡಿಜಿಟಲ್ ಪೇಮೆಂಟ್ ಇದರ ಉದ್ದೇಶ. ಈ ವ್ಯವಸ್ಥೆಯಲ್ಲಿ, ಗ್ರಾಹಕ ಗರಿಷ್ಠ 10,000 ರೂ. ವರೆಗೆ ರೀಚಾರ್ಜ್ ಮಾಡಿಸಬಹುದಾಗಿದೆ.
ಹೆಚ್ಚು ವಿಶ್ವಾಸಾರ್ಹವಾದುದು
ಡಿಜಿಟಲ್ ಬ್ಯಾಂಕಿಂಗ್ ಸಾಕಷ್ಟು ಸುಧಾರಿತವಾಗಿದ್ದರೂ, ಸಣ್ಣ ಪುಟ್ಟ ಪೇಮೆಂಟ್‌ಗಳಿಗೆ ಗ್ರಾಹಕರು ನಗದನ್ನು ಬಳಸುತ್ತಿದ್ದರು. ಇದನ್ನು ಗಮನಿಸಿಯೇ ಸರ್ಕಾರ ಆ ಕೆಟಗರಿಯ ಮಂದಿಯನ್ನೂ ಡಿಜಿಟಲ್‌ಗೆ ಬರುವಂತೆ ಮಾಡಲು ಈ ವ್ಯವಸ್ಥೆಯನ್ನು ತರುತ್ತಿದೆ. ಗ್ರಾಹಕರಿಗೆ ಹಣಕಾಸು ವ್ಯವಹಾರದಲ್ಲಿ ಹೆಚ್ಚಿನ ಭದ್ರತೆ ಮತ್ತು ವಿಶ್ವಾಸ ಮೂಡಿಸಲು ಬ್ಯಾಂಕುಗಳ ಕಾರ್ಯ ವ್ಯಾಪ್ತಿ ಅಡಿಯಲ್ಲೇ ಇದನ್ನು ಜಾರಿಗೊಳಿಸಿದೆ. ಮೇಲ್ನೋಟಕ್ಕೆ ಇದು ಖಾಸಗಿ ಡಿಜಿಟಲ್ ಪೇಮೆಂಟ್ ಸಂಸ್ಥೆಗಳಾದ ಪೇಟಿಯಂ, ಫೋನ್ ಪೇ, ಮತ್ತು ಮೊಬಿವಿಕ್‌ನಂತೆಯೇ ಕಾಣುತ್ತದೆ. ಆದರೆ, ಈ ವ್ಯವಸ್ಥೆಯ ಹಿಂದೆ ಬ್ಯಾಂಕುಗಳು ನೇರ ಸಂಪರ್ಕ ಹೊಂದಿರುವುದರಿಂದ ಜನರ ನಡುವೆ ಈ ವ್ಯವಸ್ಥೆ ಜನಪ್ರಿಯಗೊಳ್ಳಲಿದೆ ಎಂಬ ಆಶಾಭಾವ ರಿಸರ್ವ್ ಬ್ಯಾಂಕ್‌ನದು. ಇಲ್ಲಿ ಸಣ್ಣ ಪ್ರಮಾಣದ ವ್ಯವಹಾರಗಳು ಮಾತ್ರವೇ ನಡೆಯುವುದರಿಂದ, ವಂಚನೆಯ ಸಾಧ್ಯತೆ ತುಂಬಾ ಕಡಿಮೆ.
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್‌ರವರು ಡಿಸೆಂಬರ್ ಮೊದಲ ವಾರದಲ್ಲಿ ನಡೆದ Monetory Policy ಸಭೆಯಲ್ಲಿ ಈ ಬಗೆಗೆ ಪ್ರಸ್ತಾಪ ಮಾಡಿದ್ದರು. ಈ ವ್ಯವಸ್ಥೆಯನ್ನು “ಪ್ರೀಪೇಯ್ಡ ಪೇಮೆಂಟ್ ಇನ್‌ಸ್ಟ್ರೆಮೆಂಟ್’ (PPI) ಎಂದು ಕರೆಯಲಾಗಿದೆ. ರಿಸರ್ವ್ ಬ್ಯಾಂಕ್‌ನ ಅನುಮತಿಯೊಂದಿಗೆ ಬ್ಯಾಂಕ್‌ಗಳು ಮಾತ್ರ ಇವುಗಳನ್ನು ಗ್ರಾಹಕರಿಗೆ ನೀಡಬಹುದು. ಇದು ಪ್ರೀಪೇಯ್ಡ ಆಗಿರುವುದರಿಂದ, ಬ್ಯಾಂಕ್ ಮೂಲಕವೇ ಹಣವನ್ನು ಜಮಾ ಮಾಡಬೇಕಾಗುತ್ತದೆ. ಅಲ್ಲದೆ, ಯಾವುದೇ ಸಮಯದಲ್ಲಿ 10,000 ರೂ.ಗಿಂತ ಹೆಚ್ಚು ಹಣ ಜಮಾ ಆಗಬಾರದು.
ಇದರ ವಿಶೇಷತೆ ಏನು?
ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಗ್ರಾಹಕರಿಂದ ಕನಿಷ್ಠ ಮಾಹಿತಿಯನ್ನು ಪಡೆದು ಈ ಸವಲತ್ತನ್ನು ನೀಡಬಹುದು. ಕನಿಷ್ಠ ಮಾಹಿತಿ ಎಂದರೆ, ಒನ್‌ಟೈಮ್ OTPನಿಂದ ದೃಢೀಕರಿಸಲ್ಪಟ್ಟ ಮೊಬೈಲ್ ನಂಬರ್, ಸ್ವಪ್ರಮಾಣೀಕೃತ (self certified) ಆಧಾರ ಅಥವಾ PML Act 2005 – rule 2(d) ಅಡಿಯಲ್ಲಿ ಮಾನ್ಯತೆ ಪಡೆದ ದಾಖಲೆ.
ಈ ವ್ಯವಸ್ಥೆಯನ್ನು ಬ್ಯಾಂಕುಗಳು ಮತ್ತು ಈಗಾಗಲೇ ಇಂಥ ಕಕಐ ಸೌಲಭ್ಯವನ್ನು ಬಳಸುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಉಪಯೋಗಿಸಬಹುದು. ಅರಂಭದಲ್ಲಿ ಇದು ಸ್ವಲ್ಪ ಗೊಂದಲಮಯ ಮತ್ತು ಕ್ಲಿಷ್ಟವಾಗಿ ಕಂಡರೂ, ಕಾಲಕ್ರಮೇಣ ಇದು ಡೆಬಿಟ್/ ಕ್ರೆಡಿಟ್ ಕಾರ್ಡ್‌ಗಳು, ಮೊಬೈಲ…, ಇಂಟರ್ನೆಟ್ ಪೇಟಿಯಂ, ಗೂಗಲ್ ಪೇ ಮತ್ತು ಫೋನ್ ಪೇಗಳಂತೆ ಸಾರ್ವತ್ರಿಕವಾಗಿ, ಸರ್ವವ್ಯಾಪಿಯಾಗಿ ಪೇಮೆಂಟ್ ಆಯ್ಕೆಯಾಗುವ ಸೂಚನೆಯಂತೂ ಕಾಣುತ್ತಿದೆ.
ನೀವು ತಿಳಿದುಕೊಳ್ಳಬೇಕಾಗಿದ್ದು
– ಇದನ್ನು ಪ್ರೀ ಲೋಡೆಡ್ ಎಲೆಕ್ಟ್ರಾನಿಕ್ ಫಾಮ್ಯಾìಟ್ ಅಥವಾ ಕಾರ್ಡ್ ರೂಪದಲ್ಲಿ ನೀಡಲಾಗುವುದು.
– ಇದರಲ್ಲಿ ರೀಲೋಡ್(ಹಾಕಿಸುವ) ಮಾಡುವ ಹಣ, ತಿಂಗಳಿಗೆ 10000 ರೂ. ಮೀರಬಾರದು ಮತ್ತು ಒಂದು ಹಣಕಾಸು ವರ್ಷದಲ್ಲಿ 1,00,000ಕ್ಕೆ ಸೀಮಿತವಾಗಿರುತ್ತದೆ.
– ಯಾವುದೇ ಸಮಯದಲ್ಲಿ ಕಕಐನಲ್ಲಿ 10,000ಕ್ಕೂ ಹೆಚ್ಚು ಬ್ಯಾಲೆನ್ಸ್ ಇರಬಾರದು.
– ಯಾವುದೇ ತಿಂಗಳಿನಲ್ಲಿ ಇದರಿಂದ 10000ಕ್ಕೂ ಮೀರಿ ಡೆಬಿಟ್ ಆಗಬಾರದು.
– ಕಕಐನಲ್ಲಿ ಬ್ಯಾಲೆನ್ಸ್‌ಗೆ ಸೀಮಿತವಾಗಿ ಪೇಮೆಂಟ್ ಆಗುತ್ತದೆ. ಯಾವುದೇ ಸಂದರ್ಭದಲ್ಲಿ ಓವರ್ ಡ್ರಾಫ್ಟ್ ದೊರಕುವುದಿಲ್ಲ.
– ಕಕಐನಲ್ಲಿ ಬ್ಯಾಲೆನ್ಸ್ ಮಟ್ಟಕ್ಕೆ ವ್ಯವಹಾರ ಮಾಡಬೇಕು.
– ಒಮ್ಮೆ ಗ್ರಾಹಕರಿಗೆ ಕಕಐ ನೀಡಿದ ಮೇಲೆ ಅದರ ವಿವರಗಳನ್ನು ಇ-ಮೇಲ…, sಞs ಅಥವಾ ಅಂಚೆ ಮೂಲಕ ಗ್ರಾಹಕರಿಗೆ ತಿಳಿಸಬೇಕು.
– ಗ್ರಾಹಕರಿಂದ ಒಪ್ಪಿಗೆ ಪಡೆದ ನಂತರವಷ್ಟೇ ಕಕಐಗೆ ಹಣವನ್ನು ಹಾಕಬಹುದು.
– ಈ ವ್ಯವಸ್ಥೆ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ ಖರೀದಿಗೆ ಮತ್ತು ಸೇವೆಯನ್ನು ಬಳಸಿಕೊಂಡಿದ್ದಕ್ಕೆ ಮಾತ್ರ. ಯಾವುದೇ ರೀತಿಯ ಫಂಡ್ಸ್ ಟ್ರಾನ್ಸ್‌ಫರ್‌ಗೆ ಅವಕಾಶ ಇರುವುದಿಲ್ಲ.
– ಒಂದು ಕಕಐನಿಂದ ಇನ್ನೊಂದು ಕಕಐಗೆ ಅಥವಾ ಕಕಐನಿಂದ ಬ್ಯಾಂಕ್ ಖಾತೆಗೆ ಫಂಡ್ಸ್ ಟ್ರಾನ್ಸ್‌ಫರ್ ಸಾಧ್ಯವಿಲ್ಲ. ಕಕಐಅನ್ನು ಕ್ಲೋಸ್ ಮಾಡಿ ಬ್ಯಾಲೆನ್ಸನ್ನು ಮೂಲ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು.
– ರಮಾನಂದ ಶರ್ಮಾ