ಕೊಳ್ಳಲು ಮರೆಯದಿರಿ, ಮರೆತು ಕೊರಗದಿರಿ!
Team Udayavani, Oct 8, 2018, 6:00 AM IST
ಮುಂಬರುವ ನವರಾತ್ರಿ, ವಿಜಯದಶಮಿ, ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಹಾಗೂ ಅಮೇಜಾನ್‌ನ ಗ್ರೇಟ್ ಇಂಡಿಯಾ ಫೆಸ್ಟಿವಲ್ ಎಂಬ ರಿಯಾಯಿತಿ ದರದ ಮಾರಾಟ ಮೇಳ ಅ. 10 ರಿಂದ 15 ರವರೆಗೆ ನಡೆಯಲಿದೆ. ಹಲವಾರು ಮೊಬೈಲ್ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ದೊರಕಲಿದೆ. ಆಫರ್‌ಗಳ ಮುನ್ನೋಟ ಇಲ್ಲಿದೆ.
ನವರಾತ್ರಿ, ವಿಜಯದಶಮಿ ಹಾಗೂ ದೀಪಾವಳಿ ಹಬ್ಬಗಳ ಸಾಲಿನ ಹಿನ್ನೆಲೆಯಲ್ಲಿ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಹಾಗೂ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನ ದಿನಾಂಕಗಳನ್ನು ಘೋಷಿಸಲಾಗಿದೆ. ಫ್ಲಿಪ್‌ಕಾರ್ಟ್‌ನ ಸೇಲ್ ಅಕ್ಟೋಬರ್ 10 ರಿಂದ 14ರವರೆಗೆ, ಅಮೆಜಾನ್ ಸೇಲ್ ಅ.10 ರಿಂದ 15ರವರೆಗೆ ನಡೆಯಲಿದೆ. ನೀವು ಕೊಳ್ಳಬೇಕೆಂದುಕೊಂಡಿರುವ ಮೊಬೈಲ್‌ಗಳು ಹಿಂದೆಂದೂ ಇರದ ಭಾರೀ ರಿಯಾಯಿತಿ ದರದಲ್ಲಿ ದೊರಕಲಿವೆ.
ಫ್ಲಿಪ್‌ಕಾರ್ಟ್ ಅನ್ನು ವಾಲ್‌ಮಾರ್ಟ್ ಖರೀದಿಸಿದ ಮೇಲೆ ಬರುತ್ತಿರುವ ಮೊದಲ ಬಿಗ್ ಬಿಲಿಯನ್ ಡೇ ಸೇಲ್ ಇದು. ವಾಲ್‌ಮಾರ್ಟ್ ತೆಕ್ಕೆಗೆ ಬಂದ ಬಳಿಕ ಫ್ಲಿಪ್‌ಕಾರ್ಟ್‌ನ ಜಾಹೀರಾತು ಶೈಲಿಯೇ ಬದಲಾಗಿದೆ. ಅಮಿತಾಭ್ ಬಚ್ಚನ್ ಸೇರಿದಂತೆ ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳು ಹಾಗೂ ಕ್ರಿಕೆಟ್ ತಾರೆಗಳನ್ನು ಪ್ರಚಾರಕ್ಕಾಗಿ ಫ್ಲಿಪ್‌ಕಾರ್ಟ್ ಬಳಸಿಕೊಳ್ಳುತ್ತಿದೆ. ಕನ್ನಡದ ಯಶ್ ಕೂಡ, ಫ್ಲಿಪ್ ಕಾರ್ಟ್‌ಗೆ ಪ್ರಚಾರ ರಾಯಭಾರಿಯಾಗಿದ್ದಾರೆ.
ಇಲ್ಲಿಯವರೆಗೆ ಸೇಲ್‌ನ ನಿಗದಿತ ದಿನಾಂಕದಂದು ಮಾತ್ರ ಆಫರ್ ಗಳ ಬಗ್ಗೆ ಘೋಷಿಸಲಾಗುತ್ತಿತ್ತು. ಆದರೆ ಈ ಬಾರಿ ಫ್ಲಿಪ್‌ಕಾರ್ಟ್ ಹತ್ತು ದಿನಗಳ ಮುಂಚೆಯೇ ತನ್ನ ಆಫರ್‌ಗಳು ಏನೇನಿರುತ್ತವೆ ಎಂದು ಒಂದೊಂದಾಗಿ ರಿವೀಲ್ ಮಾಡುತ್ತಿದೆ. ಅಮೆಜಾನ್ ಸಹ ಕೆಲವೊಂದು ಆಫರ್‌ಗಳ ಗುಟ್ಟು ಬಿಟ್ಟುಕೊಟ್ಟಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಫ್ಯಾಷನ್ಸ್, ಗೃಹೋಪಯೋಗಿ ಉಪಕರಣಗಳ ಆಫರ್‌ಗಳು ಅ. 10 ರಿಂದ ಲಭ್ಯವಾದರೆ, ಮೊಬೈಲ್‌ಗಳು 11 ರಿಂದ ದೊರಕಲಿವೆ.
ಗುರುವಾರದವರೆಗೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಪ್ರಕಟಿಸಿರುವ ಕೆಲವು ಮೊಬೈಲ್‌ಗಳ ಆಫರ್‌ಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ದೊರಕಲಿರುವ ಆಫರ್‌ಗಳು: ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್8 ಫೋನ್‌ಗೆ ಈಗ 45990 ರೂ. ದರವಿದೆ. ಅದು ಬಿಗ್‌ಬಿಲಿಯನ್ ಡೇ ದಿವಸಗಳಲ್ಲಿ 29,990 ರೂ.ಗಳಿಗೆ ದೊರಕಲಿದೆ. ಲೆನೊವೋ ಕೆ8 ಪ್ಲಸ್ ಗೆ ಈಗ 9,999 ರೂ. ದರವಿದ್ದು, ಅಂದು 6,999 ರೂ.ಗಳಿಗೆ, ಮೊಟೋ ಝಡ್ 2 ಫೋರ್ಸ್ ಈಗ 34,999 ರೂ. ಇದ್ದು ಅಂದು 17,499 ರೂ.ಗೆ, ಮೋಟೋ ಝಡ್ ಪ್ಲೇಗೆ ಈಗ 18,999 ರೂ. ದರವಿದ್ದು,ಅಂದು 9,999 ರೂ.ಗಳಿಗೆ, ಮೋಟೋ ಎಕ್ಸ್ 4 ಗೆ ಈಗ 17,999 ರೂ. ದರವಿದ್ದು, 10,999 ರೂ.ಗೆ ದೊರಕಲಿದೆ.
ಇವುಗಳಲ್ಲಿ ಬಹುತೇಕವು ಹಳೆಯ ಮಾಡೆಲ್‌ಗಳಾಗಿದ್ದು, ಹೊಸ ರೀತಿಯ ವಿನ್ಯಾಸ, ಈಗಿನ ಓಎಸ್ ಇತ್ಯಾದಿಗಳು ದೊರಕುವುದಿಲ್ಲ ಎಂಬುದು ನೆನಪಿರಲಿ. ಯಾವುದಕ್ಕೂ ಒಮ್ಮೆ ಆಯಾ ಫೋನ್‌ಗಳ ಸ್ಪೆಷಿಫಿಕೇಷನ್ ನೋಡಿಕೊಂಡು ಆಯ್ಕೆ ಮಾಡಿಕೊಳ್ಳಿ. ಫ್ಲಿಪ್‌ಕಾರ್ಟ್, ಎಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗುವ ಆನರ್ ಫೋನ್‌ಗಳಿಗೆ ಪ್ರತ್ಯೇಕ ಆಫರ್‌ಗಳನ್ನು ನೀಡಿದೆ. ಇವುಗಳೆಲ್ಲ ಇತ್ತೀಚಿನ ಮಾಡೆಲ್‌ಗಳು. ಫ್ಲಾಗ್‌ಶಿಪ್ ಮೊಬೈಲ್ ಆದ ಆನರ್ 10ಗೆ ಈಗ 32,999 ರೂ. ದರವಿದೆ. ಇದು, ಬಿಗ್‌ಬಲಿಯಿನ್ ಡೇ ಸೇಲ್‌ನಲ್ಲಿ 24,999 ರೂ.ಗೆ ದೊರಕಲಿದೆ.
ಆನರ್ 9ಎನ್ 2 ಸಾವಿರ ಕಡಿಮೆಗೆ ದೊರಕಲಿದೆ. 9,999ರೂ. (32+3ಜಿಬಿ) ರೂ. ಹಾಗೂ 11,999 ರೂ. (64+4ಜಿಬಿ) ರೂ. ಆಫರ್ ದರವಿರುತ್ತದೆ. ಆನರ್ 7ಎಗೆ ಈಗ 8,999 ರೂ. ದರವಿದ್ದು, ಅದು ಸ್ಪೇಷಲ್ ಆಫ್ ನೆಪದಲ್ಲಿ 7,999 ರೂ.ಗೆ ದೊರಕಲಿದೆ. 7ಎಸ್ 6,499 ರೂ.ಗೆ ದೊರಕಲಿದೆ. ಆನರ್ 9ಲೈಟ್‌ಗೆ ಈಗ 10,999 ರೂ. (3+32ಜಿಬಿ) ದರವಿದ್ದು, ಆಫರ್‌ನಲ್ಲಿ 9,999 ರೂ.ಗೆ ಸಿಗುತ್ತದೆ. ಅದೇ ಮಾಡೆಲ್ 4+64 ಜಿಬಿ ವರ್ಷನ್‌ಗೆ ಈಗ 14,999 ರೂ. ದರವಿದ್ದು, ಆಫರ್ ದರ 11,999 ರೂ. ಆಗಿರುತ್ತದೆ.
ಆನರ್ 9ಐ ಈಗ 14999 ರೂ. ದರವಿದ್ದು, 12,999 ರೂ.ಗೆ ದೊರಕಲಿದೆ. ಇನ್ನೊಂದು ಫ್ಲಾಗ್‌ಶಿಪ್ ಮೊಬೈಲ್ ಆನರ್ 8 ಪ್ರೊ.ಗೆ ಈಗ 29999 ರೂ. ದರವಿದೆ. ಅದು 19,999 ರೂ.ಗೆ ದೊರಕಲಿದೆ. ಗಮನಿಸಿ, ಈ ಎಲ್ಲ ರಿಯಾಯಿತಿಗಳ ಜೊತೆಗೆ ಎಚ್‌ಡಿಎಫ್ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಮೂಲಕ ಕೊಂಡರೆ ಶೇ. 10ರಷ್ಟು ಹೆಚ್ಚುವರಿ ರಿಯಾಯಿತಿ ಸಹ ದೊರಕುತ್ತದೆ!
(ಈ ಹೆಚ್ಚುವರಿ ರಿಯಾಯಿತಿ 1500 ಅಥವಾ 2000 ರೂ. ಮೀರುವುದಿಲ್ಲ). ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ರೆಡ್‌ಮಿ 5 ಪ್ರೊ.ಗೆ ಮೊದಲ ಬಾರಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ ಆ ರಿಯಾಯಿತಿ ದರವನ್ನು ಗುರುವಾರದವರೆಗೂ ಫ್ಲಿಪ್‌ಕಾರ್ಟ್ ಪ್ರಕಟಿಸಿರಲಿಲ್ಲ.
ರಿಯಾಯಿತಿ ನೀಡಲಿರುವ ಫೋನ್‌ಗಳೆಂದರೆ ಆಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1, ಆಸುಸ್ ಝೆನ್‌ಫೋನ್ 5ಝಡ್, ಸ್ಯಾಮ್‌ಸಂಗ್ ಆನ್6, ವಿವೋ ವಿ9, ಗೂಗಲ್ ಪಿಕ್ಸಲ್ 2 ಎಕ್ಸ ಎಲ್, ಎಲ್‌ಐ ಜಿ7 ಥಿಂಕ್, ಒಪ್ಪೋ ಎಫ್9 ಪ್ರೊ. ಇತ್ಯಾದಿ. ಇವುಗಳಿಗೆ ಎಷ್ಟು ರಿಯಾಯಿತಿ ಎಂದು ಇನ್ನೂ ಪ್ರಕಟಿಸಿಲ್ಲ. ಈಗ ನೀವು ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಅಥವಾ ಆಪ್‌ಗೆ ಹೋಗಿ ನೋಡಿದರೆ ಆಫರ್‌ಗಳು ತಿಳಿಯುತ್ತವೆ.
ಅಮೆಜಾನ್ ಆಫರ್‌ಗಳು: ಅಮೆಜಾನ್ ಇನ್ನೂ ರಿಯಾಯಿತಿ ಪ್ರಮಾಣ ತಿಳಿಸಿಲ್ಲ. ಅದರ ಬಿಗ್ ಎಕ್ಸ್‌ಕ್ಲೂಸಿವ್ ಮಾಡೆಲ್ ಒನ್ ಪ್ಲಸ್ 6ಗೆ ಈಗ 34,999 ರೂ. ಇದೆ. ಅದು ಆಫರ್‌ನ ನೆಪದಲ್ಲಿ ಮೊದಲ ಬಾರಿ 29,999 ರೂ.ಗೆ ದೊರಕಲಿದೆ. ಇದೊಂದು ಆಫರ್ ಅನ್ನು ಮಾತ್ರ ಅಮೇಜನ್ ಪ್ರಕಟಿಸಿದೆ. ಇದನ್ನು ಹೊರತುಪಡಿಸಿ ಕೆಲವೊಂದು ಮಾಡೆಲ್‌ಗಳಿಗೆ ಆಫರ್ ನೀಡುವ ಹಿಂಟ್ ನೀಡಿದೆ.
ಅವೆಂದರೆ, ರಿಯಲ್‌ಮಿ 1, ಆನರ್ ಪ್ಲೇ, ಹುವಾವೇ ನೋವಾ 3ಐ, ಮೋಟೋ ಇ5 ಪ್ಲಸ್, ಶಿಯೋಮಿ ಎ2, ಒಪ್ಪೋ ಎಫ್9 ಪ್ರೊ., ರೆಡ್‌ಮಿ 6 ಪ್ರೊ., ರೆಡ್‌ಮಿ ವೈ2, ಆನರ್ 7ಸಿ, ವಿವೋ ವೈ83ಗೆ ರಿಯಾಯಿತಿ ನೀಡುವುದಾಗಿ ಮುನ್ಸೂಚನೆ ನೀಡಿದೆ. ಅಮೆಜಾನ್‌ನಲ್ಲಿ ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಕೊಂಡರೆ ಶೇ. 10ರಷ್ಟು ಹೆಚ್ಚುವರಿ ರಿಯಾಯಿತಿ ದೊರಕುತ್ತದೆ.
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.