ಸಮೃದ್ಧ ತರಕಾರಿ; ಕಡ್ಪ ಕತ್ತಿ ಅವರೆ


Team Udayavani, Apr 30, 2018, 6:15 AM IST

IMG_4620.jpg

ಕಡ್ಪ ಕತ್ತಿ ಅವರೆಯಲ್ಲಿ “ಎ’ ಜೀವಸಣ್ತೀ ವಿಪುಲವಾಗಿದೆ. ಸಾಕಷ್ಟು ಪ್ರೊಟೀನ್‌ ಇದೆ. ಶರ್ಕರ, ಪಿಷ್ಟ, ಕಬ್ಬಿಣ, ರಂಜಕ ಅಂಶಗಳು ಬೀಜದಲ್ಲಿ ಅಧಿಕವಾಗಿವೆ. ಸಾಕಷ್ಟು ಬಿಸಿಲು ಮತ್ತು ಧಾರಾಳವಾಗಿ ನೀರಿದ್ದರೆ ಒಂದೇ ಒಂದು ಗಿಡ ನೆಟ್ಟರೂ ಒಂದು ಕುಟುಂಬಕ್ಕೆ ಸಾಕಾಗುವಷ್ಟು ಕಾಯಿಗಳು ಸಿಗುತ್ತವೆ. 

“ಕಡ್ಪ ಕತ್ತಿ ಅವರೆಯ ಒಂದೇ ಒಂದು ಗಿಡ ಇದ್ದರೆ ಸಾಕು. ಮೂರ್‍ನಾಲ್ಕು ತಿಂಗಳ ಕಾಲ ದಿನವೂ ಪಲ್ಯ, ಸಾಂಬಾರಿಗೆ ಬೇಕಾದಷ್ಟು ಅವರೆಕಾಯಿ ಕೊಯ್ಯಬಹುದು’ ಹೀಗೆ ಹೇಳುತ್ತಾರೆ ತೆಂಕಕಾರಂದೂರಿನ ಪುಷ್ಪಾ ನಾಯ್ಕ. ಹಲವು ವರ್ಷಗಳಿಂದ ಅವರ ಮನೆಯಂಗಳದಲ್ಲಿ ಬೆಳೆಯುವ ತರಕಾರಿಗಳಲ್ಲಿ ಕಡ್ಪ ಕತ್ತಿ ಅವರೆಗೆ ಒಂದು ಸ್ಥಾನ ಇರುತ್ತದೆ. ಕತ್ತಿಯ ಆಕಾರದಲ್ಲಿರುವ ಈ ಅವರೆ, ಒಂದು ಅಡಿ ಉದ್ದವಾಗುತ್ತದೆ. ಬಲಿಯುವ ಮುನ್ನ ಕೊಂದು ಕತ್ತರಿಸಿ ಬೆಂದ ನೀರನ್ನು ತೆಗೆದು ಹೋಳುಗಳನ್ನು ಒಗ್ಗರಣೆ ಹಾಕಿ ರುಚಿಕರವಾದ ಉಪರಿ ಮಾಡಿ ಬೆಳಗಿನ ಉಪಾಹಾರಕ್ಕೆ ತಿನ್ನಬಹುದು. ತರಕಾರಿಯಾಗಿ ಇನ್ನಿತರ ಅಡುಗೆಗೂ ಬಳಕೆಯಾಗುವ ಇದರ ಬೀಜ ಕೂಡ ಬೇಯಿಸಿ ತಿನ್ನಲು ರುಚಿಕಟ್ಟಾಗಿದೆ. ಬೆಂದ ನೀರನ್ನು ತೆಗೆಯದಿದ್ದರೆ ಪಿತ್ಥ ಪ್ರಕೃತಿಯವರಿಗೆ ಅಷ್ಟೊಂದು ಒಗ್ಗುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

ಹಳ್ಳಿ, ತೋಟದ ಮನೆಗಳಲ್ಲಿ  ಬಚ್ಚಲು ಮನೆಗಳಿರುತ್ತವಲ್ಲಾ, ಅಲ್ಲಿ ಸ್ವಲ್ಪ ಜಾಗವಿದ್ದರೂ  ಬಿತ್ತನೆಗೆ ಯೋಗ್ಯವಂತೆ. ಬಳ್ಳಿ ಪೊದೆಯಾಗಿ ವಿಶಾಲವಾಗಿ ಹರಡುತ್ತದೆ. ಮಳೆಗಾಲದಲ್ಲಿ ಅದರ ಕೃಷಿ ಆಗುವುದಿಲ್ಲ. ಅಕ್ಟೋಬರ್‌ ತಿಂಗಳಲ್ಲಿ ಬಿತ್ತಿದರೆ ನವೆಂಬರ್‌ನಲ್ಲಿ 

ಕಾಯಿ ಕೊಯ್ಯಬಹುದು. ಬಳ್ಳಿ ಹರಡಿದಲ್ಲೆಲ್ಲ ಕೊಂಬೆಗಳಾಗಿ, ಪ್ರತೀ ಕೊಂಬೆಯಲ್ಲೂ ಹೂ ಗೊಂಚಲುಗಳಾಗುತ್ತವೆ. ಒಂದು ಗೊಂಚಲಿನಲ್ಲಿ ಹತ್ತರಿಂದ ಹದಿನೈದರಷ್ಟು ಕಾಯಿಗಳಾಗುತ್ತವೆ. ಹತ್ತು ಕಾಯಿಗಳಿದ್ದರೆ ಒಂದು ಕಿ.ಲೋ ತೂಗುತ್ತದೆ. ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಪೇಟೆಯಲ್ಲಿ ಉತ್ತಮ ಬೇಡಿಕೆಯನ್ನೂ ಪಡೆದಿದೆ. ಗಿಡಕ್ಕೆ ಕೊಟ್ಟಿಗೆಯ ಗೊಬ್ಬರ ಸಾಕು, ರಸಗೊಬ್ಬರ ಅನಗತ್ಯ. 

ಕಡ್ಪ ಕತ್ತಿ ಅವರೆಯಲ್ಲಿ “ಎ’ ಜೀವಸಣ್ತೀ ವಿಪುಲವಾಗಿದೆ. ಸಾಕಷ್ಟು ಪ್ರೊಟೀನ್‌ ಇದೆ. ಶರ್ಕರ, ಪಿಷ್ಟ, ಕಬ್ಬಿಣ, ರಂಜಕ ಅಂಶಗಳು ಬೀಜದಲ್ಲಿ ಅಧಿಕವಾಗಿವೆ. ಸಾಕಷ್ಟು ಬಿಸಿಲು ಮತ್ತು ಧಾರಾಳವಾಗಿ ನೀರಿದ್ದರೆ ಒಂದೇ ಒಂದು ಗಿಡ ನೆಟ್ಟರೂ ಒಂದು ಕುಟುಂಬಕ್ಕೆ ಸಾಕಾಗುವಷ್ಟು ಕಾಯಿಗಳು ಸಿಗುತ್ತವೆ. ಮೆಣಸಿನಕಾಯಿ, ಬದನೆಯಂತಹ ಇತರ ತರಕಾರಿ ಗಿಡಗಳ ಜೊತೆಗೂ ಇದನ್ನು ಮಿಶ್ರಕೃಷಿಯಾಗಿ ಬೆಳೆಯಬಹುದೆಂದು ಎನ್ನುತ್ತಾರೆ ಪುಷ್ಪಾ ನಾಯ್ಕ.

ಪ. ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.