ಮಾತಿ ಹಕ್ಕು ಈಗಲೂ ಶಕ್ತಿಶಾಲಿ-ಬಳಸುವವರು ಬೇಕಾಗಿದ್ದಾರೆ ಅಷ್ಟೇ!
Team Udayavani, Mar 20, 2017, 5:17 PM IST
ಮಾತಿ ಹಕ್ಕು ಕಾಯ್ದೆಯನ್ನು ಕೇವಲ ಸ್ವಾರ್ಥಕ್ಕೆ, ಬ್ಲಾಕ್‌ವೆುàಲ್‌ಗೆ ಬಳಸಲಾಗುತ್ತಿದೆ ಎಂಬುದು ಅಧಿಕಾರಿ ವರ್ಗದ ಹಲುಬಿಕೆ. ಇದರ ಹೊರತಾಗಿ ಅದನ್ನು ಬಳಸಿದಾಗ ಸಿಕ್ಕ ಸತ್ಯವನ್ನು ಅನುಸರಿಸಿದ ಒಬ್ಬ ಗ್ರಾಹಕ ಹಕ್ಕು ಕಾರ್ಯಕರ್ತ ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಂಡ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಹಾಲಿ ಸದಸ್ಯತ್ವಕ್ಕೆ ಎರವಾದ ಅಪರೂಪದ ಘಟನೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು. ಈ ಪ್ರಕರಣ ಗ್ರಾಹಕ ಹಕ್ಕು ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕಾದ ದೃಷ್ಟಿಯಿಂದ ಹೆಚ್ಚು ಗಮನಾರ್ಹ ಎನಿಸುತ್ತಿದೆ.
ರಾಣೇಬೆನ್ನೂರಿನ ಚಿಕ್ಕ ಕುರುವತ್ತಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಘಟನೆ ಇದು. ಈ ಪಂಚಾಯಿತಿ ಅಧ್ಯಕ್ಷ ಬಸಯ್ಯ ರುದ್ರಯ್ಯ ಪೂಜಾರ ತಮ್ಮ ಆಡಳಿತಾವಧಿಯಲ್ಲಿ ವಿವಿಧ ವಸತಿ ಯೋಜನೆಗಳಡಿ ತಮ್ಮ ಹತ್ತಿರದ ಸಂಬಂಧಿಗಳಿಗೆ ಹಾಗೂ ಹತ್ತುಹಲವು ಆಪ್ತರಿಗೆ ಕಾನೂನುಬಾಹಿರವಾಗಿ ಅರ್ಹತೆ ಇಲ್ಲದಿದ್ದರೂ ಫಲಾನುಭವಿಗಳಾಗಿ ಗುರುತಿಸಲಾಗುವಂತೆ ನೋಡಿಕೊಳ್ಳುತ್ತಾರೆ. ಇಲ್ಲಿನ ಮಾಹಿತಿ ಹಕ್ಕಿನ ಕಾರ್ಯಕರ್ತ ಜೆ.ಎಂ.ರಾಜಶೇಖರ್ ಸದರಿ ಗ್ರಾಪಂನಲ್ಲಿ ನಡೆದಿರುವ ಭ್ರಷ್ಟಾಚಾರದ ವಾಸನೆ ಪಡೆದವರು ಮೊತ್ತಮೊದಲಾಗಿ ಫಲಾನುಭಗಳ ಪಟ್ಟಿಯನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆಯುತ್ತಾರೆ.
ಪಟ್ಟಿ ನೋಡಿದಾಗಲೇ ಅವ್ಯವಹಾರದ ವಾಸನೆ ಹೊಡೆಯುತ್ತದೆ. ಒಮ್ಮೆಗೇ ಆಪಾದನೆಗಳನ್ನು ಮಾಡುವ ಸಂಪ್ರದಾಯ ಬಿಟ್ಟು ಅವರು ತಾಲೂಕಿನ ದಂಡಾಧಿಕಾರಿಗಳ ಮೂಲಕ ಸದರಿ ಕ್ಷೇತ್ರದ ಮತದಾರರ ಪಟ್ಟಿಯನ್ನೂ ಅಧಿಕೃತವಾಗಿ ಪಡೆಯುತ್ತಾರೆ. ಈ ಎರಡೂ ಪಟ್ಟಿಗಳನ್ನು ತಾಳೆ ಹಿಡಿದು ನೋಡಿದಾಗ ಮಾಡಿರುವ ಅನ್ಯಾಯ ನಿಸೂರಾಗುತ್ತದೆ. ಈ ಹಂತದಲ್ಲಿ ರಾಜಶೇಖರ್ ಹಾವೇರಿ ಲೋಕಾಯುಕ್ತದ ಡಿವೈಎಸ್‌ಪಿಯವರಲ್ಲಿ ದೂರು ಸಲ್ಲಿಸಿ ಸಮಗ್ರ ತನಿಖೆಗೆ ಒತ್ತಾಯಿಸುತ್ತಾರೆ. ಆರೋಪ ಸಾಬೀತಾಗುವುದರಿಂದ ಸದರಿ ಆರೋಪಿ ವಿರುದ್ಧ ಅಧಿಕಾರ ದುರುಪಯೋಗದ ಪ್ರಕರಣ ದಾಖಲಿಸಬೇಕು ಎಂಬುದು ಅವರ ಆಗ್ರಹವಾಗಿತ್ತು.
ಈ ಕುರಿತು ನಡೆದ ತನಿಖೆಯಲ್ಲಿ ತಮ್ಮ ಗ್ರಾಪಂ ಅಧ್ಯಕ್ಷತೆಯ ಅವಧಿಯಲ್ಲಿ ಬಸವಯ್ಯ ರುದ್ರಯ್ಯ ಪೂಜಾರ ಭ್ರಷ್ಟಾಚಾರ ಮಾಡಿರುವುದು, ಸ್ವಜನಪಕ್ಷಪಾತದ ನಿರ್ಣಯ ತೆಗೆದುಕೊಂಡಿರುವುದು ರುಜುವಾತಾಗುತ್ತದೆ. ಲೋಕಾಯುಕ್ತದ ಸೂಪರಿಟೆಂಡೆಂಟ್ ಆಫ್ ಪೊಲೀಸ್ ದಾವಣಗೆರೆಯವರ ಮೂಲಕ ರಾಜ್ಯ ಲೋಕಾಯುಕ್ತಕ್ಕೆ ಈ ಕುರಿತು ಸಮಗ್ರ ವರದಿ ಹೋಗುತ್ತದೆ. ಲೋಕಾಯುಕ್ತ ಈ ವರದಿಯ ಆಧಾರದ ಮೇಲೆ ಆರೋಪಿಯ ಮೇಲಿನ ಕ್ರಮಕ್ಕೆ ಸೂಚಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುತ್ತದೆ. ಇದರ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿಲ್ಲದಿದ್ದರೂ ಆ ವೇಳೆಯಲ್ಲಿ ಹೊಂದಿದ್ದ ಗ್ರಾಪಂನ ಸದಸ್ಯತ್ವವನ್ನೇ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ರದ್ದು ಮಾಡಿ ಆದೇಶ ಹೊರಡಿಸುತ್ತಾರೆ.
ಇಷ್ಟಕ್ಕೆ ಮುಗಿಯುವುದಿಲ್ಲ. ಮನೆ ನಿರ್ಮಾಣಕ್ಕೆ ಅನರ್ಹರು ಪಡೆದ ಸರ್ಕಾರದ ಅನುದಾನವನ್ನು ವಾಪಾಸು ಪಡೆಯಬೇಕು. ಶಾಮೀಲಾದ ಗ್ರಾಪಂ ಅಧಿಕಾರಿಗಳಿಗೂ ಶಿಕ್ಷೆ ಆಗಬೇಕು. ಮುಖ್ಯವಾಗಿ, ಒಂದು ಮಾಹಿತಿ ಹಕ್ಕು ಕಾಯ್ದೆ ಸಮರ್ಥವಾಗಿ ಬಳಸಿಕೊಂಡರೆ ದಟ್ಟ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.
ಮಾಹಿತಿ ಸುಲಭ; ಹೋರಾಟ ಮಾಡಿದರೆ ಜಯ!
ಭ್ರಷ್ಟಾಚಾರದ ಮಾಹಿತಿಗಳನ್ನು ಕಲೆಹಾಕುವುದು ಇಂದು ಸಾಕಷ್ಟು ಸುಲಭ. ಮಾಹಿತಿ ಹಕ್ಕು ಕಾಯ್ದೆ ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಸಹಾಯ ಮಾಡುತ್ತದೆ. ಇದನ್ನು ಬಳಸಿ ಬ್ಲಾಕ್‌ವೆುàಲ್ ಮಾಡುವುದು ಅಥವಾ ಭ್ರಷ್ಟಾಚಾರ ಎಸಗಿದವರ ಒತ್ತಡ, ಬೆದರಿಕೆ ಇಲ್ಲವೇ ಅನುನಯಕ್ಕೆ ಮರುಳಾಗದಂತೆ ಗಟ್ಟಿಯಾಗಿರುವುದು ಅವಶ್ಯಕ.
ಗ್ರಾಮ ಪಂಚಾಯಿತಿಗಳ ಕುರಿತಾಗಿ ಪಂಚಂತ್ರ ಎಂಬ ಅಂತಜಾìಲ ಪುಟದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಎನ್‌ಆರ್‌ಇಜಿಯಲ್ಲಿ ನೋಂದಣಿಯಾದವರ ವಿವರ, ಅವರಿಗೆ ಕೊಟ್ಟ ಕೆಲಸ, ಗ್ರಾಪಂನಲ್ಲಿ ಕ್ರಿಯಾಯೋಜನೆ ಸಿದ್ಧವಾದ ಕಾಮಗಾರಿಗಳು, ಇಂದಿರಾ ಆವಾಸ್, ರಾಜೀವ್‌ಗಾಂಧಿ ವಸತಿ ಯೋಜನೆ… ಮೊದಲಾದವುಗಳ ಫಲಾನುಭವಿಗಳ ಪಟ್ಟಿಯೂ ಇಲ್ಲಿ ಲಭ್ಯ. ಇದರಲ್ಲಿ ರಾಜ್ಯದ ಎಲ್ಲ ಗ್ರಾಪಂಗಳ ಮಾಹಿತಿಯನ್ನು ಹೆಕ್ಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇಲ್ಲಿ ಸಿಗುವ ಮಾಹಿತಿಯಿಂದಲೇ ನಾವು “ಆಮ್ ಆದ್ಮಿ’ ಪ್ರತಿಭಟನೆಯನ್ನು ನಡೆಸಬಹುದು. ಇದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಾಗಿಡಬೇಕಾಗುತ್ತದೆಯೇ ವಿನಃ ಹಿಂದಿನಂತೆ ಕಚೇರಿ ಕಚೇರಿ ಅಲೆದಾಡುವುದು ಬೇಕಿಲ್ಲ. ಇಂದಿಗೂ ಹತ್ತುಹಲವು ಮೇಲುಸ್ಥರದ ಅಧಿಕಾರಿಗಳು ಪ್ರಾಮಾಣಿಕರಾಗಿರುವುದು ಅಥವಾ ಅವರಿಗೆ ನಮ್ಮ ದೂರು ಕ್ರಮ ಕೈಗೊಳ್ಳಲೇಬೇಕಾದ ಒತ್ತಡ ಮೂಡಿಸುತ್ತದಾದ್ದರಿಂದ ಪರಿಣಾಮ ಅನಿವಾರ್ಯ. ಅಷ್ಟಕ್ಕೂ ಅವರು ನಿದ್ರಿಸಿದರೆ ಮತ್ತೆ ಮಾಹಿತಿ ಹಕ್ಕಿನ ಪ್ರಯೋಗವಂತೂ ಇದ್ದೇ ಇದೆಯಲ್ಲ!
ಭ್ರಷ್ಟತೆಯ ಕೂಪದಲ್ಲಿದ್ದವರಿಗೆ ಬ್ಲಾಕ್‌ವೆುàಲ್ ಭಯ!
ಮಾಹಿತಿ ಹಕ್ಕು ದುರುಪಯೋಗವಾಗುತ್ತಿದೆ ಎಂಬ ಹುಯಿಲನ್ನು ನಂಬಬೇಕಾಗಿಲ್ಲ. ಇದೇ ವೇಳೆ ದುರುಪಯೋಗ ಆಗುತ್ತಿದೆ ಎಂಬ ಅನುಮಾನವೂ ನೂರಕ್ಕೆ ನೂರು ನಿಜ. ಅದಕ್ಕಿಂತ ಮುಖ್ಯ ಅಂಶವೆಂದರೆ, ಅಧಿಕಾರದ ದುರುಪಯೋಗ ಇದ್ದ ಜಾಗದಲ್ಲಿಯೇ ಬ್ಲಾಕ್‌ವೆುàಲರ್‌ಗಳು ಮಾಹಿತಿ ಹಕ್ಕಿನ ಅಸ್ತ್ರವನ್ನು ಪ್ರಯೋಗಿಸುವುದು. ಅಂದರೆ, ಒಂದೊಮ್ಮೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸರ್ಕಾರದ ಕಾಮಗಾರಿ ವೈಯುಕ್ತಿಕ ಕೆಲಸ ಅಥವಾ ದಾಖಲೆ ನಿರ್ವಹಣೆಯಲ್ಲಿ ಜವಾಬ್ದಾರಿ ತೋರಿದ್ದರೆ ಅವರನ್ನು ಬ್ಲಾಕ್‌ವೆುàಲ್ ಮಾಡಿ ಹಣಕ್ಕೆ ಹಿಂಜುವ ವರ್ಗವೇ ಸೃಷ್ಟಿಯಾಗುತ್ತಿರಲಿಲ್ಲ. ಮಾಹಿತಿ ಹಕ್ಕಿನ ಆರಂಭದ ದಿನಗಳಿಂದ ಗ್ರಾಹಕ ಕಾರ್ಯಕರ್ತರಿಗೆ ಬರುತ್ತಿದ್ದ ಅಧಿಕಾರಿ ವರ್ಗದ ಹೆಚ್ಚಿನ ದೂರವಾಣಿ ಕರೆ, ವೈಯುಕ್ತಿಕ ಕೋರಿಕೆ “ಮಾಹಿತಿ ಅರ್ಜಿದಾರ ಕೇಳಿದ ಮಾಹಿತಿಯನ್ನು ಕೊಡದೆ ತಪ್ಪಿಸಿಕೊಳ್ಳುವ ಯಾವುದಾದರೂ ರಂಗೋಲಿ ಕೆಳಗಿನ ಕಾನೂನು ಅಂಶಗಳಿವೆಯೇ’ ಎಂದೇ!
ಭ್ರಮನಿರಸನಗೊಳ್ಳುವ ಮಟ್ಟದಲ್ಲಿ ರಾಜ್ಯ ಮಾಹಿತಿ ಆಯೋಗವಿದೆ. ಮಾಹಿತಿ ಕೊಡಿಸುವುದಕ್ಕಿಂತ ಅಧಿಕಾರಿಗಳ ರಕ್ಷಣೆಯೇ ತನ್ನ ಪರಮ ಧರ್ಮ ಎಂದು ಮಾಹಿತಿ ಆಯೋಗ ವರ್ತಿಸುತ್ತದೆ ಎಂಬ ಆರೋಪವಿದೆ. ಈ ಅಂಶದ ಹೊರತಾಗಿಯೂ ಮಾಹಿತಿ ಅಸ್ತ್ರವನ್ನು ಪ್ರಭಾವಯುತವಾಗಿ ಬಳಸಿಕೊಳ್ಳಬಹುದು. ಮನಸ್ಸಿರಬೇಕಷ್ಟೇ…
ಮಾತಿ ಹಕ್ಕು ಹೋರಾಟಗಾರನ ಹೆಸರಿನಲ್ಲಿ ದತ್ತಿ; ಂಗೂ ಸಮಾಜದಲ್ಲಿ ಕೆಲಸಕ್ಕೆ ಮನ್ನಣೆ
ಕನ್ನಡ ಸಾತ್ಯ ಪರಿಷತ್ತು ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಮಾತಿ ಹಕ್ಕು ಮತ್ತು ಗ್ರಾಹಕ ಹಕ್ಕು ಕಾಯ್ದೆಯಡಿ ಪುಸ್ತಕಗಳನ್ನು ಬರೆದಿರುವವರಿಗೆ ಹಾಗೂ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ರ್ವಾಕ ದತ್ತಿ ಬಹುಮಾನ ಕೊಡುವ ಯೋಜನೆಗೆ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮುಂದಾಗಿದ್ದು, ಮಾತಿ ಹಕ್ಕು ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ರಾಣೆಬೆನ್ನೂರಿನ ಜೆ.ಎಂ. ರಾಜಶೇಖರ ಹೆಸರಿನಲ್ಲಿ ಒಂದು ಲಕ್ಷ ರೂಪಾುಗಳ ದತ್ತಿ ನಿಧಿಯನ್ನು 2014ರಲ್ಲಿ ಸ್ಥಾಪಿಸಲಾಗಿದೆ.
ಕಸಾಪದಲ್ಲಿ ಈಗಾಗಲೇ ಒಂದು ಸಾರಕ್ಕೂ ಹೆಚ್ಚು ದತ್ತಿನಿಧಿಗಳು ಚಾಲನೆಯಲ್ಲಿದ್ದು ಪ್ರಪ್ರಥಮ ಬಾರಿಗೆ ಶ್ರೀಸಾಮಾನ್ಯರ ಕಾಯ್ದೆಗಳಾದ ಮಾತಿ ಹಕ್ಕು ಮತ್ತು ಗ್ರಾಹಕ ಹಕ್ಕು ಕುರಿತು ದತ್ತಿನಿಧಿ ಸ್ಥಾಪಿಸಲಾಗಿದೆ. ಪ್ರತಿ ವರ್ಷ ಮಾರ್ಚ್ 19ರಂದು ಮಾತಿ ಹಕ್ಕು ಕಾಯ್ದೆಯಡಿ ಸಾಧನೆಗೈದವರಿಗೆ ನಗದು ಬಹುಮಾನ ಮತ್ತು ಮಾತಿ ಹಕ್ಕು ಸೇವಾಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಬೇಕು ಎಂದು ನಿಯಮ ಹಾಕಿಕೊಳ್ಳಲಾಗಿತ್ತು.
ಈ ಪ್ರಕಾರ ಕಳೆದ ವಾರ 2015ರಿಂದ 17ರವರೆಗಿನ ಮೂರು ವರ್ಷಗಳ ಪ್ರಶಸ್ತಿಗೆ ಕಸಾಪ ಮೂವರು ಮಾತಿ ಕಾರ್ಯಕರ್ತರನ್ನು ಆಯ್ಕೆ ಮಾಡಿದೆ. ಬೆಂಗಳೂರಿನ ರàಂದ್ರನಾಥ ಗುರು, ಟಿ.ನರಸಿಂಹಮೂರ್ತಿ ಹಾಗೂ ಸಾಗರದ ಕುಂಟಗೋಡು ಸೀತಾರಾಂರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಐದು ಸಾರ ರೂ. ನಗದನ್ನು ಒಳಗೊಂಡಿದೆ.
ಮಾತಿ ಹಕ್ಕು, ಪತ್ರಿಕೆ ಮತ್ತು ಲಂಚ ನಿರ್ಮೂಲನೆ ಇತ್ಯಾದಿ!
ಮಾತಿ ಹಕ್ಕು ಸೌಲಭ್ಯ ಒಂದು ಪತ್ರಿಕೆಯ ಆರಂಭಕ್ಕೆ ಸ್ಫೂರ್ತಿಯಾಗಿ, ಆ ಪತ್ರಿಕೆ ಲಂಚಾವತಾರಕ್ಕೆ ಕಡಿವಾಣ ಹಾಕುವ ಬ್ರಹ್ಮಾಸ್ತ್ರದಂತೆ ಕೆಲಸ ಮಾಡಿದ ಅಪರೂಪದ ಉದಾಹರಣೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿತ್ತು. ಭ್ರಷ್ಟಾಚಾರ ನಿರ್ಮೂಲನೆಯ ಮನಸ್ಸಿದ್ದರೆ ಅದಕ್ಕೆ ಒಂದು ಶಿಷ್ಟ ಸ್ವರೂಪವನ್ನೂ ಕೊಡಬಹುದು ಎಂಬುದನ್ನು ಇಲ್ಲಿನ ದ್ವೆ„ಮಾಸಿಕ ಅಂಚೆ ಪತ್ರಿಕೆ “ಅರಿವು’ ಅಕ್ಷರಶಃ ರುಜುವಾತು ಪಡಿಸಿತ್ತು.
ಬೆಂಗಳೂರು ಸುàಪದ ಚಿಂತಾಮಣಿಯ ಮಂಜುನಾಥ ರೆಡ್ಡಿ ಮಾತಿ ಹಕ್ಕು ಕಾಯ್ದೆ ಬಳಸಿಕೊಂಡು ಭ್ರಷ್ಟಾಚಾರದ ಎದುರು ಹೋರಾಟ ನಡೆಸಿದಾಗಲೊಮ್ಮೆ ಗೂಂಡಾಗಳಿಂದ ದೈಕ ಹಲ್ಲೆಗೆ ತುತ್ತಾದವರು. ತಾಲ್ಲೂಕಿನಲ್ಲಿ “ಜನಜಾಗೃತಿ ವೇದಿಕೆ’ ಎಂಬ ಜನಪರ ಸಂಸ್ಥೆಯ ಮುಂಚೂಣಿಯಲ್ಲಿದ್ದಾರೆ. ಅವರದೇ ಸಂಪಾದಕೀಯದಲ್ಲಿ ಪ್ರಕಟವಾಗುತ್ತಿರುವ ದ್ವೆ„ಮಾಸಿಕ ಅಂಚೆ ಪತ್ರಿಕೆ “ಅರಿವು’. ಪತ್ರಿಕೆಯ ಓದುಗರ ಸಂಖ್ಯೆ ಹೆಚ್ಚಲು ಅದರಲ್ಲಿ ಲೇಖನ ಕಸುಬು ಚೆಂದರಬೇಕು ಎಂಬ ಮಾತಿದೆ. ಈ ಮಾತನ್ನು ಸುಳ್ಳಾಗಿಸಿರುವುದೇ ಈ ಪತ್ರಿಕೆಯ ಯಶಸ್ಸು! ಇದು ಮಾತಿ ಹಕ್ಕಿನ ಅಸ್ತ್ರದ ಬಳಕೆಯ ಮೂಲಕ ಚಿಂತಾಮಣಿಯ ನಗರಸಭೆ, ಗ್ರಾಮಪಂಚಾು¤ ಹಾಗೂ ಸರ್ಕಾರಿ ಇಲಾಖೆಗಳಿಂದ ಮಾತಿ ಸಂಗ್ರಸಿ ಅದನ್ನು ಯಥಾವತ್ ಆಗಿ ಪ್ರಕಟಿಸುತ್ತದೆ.
ಉದಾಹರಣೆಗೆ ರೇಷ್ಮೆ ಕೃಗೆ ಈ ವರ್ಷ ಯಾರ್ಯಾರಿಗೆ ನೀರಾವರಿ ಸಬ್ಸಿಡಿ ಸಿಕ್ಕಿದೆ ಎಂಬ ಪಟ್ಟಿಯನ್ನು ಪಡೆದು ಪ್ರಕಟಿಸುತ್ತದೆ. ಖುದ್ದು ಹೆಸರಿಸಲಾದ ರೈತನಿಗೆ ಗಾಬರಿಯಾಗಬಹುದು. ಏಕೆಂದರೆ ಆತ ಅದನ್ನು ಪಡೆಯದೇ ಇರುವ ಸಾಧ್ಯತೆುದೆ. ಅಥವಾ ಏನೂ ಕೆಲಸ ಮಾಡಿರದ ಖದೀಮ ಸಬ್ಸಿಡಿ ಹೊಡೆದಿರುವುದು ಬಯಲಾಗಬಹುದು. ಈ ಎರಡೂ ಪ್ರಕರಣದಲ್ಲಿ ಹೋರಾಡಲು ಈ ಮಾತಿ ನೆರವು ನೀಡುತ್ತದೆ.
ಈ ರೀತಿ ಕಾಮಗಾರಿ ಪಟ್ಟಿ, ಯಶಸ್ವಿನಿಯಡಿ ಆಸ್ಪತ್ರೆಗಳು ಪಡೆದಿರುವ ಮೊತ್ತ, ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಸಬ್ಸಿಡಿ, ಗ್ರಾಮಪಂಚಾು¤ಗಳ ಖರ್ಚು ವರ… àಗೆ ನೇರನೇರವಾಗಿ ಅಂಕಿಅಂಶಗಳು ಪ್ರಕಟಗೊಳ್ಳುವುದರಿಂದ ಹೊಣೆಗಾರರಾದ ಅಧಿಕಾರಿಗಳು ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ. àಗೆ ಹೇಳಬಹುದು, ಲೆಕ್ಕದಲ್ಲಿ ಯಾವುದೋ ಕೆರೆಯ ಹೂಳು ತೆಗೆದಿದ್ದಾರೆಂದರೆ ಅದು ಚಿಂತಾಮಣಿಯಲ್ಲಿ “ಅರಿವು’ ಮೂಲಕ ಜಗಜಾjàರವಾಗುತ್ತದೆ. ಸಾಕಲ್ಲ? ಪ್ರಜಾnವಂತ ನಾಗರಿಕ ಮುಂದಿನ ಹೆಜ್ಜೆ ಇಟ್ಟಾನು! ಇಂತಹ ಪತ್ರಿಕೆ ಪ್ರತಿ ತಾಲ್ಲೂಕಿಗೊಂದರಂತೆ ಶುರುವಾಗಬೇಕು. ಸದ್ಯ ಅರಿವು ಕೂಡ ಆರ್ಥಿಕ ಸಂಕಷ್ಟದ ಕಾರಣ ನಿಯುತವಾಗಿ ಪ್ರಕಟಗೊಳ್ಳುತ್ತಿಲ್ಲ. ಆದರೆ ಬೇರೆಡೆಯಲ್ಲೂ ಸಂಘಟನೆಗಳು ಅರಿವು ಪತ್ರಿಕೆಯ ಮಾದರಿಯ ಪ್ರಯೋಗವನ್ನು ಮುದ್ದಾಂ ಮಾಡಬಹುದು. ಸುಮ್ಮಸುಮ್ಮನೆ ಅಧಿಕಾರಿಗಳಿಗೆ ಕಿರುಕುಳ ಕೊಡಲು ಮಾತಿ ಕೇಳುವುದನ್ನು ಪ್ರಾಜ್ಞರು ರೋಧಿಸಬೇಕು. ಪಡೆದ ಮಾತಿ ಜನಜಾಗೃತಿಗೆ ಬಳಕೆಯಾಗಬೇಕು. ಅರಿವು ಮಾದರಿ ಪತ್ರಿಕೆ ಪ್ರತಿ ತಾಲೂಕಿನಿಂದ ಪ್ರಕಟಗೊಳ್ಳಬೇಕು.
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.