ರಿಸ್ಕೀ ಸಮಾಚಾರ

ಹಣದ ಗಂಟಿಗೆ ರಕ್ಷಣೆ ಎಲ್ಲುಂಟು?

Team Udayavani, Mar 25, 2019, 6:00 AM IST

Risk

ಹೂಡಿಕೆ ಮಾಡಬೇಕು ಅಂತ ಯೋಚಿಸುವಾಗಲೇ “ನಮ್ಮ ದುಡ್ಡಿಗೆ ತೊಂದರೆ ಇಲ್ವಾ?’ ಅನ್ನೋ ಮುನ್ನೆಚ್ಚರಿಕೆಯ ಅನುಮಾನ ಕೂಡ ಸುಳಿಯುತ್ತದೆ. ಈ ಹೂಡಿಕೆಗೂ, ವಯಸ್ಸಿಗೂ ನಂಟಿದೆ. ರಿಸ್ಕ್ ತೆಗೆದುಕೊಳ್ಳಲು ವಯಸ್ಸೂ ಇರಬೇಕು. ಯಾವ ವಯಸ್ಸಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು ಅನ್ನೋದರ ವಿವರ ಇಲ್ಲಿದೆ.

ಹೂಡಿಕೆಯಲ್ಲಿ ರಿಸ್ಕ್ ಫ್ಯಾಕ್ಟರ್‌ ಎಂದರೆ, ನಮ್ಮ ಅಸಲು ಮೊತ್ತವನ್ನೇ ನಾವು ಕಳೆದುಕೊಳ್ಳುವ ಭೀತಿ ಅಲ್ಲದೆ ಬೇರೇನೂ ಅಲ್ಲ ಎಂದು ಹಲವರು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಇದು ನಿಜವೇ ಎಂಬ ಪ್ರಶ್ನೆ ಸಾಮಾನ್ಯ ಹೂಡಿಕೆದಾರರನ್ನು ಕಾಡುವುದು ಸಹಜವೇ !

ನಮ್ಮ ವಯಸ್ಸಿಗೂ ನಮ್ಮ ಹೂಡಿಕೆಗೂ ಇರುವ ನಿಕಟ ನಂಟಿನಲ್ಲಿ ರಿಸ್ಕ್ಫ್ಯಾಕ್ಟರ್‌ ಎನ್ನುವುದು ಪ್ರಧಾನ ಪಾತ್ರ ವಹಿಸುತ್ತದೆ. ಹೂಡಿಕೆಯಲ್ಲಿ ರಿಸ್ಕ್ಫ್ಯಾಕ್ಟರ್‌ ಎಂದರೆ ನಮ್ಮ ಅಸಲು ಮೊತ್ತವನ್ನೇ ನಾವು ಕಳೆದುಕೊಳ್ಳುವ ಭೀತಿಯಲ್ಲದೆ ಬೇರೇನೂ ಅಲ್ಲ. ನಮ್ಮ ಹೂಡಿಕೆ ಮೇಲಿನ ಲಾಭ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಸಿಗುವುದನ್ನು ರಿಸ್ಕ್ ಎಂದು ಹೇಳಲಾಗುವುದಿಲ್ಲ. ರಿಸ್ಕ್ ಎಂದರೆ ನೇರವಾಗಿ ನಾವು ಹೂಡುವ ಅಸಲು ಮೊತ್ತಕ್ಕೇ ಬರುವ ಸಂಚಕಾರ ಎಂದೇ ತಿಳಿಯಬೇಕಾಗುತ್ತದೆ.

30 ವರ್ಷದವರು
ಉದ್ಯೋಗಕ್ಕೆ ತೊಡಗಿದಾಕ್ಷಣ ಸಿಗುವ ತಿಂಗಳ ಸಂಬಳದಲ್ಲಿ ಹೆಚ್ಚಿನ ಪ್ರಮಾಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು ನಮ್ಮ ವಯಸ್ಸಿನ ಕಾರಣಕ್ಕೆ. 25-30ರ ವಯೋ ವರ್ಗದಲ್ಲಿ ಉದ್ಯೋಗಸಿಕ್ಕಿದಾಗ ಬದುಕಿನಲ್ಲಿ ಆಗಷ್ಟೇ ಸೆಟಲ್‌ ಆಗುವ ಹಂತದಲ್ಲಿ ನಾವಿರುವುದರಿಂದ ಹೆಚ್ಚಿನ ಪ್ರಮಾಣದ ಉಳಿತಾಯ ಸಾಧ್ಯವಾಗುತ್ತದೆ.

ಈ ವಯೋ ಮಾನದಲ್ಲಿ ಹೆಚ್ಚಿನವರು ಇನ್ನೂ ಬ್ಯಾಚುಲರ್‌ ಆಗಿರುತ್ತಾರೆ. ಮುಂದಿನ ಮೆಟ್ಟಿಲುಗಳನ್ನು ಏರುವ ತವಕ ಇರುತ್ತದೆ. ದೊಡ್ಡ ಹುದ್ದೆ, ದೊಡ್ಡ ಅಧಿಕಾರ, ಕೈತುಂಬ ಸಂಬಳ ಇತ್ಯಾದಿಗಳನ್ನು ಸಾಕ್ಷಾತ್ಕರಿಸುವ ಆಕಾಂಕ್ಷೆ, ಹಂಬಲ, ಗುರಿ ಇರುವುದು ಸಾಮಾನ್ಯ. ಹಾಗಾಗಿ, ಇವರಲ್ಲಿ ಹೆಚ್ಚಿನವರು ಬದುಕಿನಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಮನೋಸ್ಥಿತಿಯಲ್ಲಿರುತ್ತಾರೆ. ಹೂಡಿಕೆ ವಿಷಯದಲ್ಲೂ ಈ ರಿಸ್ಕ್ ಕೆಲಸ ಮಾಡುತ್ತದೆ. ಹೇಗೆಂದರೆ, ಹೆಚ್ಚು ರಿಸ್ಕ್, ಹೆಚ್ಚು ಲಾಭವಿರುವ ಶೇರುಗಳಲ್ಲಿ ಹಣ ಹೂಡುವುದಕ್ಕೆ ಈ ವಯೋ ವರ್ಗದವರು ಮುನ್ನುಗ್ಗುತ್ತಾರೆ.

ಬದುಕಿನಲ್ಲಿ ಸ್ವಂತ ಮನೆ, ಕಾರು, ವಿವಾಹ ಇತ್ಯಾದಿ ಗುರಿಗಳನ್ನು ಸಾಧ್ಯವಿರುವಷ್ಟು ಬೇಗನೆ ಸಾಧಿಸಬೇಕೆಂಬ ತವಕದಲ್ಲಿ ಹೆಚ್ಚು ರಿಸ್ಕ್ ಮತ್ತು ಹೆಚ್ಚು ಲಾಭ ವಿರುವ ಶೇರು ಹೂಡಿಕೆಯೇ ಉಳಿದೆಲ್ಲ ಬಗೆಯ ಹೂಡಿಕೆಗಳಿಗಿಂತ ಈ ವಯೋ ವರ್ಗದವರಿಗೆ ಆಕರ್ಷಕವಾಗಿ ಕಾಣುತ್ತದೆ ಎನ್ನುವುದು ಸಹಜ ಮತ್ತು ಸತ್ಯ.

50ವರ್ಷದವರು
ಸಾಮಾನ್ಯವಾಗಿ 40ರಿಂದ 50ರ ಹರೆಯದೊಳಗೆ ಸ್ವಂತ ಮನೆ, ಕಾರು ಇತ್ಯಾದಿ ಕನಸುಗಳನ್ನು ಸಾಕಾರಗೊಳಿಸಬಲ್ಲವರು ಈ ವಯೋ ವರ್ಗದಲ್ಲಿ ತಮ್ಮ ಉಳಿತಾಯವನ್ನು ಮ್ಯೂಚುವಲ್‌ ಫ‌ಂಡ್‌, ಇಎಲ್‌ಎಸ್‌ಎಸ್‌ ಸ್ಕೀಮು, ಚಿನ್ನ ಖರೀದಿಯ ಗೋಲ್ಡ್‌ ಇಟಿಎಫ್ ಮೊದಲಾದ ಯೋಜನೆಗಳಲ್ಲಿ ಸಮನಾಗಿ ಹೂಡಿಕೆ ಮಾಡುತ್ತಾರೆ.

ಎಲ್ಲ ಹಣ್ಣುಗಳನ್ನು ಒಂದೇ ಬುಟ್ಟಿಯಲ್ಲಿ ಇರಿಸುವುದು ಅಪಾಯಕಾರಿ ಎಂಬ ಎಚ್ಚರಿಕೆಯ ನುಡಿಯನ್ನು ಈ ವಯೋವರ್ಗದಲ್ಲಿ ವಿವೇಕಯುತ ಹೂಡಿಕೆದಾರರು ಅನುಸರಿಸುತ್ತಾರೆ. ಇದರ ಅರ್ಥವೇನೆಂದರೆ, ಶೇರುಗಳ ಮೇಲಿನ ರಿಸ್ಕೀ ಹೂಡಿಕೆಯನ್ನು ಅವರು ಕಡಿಮೆ ಮಾಡುತ್ತಾ ಬಂದಿರುತ್ತಾರೆ. ನಮಗೆ ಅಸಲು ಹೂಡಿಕೆ ಮೊತ್ತ ಭದ್ರವಿರಬೇಕು; ಆಕರ್ಷಕ ಲಾಭವೂ ಕೈಸೇರಬೇಕು ಎಂಬ ಯೋಜನೆಯಲ್ಲಿ 40-50ರ ವಯೋವರ್ಗದವರು ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಾರೆ.

50ರಿಂದ 60ರ ವಯೋವರ್ಗದವರು ನಿವೃತ್ತಿಯ ಕಡೆಗೆ ಸಾಗುವ ಮಾರ್ಗದಲ್ಲಿರುತ್ತಾರೆ. ಹಾಗಾಗಿ ಹೂಡಿಕೆಯ ವಿಷಯದಲ್ಲಿ ಈ ವರ್ಗದವರು ರಿಸ್ಕ್ ಫ್ಯಾಕ್ಟರ್‌ ಶೂನ್ಯ ವಿರುವ ಹೂಡಿಕೆ ಮಾರ್ಗವನ್ನು ಅನುಸರಿಸುವುದು ಸಹಜವೇ.

ಈ ವಯೋಮಿತಿಯ ಹೆಚ್ಚಿನವರು ಈ ಹಂತದಲ್ಲಿ ಮ್ಯೂಚುವಲ್‌ ಫ‌ಂಡ್‌, ಸರಕಾರಿ ಬಾಂಡ್‌, ಬ್ಯಾಂಕ್‌ ನಿಖರ ಠೇವಣಿ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಕಾರಣ, ಈ ಸ್ಕೀಮುಗಳಲ್ಲಿ ಅಸಲು ಮೊತ್ತ ಭದ್ರವಾಗಿರುವುದರಿಂದ ನಿಶ್ಚಿಂತೆಯ ಹೂಡಿಕೆ ಎಂದು ಅವುಗಳನ್ನು ಈ ವರ್ಗದವರು ಪರಿಗಣಿಸುತ್ತಾರೆ. ಅದು ಸಹಜವೇ ಆಗಿರುತ್ತದೆ.

ಈ ವಯೋ ವರ್ಗದವರಲ್ಲಿ ಅತ್ಯಧಿಕ ಸಂಖ್ಯೆಯ ಜನರು ವಿಆರ್‌ಎಸ್‌ ತೆಗೆದುಕೊಂಡಿರುತ್ತಾರೆ ಎನ್ನುವುದು ಕೂಡ ನಿಜವೇ. ಆ ಪ್ರಕಾರ ತಮ್ಮ ಕೈಗೆ ದೊಡ್ಡ ಮೊತ್ತವಾಗಿ ಸಿಗುವ ಗ್ರ್ಯಾಚ್ಯುಯಿಟಿ, ಭವಿಷ್ಯ ನಿಧಿ, ಲೀವ್‌ ಸ್ಯಾಲರಿ ಮುಂತಾದ ಬಗೆಯ ಹಣವನ್ನು ಎಲ್ಲಿ, ಹೇಗೆ, ನಿಶ್ಚಿಂತೆ ಮತ್ತು ಸುಭದ್ರತೆಯೊಂದಿಗೆ ಹೂಡಬಹುದು ಎಂಬ ಬೃಹದಾಕಾರದ ಪ್ರಶ್ನೆಯನ್ನು ಎದುರಿಸುತ್ತಾರೆ. ಹಾಗಿರುವಾಗ, ಈ ವಯೋವರ್ಗದವರಿಗೆ ಎದ್ದು ಕಾಣುವ ಸುಭದ್ರ ಹೂಡಿಕೆಯ ಮಾಧ್ಯಮ, ಭಾರತ ಸರಕಾರದ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಎನ್ನುವುದು ನಿರ್ವಿವಾದ. ಆ ಪ್ರಕಾರ ನಾವಿಲ್ಲಿ ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಸ್ಕೀಮುಗಳ ಬಗ್ಗೆ ದೃಷ್ಟಿ ಹರಿಸಬಹುದು. ಏಕೆಂದರೆ ಇವುಗಳಲ್ಲಿನ ಹೂಡಿಕೆಯು ಸುಭದ್ರ, ಆಕರ್ಷಕ ಮತ್ತು ನಿಶ್ಚಿಂತೆಯದ್ದಾಗಿರುತ್ತದೆ.

ಇಲ್ಲಿ ಲಾಭ ಹೆಚ್ಚು
ಪೋಸ್ಟ್‌ ಆಫೀಸ್‌ ಸೇವಿಂಗ್‌ ಸ್ಕೀಮುಗಳಲ್ಲಿನ ಹೂಡಿಕೆಯ ಕನಿಷ್ಠ ಶೇ.6.6ರಿಂದ ಶೇ.8.3ರ ವರೆಗಿನ ವಾರ್ಷಿಕ ಬಡ್ಡಿಯನ್ನು ನೀಡುತ್ತದೆ ಎಂಬುದನ್ನು ನಾವು ಗಮನಿಸಬೇಕು. ಅಂತೆಯೇ ದೇಶಾದ್ಯಂತದ 1,55,000 ಅಂಚೆ ಕಚೇರಿಗಳ ಮೂಲಕ ಈ ಸೇವೆ ಗ್ರಾಹಕರಿಗೆ ಲಭ್ಯವಿರುತ್ತದೆ.

ಪೋಸ್ಟ್‌ ಆಫೀಸ್‌ ಸೇವಿಂಗ್‌ ಸ್ಕೀಮುಗಳನ್ನು ನಾವು ಒಂದೊಂದಾಗಿ ಅವಲೋಕಿಸುವ ಯತ್ನದಲ್ಲಿ ನಾವು ಮೂಲ ಉಳಿತಾಯ ಖಾತೆಯ ಸ್ವರೂಪವನ್ನು ಅರಿತಿರುವುದು ಅಗತ್ಯ.

ಅಂಚೆ ಇಲಾಖೆಯ ಯಾವುದೇ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸುವ ಮುನ್ನ, ಮೂಲತಃ ಒಂದು ಉಳಿತಾಯ ಖಾತೆಯನ್ನು, ಅಂದರೆ ಎಸ್‌ ಬಿ ಅಕೌಂಟ್‌ ತೆರೆಯುವುದು ಅಗತ್ಯ. ಕನಿಷ್ಠ 20 ರೂ. ನಗದು ಠೇವಣಿಯೊಂದಿಗೆ ಎಸ್‌ ಬಿ ಖಾತೆಯನ್ನು ತೆರೆಯುವುದಕ್ಕೆ ಅವಕಾಶ ಇರುತ್ತದೆ. ಉಳಿತಾಯ ಖಾತೆಯಲ್ಲಿ ಜಮೆ ಮಾಡುವ ಹಣದ ಮೇಲೆ ವಾರ್ಷಿಕ ಶೇ.4ರ ಬಡ್ಡಿ ಸಿಗುತ್ತದೆ. ಈ ಎಸ್‌ ಬಿ ಖಾತೆಯನ್ನು ಏಕ ವ್ಯಕ್ತಿ ಖಾತೆಯನ್ನಾಗಿ ಇಲ್ಲವೇ ಜಂಟಿ ಖಾತೆಯನ್ನಾಗಿ ತೆರೆಯಲು ಸಾಧ್ಯವಿದೆ.

ಇದರಲ್ಲಿ ರಿಸ್ಕ್ಫ್ಯಾಕ್ಟರ್‌ ಇಲ್ಲವೇ ಇಲ್ಲ. ಏಕೆಂದರೆ, ಆದಾಯ ಇಷ್ಟೇ ಬರುತ್ತದೆ ಅನ್ನೋ ಖಚಿತತೆ ಇರುತ್ತದೆ.

– ಸತೀಶ್‌ ಮಲ್ಯ

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.